AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Jio, Airtel, Vodafone: ಉಚಿತ ಆಫರ್ ಸ್ಥಗಿತಗೊಳಿಸಿದ ಜಿಯೋ, ಏರ್​ಟೆಲ್, ವೊಡಾಫೋನ್

ಜಿಯೋ ಕೂಡ ತನ್ನ ಪ್ಲ್ಯಾನ್​ನಲ್ಲಿ ಕೆಲ ಬದಲಾವಣೆ ಮಾಡಿದ್ದು, ಅದರಂತೆ 75 ರೂ. ರಿಚಾರ್ಜ್​ನಲ್ಲಿ ಒಟ್ಟು 3 ಜಿಬಿ ಡೇಟಾ ನೀಡಲಿದೆ. ಅಂದರೆ ಪ್ರತಿದಿನ 0.1 ಜಿಬಿ ಡೇಟಾ ಬಳಸಬಹುದು.

Jio, Airtel, Vodafone: ಉಚಿತ ಆಫರ್ ಸ್ಥಗಿತಗೊಳಿಸಿದ ಜಿಯೋ, ಏರ್​ಟೆಲ್, ವೊಡಾಫೋನ್
Jio-Airtel-Vodafone
TV9 Web
| Edited By: |

Updated on: Jul 31, 2021 | 3:15 PM

Share

 ದೇಶದ ಪ್ರಮುಖ ಖಾಸಗಿ ಟೆಲಿಕಾಂ ಕಂಪೆನಿಗಳಾದ ಜಿಯೋ, ಏರ್​ಟೆಲ್, ವೊಡಾಫೋನ್-ಐಡಿಯಾ ತನ್ನ ಬಳಕೆದಾರರಿಗೆ ನೀಡುತ್ತಿದ್ದ ಪ್ರಮುಖ ಉಚಿತ ಸೇವೆಯನ್ನು ಸ್ಥಗಿತಗೊಳಿಸಿದೆ. ಈ ಹಿಂದೆ ಉಚಿತವಾಗಿ ನೀಡಲಾಗುತ್ತಿದ್ದ ಎಸ್​ಎಂಎಸ್​ ಪ್ರಯೋಜನಗಳನ್ನು ಕಡಿಮೆ ಮೊತ್ತದ ರಿಚಾರ್ಜ್​ನಲ್ಲಿ ನೀಡಲಾಗುವುದಿಲ್ಲ ಎಂದು ಈ ಕಂಪೆನಿಗಳು ತಿಳಿಸಿದೆ. ಅದರಂತೆ ಇನ್ಮುಂದೆ ಏರ್​ಟೆಲ್, ಜಿಯೋ, ಐಡಿಯಾ-ವೊಡಾಫೋನ್​ನ 100ಕ್ಕಿಂತ ಕಡಿಮೆ ಮೊತ್ತದ ರಿಚಾರ್ಜ್​ನಲ್ಲಿ ಉಚಿತ ಸಂದೇಶಗಳನ್ನು ಕಳುಹಿಸಲಾಗುವುದಿಲ್ಲ. ಬದಲಾಗಿ ಪ್ರತಿ ಎಸ್​ಎಂಎಸ್​ಗೂ ಕಂಪೆನಿಗಳು ಚಾರ್ಜ್​ ಮಾಡಲಿದೆ.

ಈ ಹಿಂದೆ ಪ್ರತಿ ರಿಚಾರ್ಜ್​ ಪ್ಯಾಕ್​ನಲ್ಲೂ ಕರೆ ಸೌಲಭ್ಯ, ಎಸ್​ಎಂಎಸ್​ ಹಾಗೂ ಇಂಟರ್​ನೆಟ್​ ಡೇಟಾ ನೀಡಲಾಗುತ್ತಿತ್ತು. ಇದೀಗ ಈ ಆಫರ್​ನಲ್ಲಿ ಬದಲಾವಣೆ ಮಾಡಲಾಗುತ್ತಿದ್ದು, ಅದರಂತೆ ಏರ್​ಟೆಲ್ ಹಾಗೂ ಜಿಯೋ ಕಂಪೆನಿಗಳ 100 ರೂ. ಒಳಗಿನ ರಿಚಾರ್ಜ್​ ಯೋಜನೆಯಲ್ಲಿ ಫ್ರೀ ಎಸ್​ಎಂಎಸ್​ ಅನ್ನು ಕಡಿತಗೊಳಿಸುವುದಾಗಿ ತಿಳಿಸಿದೆ.

