Tokyo Olympics 2020: ಗಾಯಗೊಂಡರು ಘರ್ಜಿಸಿ ವಿರೋಚಿತ ಸೋಲುಂಡ ಭಾರತೀಯ ಬಾಕ್ಸರ್

Satish Kumar: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದಿಂದ ಒಟ್ಟು 9 ಬಾಕ್ಸರ್‌ಗಳು ಭಾಗವಹಿಸಿದ್ದರು. ಇದರಲ್ಲಿ 8 ಮಂದಿ ಈಗಾಗಲೇ ಔಟ್ ಆಗಿದ್ದು, ಇನ್ನು ಲೊವ್ಲಿನಾ ಅವರು ಮಹಿಳಾ ವೆಲ್ಟರ್ ವೇಟ್ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.

Tokyo Olympics 2020: ಗಾಯಗೊಂಡರು ಘರ್ಜಿಸಿ ವಿರೋಚಿತ ಸೋಲುಂಡ ಭಾರತೀಯ ಬಾಕ್ಸರ್
Tokyo Olympics 2020: Satish Kumar
Follow us
TV9 Web
| Updated By: ಝಾಹಿರ್ ಯೂಸುಫ್

Updated on: Aug 01, 2021 | 2:08 PM

ಟೋಕಿಯೋ ಒಲಿಂಪಿಕ್ಸ್​ನಲ್ಲಿ ( Tokyo Olympics 2020-21) ಮತ್ತೊಂದು ಪದಕದ ನಿರೀಕ್ಷೆಯಲ್ಲಿದ್ದ ಭಾರತದ ಆಸೆ ಕಮರಿದೆ. ಹೆವಿ ವೇಯ್ಟ್ ಬಾಕ್ಸಿಂಗ್​ನ ಕ್ವಾರ್ಟರ್​ ಫೈನಲ್​ನಲ್ಲಿ ಉಜ್ಬೆಕಿಸ್ತಾನದ ಬಲಿಷ್ಠ ಬಾಕ್ಸರ್ ಬಖೋದಿರ್ ಜಲೊಲೋವ್ ಎದುರು ಭಾರತದ ಸತೀಶ್ ಕುಮಾರ್ ( Satish Kumar ) ವೀರೋಚಿತ ಸೋಲುಂಡಿದ್ದಾರೆ. ಗಾಯದಿಂದ ಬಳಲುತ್ತಿದ್ದ ಸತೀಶ್ ಕುಮಾರ್ ಅವರು ವಿಶ್ವದ ನಂಬರ್ ಒನ್ ಬಾಕ್ಸರ್ ಜಲೊಲೋವ್ ವಿರುದ್ಧ 0-5 ಸೆಟ್​ಗಳಿಂದ ಸೋಲೋಪ್ಪಿಕೊಂಡರು.

ಜಲೊಲೋವ್ ಅವರಿಗೆ ಇದು ನಿರಾಯಾಸವಾಗಿ ಗೆಲುವಾಗಿದ್ದರೂ, ಗಾಯಗೊಂಡರೂ ರಿಂಗ್​ನಲ್ಲಿ ಕಾಣಿಸಿಕೊಂಡ ಭಾರತದ ಸತೀಶ್ ಬಾಕ್ಸರ್ ಅವರ ಹೋರಾಟದ ಕಿಚ್ಚಿಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ. 91 ಕಿಲೋಗಿಂತ ಹೆಚ್ಚು ತೂಕದವರು ಪಾಲ್ಗೊಳ್ಳುವ ಈ ಸ್ಪರ್ಧೆಯಲ್ಲಿ ಬಲಿಷ್ಠ ದೇಹಾದರ್ಢ್ಯ ಬಹಳ ಮುಖ್ಯ. ಆದರೆ ಸಾಧಾರಣ ಮೈಕಟ್ಟಿನೊಂದಿಗೆ ಕಣದಲ್ಲಿ ಕಾಣಿಸಿಕೊಂಡ ಸತೀಶ್ ಕುಮಾರ್ ಆರಂಭದಿಂದಲೂ ತಮ್ಮ ಚಾಕಚಕ್ಯತೆಯಿಂದ ಬಲಿಷ್ಠ ಎದುರಾಳಿಗಳನ್ನು ಮಣಿಸುತ್ತಾ ಬಂದಿದ್ದರು.

