Honor 90: ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಬಂತು ಬರೋಬ್ಬರಿ 200MP ಕ್ಯಾಮೆರಾದ ಹೊಸ ಸ್ಮಾರ್ಟ್‌ಫೋನ್: ಯಾವುದು?, ಬೆಲೆ ಎಷ್ಟು?
Honor 90 Pro: ಪ್ರಸಿದ್ಧ ಹಾನರ್ ಕಂಪನಿ ಸದ್ದಿಲ್ಲದೆ ಕ್ಯಾಮೆರಾ ಪ್ರಿಯರಿಗಾಗಿ 200 ಮೆಗಾಪಿಕ್ಸೆಲ್ನ ಹೊಸ ಹಾನರ್ 90 ಸರಣಿ ಅನಾವರಣ ಮಾಡಿದೆ. ಕೇವಲ ಕ್ಯಾಮೆರಾ ಮಾತ್ರವಲ್ಲದೆ ಇದರಲ್ಲಿರುವ ಫೀಚರ್ಗಳು ಅದ್ಭುತವಾಗಿದೆ. ಈ ಫೋನಿನ ಬೆಲೆ, ವಿಶೇಷತೆ ಕುರಿತ ಮಾಹಿತಿ ಇಲ್ಲಿದೆ.
ಟೆಕ್ ಮಾರುಕಟ್ಟೆಯಲ್ಲಿ ಕ್ಯಾಮೆರಾ ಫೋನ್ಗಳ ನಡುವಣ ಪೈಪೋಟಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಯಾವಾಗ ಮೋಟೋ ಕಂಪನಿ 200 ಮೆಗಾಫಿಕ್ಸೆಲ್ ಕ್ಯಾಮೆರಾದ ಮೊಟ್ಟ ಮೊದಲ ಸ್ಮಾರ್ಟ್‌ಫೋನ್ (Smartphone) ಅನಾವರಣ ಮಾಡಿತೋ ಅಲ್ಲಿಂದ ಹೆಚ್ಚಿನ ಕಂಪನಿಗಳು ಕ್ಯಾಮೆರಾ ಫೋನ್ಗಳ ಮೇಲೆ ಹೆಚ್ಚಿನ ಆಸಕ್ತಿ ತೋರಿಸುತ್ತಿದೆ. ಮೊನ್ನೆಯಷ್ಟೆ ವಿದೇಶದಲ್ಲಿ ರಿಯಲ್ ಮಿ ಕಂಪನಿ 200 ಮೆಗಾ ಪಿಕ್ಸೆಲ್ನ ರಿಯಲ್ ಮಿ 11 ಪ್ರೊ+ ಅನ್ನು ಅನಾವರಣ ಮಾಡಿತ್ತು. ಈ ಫೋನ್ ಜೂನ್ 8ಕ್ಕೆ ಭಾರತದಲ್ಲೂ ರಿಲೀಸ್ ಆಗಲಿದೆ. ಹೀಗಿರುವಾಗ ಮಾರುಕಟ್ಟೆಯಲ್ಲಿ ಅಪರೂಪಕ್ಕೆ ಆಕರ್ಷಕ ಮೊಬೈಲ್ಗಳನ್ನು ಪರಿಚಯಿಸುವ ಪ್ರಸಿದ್ಧ ಹಾನರ್ (Honor) ಕಂಪನಿ ಸದ್ದಿಲ್ಲದೆ ಕ್ಯಾಮೆರಾ ಪ್ರಿಯರಿಗಾಗಿ 200 ಮೆಗಾಪಿಕ್ಸೆಲ್ನ ಹೊಸ ಹಾನರ್ 90 ಸರಣಿ (Honor 90) ಸ್ಮಾರ್ಟ್‌ಫೋನ್ ಅನಾವರಣ ಮಾಡಿದೆ. ಕೇವಲ ಕ್ಯಾಮೆರಾ ಮಾತ್ರವಲ್ಲದೆ ಇದರಲ್ಲಿರುವ ಫೀಚರ್ಗಳು ಅದ್ಭುತವಾಗಿದೆ. ಈ ಫೋನಿನ ಬೆಲೆ, ವಿಶೇಷತೆ ಕುರಿತ ಮಾಹಿತಿ ಇಲ್ಲಿದೆ.
