ಅಕ್ಟೋಬರ್​ನಲ್ಲಿ ಅಮೆಜಾನ್​ನಿಂದ ಪ್ರೈಮ್ ಬಿಗ್ ಡೇ ಡೀಲ್: ನೀವು ಪ್ರೈಮ್ ಸದಸ್ಯರಾಗುವುದು ಹೇಗೆ?

|

Updated on: Aug 11, 2023 | 11:58 AM

Amazon Prime Subscription Plan: ಈ ಡೀಲ್ ಭಾರತದ ಅಮೆಜಾನ್ ಪ್ರೈಮ್ (Amazon Prime) ಸದಸ್ಯರಿಗೆ ಮಾತ್ರ ಸಿಗಲಿದೆ. ಇದರ ಸಹಾಯದಿಂದ ಅಮೆಜಾನ್ ಪ್ರೈಮ್​ನಲ್ಲಿ ಮನರಂಜನೆ ಸೇರಿದಂತೆ ಅನೇಕ ಉಪಯೋಗವನ್ನು ಪಡೆದುಕೊಳ್ಳಬಹುದು.

ಅಕ್ಟೋಬರ್​ನಲ್ಲಿ ಅಮೆಜಾನ್​ನಿಂದ ಪ್ರೈಮ್ ಬಿಗ್ ಡೇ ಡೀಲ್: ನೀವು ಪ್ರೈಮ್ ಸದಸ್ಯರಾಗುವುದು ಹೇಗೆ?
Amazon Prime
Follow us on

ಪ್ರಸಿದ್ಧ ಇ-ಕಾಮರ್ಸ್ ದೈತ್ಯ ಅಮೆಜಾನ್ (Amazon) ತನ್ನ ಪ್ರೈಮ್ ಸದಸ್ಯರಿಗೆ ಅಕ್ಟೋಬರ್ ತಿಂಗಳಿನಲ್ಲಿ ವಿಶೇಷವಾದ ಮೇಳಗಳನ್ನು ಆಯೋಜಿಸಿದೆ. ಮುಖ್ಯವಾಗಿ ತನ್ನ ಗ್ರಾಹಕರಿಗಾಗಿ ಪ್ರೈಮ್ ಬಿಗ್ ಡೀಲ್ ಡೇಸ್ ಅನ್ನು ಆಯೋಜನೆ ಮಾಡಲು ಮುಂದಾಗಿದ್ದು, ಸೀಮಿತ ಶಾಪಿಂಗ್ (Shopping) ಅನುಭವದ ಕಾರ್ಯಕ್ರಮವನ್ನು ಪ್ರಾರಂಭಿಸುತ್ತಿದೆ. ಕಂಪನಿಯು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಇದನ್ನು ಬಹಿರಂಗಪಡಿಸಿದೆ. ಈ ಡೀಲ್ ಭಾರತದ ಅಮೆಜಾನ್ ಪ್ರೈಮ್ (Amazon Prime) ಸದಸ್ಯರಿಗೆ ಮಾತ್ರ ಸಿಗಲಿದೆ. ಇದರ ಸಹಾಯದಿಂದ ಅಮೆಜಾನ್ ಪ್ರೈಮ್​ನಲ್ಲಿ ಮನರಂಜನೆ ಸೇರಿದಂತೆ ಅನೇಕ ಉಪಯೋಗವನ್ನು ಪಡೆದುಕೊಳ್ಳಬಹುದು.

ಅಮೆಜಾನ್ ಪ್ರೈಮ್ ಚಂದಾದಾರಿಕೆ ಯೋಜನೆ, ಸಂಪೂರ್ಣ ಪಟ್ಟಿ ಇಲ್ಲಿದೆ:

ನೀವು ಅಮೆಜಾನ್ ಪ್ರೈಮ್​ ಸದಸ್ಯತ್ವವನ್ನು ಖರೀದಿಸುವ ಪ್ಲಾನ್​ನಲ್ಲಿದ್ದರೆ ಹೇಗೆ ಪಡೆಯಬಹುದು ಎಂಬುದು ಇಲ್ಲಿದೆ:

ಅಮೆಜಾನ್ ಪ್ರೈಮ್​ ಮಾಸಿಕ ಸದಸ್ಯತ್ವ:

ಅಮೆಜಾನ್ ಒಂದು ತಿಂಗಳ ಪ್ರೈಮ್ ಸದಸ್ಯತ್ವದ ಆಯ್ಕೆಯನ್ನು ಸೇರಿಸಿದೆ. ಇದನ್ನು ಆಯ್ದ ಬ್ಯಾಂಕ್‌ ಕಾರ್ಡ್​ಗಳ ಮೂಲಕ ಮಾತ್ರ ಪಡೆಯಬಹುದು.

