Tokyo Olympics 2020: ಎರಡನೇ ಅತಿ ಕಡಿಮೆ ವೇಗದಲ್ಲಿ 100 ಮೀ ಓಡಿದ ಎಲೇನ್ ಥಾಮ್ಸನ್ ಹೆರಾ ತಮ್ಮ ಟೈಟಲ್ ಡಿಫೆಂಡ್ ಮಾಡಿಕೊಂಡರು
ಫ್ರೇಸರ್-ಪ್ರೈಸ್ ಪಕ್ಕದ ಲೇನ್ನಲ್ಲಿದ್ದ ಥಾಮ್ಸನ್-ಹೆರಾ ಓಟ ಆರಂಭಗೊಳ್ಳುವ ಮೊದಲು ನಿರ್ಭಾವುಕರಾಗಿ ಕಂಡರು. ಆಕೆಯ ಗಮನವೆಲ್ಲ ಇಂದಿನ ರೇಸ್ ಗೆಲ್ಲುವುದರ ಮೇಲೆ ಕೇಂದ್ರೀಕೃತವಾಗಿತ್ತು. ಫ್ರೇಸರ್-ಪ್ರೈಸ್ ಸಹ ಉತ್ತಮವಾಗೇ ಓಟ ಆರಂಭಿಸಿದರು. ಅದರೆ, ಥಾಮ್ಸನ್-ಹೆರಾ ರಿದಮ್ಗೆ ಬರುತ್ತಿದ್ದಂತೆ ರೇಸ್ ಯಾರು ಗೆಲ್ಲಲಿದ್ದಾರೆ ಎನ್ನುವುದು ವಿದಿತವಾಯಿತು.
ಜಮೈಕಾದ ಎಲೇನ್ ಥಾಮ್ಸನ್ ಹೆರಾ ಟೊಕಿಯೋ ಒಲಂಪಿಕ್ಸ್ನಲ್ಲಿ ಮಹಿಳೆಯರ 100 ಮೀಟರ್ಗಳ ಓಟದಲ್ಲಿ ಚಿನ್ನದ ಪದಕ ಗೆದ್ದು ರಿಯೋ ಒಳಂಪಿಕ್ಸ್ನಲ್ಲಿ ಮಾಡಿದ ಸಾಧನೆಯನ್ನು ಪುನರಾವರ್ತಿಸಿದ್ದಾರೆ. ಈ ಓಟದ ಇತಿಹಾಸದಲ್ಲೇ ಎರಡನೇ ಅತಿವೇಗದ ಸಮಯವನ್ನು ದಾಖಲಿಸಿದ ಅವರು ಬಂಗಾರದ ಪದಕವನ್ನು ತಮ್ಮ ಕೊರಳಿಗೆ ಹಾಕಿಕೊಂಡರು. ಹೆರಾ ತಮ್ಮ ಓಟವನ್ನು 10.61 ಸೆಕೆಂಡ್ಗಳಲ್ಲಿ ಪೂರೈಸಿದರು. ಎರಡು ಬಾರಿಯ ಚಾಂಪಿಯನ್ ಶೆಲ್ಲಿ ಌನ್ ಫ್ರೇಸರ್ 10.74 ಸೆಕೆಂಡ್ಗಳಲ್ಲಿ ಓಡಿ ಬೆಳ್ಳಿ ಪದಕ ಗೆದ್ದರೆ, 10.76 ಸೆಕೆಂಡ್ಗಳಲ್ಲಿ ಗುರಿ ಮುಟ್ಟಿದ ಶೆರಿಖಾ ಜಾಕ್ಸನ್ ಕಂಚು ಗೆದ್ದರು. ವಿಖ್ಯಾತ ಅಥ್ಲೀಟ್ ಅಮೇರಿಕದ ಫ್ಲಾರೆನ್ಸ್ ಗ್ರಿಫಿತ್ ಜಾಯ್ನರ್ ಅವರ 10.61 ಸೆಕೆಂಡ್ಗಳ ದಾಖಲೆಯನ್ನು ಹೆರಾ ಶನಿವಾರ ಸರಿಗಟ್ಟಿದರು.
ಕೇವಲ 1988 ರ ಒಲಂಪಿಕ್ ಗ್ರೀಫಿತ್ ಜಾಯ್ನರ್ ಮಾತ್ರ ಇನ್ನೂ ಕಡಿಮೆ ವೇಗದಲ್ಲಿ (10.49 ಸೆಕೆಂಡ್ಸ್) 100 ಮೀಟರ್ಸ್ ಓಟ ಮುಗಿಸಿರುವ ದಾಖಲೆ ಹೊಂದಿದ್ದಾರೆ.
