ಒನ್ಪ್ಲಸ್ನ ಮೊಟ್ಟ ಮೊದಲ ಫೋಲ್ಡಬಲ್ ಸ್ಮಾರ್ಟ್‌ಫೋನ್ ಬೆಲೆ ಕೇಳಿ ಶಾಕ್ ಆದ ಟೆಕ್ ಜಗತ್ತು: ಎಷ್ಟು ಗೊತ್ತೇ?
OnePlus Open: ಟಿಪ್‌ಸ್ಟರ್ ಪ್ರಕಾರ, ಒನ್ಪ್ಲಸ್ ಓಪನ್ ಬೆಲೆ 1.2 ಲಕ್ಷ ಆಸುಪಾಸಿನಲ್ಲಿ ಇರಲಿದೆಯಂತೆ. ಇದು ಇತ್ತೀಚೆಗಷ್ಟೆ ಬಿಡುಗಡೆ ಆದ ಸ್ಯಾಮ್ಸಂಗ್ ಗ್ಯಾಲಕ್ಸಿ Z Fold 5 ಗೆ ಕಠಿಣ ಪೈಪೋಟಿ ನೀಡಲಿದೆ ಎನ್ನಲಾಗಿದೆ. ಗ್ಯಾಲಕ್ಸಿ Z Fold 5 ಬೆಲೆ 1,54,999 ರೂ. ಆಗಿದೆ.
ಒನ್ಪ್ಲಸ್ (OnePlus) ಕಂಪನಿಯ ಮೊಟ್ಟ ಮೊದಲ ಫೋಲ್ಡಬಲ್ ಸ್ಮಾರ್ಟ್‌ಫೋನ್ ಒನ್ಪ್ಲಸ್ ಓಪನ್ (OnePlus Open) ಈ ತಿಂಗಳ ಕೊನೆಯಲ್ಲಿ ಅಥವಾ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ರಿಲೀಸ್ಗು ಮೊದಲೇ ಸಾಕಷ್ಟು ರೋಚಕತೆ ಸೃಷ್ಟಿಸಿರುವ ಈ ಫೋನಿನ ಒಂದೊಂದೆ ಮಾಹಿತಿ ಸೋರಿಕೆ ಆಗುತ್ತಿದೆ. ಈಗ, ಟಿಪ್‌ಸ್ಟರ್ ಯೋಗೇಶ್ ಬ್ರಾರ್ ಅವರು ತಮ್ಮ X (Twitter) ನಲ್ಲಿ ಒನ್ಪ್ಲಸ್ ಒಪನ್ ಬೆಲೆಯ ಬಗ್ಗೆ ಮಾಹಿತಿಯನ್ನು ತಿಳಿಸಿದ್ದಾರೆ. ಇವರು ಹೇಳಿರುವ ಪ್ರಕಾರ ಇದು ಅತ್ಯಂತ ದುಬಾರಿ ಒನ್ಪ್ಲಸ್ ಸ್ಮಾರ್ಟ್‌ಫೋನ್ ಆಗಿರಬಹುದು ಎಂಬುದು ತಿಳಿದುಬಂದಿದೆ.
ಟಿಪ್‌ಸ್ಟರ್ ಪ್ರಕಾರ, ಒನ್ಪ್ಲಸ್ ಓಪನ್ ಬೆಲೆ 1.2 ಲಕ್ಷ ಆಸುಪಾಸಿನಲ್ಲಿ ಇರಲಿದೆಯಂತೆ. ಇದು ಇತ್ತೀಚೆಗಷ್ಟೆ ಬಿಡುಗಡೆ ಆದ ಸ್ಯಾಮ್ಸಂಗ್ ಗ್ಯಾಲಕ್ಸಿ Z Fold 5 ಗೆ ಕಠಿಣ ಪೈಪೋಟಿ ನೀಡಲಿದೆ ಎನ್ನಲಾಗಿದೆ. ಗ್ಯಾಲಕ್ಸಿ Z Fold 5 ಬೆಲೆ 1,54,999 ರೂ. ಆಗಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಒನ್ಪ್ಲಸ್ ಕಂಪನಿಯ ಅತ್ಯಂತ ದುಬಾರಿ ಫೋನ್ ಎಂದರೆ ಅದು ಒನ್ಪ್ಲಸ್ 10 ಪ್ರೊ. ಇದರ ಬೆಲೆ 71,999 ರೂ. ಆಗಿದೆ. ಅಂತೆಯೆ ಒನ್ಪ್ಲಸ್ 9 ಪ್ರೊ 256GB ಸ್ಟೋರೇಜ್ಗೆ 69,999 ರೂ. ಇದೆ.
ಸ್ಮಾರ್ಟ್‌ಫೋನ್ ಚಾರ್ಜ್ ಮಾಡುವಾಗ ಈ ತಪ್ಪುಗಳನ್ನು ಮಾಡಲೇಬೇಡಿ: ಮೊಬೈಲ್ ಹಾಳಾಗಬಹುದು
ಒನ್ಪ್ಲಸ್ ಓಪನ್ ಫೀಚರ್ಸ್ ಬಗ್ಗೆ ಕಂಪನಿ ಯಾವುದೇ ಅಧಿಕೃತ ಮಾಹಿತಿ ಹೊರಹಾಕಿಲ್ಲ. ಆದರೆ, ಮೂಲಗಳ ಪ್ರಕಾರ ಇದರಲ್ಲಿ ಸ್ನಾಪ್ಡ್ರಾಗನ್ 8+ Gen 2 SoC, 2K 120Hz AMOLED (LTPO) ಡಿಸ್ ಪ್ಲೇ ಮತ್ತು 100W SuperVOOC ಚಾರ್ಜಿಂಗ್ನೊಂದಿಗೆ 4800mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿರಬಹುದು. ವೈರ್‌ಲೆಸ್ ಚಾರ್ಜಿಂಗ್ ಆಯ್ಕೆ ಕೂಡ ಇರುವ ಸಾಧ್ಯತೆ ಇದೆ.
ಈ ಫೋನಿನ ಹಿಂಭಾಗವು ಹ್ಯಾಸೆಲ್‌ಬ್ಲಾಡ್‌ನಿಂದ ಟ್ಯೂನ್ ಮಾಡಲಾದ ಮೂರು ಕ್ಯಾಮೆರಾ ಸೆನ್ಸಾರ್ ಅನ್ನು ಒಳಗೊಂಡಿರುತ್ತದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50-ಮೆಗಾಪಿಕ್ಸೆಲ್ (IMX 890) ಇರಲಿದೆ. ಜೊತೆಗೆ ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು ಪೆರಿಸ್ಕೋಪ್ ಲೆನ್ಸ್ ಅನ್ನು ಒಳಗೊಂಡಿರಬಹುದು. ಡಿಸ್ ಪ್ಲೇಯ ಹೋಲ್-ಪಂಚ್ ಕಟೌಟ್ ಒಳಗೆ 32-ಮೆಗಾಪಿಕ್ಸೆಲ್ ಸೆಲ್ಫಿ ಸ್ನ್ಯಾಪರ್ ಅನ್ನು ಹೊಂದಿರಬಹುದು.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:22 pm, Tue, 8 August 23