ಇದನ್ನೂ ಓದಿ
ಆಧಾರ್ ಕಾರ್ಡ್ ಕಳೆದು ಹೋದರೆ ಏನು ಮಾಡಬೇಕು ಗೊತ್ತಾ?
15,000 ರೂ. ಒಳಗೆ ಆಕರ್ಷಕ ಸ್ಮಾರ್ಟ್​ಫೋನ್​ ಬೇಕೇ?: ಇಲ್ಲಿದೆ ನೋಡಿ 5 ಆಯ್ಕೆ
6,000mAh ಬ್ಯಾಟರಿ ಸಹಿತ ಮಾರುಕಟ್ಟೆಗೆ ಬಂತು ಸ್ಯಾಮ್​ಸಂಗ್ ಸ್ಮಾರ್ಟ್​ಫೋನ್
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಹೊಸ ಝಡ್​ಟಿಇ ಬ್ಲೇಡ್ A73 5G ಸ್ಮಾರ್ಟ್​ಫೋನ್: ಬೆಲೆ ಎಷ್ಟು?, ಏನು ಫೀಚರ್ಸ್?

ಜಿಯೋ ಬಳಕೆದಾರರಿಗೆ ಧಮಾಕ ಆಫರ್: ಸ್ವಾತಂತ್ರ್ಯ ದಿನೋತ್ಸವ ಪ್ರಯುಕ್ತ ಬಂಪರ್ ಪ್ಲಾನ್ ಬಿಡುಗಡೆ

ಅಮೆಜಾನ್ ಪ್ರೈಮ್ ತ್ರೈಮಾಸಿಕ ಸದಸ್ಯತ್ವ:

ಅಮೆಜಾನ್ ಪ್ರೈಮ್ ತ್ರೈಮಾಸಿಕ ಸದಸ್ಯತ್ವದೊಂದಿಗೆ ನೀವು ಎಲ್ಲಾ ಅಮೆಜಾನ್ ಪ್ರೈಮ್ ಪ್ರಯೋಜನಗಳಿಗೆ ಮೂರು ತಿಂಗಳವರೆಗೆ 599 ರೂ. ನೀಡಿ ಪ್ರವೇಶ ಪಡೆಯಬಹುದು.

ಅಮೆಜಾನ್ ಪ್ರೈಮ್​ ವಾರ್ಷಿಕ ಸದಸ್ಯತ್ವ:

ಅಮೆಜಾನ್ ವಾರ್ಷಿಕ ಸದಸ್ಯತ್ವವನ್ನು ಹೊಂದಿದೆ. ನೀವು ನಿಯಮಿತವಾಗಿ ಅಮೆಜಾನ್ ಸೇವೆಗಳನ್ನು ಬಳಸಲು ಯೋಜಿಸಿದರೆ ತ್ರೈಮಾಸಿಕ ಯೋಜನೆಗಿಂತ 337 ರೂ. ಕಡಿಮೆ ವೆಚ್ಚವಾಗುತ್ತದೆ. ಅಮೆಜಾನ್ ಪ್ರೈಮ್ ವಾರ್ಷಿಕ ಸದಸ್ಯತ್ವದ ಬೆಲೆ 1499 ರೂ. ಆಗಿದೆ. ಇದು ಕೂಡ ಎಲ್ಲಾ ಪ್ರಯೋಜನಗಳನ್ನು ಒಳಗೊಂಡಿದೆ.

ಅಮೆಜಾನ್ ಪ್ರೈಮ್​ (ವಾರ್ಷಿಕ) ಸದಸ್ಯತ್ವ:

ಲೈಟ್ ಸದಸ್ಯತ್ವದ ಬೆಲೆ 999 ರೂ., ನೀವು ಈ ಸದಸ್ಯತ್ವವನ್ನು ಯಾವುದೇ ಎಲೆಕ್ಟ್ರಾನಿಕ್ ಪಾವತಿ ಮಾಡಿ ಖರೀದಿಸಬಹುದು.