ಅದರಲ್ಲೂ ಕಳೆದ ಪಂದ್ಯದಲ್ಲಿ ಜಮೈಕಾದ ಬಲಿಷ್ಠ ಬಾಕ್ಸರ್ ರಿಕಾರ್ಡೋ ಬ್ರೌನ್ ಅವರನ್ನ ಸೋಲಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿ ಭಾರತೀಯರಲ್ಲಿ ಪದಕದ ಕನಸು ಬಿತ್ತಿದ್ದರು. ಪ್ರಿ ಕ್ವಾರ್ಟರ್​ ಫೈನಲ್ ರೋಚಕ ಹೋರಾಟದ ವೇಳೆ ಗಲ್ಲ ಮತ್ತು ಬಲ ಕಣ್ಣಿಗೆ ಗಂಭೀರವಾದ ಗಾಯವಾಗಿತ್ತು. ಆ ಬಳಿಕ ಸತೀಶ್ ಕುಮಾರ್​ ಅವರಿಗೆ 7 ಹೊಲಿಗೆಗಳನ್ನು ಹಾಕಲಾಗಿತ್ತು. ಹೀಗಾಗಿ ಕ್ವಾರ್ಟರ್ ಫೈನಲ್​ನಲ್ಲಿ ಕಣಕ್ಕಿಳಿಯುವುದು ಅನುಮಾನ ಎನ್ನಲಾಗಿತ್ತು.

ಆದರೆ ಈ ಗಾಯವನ್ನು ಲೆಕ್ಕಿಸದೆ, ಕ್ವಾರ್ಟರ್ ಫೈನಲ್ ಆಡಲು ಕಣಕ್ಕಿಳಿದಿದ್ದರು. ಗಂಭೀರ ಗಾಯದ ಕಾರಣ ಈ ಸ್ಪರ್ಧೆಯಲ್ಲಿ ಪದಕದ ನಿರೀಕ್ಷೆಯನ್ನು ಕೈ ಬಿಡಲಾಗಿತ್ತು ಎಂದೇ ಹೇಳಬಹುದು. ಇದಾಗ್ಯೂ ಸತೀಶ್ ಕುಮಾರ್ ಅಂಗಳದಲ್ಲಿ ಕಾಣಿಸಿಕೊಳ್ಳುವ ಮೂಲಕ ವಿರೋಚಿತವಾಗಿ ಸೋಲೊಪ್ಪಿಕೊಂಡರು. ಅವರ ಈ ಹೋರಾಟದ ಮನೋಭಾವಕ್ಕೆ ಈಗ ಭಾರೀ ಪ್ರಶಂಸೆಗಳು ವ್ಯಕ್ತವಾಗುತ್ತಿದೆ.

9 ಮಂದಿ ಬಾಕ್ಸರ್​: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದಿಂದ ಒಟ್ಟು 9 ಬಾಕ್ಸರ್‌ಗಳು ಭಾಗವಹಿಸಿದ್ದರು. ಇದರಲ್ಲಿ 8 ಮಂದಿ ಈಗಾಗಲೇ ಔಟ್ ಆಗಿದ್ದು, ಇನ್ನು ಲೊವ್ಲಿನಾ ಅವರು ಮಹಿಳಾ ವೆಲ್ಟರ್ ವೇಟ್ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಅಂದಹಾಗೆ ಹೆವಿವೇಯ್ಟ್ ವಿಭಾಗದಲ್ಲಿ ಒಲಿಂಪಿಕ್ ರಿಂಗ್ ಪ್ರವೇಶಿಸಿದ ಮೊದಲ ಭಾರತೀಯ ಬಾಕ್ಸರ್ ಎಂಬ ಸತೀಶ್ ಕುಮಾರ್ ಅವರದ್ದು ಎಂಬುದು ಇಲ್ಲಿ ವಿಶೇಷ.

ಇದನ್ನೂ ಓದಿ: ಕಡಿಮೆ ಬೆಲೆಯ ಪವರ್​ಫುಲ್ ಪವರ್ ಬ್ಯಾಂಕ್: ಮೊಬೈಲ್, ಲ್ಯಾಪ್​ಟಾಪ್​ನ್ನು ಚಾರ್ಜ್​ ಮಾಡಬಹುದು

ಇದನ್ನೂ ಓದಿ: Viral Story: ಒಂದು ಕೆ.ಜಿ ಮಾಂಸ ಖರೀದಿಸಿದ್ರೆ ಒಂದು ಲೀಟರ್ ಪೆಟ್ರೋಲ್ ಉಚಿತ

ಇದನ್ನೂ ಓದಿ: LICಯ ವಿಶೇಷ ಯೋಜನೆ: 200 ರೂ. ಹೂಡಿಕೆ ಮಾಡಿ, 28 ಲಕ್ಷ ರೂ. ಪಡೆಯಿರಿ

ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