Tokyo Olympics 2020: ಟೊಕಿಯೋ ಉಷ್ಣಾಂಶದಿಂದ ಬಸವಳಿದ ಮೆಡ್ವೆಡೆವ್, ಕೋರ್ಟ್ನಲ್ಲಿ ತಾನು ಸತ್ತರೆ ಅದಕ್ಕೆ ಯಾರು ಜವಾಬ್ದಾರಿ ಅಂತ ಅಂಪೈರ್ನನ್ನು ಕೇಳಿದರು!
ತಮ್ಮ ಮೊದಲಿನ ಸುತ್ತಿನ ಪಂದ್ಯದಿಂದಲೂ ಮೆಡ್ವೆಡೆವ್ ಪಂದ್ಯದ ಆರಂಭವನ್ನು ವಿಳಂಬಗೊಳಿಸುವಂತೆ ಮನವಿ ಮಾಡುತ್ತಿರುವರಾದರೂ ಆಯೋಜಕರು ಅದಕ್ಕೆ ಸಕಾರಾತ್ಮವಾಗಿ ಪ್ರತಿಕ್ರಿಯಿಸಿಲ್ಲ. ಟೊಕಿಯೋ ಒಲಂಪಿಕ್ಸ್ನಲ್ಲಿ ಗರಿಷ್ಠ ಹವಾಮಾನ ನೀತಿಯನ್ನು ಅನಿಷ್ಠಾನಗೊಳಿಸಲಾಗಿದೆ.
ಟೊಕಿಯೋ ನಗರದ 29 ಡಿಗ್ರೀ ಸೆಲ್ಸಿಯಸ್ ಉಷ್ಣಾಂಶ ರಷ್ಯಾದ ಚಾಂಪಿಯನ್ ಟೆನಿಸ್ ಆಟಗಾರ ಡ್ಯಾನಿಲ್ ಮೆಡ್ವೆಡೆವ್ ಅವರನ್ನು ತತ್ತರಿಸುವಂತೆ ಮಾಡಿದೆ. ಒಲಂಪಿಕ್ಸ್ನಲ್ಲಿ ಬುಧವಾರದಂದು ಇಟಲಿಯ ಫ್ಯಾಬಿಯೊ ಫಾಗ್ನಿನಿ ವಿರುದ್ಧ ಆಡಿದ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅವರು ಬಿಸಿ ತಾಳಲಾರದೆ ಕುಸಿದುಬಿದ್ದರು, ಒಮ್ಮೆಯಂತೂ ಚೇರ್ ಅಂಪೈರ್ಗೆ, ‘ಒಂದು ಪಕ್ಷ ನಾನು ಕೋರ್ಟ್ನಲ್ಲಿ ಸತ್ತರೆ ಅದಕ್ಕೆ ಯಾರು ಜವಾಬ್ದಾರರು?’ ಅಂತ ಕೇಳಿಯೇ ಬಿಟ್ಟರು! ಫಾಗ್ನಿನಿ ವಿರುದ್ಧ ಮೆಡ್ವೆಡೆವ್ 6-2, 3-6, 6-2 ಸೆಟ್ಗಳಿಂದ ಗೆದ್ದರಾದರೂ ಪಂದ್ಯ ಮುಗಿದಾಗ ಸಂಪೂರ್ಣವಾಗಿ ಬಸವಳಿದಿದ್ದರು. ಕ್ವಾರ್ಟರ್ ಫೈನಲ್ನಲ್ಲಿ ಅವರು ಸ್ಪೇನಿನ ಪಾಬ್ಲೋ ಕರೆನೊ ಬುಸ್ಟಾ ಅವರನ್ನು ಎದುರಿಸಲಿದ್ದಾರೆ. ಎರಡನೇ ಸೀಡ್ ಮೆಡ್ವೆಡೆವ್ ಮತ್ತು ಅಗ್ರಸೀಡ್ ನೊವಾಕ್ ಜೊಕೊವಿಚ್ ತಮ್ಮ ಉಳಿದ ಪಂದ್ಯಗಳನ್ನು ಗೆದ್ದರೆ ಫೈನಲ್ನಲ್ಲಿ ಎದುರಾಳಿಗಳಾಗಲಿದ್ದಾರೆ.
ತಮ್ಮ ಮೊದಲಿನ ಸುತ್ತಿನ ಪಂದ್ಯದಿಂದಲೂ ಮೆಡ್ವೆಡೆವ್ ಪಂದ್ಯದ ಆರಂಭವನ್ನು ವಿಳಂಬಗೊಳಿಸುವಂತೆ ಮನವಿ ಮಾಡುತ್ತಿರುವರಾದರೂ ಆಯೋಜಕರು ಅದಕ್ಕೆ ಸಕಾರಾತ್ಮವಾಗಿ ಪ್ರತಿಕ್ರಿಯಿಸಿಲ್ಲ. ಟೊಕಿಯೋ ಒಲಂಪಿಕ್ಸ್ನಲ್ಲಿ ಗರಿಷ್ಠ ಹವಾಮಾನ ನೀತಿಯನ್ನು ಅನಿಷ್ಠಾನಗೊಳಿಸಲಾಗಿದೆ.
