Aditi Ashok: ಟೋಕಿಯೋ ಒಲಿಂಪಿಕ್ಸ್ನಲ್ಲಿ ಕನ್ನಡತಿಯ ಸರ್ವಶ್ರೇಷ್ಠ ಸಾಧನೆ
Tokyo Olympics 2020: ಟೋಕಿಯೋ ಒಲಿಂಪಿಕ್ಸ್ನಲ್ಲಿ ಅದ್ಭುತ ಕೌಶಲ್ಯ ಮತ್ತು ಸಂಕಲ್ಪವನ್ನು ತೋರಿಸಿದ್ದೀರಿ . ಕೂದಲೆಳೆಯ ಅಂತರದಲ್ಲಿ ಪದಕವು ತಪ್ಪಿಹೋಗಿದೆ. ಆದರೆ ಎಲ್ಲಾ ಭಾರತೀಯರಿಗಿಂತ ನೀವು ತುಂಬಾ ದೂರ ಕ್ರಮಿಸಿದ್ದೀರಿ.
ಕಳೆದ ಒಂದು ಶತಮಾನಗಳಿಂದಲೂ ಭಾರತೀಯರು ಒಲಿಂಪಿಕ್ಸ್ನಲ್ಲಿ (Tokyo Olympics 2020) ಭಾಗವಹಿಸುತ್ತಿದ್ದರೂ, ಕೆಲವೊಂದು ವಿಭಾಗಗಳಲ್ಲಿ ಯಾವುದೇ ಸ್ಪರ್ಧಾಳುಗಳು ಕಾಣಿಸಿಕೊಳ್ಳುತ್ತಿರಲಿಲ್ಲ. ಅದರಲ್ಲೂ ಗಾಲ್ಫ್ ವಿಭಾಗದಲ್ಲಿ ಆಗೊಮ್ಮೆ ಹೀಗೊಮ್ಮೆ ಹೆಸರುಗಳು ಕಂಡು ಬಂದರೂ ಮೊದಲ ಸುತ್ತಿನಲ್ಲೇ ನಿರ್ಗಮಿಸಿದವರೇ ಹೆಚ್ಚು. ಆದರೆ ಈ ಬಾರಿ ಗಾಲ್ಫ್ ಮೂಲಕ ಕೂಡ ಪದಕದ ನಿರೀಕ್ಷೆ ಹುಟ್ಟುಹಾಕಿದವರು ಕನ್ನಡತಿ ಅದಿತಿ ಅಶೋಕ್ (Aditi Ashok). ಹೌದು, ಬಾಗಲಕೋಟೆ ಜಿಲ್ಲೆಯ ಜಮಖಂಡಿ ಮೂಲದವರಾದ ಅದಿತಿ ಕುಟುಂಬ ಹಲವಾರು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನೆಲೆಸಿದ್ದರು. ಇತ್ತ 5ನೇ ವಯಸ್ಸಿನಿಂದಲೇ ಗಾಲ್ಫ್ನತ್ತ ಮುಖ ಮಾಡಿದ್ದ 23ರ ಹರೆಯದ ಅದಿತಿ ಈ ಬಾರಿ ಟೋಕಿಯೋ ಒಲಿಂಪಿಕ್ಸ್ನಲ್ಲಿ ಅರ್ಹತೆ ಗಿಟ್ಟಿಸಿಕೊಂಡಿದ್ದರು. ಆರಂಭದಲ್ಲಿ ಭಾರತದಿಂದ ತೆರಳಿದ ನೂರಾರು ಸ್ಪರ್ಧಿಗಳಲ್ಲಿ ಮತ್ತೊಬ್ಬರು ಎಂಬಂತಿದ್ದ ಅದಿತಿ, ತಮ್ಮ ಆಟ ಶುರುವಾಗುತ್ತಿದ್ದಂತೆ ಮನೆ ಮಾತಾದರು. ಅದರಲ್ಲೂ ಅಂತಿಮ ಸುತ್ತು ಪ್ರವೇಶಿಸುವ ಮೂಲಕ ಗಾಲ್ಫ್ ವಿಭಾಗದಲ್ಲಿ ಪ್ರಶಸ್ತಿಯ ಆಸೆಯನ್ನು ಮೂಡಿಸಿದರು.
