India vs England: 3ನೇ ಟೆಸ್ಟ್ ಗೆಲುವಿನ ಬಳಿಕ ಪಿಚ್ ಬಗ್ಗೆ ಕೊಹ್ಲಿ, ಯುವಿ ಹೇಳಿದ್ದೇನು?
India vs England: ತವರು ನೆಲದಲ್ಲಿ ಹೆಚ್ಚು ಟೆಸ್ಟ್ ಗೆಲುವು ಸಾಧಿಸಿದ ದಾಖಲೆಯನ್ನ ಕೊಹ್ಲಿ ಬರೆದಿದ್ದಾರೆ. ನಾಯಕನಾಗಿ ಕೊಹ್ಲಿ 29 ಟೆಸ್ಟ್ ಪಂದ್ಯಗಳಲ್ಲಿ 22 ಜಯಗಳಿಸಿದ್ದಾರೆ. ಇನ್ನೂ ಎಂ.ಎಸ್.ಧೋನಿ 21ಗೆಲುವು ಸಾಧಿಸಿದ್ರು.
ಅಹಮದಾಬಾದ್: ಇಂಡಿಯಾ- ಇಂಗ್ಲೆಂಡ್ ನಡುವೆ ನಡೆದ 3ನೇ ಪಂದ್ಯದಲ್ಲಿ ಟೀಂ ಇಂಡಿಯಾ ದಾಖಲೆಯ ಜಯ ಸಾಧಿಸಿದೆ. ಆದರೆ ಈಗ ಸುದ್ದಿಯಲ್ಲಿರುವುದು ಈ ವಿಚಾರವಲ್ಲ. ಬದಲಿಗೆ 5 ದಿನ ನಡೆಯಬೇಕಿದ್ದ ಟೆಸ್ಟ್ ಕೇವಲ 2 ದಿನಕ್ಕೆ ಮುಗಿದಿರುವುದು. ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದ ಪಿಚ್ ಬಗ್ಗೆ ಈಗ ಹಲವು ಆಟಗಾರರು ತಕರಾರು ಎತ್ತಿದ್ದು, ತಮ್ಮ ನಿಲುವುಗಳನ್ನು ವಿಭಿನ್ನವಾಗಿ ವ್ಯಕ್ತಪಡಿಸುತ್ತಿದ್ದಾರೆ. ಮಾಜಿ ಆಟಗಾರರು ಪಿಚ್ ಅನ್ನು ದೂಷಿಸುತ್ತಿದ್ದರೆ, ಮಾಜಿ ಆಟಗಾರರು ಪಿಚ್ ಬದಲು, ಆಟಗಾರರನ್ನು ದೂಷಿಸುತ್ತಿದ್ದಾರೆ.
ಪಿಚ್ ಚೆನ್ನಾಗಿಯೇ ಇತ್ತು ಅಹಮದಾಬಾದ್ ಪಿಚ್ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿಬರ್ತಿವೆ. ಇದ್ರ ಬೆನ್ನಲ್ಲೆ ಮಾತನಾಡಿರೋ ವಿರಾಟ್ ಕೊಹ್ಲಿ, ಪಿಚ್ ಚೆನ್ನಾಗೇ ಇತ್ತು. ಆದರೆ, ಬ್ಯಾಟ್ಸ್‌ಮನ್‌ಗಳ ಬ್ಯಾಟಿಂಗ್ ಗುಣಮಟ್ಟ ಚೆನ್ನಾಗಿರಲಿಲ್ಲ . ಪ್ರಾಮಾಣಿಕವಾಗಿ ಹೇಳೋದಾದ್ರೆ, ನಿರೀಕ್ಷೆಗೆ ತಕ್ಕಂತೆ ಬ್ಯಾಟಿಂಗ್ ಗುಣಮಟ್ಟ ಇರಲಿಲ್ಲ ಎಂದು ವಿರಾಟ್ ಕೊಹ್ಲಿ ತಿಳಿಸಿದ್ದಾರೆ.
ಅಶ್ವಿನ್ ಯಶಸ್ಸಿನ ರಹಸ್ಯ ಬಹಿರಂಗ ಭಾರತದ ಗೆಲುವಿನಲ್ಲಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಪ್ರಮುಖ ಪಾತ್ರವಹಿಸಿದ್ದರು. ಇತ್ತೀಚಿನ ದಿನಗಳಲ್ಲಿ ತಾನು ಹೆಚ್ಚು ಉತ್ತಮ ಪ್ರದರ್ಶನ ನೀಡುತ್ತಿರುವ ಹಿಂದಿನ ಗುಟ್ಟನ್ನು ಅಶ್ವಿನ್ ಹೇಳಿಕೊಂಡಿದ್ದಾರೆ. ಐಪಿಎಲ್‌ನಲ್ಲೂ ನನ್ನ ಬೌಲಿಂಗ್ ಸೊಗಸಾಗಿ ಬರುತ್ತಿತ್ತು ಎಂದು ನಾನು ಭಾವಿಸುತ್ತೇನೆ. ಲಾಕ್‌ಡೌನ್ ಸಮಯದಲ್ಲಿ ನಾನು 7-8 ಕೆಜಿ ತೂಕ ಕಳೆದುಕೊಂಡೆ. ಹೀಗಾಗಿ ನನ್ನ ಪ್ರದರ್ಶನದಲ್ಲೂ ಗಮನಾರ್ಹ ಸುಧಾರಣೆ ಕಂಡಿದೆ ಎಂದು ಅಶ್ವಿನ್ ಹೇಳಿದ್ದಾರೆ.
