AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WhatsApp: ವಾಟ್ಸ್​ಆ್ಯಪ್​ ಹೊಸ ಅಪ್ಡೇಟ್​ನಲ್ಲಿ ನಿರೀಕ್ಷೆಗೂ ಮೀರಿದ ಫೀಚರ್: ಏನದು ಗೊತ್ತೇ?, ಇಲ್ಲಿದೆ ನೋಡಿ

WhatsApp Multiple Device feature: ವಾಟ್ಸ್​ಆ್ಯಪ್​ನ ಈ ಹೊಸ ಮಲ್ಟಿ ಡಿವೈಸ್ ಸಪೋರ್ಟ್ ಫೀಚರ್ ಪರೀಕ್ಷಾ ಹಂತದಲ್ಲಿದ್ದು ಸದ್ಯದಲ್ಲೇ ಬಳಕೆದಾರರಿಗೆ ಸಿಗಲಿದೆ. ಇದುವರೆಗೆ ಕಂಪನಿಯ ಈ ವೈಶಿಷ್ಟ್ಯವನ್ನು ಬೀಟಾ ಬಳಕೆದಾರರಿಗೆ ಮಾತ್ರ ನೀಡುತ್ತಿತ್ತು.

WhatsApp: ವಾಟ್ಸ್​ಆ್ಯಪ್​ ಹೊಸ ಅಪ್ಡೇಟ್​ನಲ್ಲಿ ನಿರೀಕ್ಷೆಗೂ ಮೀರಿದ ಫೀಚರ್: ಏನದು ಗೊತ್ತೇ?, ಇಲ್ಲಿದೆ ನೋಡಿ
Whatsapp Multi device Support
TV9 Web
| Edited By: |

Updated on: Oct 01, 2021 | 1:30 PM

Share

ಫೇಸ್​ಬುಕ್ (Facebook) ಒಡೆತನದ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್​ಆ್ಯಪ್ (WhatsApp) ತನ್ನ ಬಳಕೆದಾರರಿಗೆ ಹೊಸ ಅಪ್ಡೇಟ್ ಒಂದನ್ನು ನೀಡಲಾಗಿದೆ. ಇದರಲ್ಲಿ ನಿರೀಕ್ಷೆಗೂ ಮೀರಿದ ವಿಶೇಷ ಫೀಚರ್ (New WhatsApp Feature) ಸಿಗಲಿದೆ. ಈ ಹೊಸ ಅಪ್ಡೇಟ್​ನಲ್ಲಿ ನೀವು ನಿಮ್ಮ ವಾಟ್ಸ್​ಆ್ಯಪ್ ಖಾತೆಯನ್ನು ಒಂದೇ ಸಮಯದ ವೇಲೆ ಬೇರೆ ಬೇರೆ ಡಿವೈಸ್​ಗಳಲ್ಲಿ ಬಳಸಬಹುದಾಗಿದೆ. ಈ ಹಿಂದೆ ವಾಟ್ಸ್​ಆ್ಯಪ್​ ಅನ್ನು ಒಂದು ಡಿವೈಸ್​ನಲ್ಲಿ ಮಾತ್ರ ಬಳಸಬಹುದಾಗಿತ್ತು. ಎರಡು ಮೊಬೈಲ್​ನಲ್ಲಿ ಒಂದೇ ವಾಟ್ಸ್​ಆ್ಯಪ್ ಖಾತೆ ಹೊಂದಿರುವ ಆಯ್ಕೆ ಇರಲಿಲ್ಲ. ಅದಾಗ್ಯೂ ವಾಟ್ಸ್​ಆ್ಯಪ್​ ವೆಬ್ (WhatsApp Web)​ ಬಳಕೆ ಮಾಡಿದಾಗ ಏಕಕಾಲದಲ್ಲಿ ಕಂಪ್ಯೂಟರ್​ನಲ್ಲಿ ಉಪಯೋಗಿಸಬಹುದಿತ್ತು. ಸದ್ಯ ಇದೀಗ ಹೊಸ ಅಪ್ಡೇಟ್​​ನಲ್ಲಿ ವಾಟ್ಸ್​ಆ್ಯಪ್ ಹಲವು ಡಿವೈಸ್​ಗಳಲ್ಲಿ (WhatsApp Multiple Device) ಬಳಕೆ ಮಾಡಬಹುದಾದ ಆಯ್ಕೆಯನ್ನು ಪರಿಚಯಿಸುತ್ತಿದೆ.

