Amazon: ಕೇವಲ 1 ರೂ. ಗೆ ಸ್ಮಾರ್ಟ್​ಫೋನ್ ಸೇರಿ ಅನೇಕ ಪ್ರಾಡಕ್ಟ್ ಬುಕ್ ಮಾಡಿ: ಅಮೆಜಾನ್​ನಿಂದ ಹಿಂದೆಂದೂ ನೀಡದ ಆಫರ್

| Updated By: Srinivas Mata

Updated on: Oct 01, 2021 | 6:19 PM

Amazon Great Indian sale 2021: ಅಮೆಜಾನ್ ತನ್ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ಸ್ಮಾರ್ಟ್ ಫೋನ್ , ಸ್ಮಾರ್ಟ್ ಟಿವಿ, ಲ್ಯಾಪ್ ಟಾಪ್, ಸ್ಮಾರ್ಟ್ ವಾಚ್ ಸೇರಿದಂತೆ ಇತರ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಕೇವಲ ಒಂದು ರೂಪಾಯಿಗೆ ಪ್ರೀ ಬುಕ್ಕಿಂಗ್ ಮಾಡಬಹುದು ಎಂದು ತಿಳಿಸಿದೆ.

Amazon: ಕೇವಲ 1 ರೂ. ಗೆ ಸ್ಮಾರ್ಟ್​ಫೋನ್ ಸೇರಿ ಅನೇಕ ಪ್ರಾಡಕ್ಟ್ ಬುಕ್ ಮಾಡಿ: ಅಮೆಜಾನ್​ನಿಂದ ಹಿಂದೆಂದೂ ನೀಡದ ಆಫರ್
ಪ್ರಾತಿನಿಧಿಕ ಚಿತ್ರ
Follow us on

ಪ್ರಸಿದ್ಧ ಇ-ಕಾಮರ್ಸ್‌ ದೈತ್ಯ ಅಮೆಜಾನ್‌ (Amazon) ಆನ್‌ಲೈನ್‌ ಶಾಪಿಂಗ್‌ ಪ್ರಿಯರಿಗಾಗಿ ವರ್ಷದ ಅತಿ ದೊಡ್ಡ ಮೇಳವನ್ನು ಆಯೋಜಿಸುತ್ತಿದೆ. ಅಕ್ಟೋಬರ್​ನಲ್ಲಿರುವ ಹಬ್ಬ ಹರಿದಿನಗಳ ಪ್ರಯುಕ್ತ ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಪೆಸ್ಟಿವಲ್‌ ಸೇಲ್‌ 2021 (Amazon Great Indian sale 2021) ಮೂಲಕ ಮತ್ತೆ ಬಂದಿದೆ. ಈ ಸೇಲ್‌ನಲ್ಲಿ ಭರ್ಜರಿ ರಿಯಯಾತಿಯನ್ನು ನೀಡುವುದಾಗಿ ಘೋಷಿಸಿದೆ. ಈ ಮೇಳವು ಇದೇ ಅಕ್ಟೋಬರ್ 4 ರಂದು ಆರಂಭವಾಗಲಿದೆ ಎಂದು ಅಮೆಜಾನ್ ಹೇಳಿಕೊಂಡಿದೆ. ಹಬ್ಬದ ಸಂದರ್ಭದಲ್ಲಿ ಈ ಸೇಲ್‌ ಹೆಚ್ಚು ಆಕರ್ಷಕ ಎನಿಸಲಿದ್ದು, ಎಲ್ಲ ಬಗೆಯ ಉತ್ಪನ್ನಗಳಿಗೆ ಭರ್ಜರಿ ಡಿಸ್ಕೌಂಟ್‌ ಸಿಗಲಿದೆ. ಅಲ್ಲದೆ ಕೇವಲ ಒಂದು ರೂಪಾಯಿಗೆ ನಿಮಗೆ ಇಷ್ಟವಾದ ಪ್ರಾಡಕ್ಟ್​ಗಳನ್ನು ಪ್ರಿ ಬುಕ್ಕಿಂಗ್ (Pre booking) ಮಾಡುವ ವಿಶೇಷ ಸೌಲಭ್ಯ ನೀಡಿದೆ.