ಅಮೆಜಾನ್ ಪ್ರೈಮ್ ರೆಂಟ್ ಆಧಾರದ ಮೇಲೆ ವಿಶೇಷ ಚಲನಚಿತ್ರಗಳು ಮತ್ತು ಟಿವಿ ಸಿರೀಸ್​ಗಳನ್ನು ಸಹ ಒಳಗೊಂಡಿದೆ. ರೆಂಟ್ ಆಯ್ಕೆಯಲ್ಲಿ ವ್ಯತ್ಯಾಸವಿದ್ದು ಕೆಲವರಿಗೆ 129 ರೂ. ಅಥವಾ 110 ರೂ. ಗೆ ನೀಡಲಾಗುತ್ತದೆ. ಪ್ರೈಮ್ ರೆಂಟ್​ಗೆ ನೀವು ಅಮೆಜಾನ್ ಪ್ರೈಮ್​ ಸದಸ್ಯತ್ವದ ಅಗತ್ಯವಿಲ್ಲ.

ಪ್ರೈಮ್ ಸದಸ್ಯರಾದರೆ ಏನು ಪ್ರಯೋಜನ?:

ಅಮೆಜಾನ್ ಪ್ರೈಮ್​ ಸದಸ್ಯರಾದರೆ, ಉಚಿತ ಡೆಲವರಿ ಆಯ್ಕೆ ಇರುತ್ತದೆ. ಜೊತೆಗೆ ಒಂದೇ ದಿನದಲ್ಲಿ ಅಥವಾ ಎರಡು ದಿನಗಳ ಒಳಗೆ ನೀವು ಆರ್ಡರ್ ಮಾಡಿದ ವಸ್ತು ಕೈ ಸೇರುತ್ತದೆ. ಅರ್ಹ ಪ್ರಧಾನ ಸದಸ್ಯರು ಅಮೆಜಾನ್​ನಲ್ಲಿ ಶೇ. 5 ಕ್ಯಾಶ್‌ಬ್ಯಾಕ್ ಗಳಿಸುತ್ತಾರೆ. ಹೊಸ ಹೊಸ ಚಲನಚಿತ್ರಗಳನ್ನು ಜಾಹೀರಾತು-ಮುಕ್ತವಾಗಿ ವೀಕ್ಷಿಸಬಹುದು. ಜೊತೆಗೆ ಅಮೆಜಾಣ್ ಒರಿಜಿನಲ್, ಲೈವ್ ಸ್ಪೋರ್ಟ್ಸ್ ಲಭ್ಯವಿದೆ. ಅಮೆಜಾನ್ ಪ್ರೈಮ್​ ಸದಸ್ಯತ್ವದೊಂದಿಗೆ ಪ್ರೈಮ್ ಸದಸ್ಯರಿಗೆ ಲೈಟ್ನಿಂಗ್ ಡೀಲ್‌ಗಳು, ಎಕ್ಸ್‌ಕ್ಲೂಸಿವ್ ಲೈಟ್ನಿಂಗ್ ಡೀಲ್‌ಗಳ ಪ್ರವೇಶವನ್ನು ಪಡೆಯಿರಿ.

ಅಮೆಜಾನ್ ಪ್ರೈಮ್ ಸದಸ್ಯ ಚಂದಾದಾರಿಕೆಯನ್ನು ಹೇಗೆ ಖರೀದಿಸುವುದು?:

  • ಅಮೆಜಾನ್​ಗೆ ಆ್ಯಪ್ ತೆರೆದು ನಿಮ್ಮ ಸಕ್ರಿಯ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಮೂಲಕ ನೋಂದಾಯಿಸಿ.
  • ಮುಖಪುಟದಿಂದ, ಪ್ರೈಮ್ ಮೆಂಬರ್​ಶಿಪ್ ಮೇಲೆ ಕ್ಲಿಕ್ ಮಾಡಿ
  • ಈಗ ನಿಮಗೆ ಬೇಕಾದ ಯೋಜನೆಗಳನ್ನು ಆಯ್ಕೆಮಾಡಿ ಮತ್ತು ಪಾವತಿಯನ್ನು ಮಾಡಲು ಪರದೆಯ ಮೇಲಿನ ಸೂಚನೆಗಳನ್ನು ಅನುಸರಿಸಿ.
  • ಈ ಹಂತಗಳನ್ನು ಅನುಸರಿಸುವುದರಿಂದ ನೀವು ಅಮೆಜಾನ್ ಪ್ರೈಮ್ ಸದಸ್ಯತ್ವಕ್ಕೆ ಯಶಸ್ವಿಯಾಗಿ ಲಾಗ್ ಇನ್ ಆಗಬಹುದು
  • ಇದರೊಂದಿಗೆ ನೀವು ಅಮೆಜಾನ್ ನೀಡುವ ಎಲ್ಲಾ ಪ್ರಯೋಜನಗಳನ್ನು ಸಹ ಪಡೆಯುತ್ತೀರಿ

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