ಹಾಗೆ ನೋಡಿದರೆ, ಇಂದು ನಡೆದ ರೇಸ್ನಲ್ಲಿ ಎಲ್ಲರ ಗಮನ ಈ ವರ್ಷ ಅತಿ ವೇಗದ ಓಟಗಾರ್ತಿ ಎನಿಸಿಕೊಂಡಿದ್ದ ಪ್ರೇಸರ್ ಪ್ರೈಸ್ ಅವರ ಮೇಲಿತ್ತು. 34-ವರ್ಷ-ವಯಸ್ಸಿನ ಈಕೆ ಒಲಂಪಿಕ್ಸ್ನಲ್ಲಿ 100 ಮೀಟರ್ ಓಟ ಗೆದ್ದ ಅತಿ ಹಿರಿಯ ಮಹಿಳೆಯೆಂಬ ಖ್ಯಾತಿಯನ್ನು ತಮ್ಮದಾಗಿಸಿಕೊಳ್ಳುವ ಮತ್ತು ಒಲಂಪಿಕ್ಸ್ನಲ್ಲಿ ಮೂರನೇ ಬಾರಿಗೆ ಚಿನ್ನದ ಪದಕಕ್ಕೆ ಕೊರಳೊಡ್ಡುವ ಹವಣಿಕೆಯಲ್ಲಿದ್ದರು. ಆದರೆ ಟೊಕಿಯೋದ ಗರಿಷ್ಟ ತಾಪಮಾನದ ವಾತಾವಾರಣದಲ್ಲಿ ರಿಯೋ ಒಲಂಪಿಕ್ಸ್ ಚಾಂಪಿಯನ್ ತಮ್ಮ ಉತ್ಕೃಷ್ಟತೆಯನ್ನು ಮೆರೆದರು.
‘ಇಲ್ಲಿಗೆ ಬಂದು ನನ್ನ ಟೈಟಲ್ ಡಿಫೆಂಡ್ ಮಾಡಿಕೊಂಡಿರುವುದು ರೋಮಾಂಚನ ಮೂಡಿಸುತ್ತಿದೆ. ನನ್ನೆದೆಯಲ್ಲಿ ನೋವು ಹುಟ್ಟಿಕೊಳ್ಳುವಷ್ಟು ಖುಷಿ ನನಗಾಗಿದೆ,’ ಎಂದು ಥಾಮ್ಸನ್ ಹೆರಾ ಹೇಳಿದರು. ರೇಸ್ ಶುರವಾಗುವ ಮೊದಲು ಸ್ಟೇಡಿಯಂನಲ್ಲಿ ಕತ್ತಲೆ ಆವರಿಸಿತು. ಆಯೋಜಕರು ಸ್ಪರ್ಧಿಗಳನ್ನು ರೇಸ್ ಆರಂಭಿಕ ಪಾಯಿಂಟ್ಗೆ ಸ್ಪಾಟ್ಲೈಟ್ಗಳ ಕೆಳಗೆ ತಂದು ಪರಿಚಯಿಸಿದ್ದು ಮನಸೆಳೆಯಿತು.
ಫ್ರೇಸರ್-ಪ್ರೈಸ್ ಪಕ್ಕದ ಲೇನ್ನಲ್ಲಿದ್ದ ಥಾಮ್ಸನ್-ಹೆರಾ ಓಟ ಆರಂಭಗೊಳ್ಳುವ ಮೊದಲು ನಿರ್ಭಾವುಕರಾಗಿ ಕಂಡರು. ಆಕೆಯ ಗಮನವೆಲ್ಲ ಇಂದಿನ ರೇಸ್ ಗೆಲ್ಲುವುದರ ಮೇಲೆ ಕೇಂದ್ರೀಕೃತವಾಗಿತ್ತು. ಫ್ರೇಸರ್-ಪ್ರೈಸ್ ಸಹ ಉತ್ತಮವಾಗೇ ಓಟ ಆರಂಭಿಸಿದರು. ಅದರೆ, ಥಾಮ್ಸನ್-ಹೆರಾ ರಿದಮ್ಗೆ ಬರುತ್ತಿದ್ದಂತೆ ರೇಸ್ ಯಾರು ಗೆಲ್ಲಲಿದ್ದಾರೆ ಎನ್ನುವುದು ವಿದಿತವಾಯಿತು.
60 ಮೀಟರ್ಗಳಷ್ಟು ಓಟದ ನಂತರ ಫ್ರೇಸರ್-ಪ್ರೈಸ್ ಅವರನ್ನು ಹಿಂದಿಕ್ಕಿದ ಕೂಡಲೇ ಥಾಮ್ಸನ್-ಹೆರಾ ಅವರ ಮುಖ ಪ್ರಜ್ವಲಿಸತೊಡಗಿತು. ಗೆಲುವು ನನ್ನದೇ ಎಂಬ ಧೋರಣೆಯೊಂದಿಗೆ ಉಳಿದ 40 ಮೀಟರ್ಗಳ ಓಟವನ್ನು ಚಿರತೆಯಂತೆ ಓಡಿದರು.
ಸೆಮಿಫೈನಲ್ನಲ್ಲೇ ತಾನು ಅತ್ಯುತ್ತಮ ಫಾರ್ಮ್ನಲ್ಲಿರುವ ಕರುಹುವನ್ನು ಥಾಮ್ಸನ್-ಹೆರಾ ನೀಡಿದ್ದರು. ಫಿನಿಶಿಂಗ್ ಲೈನ್ ದಾಟುವ ಮೊದಲೇ ನಿರಾಳರಾಗಿ ಕಂಡಿದ್ದ ಅವರು ಆಗ ಓಟವನ್ನು 10.76 ಸೆಕೆಂಡ್ಗಳಲ್ಲಿ ಮುಗಿಸಿದ್ದರು.