AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tokyo Olympics: ಇದು ಅನ್ಯಾಯ, ರೆಫರಿ ತೀರ್ಪಿನ ವಿರುದ್ದ ಬಾಕ್ಸರ್ ಪ್ರತಿಭಟನೆ

ಅಲೀವ್ ಮತ್ತು ಕ್ಲಾರ್ಕ್ ನಡುವಿನ ಸ್ಪರ್ಧೆಯು ತುಂಬಾ ಪೈಪೋಟಿಯಿಂದ ಕೂಡಿತ್ತು. ಅತ್ಯುತ್ತವಾಗಿ ಆಡುತ್ತಿದ್ದ ಅಲೀವ್ ಅನರ್ಹಗೊಳ್ಳುತ್ತಿದ್ದಂತೆ ಕಂಚಿನ ಪದಕ ಕ್ಲಾರ್ಕ್ ಪಾಲಾಯಿತು.

Tokyo Olympics: ಇದು ಅನ್ಯಾಯ, ರೆಫರಿ ತೀರ್ಪಿನ ವಿರುದ್ದ ಬಾಕ್ಸರ್ ಪ್ರತಿಭಟನೆ
Mourad aliev
TV9 Web
| Edited By: |

Updated on: Aug 01, 2021 | 2:43 PM

Share

ಒಂದೆಡೆ ಟೋಕಿಯೋ ಒಲಿಂಪಿಕ್ಸ್ -2020 (Tokyo Olympics- 2020) ಹಲವು ರೋಚಕ ಹೋರಾಟಗಳಿಗೆ ಸಾಕ್ಷಿಯಾಗುತ್ತಿದ್ದರೆ, ಇನ್ನೊಂದೆಡೆ ಸ್ಪರ್ಧಿಯೊಬ್ಬರು ಆಟದ ನಡುವೆ ಪ್ರತಿಭಟನೆ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ. ಕ್ವಾರ್ಟರ್ ಫೈನಲ್‌ನಲ್ಲಿ ಅನರ್ಹಗೊಂಡ ಬಳಿಕ ಫ್ರಾನ್ಸ್‌ನ ಸೂಪರ್ ಹೆವಿ ವೇಯ್ಟ್ ಬಾಕ್ಸರ್ ಒಂದು ಗಂಟೆ ಕಾಲ ರಿಂಗ್‌ನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಭಾನುವಾರ ನಡೆದ ಈ ಪಂದ್ಯದ ಎರಡನೇ ಸುತ್ತಿನಲ್ಲಿ ಕೇವಲ ನಾಲ್ಕು ಸೆಕೆಂಡುಗಳು ಉಳಿದಿದ್ದವು. ಇದೇ ವೇಳೆ ಪಂದ್ಯದ ರೆಫರಿ ಆಂಡಿ ಮುಸ್ತಾಚಿಯೊ ಬಾಕ್ಸರ್ ಮೌರದ್ ಅಲೀವ್ ಅವರನ್ನು ಅನರ್ಹಗೊಳಿಸಿದರು. ರೆಫ್ರಿ ಪ್ರಕಾರ, ಅಲೀವ್ ಉದ್ದೇಶಪೂರ್ವಕವಾಗಿ ತನ್ನ ಎದುರಾಳಿ ಬ್ರಿಟನ್ ಬಾಕ್ಸರ್ ಫ್ರೇಸರ್ ಕ್ಲಾರ್ಕ್ ಅವರ ತಲೆಗೆ ಪಂಚ್ ಮಾಡಿದ್ದಾನೆ. ಹೀಗಾಗಿ ಆತನನ್ನು ಅನರ್ಹಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ತೀರ್ಪು ಪ್ರಕಟವಾದ ತಕ್ಷಣವೇ ಅಲೀವ್ ಬಾಕ್ಸಿಂಗ್ ರಿಂಗ್ ಹೊರಗೆ ಕುಳಿತು ಪ್ರತಿಭಟನೆ ಮಾಡಿದರು. ಫ್ರೆಂಚ್ ತಂಡದ ಅಧಿಕಾರಿಗಳು ಕೂಡ ಆತನ ಬೆಂಬಲಕ್ಕೆ ನಿಂತರು. ನಾನು ಯಾವುದೇ ತಪ್ಪು ಮಾಡಿರಲಿಲ್ಲ. ರೆಫರಿಯ ತೀರ್ಪು ತಪ್ಪಾಗಿತ್ತು. ಈ ನಿರ್ಧಾರದ ವಿರುದ್ದ ನನ್ನ ಅಸಮಾಧಾನವನ್ನು ವ್ಯಕ್ತಪಡಿಸಲು ಈ ಪ್ರತಿಭಟನೆ ಮಾಡುತ್ತಿದ್ದೇನೆ ಎಂದು ಅಲೀವ್ ತಿಳಿಸಿದರು.

ನಾನು ಯಾವತ್ತೂ ಪ್ರಮಾಣಿಕವಾಗಿ ಹೋರಾಡಲ ಬಯಸುತ್ತೇನೆ. ರೆಫರಿ ಮಾಡಿದ ತಪ್ಪಿನಿಂದಾಗಿ ನನ್ನ ತಂಡದ ಸದಸ್ಯರು ಸಹ ಸೋತಿದ್ದಾರೆ. ಈ ಹೋರಾಟಕ್ಕಾಗಿ ನನ್ನ ಇಡೀ ಜೀವನವನ್ನೇ ವ್ಯಯಿಸಿದ್ದೇನೆ. ರೆಫರಿಯ ನಿರ್ಧಾರದಿಂದಾಗಿ ಎಲ್ಲವನ್ನೂ ನಾನು ಕಳೆದುಕೊಂಡೆ ಎಂದು ಮೌರದ್ ಅಲೀವ್ ನೋವು ತೋಡಿಕೊಂಡರು.

