ಇಂದು ಅಮೆಜಾನ್ ಫ್ರೀಡಂ ಫೆಸ್ಟಿವಲ್ ಸೇಲ್ ಮುಕ್ತಾಯ: ಕೊನೇ ದಿನ ಈ ಫೋನ್​ಗಳ ಮೇಲೆ ಭರ್ಜರಿ ಡಿಸ್ಕೌಂಟ್

Amazon Freedom Day sale: ಫ್ರೀಡಂ ಫೆಸ್ಟಿವಲ್ ಸೇಲ್​ನಲ್ಲಿ ಹಳೆಯ ಮೊಬೈಲ್ ಅನ್ನು ಕಟ್ಟು ಹೊಸ ಫೋನ್ ಖರೀದಿಸಲು ಎಕ್ಸ್​ಚೇಂಜ್ ಆಫರ್ ಕೂಡ ಇದೆ. ಸದ್ಯ ಅಮೆಜಾನ್ ಫ್ರೀಡಂ ಮಾರಾಟದ ಸಮಯದಲ್ಲಿ ಕಡಿಮೆ ಬೆಲೆಗೆ ಲಭ್ಯವಿರುವ ಸ್ಮಾರ್ಟ್‌ಫೋನ್ ಡೀಲ್‌ಗಳನ್ನು ನೋಡೋಣ.

ಇಂದು ಅಮೆಜಾನ್ ಫ್ರೀಡಂ ಫೆಸ್ಟಿವಲ್ ಸೇಲ್ ಮುಕ್ತಾಯ: ಕೊನೇ ದಿನ ಈ ಫೋನ್​ಗಳ ಮೇಲೆ ಭರ್ಜರಿ ಡಿಸ್ಕೌಂಟ್
Amazon Great Freedom Festival sale
Follow us
Vinay Bhat
|

Updated on: Aug 08, 2023 | 1:10 PM

ಅಮೆಜಾನ್​ನಲ್ಲಿ (Amazon) ವಿವಿಧ ಬ್ರಾಂಡ್‌ಗಳನ್ನು ಬಂಪರ್ ರಿಯಾಯಿತಿ ದರದಲ್ಲಿ ಪಡೆದುಕೊಳ್ಳಲು ಇಂದು ಕೊನೆಯ ಅವಕಾಶ. ಇಂದು ಫ್ರೀಡಂ ಫೆಸ್ಟಿವಲ್ ಸೇಲ್ (Amazon Great Freedom Festival sale) ಮುಕ್ತಾಯಗೊಳ್ಳಲಿದೆ. ನಿಮ್ಮ ಮೆಚ್ಚಿನ ಉತ್ಪನ್ನಗಳನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಖರೀದಿಸಲು ಕೇಲವೇ ಗಂಟೆಗಳು ಮಾತ್ರ ಬಾಕಿಯಿದೆ. ಅಮೆಜಾನ್​ನ ಈ ಮಾರಾಟದ ಸಮಯದಲ್ಲಿ ನೀವು ಹೊಸ ಸ್ಮಾರ್ಟ್‌ಫೋನ್ (Smartphone) ಖರೀದಿಸಲು ಬಯಸಿದರೆ ಆಕರ್ಷಕ ಡಿಸ್ಕೌಂಟ್ ಇದೆ. ಹಳೆಯ ಮೊಬೈಲ್ ಅನ್ನು ಕಟ್ಟು ಹೊಸ ಫೋನ್ ಖರೀದಿಸಲು ಎಕ್ಸ್​ಚೇಂಜ್ ಆಫರ್ ಕೂಡ ಇದೆ. ಸದ್ಯ ಅಮೆಜಾನ್ ಫ್ರೀಡಂ ಮಾರಾಟದ ಸಮಯದಲ್ಲಿ ಕಡಿಮೆ ಬೆಲೆಗೆ ಲಭ್ಯವಿರುವ ಸ್ಮಾರ್ಟ್‌ಫೋನ್ ಡೀಲ್‌ಗಳನ್ನು ನೋಡೋಣ.

ರೆಡ್ಮಿ 12C (45 ಶೇಕಡಾ ರಿಯಾಯಿತಿ):

