Tokyo Olympic: ಒಲಂಪಿಕ್ಸ್ ಆರಂಭವಾದ ಬಳಿಕ ಟೋಕಿಯೊದಲ್ಲಿ ಹೆಚ್ಚಿದ ಕೊರೊನಾ ಪ್ರಕರಣ; ಒಂದೇ ದಿನ 3,177 ಜನರಿಗೆ ಸೋಂಕು

Tokyo Olympic: ಮಂಗಳವಾರ 2,848 ಹೊಸ ಪ್ರಕರಣಗಳ ದಾಖಲೆಯನ್ನು ಮಾಡಲಾಗಿದೆ, ಆದರೆ ಬುಧವಾರ ಇನ್ನೂ ಹೆಚ್ಚಿನ ಹೊಸ ಪ್ರಕರಣಗಳು ವರದಿಯಾಗಿವೆ. ಟೋಕಿಯೊದಲ್ಲಿ ಜುಲೈ 28 ರ ಬುಧವಾರ 3,000 ಕ್ಕೂ ಹೆಚ್ಚು ಹೊಸ ಕೋವಿಡ್ -19 ಸೋಂಕುಗಳು ದಾಖಲಾಗಿವೆ.

Tokyo Olympic: ಒಲಂಪಿಕ್ಸ್ ಆರಂಭವಾದ ಬಳಿಕ ಟೋಕಿಯೊದಲ್ಲಿ ಹೆಚ್ಚಿದ ಕೊರೊನಾ ಪ್ರಕರಣ; ಒಂದೇ ದಿನ 3,177 ಜನರಿಗೆ ಸೋಂಕು
ಟೋಕಿಯೊ ಒಲಿಂಪಿಕ್ಸ್
Edited By:

Updated on: Jul 28, 2021 | 5:06 PM

ಟೋಕಿಯೊದಲ್ಲಿ ಪ್ರತಿದಿನ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿವೆ. ಟೋಕಿಯೊ ಒಲಿಂಪಿಕ್ಸ್ ಪ್ರಾರಂಭವಾದ ನಂತರ ಮೊದಲ ಬಾರಿಗೆ, ಜಪಾನ್ ರಾಜಧಾನಿಯಲ್ಲಿ ಒಂದೇ ದಿನದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಹೊಸ ಕೊರೊನಾ ಪ್ರಕರಣಗಳು ಕಂಡುಬಂದಿವೆ. ಮಂಗಳವಾರ 2,848 ಹೊಸ ಪ್ರಕರಣಗಳ ದಾಖಲೆಯನ್ನು ಮಾಡಲಾಗಿದೆ, ಆದರೆ ಬುಧವಾರ ಇನ್ನೂ ಹೆಚ್ಚಿನ ಹೊಸ ಪ್ರಕರಣಗಳು ವರದಿಯಾಗಿವೆ. ಟೋಕಿಯೊದಲ್ಲಿ ಜುಲೈ 28 ರ ಬುಧವಾರ 3,000 ಕ್ಕೂ ಹೆಚ್ಚು ಹೊಸ ಕೋವಿಡ್ -19 ಸೋಂಕುಗಳು ದಾಖಲಾಗಿವೆ. ಅಧಿಕಾರಿಗಳ ಪ್ರಕಾರ, ಜಪಾನಿನ ರಾಜಧಾನಿಯಲ್ಲಿ ಸಾಂಕ್ರಾಮಿಕ ರೋಗ ಪ್ರಾರಂಭವಾದ ನಂತರ ಇದೇ ಮೊದಲು ಇಷ್ಟೊಂದು ಸೋಂಕಿನ ಪ್ರಕರಣಗಳು ಪತ್ತೆಯಾಗಿರುವುದು.

