AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖ್ಯಾತ ಟೆನಿಸ್ ತಾರೆ ಯಾನಿಕ್ ಸಿನ್ನರ್​ಗೆ 3 ತಿಂಗಳ ನಿಷೇಧ

Jannik Sinner: ಇಟಲಿಯ ಯುವ ಟೆನಿಸ್ ತಾರೆ ಮತ್ತು ವಿಶ್ವದ ನಂಬರ್-1 ಆಟಗಾರ ಯಾನಿಕ್ ಸಿನ್ನರ್ ಇತ್ತೀಚೆಗಷ್ಟೇ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯನ್ನು ಗೆದಿದ್ದರು. ಈ ಗೆಲುವಿನ ಬೆನ್ನಲ್ಲೇ ಅವರು ಡೋಪಿಂಗ್ ಪ್ರಕರಣದ ತೀರ್ಪು ಹೊರಬಿದ್ದಿದೆ. ಅದರಂತೆ ಇದೀಗ ಯಾನಿಕ್ ಸಿನ್ನರ್ ಮೂರು ತಿಂಗಳುಗಳ ಟೆನಿಸ್ ಅಂಗಳದಿಂದ ಹೊರಗುಳಿಯಲಿದ್ದಾರೆ.

ಖ್ಯಾತ ಟೆನಿಸ್ ತಾರೆ ಯಾನಿಕ್ ಸಿನ್ನರ್​ಗೆ 3 ತಿಂಗಳ ನಿಷೇಧ
Jannik Sinner
ಝಾಹಿರ್ ಯೂಸುಫ್
|

Updated on: Feb 16, 2025 | 1:30 PM

Share

ಉದ್ದೀಪನ ಮದ್ದು ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ಟೆನಿಸ್ ತಾರೆ ಯಾನಿಕ್ ಸಿನ್ನರ್ 3 ತಿಂಗಳುಗಳ ನಿಷೇಧಕ್ಕೆ ಒಳಗಾಗಿದ್ದಾರೆ. 2024ರ ಮಾರ್ಚ್​ನಲ್ಲಿ ನಡೆಸಲಾದ ಡೋಪಿಂಗ್ ಟೆಸ್ಟ್​ ವೇಳೆ ಸಿನ್ನರ್ ಉದ್ದೀಪನ ಮದ್ದು ಸೇವಿಸಿರುವುದು ದೃಢಪಟ್ಟಿತ್ತು. ಈ ಪರೀಕ್ಷೆ ವೇಳೆ ಯಾನಿಕ್ ಸಿನ್ನರ್ ಅವರ ದೇಹದಲ್ಲಿ WADA (ಉದ್ದೀಪನ ಮದ್ದು ಸೇವನೆ ತಡೆ ಏಜೆನ್ಸಿ) ನಿಷೇಧಿತ ವಸ್ತು ‘ಕ್ಲೋಸ್ಟೆಬೋಲ್’ ಕಂಡುಬಂದಿದೆ.

ಅನಾಬಾಲಿಕ್ ಸ್ಟಿರಾಯ್ಡ್ ತೆಗೆದುಕೊಂಡಾಗ ಕ್ಲೋಸ್ಟೆಬೋಲ್ ದೇಹದೊಳಗೆ ಸೇರಿಕೊಂಡಿರುವುದಾಗಿ ಅವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಇದಾಗ್ಯೂ ಯಾನಿಕ್ ಸಿನ್ನರ್ ಅವರಿಗೆ 3.2 ಲಕ್ಷ ಡಾಲರ್ ಅಂದರೆ ಸುಮಾರು 2.8 ಕೋಟಿ ರೂ. ದಂಡ ವಿಧಿಸಲಾಗಿತ್ತು. ಅಲ್ಲದೆ, ಸ್ವಲ್ಪ ಸಮಯದವರೆಗೆ ಅಮಾನತುಗೊಳಿಸಲಾಗಿತ್ತು.