ಈ ಸ್ಮಾರ್ಟ್‌ಫೋನ್ 6.71-ಇಂಚಿನ HD+ ಡಿಸ್‌ಪ್ಲೇ ಜೊತೆಗೆ ಸ್ಕ್ರ್ಯಾಚ್ ರೆಸಿಸ್ಟೆಂಟ್ ಗ್ಲಾಸ್ ಮತ್ತು 500nits ಪೀಕ್ ಬ್ರೈಟ್‌ನೆಸ್ ಹೊಂದಿದೆ. ಇದು ಮೀಡಿಯಾಟೆಕ್ ಹಿಲಿಯೋ G85 ಜೊತೆಗೆ 4GB RAM ಮತ್ತು 64 GB ಆಂತರಿಕ ಸಂಗ್ರಹಣೆಯೊಂದಿಗೆ ಚಾಲಿತವಾಗಿದೆ. ಹೆಚ್ಚುವರಿ ಸಂಗ್ರಹಣೆಗಾಗಿ ಇದು 3GB ವರ್ಚುವಲ್ RAM ಅನ್ನು ಸಹ ಹೊಂದಿದೆ. ಇದು 50MP ಮುಖ್ಯ ಕ್ಯಾಮೆರಾ ಮತ್ತು 5MP ಮುಂಭಾಗದ ಕ್ಯಾಮೆರಾ ಸೇರಿದಂತೆ ಡ್ಯುಯಲ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ. 5000mAh ಬ್ಯಾಟರಿಯೊಂದಿಗೆ 10W ಚಾರ್ಜಿಂಗ್ ಬೆಂಬಲವಿದೆ. ರೆಡ್ಮಿ 12C ಮೂಲ ಬೆಲೆ 13999 ರೂ. ಆದಾಗ್ಯೂ, ಅಮೆಜಾನ್ ಮಾರಾಟದ ಸಮಯದಲ್ಲಿ, ನೀವು ಇದನ್ನು ಕೇವಲ 7699 ರೂ. ಗೆ ಪಡೆಯಬಹುದು.

ಐಫೋನ್ 15 ಸರಣಿ ಬಿಡುಗಡೆಯ ದಿನಾಂಕ ಬಹಿರಂಗ: ಈ ಬಾರಿ ಏನೆಲ್ಲ ವಿಶೇಷತೆ ಇದೆ ನೋಡಿ

ಇದನ್ನೂ ಓದಿ
Image
ಒನ್​ಪ್ಲಸ್​ನ ಮೊಟ್ಟ ಮೊದಲ ಫೋಲ್ಡಬಲ್ ಸ್ಮಾರ್ಟ್‌ಫೋನ್ ಬೆಲೆ ಕೇಳಿ ಶಾಕ್ ಆದ ಟೆಕ್ ಜಗತ್ತು: ಎಷ್ಟು ಗೊತ್ತೇ?
Image
ಬಜೆಟ್ ಪ್ರಿಯರು ಗಮನಿಸಿ: ಇಂದಿನಿಂದ ಮಾರಾಟ ಕಾಣುತ್ತಿದೆ ಅತಿ ಕಡಿಮೆ ಬೆಲೆಯ ಮೋಟೋ G14 ಫೋನ್
Image
ಗೂಗಲ್ ಮ್ಯಾಪ್ ಬಳಸಲು ಇಂಟರ್ನೆಟ್ ಬೇಡ: ಅರೇ, ಇದು ಹೇಗೆ ಸಾಧ್ಯ ಅಂತೀರಾ?, ಈ ಸ್ಟೋರಿ ಓದಿ
Image
ಭಾರತದಲ್ಲಿ ಬರೋಬ್ಬರಿ 6,000mAh ಬ್ಯಾಟರಿಯ ಗ್ಯಾಲಕ್ಸಿ F34 5G ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ ಎಷ್ಟು?:

ರಿಯಲ್ ಮಿ ನಾರ್ಜೊ 60 (10 ಶೇಕಡಾ ರಿಯಾಯಿತಿ):

ಈ ಸ್ಮಾರ್ಟ್​ಫೋನ್ 6.7-ಇಂಚಿನ FHD+ ಸೂಪರ್ AMOLED ಕರ್ವ್ಡ್ ಡಿಸ್ ಪ್ಲೇ ಹೊಂದಿದೆ. ಇದು 2x ಇನ್-ಸೆನ್ಸರ್ ಜೂಮ್ ತಂತ್ರಜ್ಞಾನದೊಂದಿಗೆ 100MP ಪ್ರೊ ಲೈಟ್ ಕ್ಯಾಮೆರಾದೊಂದಿಗೆ ಬರುತ್ತದೆ. ಡೈಮೆನ್ಸಿಟಿ 7050 5G ಚಿಪ್‌ಸೆಟ್‌ನಿಂದ ಚಾಲಿತವಾಗಿದ್ದು, ಇದು 8-ಕೋರ್ 64-ಬಿಟ್ ಪ್ರೊಸೆಸರ್ ಜೊತೆಗೆ 5000 mAh ಬ್ಯಾಟರಿ ಜೊತೆಗೆ 67W SUPERVOOC ಫಾಸ್ಟ್ ಚಾರ್ಜಿಂಗ್ ಅನ್ನು ಒಳಗೊಂಡಿದೆ. ಈ ಫೋನಿನ ಮೂಲಬೆಲೆ 19,999 ರೂ., ಆದರೆ ನೀವು ಇದನ್ನು ಈಗ ಕೇವಲ 17999 ರೂ. ಗೆ ಪಡೆಯಬಹುದು.