ಹೌದು, ಅಮೆಜಾನ್ ತನ್ನ ಈ ಬಿಗ್‌ ಸೇಲ್‌ನಲ್ಲಿ ಸ್ಮಾರ್ಟ್ ಫೋನ್ , ಸ್ಮಾರ್ಟ್ ಟಿವಿ, ಲ್ಯಾಪ್ ಟಾಪ್, ಸ್ಮಾರ್ಟ್ ವಾಚ್ ಸೇರಿದಂತೆ ಇತರ ಎಲ್ಲ ಎಲೆಕ್ಟ್ರಾನಿಕ್ಸ್ ಮೇಲೆ ದೊಡ್ಡ ರಿಯಾಯಿತಿ ಕೊಡುಗೆಗಳನ್ನು ನೀಡಲಿದೆ. ಆದರೆ, ಮೇಳ ಶುರುವಾಗುವುದಕ್ಕೂ ಮುನ್ನವೇ ನಿಮಗೆ ಬೇಕಾದ ವಸ್ತುಗಳನ್ನು ಕೇವಲ ಒಂದು ರೂಪಾಯಿಗೆ ಪ್ರೀ ಬುಕ್ಕಿಂಗ್ ಮಾಡಬಹುದು ಎಂದು ಅಮೆಜಾನ್ ತಿಳಿಸಿದೆ. ಜೊತೆಗೆ ಕೆಲವು ಬ್ಯಾಂಕ್​ಗಳು ಕೂಡ ಕೈಜೋಡಿಸಿದ್ದು, ಅದರಲ್ಲಿ HDFC ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳೊಂದಿಗೆ, ಗ್ರಾಹಕರು ಹೆಚ್ಚುವರಿ 10 ಪ್ರತಿಶತದಷ್ಟು ತ್ವರಿತ ರಿಯಾಯಿತಿಯನ್ನು ನೀಡಲು ಅಮೆಜಾನ್‌ನೊಂದಿಗೆ ಪಾಲುದಾರಿಕೆ ಹೊಂದಿದೆ.

ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಅಮೆಜಾನ್ ಪ್ರೈಮ್ ಸದಸ್ಯರು ಒಂದು ದಿನ ಮುಂಚಿತವಾಗಿ ಮಾರಾಟಕ್ಕೆ ಪ್ರವೇಶ ಪಡೆಯುತ್ತಾರೆ ಎಂದು ಅಮೆಜಾನ್ ಸಂಸ್ಥೆ ತಿಳಿಸಿದೆ. ಹಾಗೆಯೇ, ಪ್ರೈಮ್ ಸದಸ್ಯರಿಗಾಗಿಯೇ ಈ ಬಾರಿ ಹೆಚ್ಚು ಕೊಡುಗೆಗಳನ್ನು ನೀಡಲು ಸಂಸ್ಥೆ ಮುಂದಾಗಿದ್ದು, ಖರೀದಿಸಿದ ಉತ್ಪನ್ನಗಳನ್ನು ಒಂದೇ ದಿನದಲ್ಲಿ ಉಚಿತವಾಗಿ ಮನೆಗೆ ತಲುಪಿಸುವ ಕಾರ್ಯವೂ ಆಗಲಿದೆ.