ಈ ಬಗ್ಗೆ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯವನ್ನು (CAS) ಸಂಪರ್ಕಿಸಿದ ಸಿನ್ನರ್ ಪ್ರಕರಣವನ್ನು ಇತ್ಯರ್ಥಗೊಳಿಸಿಕೊಡಬೇಕೆಂದು ಮನವಿ ಮಾಡಿದ್ದರು. ಅದರಂತೆ ಇದೀಗ ಪ್ರಕರಣದಿಂದ ಖುಲಾಸೆಗೊಂಡಿರುವ ಯಾನಿಕ್ ಸಿನ್ನರ್ WADA ಮುಂದೆ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ಅವರನ್ನು ಕೇವಲ 3 ತಿಂಗಳುಗಳ ಕಾಲ ಮಾತ್ರ ಟೆನಿಸ್ ಅಂಗಳದಿಂದ ನಿಷೇಧಿಸಲಾಗಿದೆ.

ಈ ಬಗ್ಗೆ ಯಾನಿಕ್ ಸಿನ್ನರ್ ಹೇಳಿದ್ದೇನು?

ಉದ್ದೀಪನ ಮದ್ದು ಸೇವನೆ ಪ್ರಕರಣದ ಬಗ್ಗೆ ಮಾತನಾಡಿದ ಯಾನಿಕ್ ಸಿನ್ನರ್, ಈ ಪ್ರಕರಣವು ಸುಮಾರು ಒಂದು ವರ್ಷದಿಂದ ಬಾಕಿ ಇತ್ತು. ಅಲ್ಲದೆ ಇದರ ಪ್ರಕ್ರಿಯೆ ಕೂಡ ವಿಳಂಬವಾಗಿತ್ತು. ಆದರೆ ನಾನು ಡೋಪಿಂಗ್ ನಿಯಮಗಳನ್ನು ಗೌರವಿಸುತ್ತೇನೆ. ಇದು ಬೇಕೆಂತಲೇ ಮಾಡಿದ ತಪ್ಪಲ್ಲ. ಅಜಾಗರೂಕತೆಯಿಂದ ನಡೆದು ಹೋಗಿದೆ. ಹೀಗಾಗಿ ಈ ವಿಷಯವನ್ನು ತ್ವರಿತವಾಗಿ ಪರಿಹರಿಸಲು 3 ತಿಂಗಳ ನಿಷೇಧದ WADA ಪ್ರಸ್ತಾವನೆಯನ್ನು ನಾನು ಒಪ್ಪಿಕೊಂಡೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: WPL 2025: ವುಮೆನ್ಸ್ ಪ್ರೀಮಿಯರ್ ಲೀಗ್​ನಲ್ಲಿ ಇತಿಹಾಸ ನಿರ್ಮಿಸಿದ RCB

ಇನ್ನು ಯಾನಿಕ್ ಸಿನ್ನರ್ ಅವರ ದೇಹದಲ್ಲಿ ನಿಷೇಧಿತ ಕ್ಲೋಸ್ಟೆಬೋಲ್ ಅಂಶಗಳು ಕಾಣಿಸಿಕೊಳ್ಳಲು ಮುಖ್ಯ ಕಾರಣ, ವೈದ್ಯರು ಬಳಸಿದ ಸ್ಪ್ರೇ ಎಂದು ತಿಳಿದು ಬಂದಿದೆ. ಕೈ ಬೆರಳಿಗೆ ಗಾಯವಾಗಿದ್ದಾಗ ವೈದ್ಯರು ನೋವಿನ ಸ್ಪ್ರೇ ಬಳಸಿದ್ದರು. ಈ ಸ್ಪ್ರೇನಲ್ಲಿ ಕ್ಲೋಸ್ಟೆಬೋಲ್ ಅಂಶಗಳಿದ್ದವು. ಈ ಜಾಗರೂಕತೆಯಿಂದಾಗಿ ಇದೀಗ ಯಾನಿಕ್ ಸಿನ್ನರ್ ಮೂರು ತಿಂಗಳುಗಳ ನಿಷೇಧಕ್ಕೆ ಒಳಗಾಗಿದ್ದಾರೆ.

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