ಸ್ಯಾಮ್​ಸಂಗ್ ಗ್ಯಾಲಕ್ಸಿ M14 (17 ಶೇಕಡಾ ರಿಯಾಯಿತಿ):

ಈ ಸ್ಮಾರ್ಟ್‌ಫೋನ್ FHD+ ರೆಸಲ್ಯೂಶನ್‌ನೊಂದಿಗೆ 6.6-ಇಂಚಿನ PLS LCD ಡಿಸ್ ಪ್ಲೇ ಪ್ಯಾನೆಲ್‌ನೊಂದಿಗೆ ಬರುತ್ತದೆ. ಇದು 5nm ಎಕ್ಸಿನೊಸ್ 1330 ಚಿಪ್‌ಸೆಟ್‌ನಿಂದ ಬೆಂಬಲಿತವಾಗಿದೆ. 50MP ಪ್ರಾಥಮಿಕ ಸಂವೇದಕ ಒಳಗೊಂಡಿರುವ ಟ್ರಿಪಲ್-ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಮುಂಭಾಗದಲ್ಲಿ, 13MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇದು ಆಂಡ್ರಾಯ್ಡ್ 13 ಆಧಾರಿತ One UI 5 ಸ್ಕಿನ್ ಮೇಲೆ ಕಾರ್ಯನಿರ್ವಹಿಸುತ್ತದೆ. 6000 mAh ಬ್ಯಾಟರಿ, 25W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಈ ಸ್ಮಾರ್ಟ್‌ಫೋನ್‌ನ ಮೂಲ ಬೆಲೆ ರೂ. 18990, ಆದಾಗ್ಯೂ, ಅಮೆಜಾನ್​ನಲ್ಲಿ, ನೀವು ಕೇವಲ 15790 ರೂ. ಗೆ ಪಡೆಯಬಹುದು.

ಒನ್​ಪ್ಲಸ್ ನಾರ್ಡ್ CE 3:

ಈ ಸ್ಮಾರ್ಟ್​ಫೋನ್ 6.7-ಇಂಚಿನ AMOLED FHD+ ಡಿಸ್ ಪ್ಲೇ ಜೊತೆಗೆ 120Hz ರಿಫ್ರೆಶ್ ದರವನ್ನು ಹೊಂದಿದೆ. ಇದು ಕ್ವಾಲ್ಕಂ ಸ್ನಾಪ್​ಡ್ರಾಗನ್ 782G ಜೊತೆಗೆ 8GB ಮತ್ತು 12GB RAM ನೊಂದಿಗೆ ಚಾಲಿತವಾಗಿದೆ. ಇದು 80W SUPERVOOC ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5000 mAh ಬ್ಯಾಟರಿಯೊಂದಿಗೆ ಬರುತ್ತದೆ. ಸೋನಿ IMX890 ಜೊತೆಗೆ 50MP ಮುಖ್ಯ ಕ್ಯಾಮೆರಾ, ಸೋನಿ IMX355 ಜೊತೆಗೆ 8MP ಅಲ್ಟ್ರಾವೈಡ್ ಕ್ಯಾಮೆರಾ ಮತ್ತು 2MP ಮ್ಯಾಕ್ರೋ ಲೆನ್ಸ್ ಜೊತೆಗೆ 16MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. ಈ ಫೋನನ್ನು ನೀವು SBI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ 1250 ರೂ. ರಿಯಾಯಿತಿ ಪಡೆದು 25,748 ರೂ. ಗೆ ಖರೀದಿಸಬಹುದು.

ಒನ್​ಪ್ಲಸ್ 11R:

ಈ ಸ್ಮಾರ್ಟ್​ಫೋನ್ 120Hz ರಿಫ್ರೆಶ್ ದರದೊಂದಿಗೆ 6.7-ಇಂಚಿನ ಸೂಪರ್ AMOLED ಡಿಸ್ ಪ್ಲೇಯನ್ನು ಹೊಂದಿದೆ. ಇದು ಸ್ನಾಪ್​ಡ್ರಾಗನ್ 8+ Gen 1 ನಿಂದ ಚಾಲಿತವಾಗಿದೆ ಮತ್ತು 100W SUPERVOOC ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5000 mAh ಬ್ಯಾಟರಿಯೊಂದಿಗೆ ಬರುತ್ತದೆ. ಈ ಫೋನ್ ಸೋನಿ IMX890 ಲೆನ್ಸ್​ನ 50MP ಮುಖ್ಯ ಕ್ಯಾಮೆರಾ, 8MP ಅಲ್ಟ್ರಾವೈಡ್ ಕ್ಯಾಮೆರಾ ಮತ್ತು ಮ್ಯಾಕ್ರೋ ಲೆನ್ಸ್ ಜೊತೆಗೆ 16MP ಫ್ರಂಟ್ ಕ್ಯಾಮೆರಾ ಹೊಂದಿದೆ. ಈ ಸ್ಮಾರ್ಟ್​ಫೋನ್ 44998 ರೂ. ಗೆ ಮಾರಾಟವಾಗುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