ಟೊಕಿಯೋ ಒಲಂಪಿಕ್ಸ್ 2020ನಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟ ವೇಟ್-ಲಿಫ್ಟರ್ ಮೀರಾಬಾಯಿ ಚಾನು ಅವರನ್ನು ಸೋಮವಾರ ಸಾಯಂಕಾಲ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅಭಿನಂದಿಸಿ ಆಕೆ ಮಾಡಿರುವ ಸಾಧನೆ ಭಾರತದ ಕ್ರೀಡಾ ಇತಿಹಾಸದಲ್ಲೇ ಸಾಟಿಯಿಲ್ಲದ್ದು ಎಂದು ಹೇಳಿದರು. ‘ಮೊದಲ ದಿನವೇ ಮೊದಲ ಪದಕ, ಈ ಸಾಧನೆಯನ್ನು ಯಾರೂ ಮಾಡಿಲ್ಲ. 135 ಕೋಟಿ ಜನರ ಮುಖಗಳಲ್ಲಿ ಮಂದಹಾಸ ಮೂಡುವಂತೆ ನೀವು ಮಾಡಿರುವಿರಿ. ಇಡೀ ದೇಶವೇ ನಿಮ್ಮ ಬಗ್ಗೆ ಹೆಮ್ಮೆ ಪಡುತ್ತಿದೆ,’ ಎಂದು, ಮೀರಾಬಾಯಿ ಚಾನು ಮತ್ತು ಆವರ ಕೋಚ್ ವಿಜಯ್ ಶರ್ಮ ಅವರನ್ನು ತಮ್ಮ ನಿವಾಸದಲ್ಲಿ ಸತ್ಕರಿಸಿದ ನಂತರ ಠಾಕೂರ್ ಹೇಳಿದರು.
ಸೋಮವಾರದಂದು ಸ್ವದೇಶಕ್ಕೆ ಮರಳಿದ ಚಾನು ಅವರು ಟೊಕಿಯೋ ಒಲಂಪಿಕ್ಸ್ 2020ನ ಮೊದಲ ದಿನವೇ 49 ಕೆಜಿ ವಿಭಾಗದಲ್ಲಿ ಒಟ್ಟು 202 ಕೆಜಿ ಭಾರ ಎತ್ತಿ ಬೆಳ್ಳಿ ಪದಕ ಸಂಪಾದಿಸುವುದರ ಜೊತೆಗೆ ಸಿಡ್ನಿ ಒಲಂಪಿಕ್ಸ್ 2000 ರಲ್ಲಿ ಕಂಚಿನ ಪದಕ ಗೆದ್ದಿದ್ದ ಕರ್ಣಂ ಮಲ್ಲೇಶ್ವರಿ ಅವರ ಸಾಧನೆಯನ್ನು ಉತ್ತಪಡಿಸಿದರು. 2016 ರಿಯೋ ಒಲಂಪಿಕ್ಸ್ನಲ್ಲಿ ಇದೇ ಚಾನು ಒಮ್ಮೆಯೂ ನಿಯಮಬದ್ಧವಾಗಿ ಭಾರ ಎತ್ತಲಾಗದೆ ‘ಡಿಡ್ ನಾಟ್ ಫಿನಿಶ್’ (ಡಿಎನ್ಎಫ್) ಅಪಖ್ಯಾತಿಯನ್ನು ಹೊತ್ತು ಕ್ರೀಡಾಕೂಟದಿಂದ ಹೊರಬಿದಿದ್ದರು.
ಸೋಮವಾರ ತಡರಾತ್ರಿ ನಡೆದ ಸತ್ಕಾರ ಸಮಾರಂಭದಲ್ಲಿ ಕೇಂದ್ರ ಗೃಹ ಮತ್ತು ಯುವಜನ ಸೇವೆ ಹಾಗೂ ಕ್ರೀಡಾ ರಾಜ್ಯ ಸಚಿವ ನಿತಿಶ್ ಪ್ರಮಾಣಿಕ್, ಹಿಂದೆ ಕ್ರೀಡಾ ಸಚಿವರಾಗಿದ್ದ ಕಿರಣ್ ರಿಜಿಜು, ಬಂದರು ಖಾತೆ ಸಚಿವ ಸರ್ಬಾನಂದ ಸೊನೊವಾಲ, ಪ್ರವಾಸೋದ್ಯಮ ಮಂತ್ರಿ ಜಿ ಕೃಷ್ಣಾರೆಡ್ಡಿ ಮೊದಲಾದವರು ಭಾಗವಹಿಸಿದ್ದರು.
‘ಆಕೆಯ (ಚಾನು) ಯಶಸ್ಸು ಟಿಒಪಿಎಸ್ (ಟಾರ್ಗೆಟ್ ಒಲಂಪಿಕ್ ಪೋಡಿಯಂ ಸ್ಕೀಮ್) ಅಥ್ಲೀಟ್ಗ ಮನಸ್ಥೈರ್ಯ ಬಲಪಡಿಸಲು ಮತ್ತು ಭಾರತಕ್ಕೆ ಪದಕಗಳ ನಿರೀಕ್ಷೆಯನ್ನು ಹೆಚ್ಚಿಸಲು ಹೇಗೆ ನಿರ್ಣಾಯಕ ಪಾತ್ರ ನಿರ್ವಹಿಸಿದೆ ಎನ್ನುವುದನ್ನು ಸೂಚಿಸಿತ್ತದೆ,’ ಎಂದು ಟಾಕೂರ್ ಹೇಳಿದರು.
