Tokyo Olympics 2020: ಹಾಕಿಯಲ್ಲಿ ಭಾರತ ಭರ್ಜರಿ ಕಮ್​ಬ್ಯಾಕ್: ಸ್ಪೇನ್ ವಿರುದ್ಧ 3-0 ಅಂತರದ ಗೆಲುವು

| Updated By: Vinay Bhat

Updated on: Jul 27, 2021 | 8:28 AM

ಪಂದ್ಯ ಆರಂಭವಾದ 14ನೇ ನಿಮಿಷದಲ್ಲಿ ಸಿಮ್ರಂಜಿತ್ ಸಿಂಗ್ ಗೋಲು ಬಾರಿಸುವ ಮೂಲಕ ಭಾರತದ ಖಾತೆ ತೆರೆದರು.

Tokyo Olympics 2020: ಹಾಕಿಯಲ್ಲಿ ಭಾರತ ಭರ್ಜರಿ ಕಮ್​ಬ್ಯಾಕ್: ಸ್ಪೇನ್ ವಿರುದ್ಧ 3-0 ಅಂತರದ ಗೆಲುವು
ಭಾರತ ಪುರುಷರ ಹಾಕಿ ತಂಡ
Follow us on

ಟೋಕಿಯೋ ಒಲಿಂಪಿಕ್ಸ್​ನ (Tokyo Olympics 2020) ನಾಲ್ಕನೇ ದಿನ ಭಾರತ ಉತ್ತಮ ಆಟ ಆರಂಭಿಸಿದೆ. ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಭಾರತ ಹಾಕಿ ತಂಡ ಸ್ಪೇನ್ ವಿರುದ್ಧ ಭರ್ಜರಿ ಜಯ ಸಾಧಿಸಿದೆ. ಸಾಕಷ್ಟು ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಮನ್​ಪ್ರೀತ್ ಪಡೆ ಸ್ಪೇನ್ ವಿರುದ್ಧ 3-0 ಅಂತರದ ಗೋಲು ದಾಖಲಿಸಿ ಮುಂದಿನ ಸುತ್ತಿಗೆ ಎಂಟ್ರಿಕೊಟ್ಟಿದೆ. ಈ ಮೂಲಕ ಕ್ವಾರ್ಟರ್​ ಫೈನಲ್ ಪ್ರವೇಶಿಲು ಒಂದು ಹೆಜ್ಜೆ ಮುಂದಿಟ್ಟಿದೆ.

ಒಲಿಂಪಿಕ್ಸ್​ನ ಚೊಚ್ಚಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 3-2 ಅಂತರದ ಪ್ರಯಾಸಕರ ಗೆಲುವು ದಾಖಲಿಸಿದ್ದ ಮನ್ಪ್ರೀತ್ ಸಿಂಗ್ ಪಡೆ ಎರಡನೇ ಪಂದ್ಯದಲ್ಲಿ ಆಸೀಸ್ ವಿರುದ್ಧ 1-7 ಅಂತರದ ಹೀನಾಯ ಸೋಲು ಅನುಭವಿಸಿತ್ತು. ಹೀಗಾಗಿ ಈ ಪಂದ್ಯದಲ್ಲಿ ಭಾರತ ಕಮ್​ಬ್ಯಾಕ್ ಮಾಡಬೇಕಾದ ಒತ್ತಡದಲ್ಲಿತ್ತು.

ಅದರಂತೆ ಪಂದ್ಯ ಆರಂಭವಾದ 14ನೇ ನಿಮಿಷದಲ್ಲಿ ಸಿಮ್ರಂಜಿತ್ ಸಿಂಗ್ ಗೋಲು ಬಾರಿಸುವ ಮೂಲಕ ಭಾರತದ ಖಾತೆ ತೆರೆದರು. ಇದಾದ ಮುಂದಿನ ನಿಮಿಷದಲ್ಲೇ ರುಪಿಂದರ್ ಪಾಲ್ ಸಿಂಗ್ ಪೆನಾಲ್ಟಿ ಸ್ಟ್ರೋಕ್ ಮೂಲಕ ಮತ್ತೊಂದು ಗೋಲು ಸಿಡಿಸಿದರು. ಮೊದಲನೇ ಕ್ವಾರ್ಟರ್​ನಲ್ಲೇ ಭಾರತ 2-0 ಮುನ್ನಡೆ ಸಾಧಿಸಿತು.