ಕೋವಿಡ್ -19 ತುರ್ತು ಪರಿಸ್ಥಿತಿಯಲ್ಲಿ ಟೋಕಿಯೊದಲ್ಲಿ ಟೋಕಿಯೊ ಒಲಿಂಪಿಕ್ಸ್ ನಡೆಯುತ್ತಿರುವಾಗ ಕೊರೊನಾದ ಪ್ರಕರಣಗಳು ಹೆಚ್ಚಾಗಿವೆ. ಟೋಕಿಯೊದಲ್ಲಿ 3,177 ಹೊಸ ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿವೆ, ಇದು ಒಂದು ದಿನದಲ್ಲಿ ಅತಿ ಹೆಚ್ಚು ಸೋಂಕು ಪತ್ತೆಯಾದ ದಿನವಾಗಿದೆ. ಕಳೆದ ವರ್ಷದ ಆರಂಭದಲ್ಲಿ ಸಾಂಕ್ರಾಮಿಕ ರೋಗ ಹರಡಿದ ನಂತರ, ಜಪಾನ್ ರಾಜಧಾನಿಯಲ್ಲಿ ಸೋಂಕಿತರ ಸಂಖ್ಯೆ ಎರಡು ಲಕ್ಷ ಆರು ಸಾವಿರ 745 ಕ್ಕೆ ತಲುಪಿದೆ.

ಟೋಕಿಯೊದಲ್ಲಿ ತುರ್ತು ಪರಿಸ್ಥಿತಿ ಜಾರಿಯಲ್ಲಿದೆ
ಟೋಕಿಯೊದಲ್ಲಿ ಒಲಿಂಪಿಕ್ಸ್ ಪ್ರಾರಂಭವಾಗುವ ಮುನ್ನ ಜುಲೈ 12 ರಿಂದ ತುರ್ತು ಪರಿಸ್ಥಿತಿ ಜಾರಿಯಲ್ಲಿದೆ. ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆಯ ಬಗ್ಗೆ ಸಾರ್ವಜನಿಕರ ಪ್ರತಿಭಟನೆ ಮತ್ತು ಕಳವಳಗಳ ನಡುವೆ ಕಳೆದ ವಾರ ಶುಕ್ರವಾರ ಒಲಿಂಪಿಕ್ ಕ್ರೀಡಾಕೂಟ ಪ್ರಾರಂಭವಾಯಿತು. ಟೋಕಿಯೊದಲ್ಲಿ ಸೋಂಕಿನ ಪ್ರಕರಣಗಳು ಡೆಲ್ಟಾ ಮಾದರಿಯ ವೈರಸ್ ಮೂಲಕ ಹರಡುತ್ತಿವೆ, ಅದು ಬಹಳ ವೇಗವಾಗಿ ಹರಡುತ್ತದೆ ಎಂದು ತಜ್ಞರು ಹೇಳುತ್ತಾರೆ.

ಕೊರೊನಾ ಪ್ರಕರಣಗಳು ಮತ್ತಷ್ಟು ಹೆಚ್ಚಾಗುತ್ತವೆ
ಅಧಿಕಾರಿಗಳ ಪ್ರಕಾರ, ಕೋವಿಡ್ -19 ಪ್ರಕರಣಗಳು ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ, ಏಕೆಂದರೆ ಕಳೆದ ವಾರ ರಜಾದಿನಗಳಲ್ಲಿ ಪರೀಕ್ಷೆ ವಿಳಂಬವಾಗಬಹುದು. ಟೋಕಿಯೊ ಸಮೀಪದ ಕನಗಾವಾ ಪ್ರಿಫೆಕ್ಚರ್‌ನ ಗವರ್ನರ್ ಯುಜಿ ಕುರೊಯಿವಾ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ನಾವು ಪ್ರಕರಣಗಳಲ್ಲಿ ಶೀಘ್ರ ಏರಿಕೆ ಕಾಣಲಿದ್ದೇವೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದರು. ಕನಗಾವಾ ಮತ್ತು ಸುತ್ತಮುತ್ತಲಿನ ಚಿಬಾ ಮತ್ತು ಸೈತಮಾ ಪ್ರಾಂತ್ಯಗಳಲ್ಲಿ ಪ್ರಕರಣ ಹೆಚ್ಚುತ್ತಿವೆ.

Published On - 5:05 pm, Wed, 28 July 21