ಈ ಬಾರಿ ಹೆಚ್‌ಪಿ 14 (2021) ಲ್ಯಾಪ್‌ಟಾಪ್‌ ಅಮೆಜಾನ್‌ ಸೇಲ್‌ನಲ್ಲಿ 40% ಡಿಸ್ಕೌಂಟ್‌ ಪಡೆದುಕೊಂಡಿದೆ. ಇನ್ನು ಈ ಲ್ಯಾಪ್‌ಟಾಪ್‌ 11ನೇ ತಲೆಮಾರಿನ ಇಂಟೆಲ್‌ ಕೋರ್‌ i3 ಪ್ರೊಸೆಸರ್‌ ಅನ್ನು ಹೊಂದಿದೆ. ಇನ್ನು ಈ ಲ್ಯಾಪ್ ಟಾಪ್ ಇಂಟರ್‌ಬಿಲ್ಟ್‌ ಅಲೆಕ್ಸಾ ವಾಯ್ಸ್‌ ಅನ್ನು ಹೊಂದಿದೆ. ಇದು 14 ಇಂಚಿನ ಫುಲ್‌ ಹೆಚ್‌ಡಿ ಐಪಿಎಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 250 ನಿಟ್ಸ್‌ ಬ್ರೈಟ್‌ನೆಸ್‌ ಅನ್ನು ಹೊಂದಿದೆ. ಇದು ವಿಂಡೋಸ್‌ 10 ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 16GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ. ಇದು Intel UHD ಗ್ರಾಫಿಕ್ಸ್ ಅನ್ನು ಒಳಗೊಂಡಿದೆ. ಅಮೆಜಾನ್‌ನಲ್ಲಿ ಈ ಲ್ಯಾಪ್‌ಟಾಪ್‌ 40,000 ರೂ ಬೆಲೆಗೆ ಲಭ್ಯವಾಗಲಿದೆ.

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಸಮಯದಲ್ಲಿ ಸ್ಮಾರ್ಟ್ ಟಿವಿಗಳು ಮತ್ತು ಇತರ ಗೃಹೋಪಯೋಗಿ ಉಪಕರಣಗಳಂತಹ ಉತ್ಪನ್ನಗಳು ಭಾರೀ ರಿಯಾಯಿತಿಯೊಂದಿಗೆ ದೊರೆಯಲಿದ್ದು, ವಿವಿಧ ಎಲೆಕ್ಟ್ರಾನಿಕ್ಸ್ ಪರಿಕರಗಳು ಶೇ. 40 ರಷ್ಟು ರಿಯಾಯಿತಿಯೊಂದಿಗೆ ಲಭ್ಯವಿರುತ್ತವೆ. ಈ ಮಾರಾಟದ ಸಮಯದಲ್ಲಿ ವಿಶೇಷ ಬಿಡುಗಡೆಗಳೊಂದಿಗೆ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ನಲ್ಲಿ ಎಕೋ, ಕಿಂಡಲ್ ಮತ್ತು ಫೈರ್ ಟಿವಿಯಂತಹ ಶ್ರೇಣಿಯ ಮೇಲೆ ದರ ಕಡಿತ ಮತ್ತು ರಿಯಾಯಿತಿ ಬೆಲೆಯಲ್ಲಿ ಖರೀದಿಸುವ ಅವಕಾಶ ಕಲ್ಪಿಸಲಾಗುತ್ತಿದೆ.

WhatsApp: ವಾಟ್ಸ್​ಆ್ಯಪ್​ ಹೊಸ ಅಪ್ಡೇಟ್​ನಲ್ಲಿ ನಿರೀಕ್ಷೆಗೂ ಮೀರಿದ ಫೀಚರ್: ಏನದು ಗೊತ್ತೇ?, ಇಲ್ಲಿದೆ ನೋಡಿ

Dangerous Apps: ಪ್ಲೇ ಸ್ಟೋರ್​ನಿಂದ 136 ಅಪಾಯಕಾರಿ ಆ್ಯಪ್​ಗಳನ್ನು ಕಿತ್ತೆಸೆದ ಗೂಗಲ್: ನಿಮ್ಮಲ್ಲಿದ್ದರೆ ಕೂಡಲೇ ಡಿಲೀಟ್ ಮಾಡಿ

(Amazon Great Indian sale Amazon allowing customers to pre-book their favourite product at just Rs 1)

Published On - 2:29 pm, Fri, 1 October 21