ವಾಟ್ಸ್​ಆ್ಯಪ್​ನ ಈ ಹೊಸ ಮಲ್ಟಿ ಡಿವೈಸ್ ಸಪೋರ್ಟ್ ಫೀಚರ್ ಪರೀಕ್ಷಾ ಹಂತದಲ್ಲಿದ್ದು ಸದ್ಯದಲ್ಲೇ ಬಳಕೆದಾರರಿಗೆ ಸಿಗಲಿದೆ. ಇದುವರೆಗೆ ಕಂಪನಿಯ ಈ ವೈಶಿಷ್ಟ್ಯವನ್ನು ಬೀಟಾ ಬಳಕೆದಾರರಿಗೆ ಮಾತ್ರ ನೀಡುತ್ತಿತ್ತು. ಈ ವೈಶಿಷ್ಟ್ಯದ ಸಹಾಯದಿಂದ, ಬಳಕೆದಾರರು ಏಕಕಾಲಕ್ಕೆ  ಲ್ಯಾಪ್​ಟಾಪ್ ಮತ್ತು ಕಂಪ್ಯೂಟರ್ ನಂತಹ ಒಂದಕ್ಕಿಂತ ಹೆಚ್ಚು ಫೋನ್ ಅಲ್ಲದ ಸಾಧನಗಳಲ್ಲಿ ತಮ್ಮ ವಾಟ್ಸ್​ಆ್ಯಪ್ ಖಾತೆಯನ್ನು ಪ್ರವೇಶಿಸಲು ಸಾಧ್ಯವಾಗಲಿದೆ.

ಇನ್ನೂ ಭಾರತದಲ್ಲಿ ವಾಟ್ಸ್​ಆ್ಯಪ್ ಪಾವತಿ (ವಾಟ್ಸ್​ಆ್ಯಪ್​ ಪೇಮೆಂಟ್) ವೈಶಿಷ್ಟ್ಯವನ್ನು ಬಳಸುವ ಬಳಕೆದಾರರಿಗೆ ಕ್ಯಾಶ್​ಬ್ಯಾಕ್​​​ (Whatsapp Cashback) ಆಫರ್ ನೀಡಲು ಸಂಸ್ಥೆ ಮುಂದಾಗಿದೆ. Wabetainfo ಬಹಿರಂಗಪಡಿಸಿರುವ ಮಾಹಿತಿಯ ಪ್ರಕಾರ, ಬಳಕೆದಾರರಿಗೆ ವಾಟ್ಸ್​ಆ್ಯಪ್ ಪೇಮೆಂಟ್​ ಮಾಡಿದ ತಕ್ಷಣ ಕ್ಯಶ್​ಬ್ಯಾಕ್ ಆಫರ್ ಎಂಬ ಹೊಸ ವೈಶಿಷ್ಟ್ಯವನ್ನು ತರಲು ವಾಟ್ಸ್​ಆ್ಯಪ್ ಡೆವಲಪರ್‌ಗಳು ಹೊಸ ಕೆಲಸ ಮಾಡುತ್ತಿದ್ದಾರೆ. ಈ ಹೊಸ ಕ್ಯಾಶ್‌ಬ್ಯಾಕ್ ವೈಶಿಷ್ಟ್ಯವನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಹೇಳಿದೆ.

