ಕಿಂಗ್​ ಕೊಹ್ಲಿಗೆ ಈಗ ಇನ್‌ಸ್ಟಾಗ್ರಾಮ್​ನಲ್ಲಿ 10 ಕೋಟಿ ಫಾಲೋವರ್ಸ್! ಧೋನಿ, ರೋಹಿತ್​, ಬಾದ್​ ಶಾ, ಪ್ರಧಾನಿಯನ್ನೇ ಹಿಂದಿಕ್ಕಿದ​ ರನ್​ ಮಷಿನ್​..!

ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್​ನಲ್ಲಿ 100 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ಮೊದಲ ಭಾರತೀಯ ಮತ್ತು ಏಷ್ಯಾ ಖಂಡದ ಮೊದಲ ವ್ಯಕ್ತಿಯಾಗಿದ್ದಾರೆ.

ಕಿಂಗ್​ ಕೊಹ್ಲಿಗೆ ಈಗ ಇನ್‌ಸ್ಟಾಗ್ರಾಮ್​ನಲ್ಲಿ 10 ಕೋಟಿ ಫಾಲೋವರ್ಸ್! ಧೋನಿ, ರೋಹಿತ್​, ಬಾದ್​ ಶಾ, ಪ್ರಧಾನಿಯನ್ನೇ ಹಿಂದಿಕ್ಕಿದ​ ರನ್​ ಮಷಿನ್​..!
ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ
Follow us
ಪೃಥ್ವಿಶಂಕರ
|

Updated on:Mar 02, 2021 | 11:51 AM

ಟೀಂ ಇಂಡಿಯಾದ ರನ್​ ಮಷಿನ್​ ಕಿಂಗ್​ ಕೊಹ್ಲಿ ಸಾಮಾಜಿಕ ಜಾಲತಾಣವೊಂದರಲ್ಲಿ ಅತ್ಯಧಿಕ ಅನುಯಾಯಿಗಳನ್ನು ಹೊಂದಿರುವ ಮೊದಲ ಆಟಗಾರ ಎಂಬ ಹೆಗ್ಗಳಿಕೆ ಪಡೆದು ಇತಿಹಾಸ ಸೃಷ್ಟಿಸಿದ್ದಾರೆ. ಕಿಂಗ್​ ಕೊಹ್ಲಿಯ ಈ ಸಾಧನೆಯನ್ನ ಕೇವಲ ಭಾರತ ಮಾತ್ರವಲ್ಲ ಇಡೀ ಏಷ್ಯಾದಲ್ಲಿಯೇ ಯಾರೂ ಸಹ ಮಾಡಿಲ್ಲ. ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್​ನಲ್ಲಿ 100 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ಮೊದಲ ಭಾರತೀಯ ಮತ್ತು ಏಷ್ಯಾ ಖಂಡದ ಮೊದಲ ವ್ಯಕ್ತಿಯಾಗಿದ್ದಾರೆ.

100 ಮಿಲಿಯನ್​ ಅನುಯಾಯಿಗಳನ್ನು ಸಂಪಾದಿಸಿದ ಮೊದಲ ಕ್ರಿಕೆಟಿಗ.. ಇದರೊಂದಿಗೆ ಕೊಹ್ಲಿ 1 ಕೋಟಿ ಮಂದಿ​ ಅನುಯಾಯಿಗಳನ್ನು ಸಂಪಾದಿಸಿದ ಮೊದಲ ಕ್ರಿಕೆಟಿಗರೂ ಆಗಿದ್ದಾರೆ. 1 ಮಾರ್ಚ್ 2021 ರಂದು ಈ ಸಾಧನೆ ಮಾಡಿರುವ ಕೊಹ್ಲಿಯ ಬಗ್ಗೆ ಐಸಿಸಿ ಕೂಡ ಟ್ವೀಟ್ ಮಾಡಿದೆ. ಐಸಿಸಿ ತನ್ನ ಟ್ವೀಟ್​ನಲ್ಲಿ 100 ದಶಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಜನರ ಫೋಟೋಗಳನ್ನು ಪೋಸ್ಟ್ ಮಾಡಿದೆ. ಅದರಲ್ಲಿ ವಿರಾಟ್ ಕೊಹ್ಲಿ ಇನ್‌ಸ್ಟಾಗ್ರಾಮ್​ನಲ್ಲಿ 100 ಮಿಲಿಯನ್ ಫಾಲೋವರ್ಸ್ ಹೊಂದಿರುವ ಮೊದಲ ಕ್ರಿಕೆಟಿಗ ಎಂದು ಬರೆಯಲಾಗಿದೆ.

ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಮೊದಲಿಗ.. ಇನ್‌ಸ್ಟಾಗ್ರಾಮ್​ನಲ್ಲಿ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ವ್ಯಕ್ತಿಗಳ ಪೈಕಿ, ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಮೊದಲಿಗರಾಗಿದ್ದಾರೆ. ಅವರು 266 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ನಂತರದ ಸ್ಥಾನ ಅರಿಯಾನಾ ಗ್ರಾಂಡೆ 224 ಮಿಲಿಯನ್, ನಟ ಡ್ವೇನ್ ಜಾನ್ಸನ್ 220 ಮಿಲಿಯನ್, ಕೈಲಿ ಜೆನ್ನರ್ 218 ಮಿಲಿಯನ್ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಹೊಂದಿದ್ದಾರೆ. 100 ಮಿಲಿಯನ್‌ಗಿಂತಲೂ ಹೆಚ್ಚು ಇನ್‌ಸ್ಟಾಗ್ರಾಮ್ ಅನುಯಾಯಿಗಳ ಪಟ್ಟಿಯಲ್ಲಿ ಕೇವಲ ನಾಲ್ಕು ಆಟಗಾರರಿದ್ದು, ರೊನಾಲ್ಡೊ, ಲಿಯೋನೆಲ್ ಮಾಸ್ಸಿ (18.7 ಕೋಟಿ), ಬ್ರೆಜಿಲ್ ಫುಟ್ಬಾಲ್ ಆಟಗಾರ ನೇಮಾರ್ (14.7 ಕೋಟಿ) ಮತ್ತು ಈಗ ವಿರಾಟ್ ಕೊಹ್ಲಿ ಈ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ.

ಕೊಹ್ಲಿ ನಂತರ ಪ್ರಿಯಾಂಕಾ ಚೋಪ್ರಾ ಹೆಸರು.. ಭಾರತೀಯರಲ್ಲಿ, ಪ್ರಿಯಾಂಕಾ ಚೋಪ್ರಾ ಅವರು ಕೊಹ್ಲಿ ನಂತರ ಇನ್‌ಸ್ಟಾಗ್ರಾಮ್​ನಲ್ಲಿ 60.8 ಮಿಲಿಯನ್ ಅಥವಾ 6 ಕೋಟಿ 80 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ. ಅವರ ನಂತರ ಶ್ರದ್ಧಾ ಕಪೂರ್ ಅವರು 5.8 ಕೋಟಿ ಅನುಯಾಯಿಗಳನ್ನು ಹೊಂದಿದ್ದಾರೆ. ದೀಪಿಕಾ ಪಡುಕೋಣೆ 5.33 ಕೋಟಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು 5.12 ಕೋಟಿ ಅನುಯಾಯಿಗಳನ್ನು ಹೊಂದಿದ್ದಾರೆ. ಹಾಗೆಯೇ, ಮಹೇಂದ್ರ ಸಿಂಗ್ ಧೋನಿ (30.4 ಮಿಲಿಯನ್) ಕೊಹ್ಲಿ ನಂತರ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಇನ್‌ಸ್ಟಾಗ್ರಾಮ್​ ಅನುಯಾಯಿಗಳನ್ನು ಹೊಂದಿರುವ ಕ್ರೀಡಾಪಟುವಾಗಿದ್ದಾರೆ.

ಹೆಸರು    ಫಾಲೋವರ್ಸ್
ವಿರಾಟ್​ ಕೊಹ್ಲಿ 10 ಕೋಟಿ
ಪ್ರಿಯಾಂಕಾ ಚೋಪ್ರಾ 6.8 ಕೋಟಿ
ಶ್ರದ್ಧಾ ಕಪೂರ್ 5.8 ಕೋಟಿ
ದೀಪಿಕಾ ಪಡುಕೋಣೆ 5.3 ಕೋಟಿ
ಪ್ರಧಾನಿ ನರೇಂದ್ರ ಮೋದಿ 5.1 ಕೋಟಿ
ಅನುಷ್ಕಾ ಶರ್ಮಾ  4.6 ಕೋಟಿ
ಮಹೇಂದ್ರ ಸಿಂಗ್ ಧೋನಿ 3.4 ಕೋಟಿ

ವಿರಾಟ್ ಕೊಹ್ಲಿ ಪ್ರಸ್ತುತ ಟೀಂ ಇಂಡಿಯಾದೊಂದಿಗೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿದ್ದಾರೆ. ಅಹಮದಾಬಾದ್‌ನಲ್ಲಿ ನಾಲ್ಕನೇ ಟೆಸ್ಟ್​ಗೆ ತಯಾರಿ ನಡೆಸುತ್ತಿದ್ದಾರೆ. ನಾಲ್ಕು ಪಂದ್ಯಗಳ ಸರಣಿಯಲ್ಲಿ ಭಾರತ 2-1ರಲ್ಲಿ ಮುನ್ನಡೆ ಸಾಧಿಸಿದೆ. ಮುಂದಿನ ಟೆಸ್ಟ್‌ನಲ್ಲಿ ಗೆಲುವು ಅಥವಾ ಡ್ರಾ ಸಾಧಿಸುವುದರೊಂದಿಗೆ ಅವರು ಜೂನ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಸ್ಥಾನ ಪಡೆಯುವ ತವಕದಲ್ಲಿದ್ದಾರೆ.

ಇದನ್ನೂ ಓದಿ:Virat Kohli performance | ಕೊಹ್ಲಿ ಬ್ಯಾಟ್​ ಸದ್ದು ಮಾಡ್ತಿಲ್ಲ! ಕ್ಯಾಪ್ಟನ್​ ಕೊಹ್ಲಿಯ ಆ ಅಗ್ರೇಸಿವ್​ನೆಸ್​ ಡಿಕ್ರೀಸ್​ ಆಗಿದೆ!! ಕೊಹ್ಲಿ ಒತ್ತಡದಲ್ಲಿದ್ದರಾ?

Published On - 11:33 am, Tue, 2 March 21