ಅಲೀವ್ ಮತ್ತು ಕ್ಲಾರ್ಕ್ ನಡುವಿನ ಸ್ಪರ್ಧೆಯು ತುಂಬಾ ಪೈಪೋಟಿಯಿಂದ ಕೂಡಿತ್ತು. ಅತ್ಯುತ್ತವಾಗಿ ಆಡುತ್ತಿದ್ದ ಅಲೀವ್ ಅನರ್ಹಗೊಳ್ಳುತ್ತಿದ್ದಂತೆ ಕಂಚಿನ ಪದಕ ಕ್ಲಾರ್ಕ್ ಪಾಲಾಯಿತು. ಈ ಬಗ್ಗೆ ಮಾತನಾಡಿದ ಕ್ಲಾರ್ಕ್, “ಹಲವು ಬಾರಿ ಫೌಲ್ ಪಂಚ್ ಆಗಿದೆ ಎಂದು ನನಗೆ ಅನಿಸಿತು. ಅವನು ಉದ್ದೇಶಪೂರ್ವಕವಾಗಿ ತಲೆಗೆ ಹೊಡೆದನೋ ಇಲ್ಲವೋ, ನಾನು ಏನನ್ನೂ ಹೇಳಲಾರೆ. ಪಂದ್ಯದ ನಂತರ ಶಾಂತವಾಗಿರಲು ನಾನು ಅವನನ್ನು ಕೇಳಿದೆ ಎಂದು ಬ್ರಿಟನ್ ಬಾಕ್ಸರ್ ತಿಳಿಸಿದರು.

ಇತ್ತ ಮೊದಲ ಸುತ್ತನ್ನು 3-2 ಗೆದ್ದಿದ್ದ 26ರ ಹರೆಯದ ಅಲೀವ್, ಇದು ಅನ್ಯಾಯ. ನಾನು ಪಂದ್ಯವನ್ನು ಗೆಲ್ಲುತ್ತಿದ್ದೆ. ಆದರೆ ರೆಫರಿ ಯಾವುದೇ ಎಚ್ಚರಿಕೆ ನೀಡದೆ ನನ್ನನ್ನು ಅನರ್ಹಗೊಳಿಸಿದರು. ಅವರು ಮಾಡಿದ ಒಂದು ತಪ್ಪಿನಿಂದ ನನ್ನ ಇಡೀ ಜೀವನದ ಪರಿಶ್ರಮ ಮಣ್ಣು ಪಾಲಾಯಿತು ಎಂದು ಅಳಲು ತೋಡಿಕೊಂಡರು.

ಮೇರಿ ಕೋಮ್ ಕೂಡ ಆಕ್ರೋಶ ವ್ಯಕ್ತಪಡಿಸಿದ್ದರು:

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾರತದ ಮೇರಿ ಕೋಮ್ ಕೂಡ ರೆಫರಿ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಪ್ರೀ ಕ್ವಾರ್ಟರ್ ಪಂದ್ಯದಲ್ಲಿ ಕೊಲಂಬಿಯಾದ ಇಂಗ್ರಿಟ್ ವೇಲೆನ್ಸಿಯಾ ವಿರುದ್ಧ ಸೋತ ಬಳಿಕ ನೋವು ವ್ಯಕ್ತಪಡಿಸಿಸದ್ದ ಮೇರಿ ಕೋಮ್, ಈ ಸೋಲನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಳಪೆ ತೀರ್ಪಿನಿಂದಾಗಿ ನಾನು ಸೋಲುವಂತಾಯಿತು ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ(ಐಒಸಿ) ಬಾಕ್ಸಿಂಗ್ ಟಾಸ್ಕ್ ಪೋರ್ಸ್ ವಿರುದ್ಧ ಕಿಡಿಕಾರಿದ್ದರು.

ಇದನ್ನೂ ಓದಿ: ಕಡಿಮೆ ಬೆಲೆಯ ಪವರ್​ಫುಲ್ ಪವರ್ ಬ್ಯಾಂಕ್: ಮೊಬೈಲ್, ಲ್ಯಾಪ್​ಟಾಪ್​ನ್ನು ಚಾರ್ಜ್​ ಮಾಡಬಹುದು

ಇದನ್ನೂ ಓದಿ: Viral Story: ಒಂದು ಕೆ.ಜಿ ಮಾಂಸ ಖರೀದಿಸಿದ್ರೆ ಒಂದು ಲೀಟರ್ ಪೆಟ್ರೋಲ್ ಉಚಿತ

ಇದನ್ನೂ ಓದಿ: LICಯ ವಿಶೇಷ ಯೋಜನೆ: 200 ರೂ. ಹೂಡಿಕೆ ಮಾಡಿ, 28 ಲಕ್ಷ ರೂ. ಪಡೆಯಿರಿ

(Tokyo Olympics 2020: France boxer protests with sit-in over disqualification)

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