ಭಾರತದಲ್ಲಿ ವಾಟ್ಸ್​ಆ್ಯಪ್ ಪೇಮೆಂಟ್ ಬಳಕೆದಾರರನ್ನು ಮೇಲೆತರಲು ಮತ್ತು ಗೂಗಲ್ ಪೇ, ಫೋನ್ ಪೇ ಯಂತಹ ಪ್ರತಿಸ್ಪರ್ಧಿಗಳೊಂದಿಗೆ ಸ್ಪರ್ಧಿಸಲು ವಾಟ್ಸ್​ಆ್ಯಪ್ ಬಹುಮಾನದ ರಿಯಾಯಿತಿಗಳನ್ನು ಪರಿಚಯಿಸುತ್ತಿದೆ. ಕ್ರಿಯಾತ್ಮಕತೆಯು ಇನ್ನೂ ಅಭಿವೃದ್ಧಿಯಲ್ಲಿದೆ ಮತ್ತು ಅದನ್ನು ಯಾರಿಂದಲೂ ಬಳಸಲಾಗುವುದಿಲ್ಲ. ಇದು ಆ್ಯಪ್‌ನ ಭವಿಷ್ಯದ ಆವೃತ್ತಿಯಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಶೀಘ್ರದಲ್ಲೇ ತಿಳಿಸುತ್ತೇವೆ ಎಂದು ಹೇಳಿದೆ.

ಈ ಸೇವೆಯು ಭಾರತದಲ್ಲಿ ವಾಟ್ಸ್​ಆ್ಯಪ್ ಅನ್ನು ಬಳಸುತ್ತಿರುವ ಗ್ರಾಹಕರಿಗೆ ಮಾತ್ರ ಸೀಮಿತವಾಗಿರುತ್ತದೆ. 10  ರೂ. ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಪಾವತಿಯು ಕ್ಯಾಶ್‌ಬ್ಯಾಕ್ ವೋಚರ್‌ಗಳಾಗಿ ಸಿಗಲಿದೆ ಎಂದು ಹೇಳಲಾಗಿದೆ. ಪಾವತಿ ಮಾಡುವ ಬಳಕೆದಾರರು ಅದನ್ನು 48 ಗಂಟೆಗಳಲ್ಲಿ ಸ್ವೀಕರಿಸುತ್ತಾರೆ ಎಂದು ವರದಿ ಹೇಳುತ್ತದೆ. ಆದಾಗ್ಯೂ, ಈ ವೈಶಿಷ್ಟ್ಯದ ಅಧಿಕೃತ ಬಿಡುಗಡೆಯ ನಂತರ, ಕ್ಯಾಶ್‌ಬ್ಯಾಕ್ ಮೊತ್ತ ಮತ್ತು ಕ್ಯಾಶ್‌ಬ್ಯಾಕ್‌ಗಳ ಸಂಖ್ಯೆಯು ಬದಲಾಗುವ ಸಾಧ್ಯತೆಯಿದೆ.

Dangerous Apps: ಪ್ಲೇ ಸ್ಟೋರ್​ನಿಂದ 136 ಅಪಾಯಕಾರಿ ಆ್ಯಪ್​ಗಳನ್ನು ಕಿತ್ತೆಸೆದ ಗೂಗಲ್: ನಿಮ್ಮಲ್ಲಿದ್ದರೆ ಕೂಡಲೇ ಡಿಲೀಟ್ ಮಾಡಿ

ಏರ್ಟೆಲ್ –ಜಿಯೋಗೆ ಶುರುವಾಗಿದೆ ನಡುಕ: ಬೆಜೋಸ್, ಎಲಾನ್ ಮಸ್ಕ್​ರಿಂದ ಭಾರತದಲ್ಲಿ ಸ್ಯಾಟ್ ಲೈಟ್ ಇಂಟರ್ನೆಟ್ ಸಂಪರ್ಕ

(WhatsApp is going to bring a new multi-device support feature for its users)

