WTC Final: ಭಾರತ ತಂಡದ ಕಾಲೆಳೆದ ಮಾಜಿ ಮೈಕೆಲ್​ ವಾನರನನ್ನು ನೆಟ್ಟಿಗರು ಮಳೆ ನೀರಿನಲ್ಲಿ ಝಾಡಿಸಿ, ಜಾರಿಸಿದರು!

ಬಹುತೇಕ ಎಲ್ಲ ಚೊಚ್ಚಲ ವಿಶ್ವ ಕಪ್​ಗಳನ್ನೂ ಗೆದ್ದು ಭಾರತ ದಾಖಲೆ ನಿರ್ಮಿಸಿದೆ. ಈ ಬಾರಿಯೂ ಅಷ್ಟೇ ಅದ್ಭುತ ಫಾರಂನೊಂದಿಗಿರುವ ಭಾರತ ತಂಡದ ಹಾಟ್​ ಫೇವರೀಟ್ ಎಂದು ಗುರುತಿಸಿಕೊಂಡಿದೆ. ಅಂತಹುದರಲ್ಲಿ ಮೈಕೆಲ್​ ವಾನರ (Former England captain Michael Vaughan) ವ್ಯಂಗ್ಯವಾಡಿದರೆ ನೆಟ್ಟಿಗರು ಸುಮ್ಮನೇ ಬಿಟ್ಟಾರಾ? ಒಂದೊಂದೇ ನೋಡಿ...

WTC Final: ಭಾರತ ತಂಡದ ಕಾಲೆಳೆದ ಮಾಜಿ ಮೈಕೆಲ್​ ವಾನರನನ್ನು ನೆಟ್ಟಿಗರು ಮಳೆ ನೀರಿನಲ್ಲಿ ಝಾಡಿಸಿ, ಜಾರಿಸಿದರು!
WTC Final: ಭಾರತ ತಂಡದ ಕಾಲೆಳೆದ ಮಾಜಿ ಮೈಕೆಲ್​ ವಾನರನನ್ನು ನೆಟ್ಟಿಗರು ಮಳೆ ನೀರಿನಲ್ಲಿ ಝಾಡಿಸಿ, ಜಾರಿಸಿದರು!

Updated on: Jun 19, 2021 | 12:23 PM

ಅಲ್ಲ ಮೊದಲು ಆಟ ಶುರುವಾಗಲಪ್ಪಾ ಅಂತಾ ಭಾರತ ತಂಡದ ಆಟಗಾರರು ಸೇರಿದಂತೆ ಎಲ್ಲ ಕ್ರಿಕೆಟ್ಟಿಗರು ತುದಿಗಾಲಲ್ಲಿ ನಿಂತಿರುವಾಗ ಇಂಗ್ಲಂಡ್ ತಂಡದಲ್ಲಿ ಮಾಜಿ ಆಗಿರುವ ಕ್ಯಾಪ್ಟನ್​ ಮೈಕೆಲ್​ ವಾನ್​​ದು ಏನದು ವರಾತ? ಮಳೆ ಬರುತ್ತಿರುವುದು ಭಾರತಕ್ಕೆ ವರದಾನವಾಗಿದೆಯಂತೆ. ನ್ಯೂಜಿಲ್ಯಾಂಡ್​ ತಂಡದ ಎದುರು ಪೇಲವವಾಗಿರುವ ಭಾರತ ತಂಡ ಮಳೆರಾಯನಿಂದ ಬಚಾವಾಗಿದೆ (India Saved By Weather) ಎಂದು ಟ್ವೀಟ್ ಮಾಡಿ, ಭಾರತೀಯರನ್ನು ಕೆರಳಿಸಿದ್ದಾನೆ. ​

ಇಂಗ್ಲಂಡ್ ತಂಡದಲ್ಲಿ ಮಾಜಿ ಆಗಿರುವ ಮೈಕೆಲ್​ ವಾನ್ ಮಹಾಶಯ ಈಗ ಆಟವಿಲ್ಲದೆ ವೃಥಾ ಕಾಲಹರಣ ಮಾಡುತ್ತಿದ್ದಾನೆ. ಆಗಾಗ ವಿವಾದಾತ್ಮಕ ಟ್ವೀಟ್​ಗಳನ್ನು ಮಾಡುತ್ತಾ ಎಲ್ಲರ ಕೆಂಗೆಣ್ಣಿಗೆ ಗುರಿಯಾಗುತ್ತಿದ್ದಾನೆ. ತಾಜಾ ಆಗಿ ಸೌಥಾಂಪ್ಟನ್​​ನಲ್ಲಿ (Southampton) ಮಳೆ ಬಂದು ಚೊಚ್ಚಲ ವಿಶ್ವ ಟೆಸ್ಟ್​ ಪಂದ್ಯ ಸ್ಥಗಿತಗೊಂಡಿದ್ದೇ ಬಂತು ಇವಯ್ಯ ಮತ್ತದೇ ಕೆಟ್ಟ ಟ್ವೀಟ್​ ಮಾಡಿದ್ದಾನೆ. ಭಾರತ ತಂಡವನ್ನು ಆ ಮಳೆರಾಯನೇ ಬಚಾವು ಆಡಿದ್ದಾನೆ ಅಂದುಬಿಟ್ಟಿದ್ದಾನೆ.

ಬಹುತೇಕ ಎಲ್ಲ ಚೊಚ್ಚಲ ವಿಶ್ವ ಕಪ್​ಗಳನ್ನೂ ಗೆದ್ದು ಭಾರತ ದಾಖಲೆ ನಿರ್ಮಿಸಿದೆ. ಈ ಬಾರಿಯೂ ಅಷ್ಟೇ ಅದ್ಭುತ ಫಾರಂನೊಂದಿಗಿರುವ ಭಾರತ ತಂಡದ ಹಾಟ್​ ಫೇವರೀಟ್ ಎಂದು ಗುರುತಿಸಿಕೊಂಡಿದೆ. ಅಂತಹುದರಲ್ಲಿ ಮೈಕೆಲ್​ ವಾನರ (Former England captain Michael Vaughan) ವ್ಯಂಗ್ಯವಾಡಿದರೆ ನೆಟ್ಟಿಗರು ಸುಮ್ಮನೇ ಬಿಟ್ಟಾರಾ? ಒಂದೊಂದೇ ನೋಡಿ…

(WTC Final southampton weather Former England captain Michael Vaughan posted another tweet poking Indian fans)

ವಿಶ್ವ ಟೆಸ್ಟ್ ಚಾಂಪಿಯನ್​ ಫೈನಲ್​ ನಾಳೆಯಿಂದ: ಫೇವರೀಟ್​ ಭಾರತ ತಂಡವನ್ನ ಸೋಲಿಸಲು ನ್ಯೂಜಿಲ್ಯಾಂಡ್​​ಗೆ ಈ ಒಂದು ಕಾರಣ ಸಾಕು!

WTC Final 2021: ಮಳೆಯ ಅವಕೃಪೆ, ಇಂದು ಆಟ ಆರಂಭ ಆಗುತ್ತದಾ? ಭಾರತದ ಪ್ಲೇಯಿಂಗ್​ 11 ಮಾರ್ಪಾಡು ಆಗುತ್ತದಾ?