Welcome home CHAMPION??!@mirabai_chanu your performance has caught the imagination of the entire nation & your victory will inspire a generation of budding athletes!#Cheer4India@KirenRijiju @kishanreddybjp @sarbanandsonwal @NisithPramanik pic.twitter.com/097e0iwGGn
— Anurag Thakur (@ianuragthakur) July 26, 2021
ಚಾನು ಅವರ ಯಶೋಗಾಥೆ ಅಥ್ಲೀಟ್ಗಳ ಪೀಳಿಗೆಯನ್ನು ಅದರಲ್ಲೂ ವಿಶೇಷವಾಗಿ, ಈಶಾನ್ಯ ಪ್ರಾಂತ್ಯದ ಭಾರತೀಯರನ್ನು ಇನ್ನಿಲ್ಲದಂತೆ ಪ್ರೋತ್ಸಾಹಿಸಲಿದೆ ಎಂದು ಠಾಕೂರ ಹೇಳಿದರು.
ಚಾನು ಅವರು ತಮ್ಮ ಪದಕವನ್ನು ಇಡೀ ದೇಶಕ್ಕೆ ಸಮರ್ಪಿಸಿ, ಸರ್ಕಾರದ ಬೆಂಬಲ ದೊರಕದೇ ಹೋಗಿದ್ದರೆ ತನಗೆ ಈ ಸಾಧನೆ ಮಾಡುವುದು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದರು.
‘ನನ್ನ ಕನಸು ಸಾಕಾರಗೊಂಡ ಕ್ಷಣವಿದು. ಇಂಥದೊಂದು ಕ್ಷಣಕ್ಕಾಗಿ ನಾನು ಬಹಳ ವರ್ಷಗಳಿಂದ ಕಷ್ಟಪಡುತ್ತಿದ್ದೆ ಮತ್ತು ಆ ಅಭೂತಪೂರ್ವ ಸನ್ನಿವೇಶ ಅತ್ಯುನ್ನತ ಕ್ರೀಡಾಕೂಟದಲ್ಲಿ ಮೂಡಿಬಂದಿದ್ದು ನನಗೆ ಬಹಳ ಸಂತೋಷವನ್ನುಂಟು ಮಾಡಿದೆ,’ ಎಂದು ಚಾನು ಹೇಳಿದರು.
‘ನನ್ನ ಕಷ್ಟದ ಸಮಯದಲ್ಲಿ ನನ್ನೊಂದಿಗೆ ನಿಂತು ಬೆಂಬಲ ನೀಡಿದ ಇಡೀ ದೇಶಕ್ಕೆ ಈ ಪದಕವನ್ನು ಸಮರ್ಪಿಸುತ್ತಿದ್ದೇನೆ.ಕಳೆದ ವರ್ಷಬೂಜ್ ಚಿಕಿತ್ಸೆಗಾಗಿ ಅಮೇರಿಕಾಗೆ ತೆರಳಿದ್ದು ಬಹಳ ನೆರವಾಯಿತಲ್ಲದೆ ಪದಕ ಗೆಲ್ಲುವಲ್ಲಿ ನಿರ್ಣಾಯಲ ಪಾತ್ರ ನಿರ್ವಹಿಸಿತು. ಭಾರತ ಸರ್ಕಾರಕ್ಕೆ ನಾನು ತುಂಬಾ ಆಭಾರಿಯಾಗಿದ್ದೇನೆ ಮತ್ತು ಈ ಸಂದರ್ಭದಲ್ಲಿ ನಾನು ಹೇಳಲು ಬಯಸುವುದೇನೆಂದರೆ, ಸರ್ಕಾರದ ಸಹಾಯ ದೊರೆಯದೆ ಹೋಗಿದ್ದರೆ, ಒಲಂಪಿಕ್ಸ್ನಲ್ಲಿ ಪದಕ ಗೆಲ್ಲುವುದು ನನಗೆ ಸಾಧ್ಯವಾಗುತ್ತಿರಲಿಲ್ಲ,’ ಎಂದು ಚಾನು ಹೇಳಿದರು.
ಇದನ್ನೂ ಓದಿ: ಆಸ್ಟ್ರಿಯನ್ ಆಟಗಾರ್ತಿಗೆ ನೇರ ಸೆಟ್ಗಳಲ್ಲಿ ಸೋತು ಮಹಿಳೆಯರ ಟೇಬಲ್ ಟೆನಿಸ್ ಸ್ಪರ್ಧೆಯಿಂದ ಹೊರಬಿದ್ದ ಮನಿಕಾ ಬಾತ್ರ