‘ಮೊದಲ ಸೆಟ್ನಿಂದಲೇ ನಾನು ಉಸಿರಾಟದ ತೊಂದರೆಯನ್ನು ಅನುಭವಿಸುತ್ತಿದ್ದೆ. ನನ್ನ ವಪೆ (ಡಯಾಫ್ರಮ್) ಬ್ಲಾಕ್ ಆಗಿದೆಯೋನೋ ಎಂಬಂತೆ ಭಾಸವಾಗುತ್ತಿತ್ತು. ಸರಿಯಾಗಿ ಉಸಿರಾಡುವುದು ನನಗೆ ಸಾಧ್ಯವಾಗಲಿಲ್ಲ,’ ಎಂದು ಫಾಗಿನಿ ವಿರುದ್ಧ ಆಡುವಾಗ ಒಮ್ಮೆ ಮೆಡಿಕಲ್ ಟೈಮ್ಔಟ್ ಕೋರಿದ ಮತ್ತು ಎರಡು ಬಾರಿ ತಮ್ಮ ಟ್ರೇನರ್ನಿಂದ ನೆರವು ಪಡೆದ ಮೆಡ್ವೆಡೆವ್ ಹೇಳಿದರು.
ಎರಡನೇ ಸೆಟ್ ಆರಂಭವಾದಾಗ ಅಂಪೈರ್, ‘ನೀವು ಓಕೆಯಾಗಿದ್ದೀರಾ, ಆಟ ಮುಂದುವರಿಸುತ್ತೀರಾ?’, ಎಂದು ಕೇಳಿದಾಗ ಮೆಡ್ವೆಡೆವ್, ‘ನಾನು ಖಂಡಿತವಾಗಿಯೂ ಪಂದ್ಯವನ್ನು ಪೂರ್ಣಗೊಳಿಸುತ್ತೇನೆ, ಆದರೆ ನಾನು ಸಾಯಬಹುದು, ಒಂದು ವೇಳೆ ನಾನು ಸತ್ತರೆ ಅದಕ್ಕೆ ನೀವು ಜವಾಬ್ದಾರರಾ?’ ಎಂದು ಕೇಳಿದರು ಪಂದ್ಯ ಮುಗಿದ ನಂತರ ಮೆಡ್ವೆಡೆವ್, ‘ಪ್ರಾಯಶಃ ಇದು ಅತ್ಯಂತ ಗರಿಷ್ಠ ಉಷ್ಣಾಂಶದ ದಿನವಾಗಿತ್ತು,’ ಎಂದು ಹೇಳಿದರು.
‘ನೆತ್ತಿಯ ಮೇಲೆ ಸೂರ್ಯ ಧಗಧಗಿಸುತ್ತಿತ್ತು. ಎರಡನೇ ಸೆಟ್ ಕೊನೆಗೊಂಡಾಗ ನನ್ನ ಕಣ್ಣುಗಳಲ್ಲಿ ಕತ್ತಲೆ ಆವರಿಸಿತ್ತು. ನಾನು ಪದೇಪದೆ ಬಗ್ಗಿ ಉಸಿರಾಟದ ಪ್ರಕ್ರಿಯೆಯನ್ನು ಸರಾಗಗೊಳಿಸುವ ಪ್ರಯತ್ನ ಮಾಡುತ್ತಿದ್ದೆ. ಕೋರ್ಟ್ನಲ್ಲಿ ಕುಸಿದು ಬೀಳಲು ನಾನು ತಯಾರಾಗಿದ್ದೆ,’ ಎಂದು ಮೆಡ್ವೆಡೆವ್ ಹೇಳಿದರು.
ಎರಡು ಮತ್ತು ಮೂರನೇ ಸೆಟ್ಗಳ ನಡುವೆ 10 ನಿನಿಷಗಳ ಬ್ರೇಕ್ ತೆಗೆದುಕೊಂಡ ನಂತರ ಮೆಡ್ವೆಡೆವ್ ಅವರು ನಿರ್ಣಾಯಕ ಸೆಟ್ನಲ್ಲಿ ಫಾಗ್ನಿನಿ ಅವರ ಸರ್ವಿಸ್ ಒಮ್ಮೆ ಬ್ರೇಕ್ ಮಾಡಿ ಮೂರು ಗೇಮ್ಗಳನ್ನು ಗೆದ್ದುಕೊಂಡರು.
ಈ ಸೆಟ್ನಲ್ಲಿ 4-2 ಮುನ್ನಡೆ ಸಾಧಿಸಿದ್ದ ಅವರು ಏಳನೇ ಗೇಮ್ನಲ್ಲಿ ಮೂರು ಬ್ರೇಕ್ ಪಾಯಿಂಟ್ಗಳನ್ನು ಉಳಿಸಿಕೊಂಡು ಅಂತಿಮವಾಗಿ ಎಡು ಗಂಟೆ 25 ನಿಮಿಷಗಲ್ಲಿ ಪಂದ್ಯ ಗೆದ್ದರು.
ಇದನ್ನೂ ಓದಿ:Tokyo Olympic: ಒಲಂಪಿಕ್ಸ್ ಆರಂಭವಾದ ಬಳಿಕ ಟೋಕಿಯೊದಲ್ಲಿ ಹೆಚ್ಚಿದ ಕೊರೊನಾ ಪ್ರಕರಣ; ಒಂದೇ ದಿನ 3,177 ಜನರಿಗೆ ಸೋಂಕು