ಟೋಕಿಯೋದಲ್ಲಿ ನಡಯುತ್ತಿರುವ ಪ್ರತಿಷ್ಠಿತ ಒಲಿಂಪಿಕ್ಸ್ 2020 ರಲ್ಲಿ ಮೀರಾಬಾಯಿ ಚಾನು ಭಾರತಕ್ಕೆ ಚೊಚ್ಚಲ ಪದಕ ತಂದುಕೊಡುವ ಮೂಲಕ ದೇಶದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿರುವ ಮೀರಾಬಾಯಿ ತಮ್ಮ ತಯಾರಿಯ ಬಗ್ಗೆ ಒಂದಿಷ್ಟು ಮಾಹಿತಿಯನ್ನ ಹಂಚಿಕೊಂಡಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಗೆದ್ದು ಭಾರತಕ್ಕೆ ಕಾಲಿಟ್ಟ ಸಂದರ್ಭ ಮಾತನಾಡಿದ ಅವರು, ನಾನು ಸ್ಪರ್ಧೆಗೆ ಇಳಿಯುವ ಮುನ್ನ ಹಿಂದಿನ ಎರಡು ದಿನ ಏನನ್ನೂಸೇವಿಸಿರಲಿಲ್ಲ ಎಂದು ಹೇಳಿದ್ದಾರೆ.
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ಮೀರಾಬಾಯಿ ಚಾನು 49 ಕೆಜಿ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದುಕೊಂಡು ರಜತ ಪದಕಕ್ಕೆ ಮುತ್ತಿಟ್ಟಿದ್ದರು. ಈ ಬಗ್ಗೆ ಮಾತನಾಡಿದ ಅವರು, “ಇದು ತುಂಬಾನೆ ಕಷ್ಟವಾಗಿತ್ತು. ಇದಕ್ಕಾಗಿ ಸಾಕಷ್ಟು ತಯಾರಿ ನಡೆಸಿದ್ದೆ, ತೂಕವನ್ನು ಕಾಪಾಡಿಕೊಳ್ಳಲು ಕಟ್ಟುನಿಟ್ಟಾದ ಆಹಾರವನ್ನು ಸೇವಿಸಬೇಕಾಗಿತ್ತು. ಹೀಗಾಗಿ ಸ್ಪರ್ಧೆಗೆ ಭಾಗವಹಿಸುವ ಹಿಂದಿನ ಎರಡು ದಿನ ಏನನ್ನೂ ಸೇವಿಸಿರಲಿಲ್ಲ” ಎಂದಿದ್ದಾರೆ ಮೀರಾಬಾಯಿ.
“ನಾನು ಯಾವುದೇ ಜಂಕ್ ಫುಡ್ ಅನ್ನು ಸೇವಿಸುತ್ತಿರಲಿಲ್ಲ. ಪ್ರಮುಖವಾಗಿ ಕಳೆದ ರಿಯೊ ಒಲಿ ಒಲಿಂಪಿಕ್ಸ್‌ನಲ್ಲಿ ಸೋಲ ಬಳಿಕ ಸಾಕಷ್ಟು ನಿರಾಸೆಗೊಂಡಿದ್ದೆ. ನಂತರ ಮುಂದಿನ ಬಾರಿ ಯಾವುದೇ ಕಾರಣಕ್ಕೂ ಪದಕವನ್ನು ಮಿಸ್ ಮಾಡುವುದಿಲ್ಲ ಎಂಬ ದೃಢ ನಿರ್ಧಾರಕ್ಕೆ ಬಂದೆ. ನನ್ನಿಂದ ಸಾಧ್ಯವಾದಷ್ಟು ಪ್ರಯತ್ನ ಪಟ್ಟೆ. ನನ್ನ ಕೋಚ್ ವಿಜಯ್ ಶರ್ಮಾ ನನಗೆ ಪ್ರೇರಣೆ ನೀಡಿದರು. ಹಿಂದಿನ ಬಾರಿ ಏನಾಯಿತು ಎಂಬುದನ್ನು ಮರೆತು ಮುಂದೆ ಏನು ಮಾಡಬೇಕು ಎಂಬುದನ್ನು ಯೋಚಿಸು ಎಂದು ಸಲಹೆ ನೀಡಿದರು.”
“ಲಾಕ್ಡೌನ್ ಸಂದರ್ಭದಲ್ಲಿ ನನಗೆ ಅಭ್ಯಾಸ ಮಾಡಲು ಸಾಧ್ಯವಾಗಲಿಲ್ಲ. ಲಾಕ್ಡೌನ್ ಸಡಿಲವಾದ ಬಳಿಕ ಅಭ್ಯಾಸ ಶುರುಮಾಡಿದೆ. ಇಂಜುರಿಯಿಂದ ಬಳಲುತ್ತಿದ್ದ ಕಾರಣ ಸಾಕಷ್ಟು ಸಮಯದ ಬಳಿಕ ವಿಶ್ರಾಂತಿಯಿಂದ ಅಭ್ಯಾಸಕ್ಕೆ ಮರಳಬೇಕಾಯಿತು. ಹೀಗಾಗಿ ಕಠಿಣ ಅಭ್ಯಾಸಕ್ಕಾಗಿ ಕಳೆದ ಅಕ್ಟೋಬರ್ನಲ್ಲಿ ಯುಎಸ್ಎಗೆ ತೆರಳಿಗೆ. ಅಲ್ಲಿ ಅಭ್ಯಾಸ ಮಾಡಿದ್ದು ತುಂಬಾನೆ ಸಹಕಾರಿ ಆಯಿತು. ಇಂದು ಬೆಳ್ಳೆ ಪದಕ ಗೆದ್ದು ದಾಖಲೆ ಬರೆದಿರುವುದು ಖುಷಿ ನೀಡಿದೆ” ಎಂದು ಮೀರಾಬಾಯಿ ಸಂತಸ ಹಂಚಿಕೊಂಡಿದ್ದಾರೆ.
ಇನ್ನೂ ದೇಶವೇ ಹೆಮ್ಮೆ ಪಡುವಂತಹ ಸಾಧನೆ ಮಾಡಿರುವ ಮೀರಾಬಾಯಿ ಚಾನುಗೆ 2 ಕೋಟಿ ರೂಪಾಯಿ ಮತ್ತು ರೈಲ್ವೆ ಹುದ್ದೆಯಲ್ಲಿ ಬಡ್ತಿ ನೀಡುವುದಾಗಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಘೋಷಿಸಿದ್ದಾರೆ. ಇತ್ತ ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಕೂಡಾ ಮೀರಾಬಾಯಿ ಚಾನುಗೆ ಪೊಲೀಸ್ ಇಲಾಖೆಯಲ್ಲಿ ಹುದ್ದೆ ಮತ್ತು 1 ಕೋಟಿ ಬಹುಮಾನವನ್ನು ಘೋಷಿಸಿದ್ದರು.
Tokyo Olympics: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸೆಕ್ಸ್ ಬ್ಯಾನ್ ಮಾಡಿದ್ದು ಹಾಸ್ಯಾಸ್ಪದ ಎಂದ ಸುಸೆನ್ ಟೈಡ್ಕೆ
IND vs SL: 2ನೇ ಟಿ-20 ಪಂದ್ಯಕ್ಕೆ ಇದೆಯೇ ಮಳೆಯ ಕಾಟ: ಹವಾಮಾನ ವರದಿ ಏನು ಹೇಳುತ್ತೆ?
(Tokyo Olympics 2020 Didnt Eat Anything For Two Days Before Competition Says Indias Olympic Silver-Medallist Mirabai Chanu)