 

ನಂತರ ಕಮ್​ಬ್ಯಾಕ್ ಮಾಡಲು ಸ್ಪೇನ್ ಹರಸಾಹಸ ಪಟ್ಟಿತಾದರು ಭಾರತ ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ. ರುಪಿಂದರ್ ಪಾಲ್ ಪೆನಾಲ್ಟಿ ಕಾರ್ನರ್ ಮೂಲಕ ಮತ್ತೊಂದು ಗೋಲು ಬಾರಿಸಿ ಭಾರತ 3-0 ಮುನ್ನಡೆ ಸಾಧಿಸುವಂತೆ ಮಾಡಿದರು. ಅಂತಿಮವಾಗಿ ಭಾರತ 3-0 ಅಂತರದಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಆಡಿದ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಜಯ ಸಾಧಿಸಿದೆ.

ಇನ್ನೂ10 ಮೀಟರ್ ಏರ್ ಪಿಸ್ತೂಲ್ ಮಿಶ್ರಿತ ಗುಂಪು ಹಂತದ ಮೊದಲ ಸುತ್ತಿನ ಪಂದ್ಯದಲ್ಲಿ ಎರಡನೇ ಸುತ್ತಿಗೆ ಲಗ್ಗೆಯಿಟ್ಟಿದ್ದ ಮನು ಭಾಕರ್ ಹಾಗೂ ಸೌರಭ್ ಚೌಧರಿಗೆ ಸೋಲಾಗಿದೆ. ಈ ಮೂಲಕ ಭಾರತ ಮತ್ತೊಂದು ಗೆಲ್ಲುವ ಆಸೆ ಕಳೆದುಕೊಂಡಿದೆ. 10 ಮೀ. ಏರ್ ಪಿಸ್ತೂಲ್​ನ ಅರ್ಹತಾ ಸುತ್ತಿನಲ್ಲಿ ಈ ಜೋಡಿ 582 ಅಂಕಗಳನ್ನು ಗಳಿಸಿ ಟಾಪ್ 1ನೇ ಸ್ಥಾನವನ್ನು ಪಡೆದುಕೊಂಡಿತ್ತು.

ಇನ್ನೂ ಮೊದಲ ಸುತ್ತಿನಲ್ಲೇ ಪಾಲ್ಗೊಂಡಿದ್ದ ಭಾರತದ ಮತ್ತೊಂದು ಜೋಡಿ ಅಭಿಷೇಕ್ ಶರ್ಮಾ ಮತ್ತು ಯಶಸ್ವಿನಿ ದೆಸ್ವಾಲ್ ನಿರೀಕ್ಷೆಗೆ ತಕ್ಕಂತ ಪ್ರದರ್ಶನ ನೀಡಲಿಲ್ಲ. ಈ ಜೋಡಿ  564 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ 17ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

Tokyo Olympics 2020: ನಾಲ್ಕನೇ ದಿನ ಭಾರತ ಉತ್ತಮ ಆರಂಭ: ಮುಂದಿನ ಸುತ್ತಿಗೆ ಮನು-ಸೌರಭ್

The Hundred: ಹಂಡ್ರೆಡ್​ನಲ್ಲಿ ಮಿಂಚುತ್ತಿರುವ ಜೆಮಿಯಾ ರೊಡ್ರಿಗಸ್: ಮತ್ತೊಂದು ಸ್ಫೋಟಕ ಆಟ, ಮತ್ತೊಂದು ಗೆಲುವು

(Tokyo Olympics 2020 India beat Spain 3-0 in hockey Manu-Saurabh finish 7th)