ಧೋನಿ ದಾಖಲೆ ಬ್ರೇಕ್ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ತಂಡವನ್ನು ಸೋಲಿಸಿದ ನಂತರ, ವಿರಾಟ್ ಕೊಹ್ಲಿ ಎಂ.ಎಸ್.ಧೋನಿ ಅವರನ್ನು ಹಿಂದಿಕ್ಕಿದ್ದಾರೆ. ತವರು ನೆಲದಲ್ಲಿ ಹೆಚ್ಚು ಟೆಸ್ಟ್ ಗೆಲುವು ಸಾಧಿಸಿದ ದಾಖಲೆಯನ್ನ ಕೊಹ್ಲಿ ಬರೆದಿದ್ದಾರೆ. ನಾಯಕನಾಗಿ ಕೊಹ್ಲಿ 29 ಟೆಸ್ಟ್ ಪಂದ್ಯಗಳಲ್ಲಿ 22 ಜಯಗಳಿಸಿದ್ದಾರೆ. ಇನ್ನೂ ಎಂ.ಎಸ್.ಧೋನಿ 21 ಗೆಲುವು ಸಾಧಿಸಿದ್ರು.
ಅಶ್ವಿನ್ ಗುಣಗಾನ ಮಾಡಿದ ಕೊಹ್ಲಿ ಮೂರನೇ ಟೆಸ್ಟ್ನಲ್ಲಿ 8 ವಿಕೆಟ್ ಕಬಳಿಸಿದ ಆರ್.ಅಶ್ವಿನ್ರನ್ನು ನಾಯಕ ವಿರಾಟ್ ಕೊಹ್ಲಿ ಗುಣಗಾನ ಮಾಡಿದ್ದಾರೆ. ನನ್ನ ಪ್ರಕಾರ ಟೆಸ್ಟ್ ಕ್ರಿಕೆಟ್‌ನಲ್ಲಿ ಅಶ್ವಿನ್ ಆಧುನಿಕ ಕ್ರಿಕೆಟ್‌ನ ದಿಗ್ಗಜ. ನಮ್ಮ ತಂಡದಲ್ಲಿ ಆತನನ್ನು ಹೊಂದಿರುವುದಕ್ಕೆ ನಾವು ಅದೃಷ್ಟರಾಗಿದ್ದೇವೆ. ನಾಯಕನಾಗಿ ಅಶ್ವಿನ್ ನಮ್ಮೊಂದಿಗೆ ಆಡುತ್ತಿರುವುದಕ್ಕೆ ತುಂಬಾ ಆಭಾರಿಯಾಗಿದ್ದೇನೆಎಂದು ವಿರಾಟ್ ಕೊಹ್ಲಿ ಆರ್.ಅಶ್ವಿನ್ ಸಾಧನೆಯ ಬಗ್ಗೆ ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ.
ಪಿಚ್ ಬಗ್ಗೆ ಧ್ವನಿ ಎತ್ತಿದ ಯುವಿ ಮೂರನೇ ಟೆಸ್ಟ್ ಪಂದ್ಯ ಎರಡು ದಿನಕ್ಕೆ ಮುಕ್ತಾಯವಾಗಿರೋದಕ್ಕೆ ಮಾಜಿ ಆಟಗಾರ ಯುವರಾಜ್ ಸಿಂಗ್ ಧ್ವನಿ ಎತ್ತಿದ್ದಾರೆ. ಎರಡೇ ದಿನದಲ್ಲಿ ಟೆಸ್ಟ್ ಪಂದ್ಯ ಕೊನೆಯಾಗಿದೆ. ಇದು ಟೆಸ್ಟ್ ಕ್ರಿಕೆಟಿಗೆ ಉತ್ತಮ ಎಂಬ ಬಗ್ಗೆ ನನ್ನ ಖಾತ್ರಿ ಇಲ್ಲ. ಅನಿಲ್ ಕುಂಬ್ಳೆ ಹಾಗೂ ಹರ್ಭಜನ್ ಸಿಂಗ್ ಈರೀತಿಯ ಪಿಚ್ ನಲ್ಲಿ ಬೌಲಿಂಗ್ ಮಾಡುತ್ತಿದ್ದರೆ ಸಾವಿರ ಹಾಗೂ 800 ವಿಕೆಟ್ ಗಳನ್ನು ಪಡೆಯುತ್ತಿದ್ದರು ಎಂದು ಯುವಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:India vs England: ಕೇವಲ 842 ಎಸೆತಗಳಲ್ಲಿ ಮುಗಿದ 3ನೇ ಟೆಸ್ಟ್ಗೆ 7ನೇ ಸ್ಥಾನ.. ಇದಕ್ಕೂ ಮೊದಲಿನವು ಯಾವುವು ಗೊತ್ತಾ?