ಮಂತ್ರಾಲಯದಲ್ಲಿ ಹೊಸ ವರ್ಷದ ಸಂಭ್ರಮ: ಸಾಗರೋಪಾದಿಯಲ್ಲಿ ಹರಿದುಬಂದ ಭಕ್ತರು
ಮಂತ್ರಾಲಯದಲ್ಲಿ ಹೊಸ ವರ್ಷದ ಸಂಭ್ರಮ: ಸಾಗರೋಪಾದಿಯಲ್ಲಿ ಹರಿದುಬಂದ ಭಕ್ತರು
ಪಕ್ಕದಮನೆಯವರ ಬಗ್ಗೆ ಮಾತನಾಡಲ್ಲ; ವಿಜಯಲಕ್ಷ್ಮೀ ಬಗ್ಗೆ ಸುದೀಪ್ ಮಾತು
ಪಕ್ಕದಮನೆಯವರ ಬಗ್ಗೆ ಮಾತನಾಡಲ್ಲ; ವಿಜಯಲಕ್ಷ್ಮೀ ಬಗ್ಗೆ ಸುದೀಪ್ ಮಾತು
ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಭಕ್ತರ ದಂಡು
ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಭಕ್ತರ ದಂಡು
ಪುಟಿನ್ ರಹಸ್ಯ ನಿವಾಸದ ಮೇಲೆ ಉಕ್ರೇನ್ ಡ್ರೋನ್ ದಾಳಿ
ಪುಟಿನ್ ರಹಸ್ಯ ನಿವಾಸದ ಮೇಲೆ ಉಕ್ರೇನ್ ಡ್ರೋನ್ ದಾಳಿ
ಕಾರ್ಮಿಕರ ಮೇಲೆ ಹಲ್ಲೆ ಮಾಡಿ ಚಹಾ ಅಂಗಡಿ ಧ್ವಂಸಗೊಳಿಸಿದ ಪೊಲೀಸಪ್ಪ!
ಕಾರ್ಮಿಕರ ಮೇಲೆ ಹಲ್ಲೆ ಮಾಡಿ ಚಹಾ ಅಂಗಡಿ ಧ್ವಂಸಗೊಳಿಸಿದ ಪೊಲೀಸಪ್ಪ!
ದೊಡ್ಡ ಗಣಪತಿ ದೇವಸ್ಥಾನದಲ್ಲಿ ಮೋದಿ ಹೆಸರಿನಲ್ಲಿ ವಿಶೇಷ ಪೂಜೆ, ಅಭಿಷೇಕ
ದೊಡ್ಡ ಗಣಪತಿ ದೇವಸ್ಥಾನದಲ್ಲಿ ಮೋದಿ ಹೆಸರಿನಲ್ಲಿ ವಿಶೇಷ ಪೂಜೆ, ಅಭಿಷೇಕ
ಬಾಯಿ ಮುಚ್ಕೊಂಡು ಕೂತ್ಗೊ; ಕಾವ್ಯಾಗೆ ಅವಾಜ್ ಹಾಕಿದ ಧ್ರುವಂತ್
ಬಾಯಿ ಮುಚ್ಕೊಂಡು ಕೂತ್ಗೊ; ಕಾವ್ಯಾಗೆ ಅವಾಜ್ ಹಾಕಿದ ಧ್ರುವಂತ್
ಅಕ್ರಮವಾಗಿ ಪಾರ್ಟಿ ಮಾಡುತ್ತಿದ್ದವರಿಗೆ ಶಾಕ್, ಫಾರ್ಮ್​ಹೌಸ್ ಮೇಲೆ ದಾಳಿ
ಅಕ್ರಮವಾಗಿ ಪಾರ್ಟಿ ಮಾಡುತ್ತಿದ್ದವರಿಗೆ ಶಾಕ್, ಫಾರ್ಮ್​ಹೌಸ್ ಮೇಲೆ ದಾಳಿ
ಸಂಜಯ್ ರಾವತ್ ಮನೆ ಮುಂದೆ ಬಾಂಬ್ ಬೆದರಿಕೆ ಸಂದೇಶವಿರುವ ಕಾರು ಪತ್ತೆ
ಸಂಜಯ್ ರಾವತ್ ಮನೆ ಮುಂದೆ ಬಾಂಬ್ ಬೆದರಿಕೆ ಸಂದೇಶವಿರುವ ಕಾರು ಪತ್ತೆ
ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಇಡುವುದರಿಂದ ಆಗುವ ಲಾಭಗಳೇನು?
ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಇಡುವುದರಿಂದ ಆಗುವ ಲಾಭಗಳೇನು?