ಫೈನಲ್ ಸುತ್ತಿನಲ್ಲಿ ಪ್ರಶಸ್ತಿ ಗೆಲ್ಲಬಹುದಾದ ಫೇವರೇಟ್ ಆಟಗಾರ್ತಿಯರಲ್ಲಿ ಒಬ್ಬರಾಗಿದ್ದ ಅದಿತಿ ಕೂದಲೆಳೆಯ ಅಂತರದಲ್ಲಿ ಒಲಿಂಪಿಕ್ ಪದಕ ವಂಚಿತರಾದರು. ಈ ಸ್ಪರ್ಧೆಯಲ್ಲಿ 68 ಪ್ರಯತ್ನಗಳಲ್ಲಿ ನಾಲ್ಕನೆಯವರಾಗಿ ಉಳಿಯುವ ಮೂಲಕ ಕಂಚಿನ ಪ್ರಶಸ್ತಿಯನ್ನು ತಪ್ಪಿಸಿಕೊಂಡರು. ಆದರೆ ಭಾರತೀಯ ಆಟಗಾರ್ತಿಯೊಬ್ಬರು ಒಲಿಂಪಿಕ್ಸ್ ಗಾಲ್ಫ್ನಲ್ಲಿ ನಾಲ್ಕನೇ ಸ್ಥಾನ ಪಡೆಯುತ್ತಿರುವುದು ಇದೇ ಮೊದಲು.
ಅಂತಿಮ ಸುತ್ತಿನ ಪಂದ್ಯದಲ್ಲಿ ಎರಡು ಸ್ಟ್ರೋಕ್‍ಗಳಲ್ಲಿ 15 ಅಂಕ ಪಡೆಯುವ ಪ್ರಶಸ್ತಿ ವಂಚಿತರಾದರೂ, ಸರ್ವ ಶ್ರೇಷ್ಠ ಪ್ರದರ್ಶನದ ಮೂಲಕ ಬೆಂಗಳೂರಿನ ಯುವತಿ ಅಂತರಾಷ್ಟ್ರಿಯ ಮಟ್ಟದಲ್ಲಿ ಮಿಂಚಿದ್ದರು. ಅಷ್ಟೇ ಅಲ್ಲದೆ 23ರ ಹರೆಯದ ಅದಿತಿ ಗಾಲ್ಫ್ ಮೂಲಕ ಮುಂದಿನ ದಿನಗಳಲ್ಲಿ ಭಾರತಕ್ಕೆ ಪದಕ ತಂದುಕೊಡುವ ಭರವಸೆಯನ್ನು ಹುಟ್ಟುಹಾಕಿದ್ದಾರೆ.
ಇನ್ನು ಕರ್ನಾಟಕದ ಯುವ ಗಾಲ್ಫರ್ ಪ್ರದರ್ಶನಕ್ಕೆ ಪ್ರಧಾನಿ ನರೇಂದ್ರ ಮೋದಿ (PM Modi) ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದು, ಚೆನ್ನಾಗಿ ಆಡಿದ್ದೀರಿ. ಟೋಕಿಯೋ ಒಲಿಂಪಿಕ್ಸ್ನಲ್ಲಿ ಅದ್ಭುತ ಕೌಶಲ್ಯ ಮತ್ತು ಸಂಕಲ್ಪವನ್ನು ತೋರಿಸಿದ್ದೀರಿ . ಕೂದಲೆಳೆಯ ಅಂತರದಲ್ಲಿ ಪದಕವು ತಪ್ಪಿಹೋಗಿದೆ. ಆದರೆ ಎಲ್ಲಾ ಭಾರತೀಯರಿಗಿಂತ ನೀವು ತುಂಬಾ ದೂರ ಕ್ರಮಿಸಿದ್ದೀರಿ. ನಿಮ್ಮ ಭವಿಷ್ಯವು ಉಜ್ವಲವಾಗಲಿ ಎಂದು ಶುಭ ಹಾರೈಸಿದ್ದಾರೆ.
ಇದನ್ನೂ ಓದಿ:-
Tokyo Olympics: ಒಲಿಂಪಿಕ್ಸ್ನಲ್ಲಿ ವಿಶ್ವ ದಾಖಲೆ ಬರೆದ ಭಾರತ..!
Tokyo Olympics: ಪದಕ ಗೆಲ್ಲುತ್ತಿದ್ದಂತೆ ಟೀಮ್ ಇಂಡಿಯಾಗೆ ಕಾದಿತ್ತು ಸರ್ಪ್ರೈಸ್..!