ಬೆಲೆ ಎಷ್ಟು?:
ಹಾನರ್ 90 ಸರಣಿಯಲ್ಲಿ ಹಾನರ್ 90 ಮತ್ತು ಹಾನರ್ 90 ಪ್ರೊ ಎಂಬ ಎರಡು ಫೋನ್ಗಳಿವೆ. ಹಾನರ್ 90 ಫೋನಿನ 12GB RAM + 256GB ಸ್ಟೋರೇಜ್ ಆಯ್ಕೆಗೆ CNY 2,499. ಇದರ ಬೆಲೆ ಭಾರತದಲ್ಲಿ ಅಂದಾಜು 29,160 ರೂ. ಎನ್ನಬಹುದು. ಅಂತೆಯೆ ಹಾನರ್ 90 ಪ್ರೊ ಸ್ಮಾರ್ಟ್ಫೋನ್ನ 12GB RAM + 256GB ಸ್ಟೋರೇಜ್ ಆಯ್ಕೆಗೆ CNY 3,299 (ಭಾರತದಲ್ಲಿ ಅಂದಾಜು 38,500 ರೂ.) ಈ ಸ್ಮಾರ್ಟ್‌ಫೋನ್‌ಗಳು ಪ್ರಸ್ತುತ ಚೀನಾ ಮಾರುಕಟ್ಟೆಯಲ್ಲಿ ಮಾತ್ರ ಬಿಡುಗಡೆಯಾಗಿದ್ದು, ಮುಂದಿನ ದಿನಗಳಲ್ಲಿ ಭಾರತಕ್ಕೂ ಕಾಲಿಡುವ ನಿರೀಕ್ಷೆ ಇದೆ.
Vivo Y35+ 5G: ಸದ್ದಿಲ್ಲದೆ ಒಂದೇ ದಿನ ಎರಡು ಆಕರ್ಷಕ ಸ್ಮಾರ್ಟ್ಫೋನ್ಸ್ ಬಿಡುಗಡೆ ಮಾಡಿದ ವಿವೋ: ಯಾವುದು ನೋಡಿ
ಫೀಚರ್ಸ್ ಏನಿದೆ?:
ಹಾನರ್ 90 ಸ್ಮಾರ್ಟ್‌ಫೋನ್ 1,200x 2,664 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.7-ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಹಾನರ್ 90 ಪ್ರೊ 6.78 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಹೊಂದಿದೆ. ಈ ಎರಡೂ ಫೋನ್ 120Hz ನ ರಿಫ್ರೆಶ್ ರೇಟ್ ಪಡೆದುಕೊಂಡಿದೆ. ಹಾನರ್ 90 ಯಲ್ಲಿ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7 Gen 1 ಪ್ರೊಸೆಸರ್ ಇದ್ದರೆ, 90 ಪ್ರೊನಲ್ಲಿ ಸ್ನಾಪ್‌ಡ್ರಾಗನ್ 8+ Gen 1 ಪ್ರೊಸೆಸರ್ ಅಳವಡಿಸಲಾಗಿದೆ. ಇವುಗಳು ಆಂಡ್ರಾಯ್ಡ್13 ಆಧಾರಿತ ಮ್ಯಾಜಿಕ್‌ಒಎಸ್ 7.1 ನಲ್ಲಿ ಕಾರ್ಯನಿರ್ವಹಿಸುತ್ತದೆ.
ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಹಾನರ್ 90 ಮತ್ತು ಹಾನರ್ 90ಪ್ರೊ ಸ್ಮಾರ್ಟ್‌ಫೋನ್‌ಗಳು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿವೆ. ಇದರಲ್ಲಿ ಮುಖ್ಯ ಕ್ಯಾಮೆರಾ ಬರೋಬ್ಬರಿ 200 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಮುಂಭಾಗ ಸೆಲ್ಫೀ ಮತ್ತು ವಿಡಿಯೋ ಕರೆಗಳಿಗಾಗಿ 50 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಎರಡೂ ಸ್ಮಾರ್ಟ್‌ಫೋನ್‌ಗಳಲ್ಲಿ ನೀಡಲಾಗಿದೆ. ಪ್ರೊ ಮಾದರಿಯಲ್ಲಿ ಹೆಚ್ಚುವರಿ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಅಳವಡಿಸಲಾಗಿದೆ.
ಹಾನರ್ 90 ಮತ್ತು ಹಾನರ್ 90ಪ್ರೊ ಸ್ಮಾರ್ಟ್‌ಫೋನ್‌ಗಳು ದೀರ್ಘ ಸಮಯ ಬಾಳಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿವೆ. ಇದರಲ್ಲಿ ಹಾನರ್ 90 ಸ್ಮಾರ್ಟ್‌ಫೋನ್ 66W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದರೆ, 90ಪ್ರೊ ನಲ್ಲಿ 90W ವೈರ್ಡ್ ಚಾರ್ಜಿಂಗ್ ನೀಡಲಾಗಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಎರಡೂ ಫೋನ್ 5G ಸಪೋರ್ಟ್ ಮಾಡುತ್ತದೆ. ಉಳಿದಂತೆ 4G, Wi-Fi 6, ಬ್ಲೂಟೂತ್ 5.2, GPS, NFC, ಮತ್ತು USB ಟೈಪ್-C ಪೋರ್ಟ್ ಬೆಂಬಲಿಸುತ್ತದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