ಇನ್ನು ಅತೀ ಕಡಿಮೆ ಮೊತ್ತದ ರಿಚಾರ್ಜ್​ ಪ್ಲ್ಯಾನ್​ಗಳನ್ನು ಕೈ ಬಿಡುವ ಬಗ್ಗೆ ಕೂಡ ಟೆಲಿಕಾಂ ಕಂಪೆನಿಗಳು ಚಿಂತಿಸಿದೆ. ಅದರಂತೆ ಏರ್​ಟೆಲ್ ಈಗಾಗಲೇ 49 ರೂ. ಪ್ಲ್ಯಾನ್​ ಅನ್ನು ಸ್ಥಗಿತಗೊಳಿಸಿದ್ದು, ಅದರ ಬದಲಾಗಿ 79 ರೂ. ಯೋಜನೆಯನ್ನು ಪರಿಚಯಿಸಿದೆ. ಈ ರಿಚಾರ್ಜ್​ನಲ್ಲಿ ಗ್ರಾಹಕರಿಗೆ 64 ರೂ. ಟಾಕ್​ಟೈಮ್ ಹಾಗೂ 200 ಎಂಬಿ ಡೇಟಾ ಸಿಗಲಿದೆ ಇದರ ವಾಲಿಟಿಡಿ 28 ದಿನಗಳು.

ಹಾಗೆಯೇ ಜಿಯೋ ಕೂಡ ತನ್ನ ಪ್ಲ್ಯಾನ್​ನಲ್ಲಿ ಕೆಲ ಬದಲಾವಣೆ ಮಾಡಿದ್ದು, ಅದರಂತೆ 75 ರೂ. ರಿಚಾರ್ಜ್​ನಲ್ಲಿ ಒಟ್ಟು 3 ಜಿಬಿ ಡೇಟಾ ನೀಡಲಿದೆ. ಅಂದರೆ ಪ್ರತಿದಿನ 0.1 ಜಿಬಿ ಡೇಟಾ ಬಳಸಬಹುದು. 28 ದಿನಗಳ ವಾಲಿಡಿಟಿ ಹೊಂದಿರುವ ಈ ಯೋಜನೆಯಲ್ಲಿ ಅನಿಯಮಿತ ಕರೆ ಸೌಲಭ್ಯವನ್ನೂ ಕೂಡ ನೀಡಿದೆ. ಇದೀಗ ಎಸ್​ಎಂಎಸ್​ ಪ್ಲ್ಯಾನ್​ನಲ್ಲಿ ಬದಲಾವಣೆ ಮಾಡಿರುವುದರಿಂದ ಮುಂದಿನ ದಿನಗಳಲ್ಲಿ ಈ ಯೋಜನೆಯಲ್ಲಿ ಸಿಗುತ್ತಿದ್ದ ಉಚಿತ 50 ಎಸ್​ಎಂಎಸ್ ಲಭ್ಯವಿರುವುದಿಲ್ಲ.​

ಪ್ರಸ್ತುತ ರಿಚಾರ್ಜ್​ ಪ್ಲ್ಯಾನ್​ಗಳನ್ನು ಗಮನಿಸಿದರೆ ಜಿಯೋ ಕಂಪೆನಿಯ ಮೂರು ಯೋಜನೆಗಳು 100 ರೂ. ಒಳಗಿದೆ. 38, 75 ಹಾಗೂ 98 ರೂ.ಗಳ ರಿಚಾರ್ಜ್​ನಲ್ಲಿ ಇನ್ಮುಂದೆ ಉಚಿತ ಎಸ್​ಎಂಎಸ್​ ಅವಕಾಶ ಇರುವುದಿಲ್ಲ. ಹಾಗೆಯೇ ಏರ್​ಟೆಲ್ ಕಂಪೆನಿಯ 79 ಹಾಗೂ 98 ರೂ. ಯೋಜನೆಯಲ್ಲೂ ಉಚಿತ ಸಂದೇಶ ಕಳಹಿಸಲಾಗುವುದಿಲ್ಲ. ಇನ್ನು ವೊಡಾಫೋನ್-ಐಡಿಯಾ ಈ ಹಿಂದೆ ಆಯ್ದ ರಿಚಾರ್ಜ್​ಗಳ ಮೇಲೆ ಮಾತ್ರ ಫೀ ಎಸ್​ಎಂಎಸ್​ ನೀಡಿತ್ತು. ಇದೀಗ ಕಡಿಮೆ ಮೊತ್ತದ ರಿಚಾರ್ಜ್​ ಮೂಲಕ ಸಿಗುತ್ತಿದ್ದ ಎಸ್​ಎಂಎಸ್​ ಆಫರ್​ನ್ನು ಮೂರು ಕಂಪೆನಿಗಳು ಸ್ಥಗಿತಗೊಳಿಸಿದೆ.

ಇದನ್ನೂ ಓದಿ: ಕಡಿಮೆ ಬೆಲೆಯ ಪವರ್​ಫುಲ್ ಪವರ್ ಬ್ಯಾಂಕ್: ಮೊಬೈಲ್, ಲ್ಯಾಪ್​ಟಾಪ್​ನ್ನು ಚಾರ್ಜ್​ ಮಾಡಬಹುದು

ಇದನ್ನೂ ಓದಿ: Viral Story: ಒಂದು ಕೆ.ಜಿ ಮಾಂಸ ಖರೀದಿಸಿದ್ರೆ ಒಂದು ಲೀಟರ್ ಪೆಟ್ರೋಲ್ ಉಚಿತ

(Airtel, Vodafone-Idea and Reliance Jio plans don’t offer free SMS)

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