Apple WWDC 2023 Announcements: ಆ್ಯಪಲ್ WWDC 2023 ಈವೆಂಟ್​ನಲ್ಲಿ iOS 17, ಆ್ಯಪಲ್ ವಿಷನ್‌ ಪ್ರೊ ಸೇರಿದಂತೆ ಅನೇಕ ಪ್ರಾಡಕ್ಟ್ ಬಿಡುಗಡೆ

ಆ್ಯಪಲ್ ವಿಷನ್ ಪ್ರೊ (Apple Vision Pro) ಅನ್ನು ಲಾಂಚ್‌ ಮಾಡಲಾಗಿದೆ. ಇದು ಆ್ಯಪಲ್‌ನ ಮೊದಲ ಮಿಶ್ರಿತ ರಿಯಾಲಿಟಿ ಹೆಡ್‌ಸೆಟ್ ಐಸೈಟ್‌ನೊಂದಿಗೆ ಕಾಣಿಸಿಕೊಂಡಿದ್ದು, ಉತ್ತಮ ರೆಸಲ್ಯೂಶನ್ ಡಿಸ್‌ಪ್ಲೇ ಆಯ್ಕೆ ಇದರಲ್ಲಿದೆ.

Apple WWDC 2023 Announcements: ಆ್ಯಪಲ್ WWDC 2023 ಈವೆಂಟ್​ನಲ್ಲಿ iOS 17, ಆ್ಯಪಲ್ ವಿಷನ್‌ ಪ್ರೊ ಸೇರಿದಂತೆ ಅನೇಕ ಪ್ರಾಡಕ್ಟ್ ಬಿಡುಗಡೆ
Apple Event 2023
Follow us
Vinay Bhat
|

Updated on: Jun 06, 2023 | 1:57 PM

ಆ್ಯಪಲ್‌ (Apple) ಸಂಸ್ಥೆಯ ವರ್ಲ್ಡ್ ವೈಡ್ ಡೆವಲಪರ್ ಕಾನ್ಫರೆನ್ಸ್ (WWDC) 2023 ಈವೆಂಟ್‌ ಆರಂಭವಾಗಿದೆ. ಮೊದಲ ದಿನವೇ ಹಲವು ಪ್ರಮುಖ ಉತ್ಪನ್ನಗಳನ್ನು ಘೋಷಣೆ ಮಾಡಿದೆ. ಮುಖ್ಯವಾಗಿ iOS 17 ಓಎಸ್‌ ಅನ್ನು ಅಧಿಕೃತವಾಗಿ ಅನಾವರಣಗೊಳಿಸಲಾಗಿದೆ. ಇದರ ಜೊತೆಗೆ ಆ್ಯಪಲ್ ವಿಷನ್ ಪ್ರೊ (Apple Vision Pro) ಅನ್ನು ಲಾಂಚ್‌ ಮಾಡಲಾಗಿದೆ. ಇದು ಆ್ಯಪಲ್‌ನ ಮೊದಲ ಮಿಶ್ರಿತ ರಿಯಾಲಿಟಿ ಹೆಡ್‌ಸೆಟ್ ಐಸೈಟ್‌ನೊಂದಿಗೆ ಕಾಣಿಸಿಕೊಂಡಿದ್ದು, ಉತ್ತಮ ರೆಸಲ್ಯೂಶನ್ ಡಿಸ್‌ಪ್ಲೇ ಆಯ್ಕೆ ಇದರಲ್ಲಿದೆ. ಅಲ್ಲದೆ ಧರಿಸಬಹುದಾದ ಆಪರೇಟಿಂಗ್ ಸಿಸ್ಟಮ್ ವಾಚ್‌ ಓಎಸ್‌ 10 ಅನ್ನು ಲಾಂಚ್‌ ಮಾಡಿದೆ. ಅಂತೆಯೆ ಮ್ಯಾಕ್‌ಬುಕ್‌ ಏರ್‌ 15 ಹಾಗೂ ಆ್ಯಪಲ್ iPadOS 17 ಅನ್ನು ಪರಿಚಯಿಸಿದೆ. ಈ ಕುರಿತ ಪೂರ್ಣ ಮಾಹಿತಿ ಇಲ್ಲಿದೆ.

iOS 17:

ಸಾಕಷ್ಟು ನೂತನ ಅಪ್‌ಡೇಟ್‌ ಆಯ್ಕೆಗಳೊಂದಿಗೆ iOS 17 ಬಿಡುಗಡೆ ಆಗಿದೆ. ಇದರಲ್ಲಿ ಫೇಸ್‌ಟೈಮ್‌ ಅಪ್‌ಡೇಟ್‌ ನೀಡಲಾಗಿದ್ದು, ಲೈವ್‌ ವಾಯಿಸ್‌ ಮೇಲ್, ಇಮೋಜಿ ಸಪೋರ್ಟ್‌ ಪಡೆದಿದೆ. ಮೆಸೆಜ್‌ ಆ್ಯಪ್‌ನಲ್ಲಿ ಆ್ಯಪಲ್ ಸರ್ಚ್‌ ಅನ್ನು ಚುರುಕಾಗಿ ಮತ್ತು ಸುಲಭಗೊಳಿಸಿದೆ. ಮುಖ್ಯವಾಗಿ ‘ಚೆಕ್ ಇನ್’ ಎಂಬ ಸುರಕ್ಷತಾ ಫೀಚರ್ ಅನ್ನು ಮೆಸೆಜ್‌ಗಳಿಗೆ ಸೇರ್ಪಡೆ ಮಾಡಲಾಗಿದೆ. ನೀವು ನಿಗದಿತ ಸ್ಥಳವನ್ನು ಸುರಕ್ಷಿತವಾಗಿ ತಲುಪಿದಾಗ ಇದು ನಿಮ್ಮ ಕುಟುಂಬದ ನಂಬಿಕಸ್ಥ ಸದಸ್ಯರು ಅಥವಾ ಸ್ನೇಹಿತರಿಗೆ ನೋಟಿಫಿಕೇಷನ್‌ ನೀಡುತ್ತದೆ. ಎಲ್ಲಾದರೂ ನೀವು ಮೂವ್‌ ಆಗುತ್ತಿಲ್ಲ ಎಂದಾದರೆ ಈ ಸದಸ್ಯರಿಗೆ ನಿಮ್ಮ ಸಾಧನದ ಲೊಕೆಷನ್‌, ಬ್ಯಾಟರಿ ಲೆವೆಲ್‌ ಇತ್ಯಾದಿಗಳನ್ನು ತೋರಿಸುತ್ತದೆ. ಇಂತಹ ಹಲವು ಫೀಚರ್‌ಗಳು ನೂತನ ಅಪ್‌ಡೇಟ್‌ನಲ್ಲಿ ನೀಡಲಾಗಿದೆ.

SIM Port: ಒಂದು ಮೊಬೈಲ್ ಸಂಖ್ಯೆಯನ್ನು ನೀವು ಎಷ್ಟು ಬಾರಿ ಬೇಕಾದರೂ ಪೋರ್ಟ್ ಮಾಡಬಹುದು!

ಇದನ್ನೂ ಓದಿ
Image
Samsung Galaxy F54: 6000mAh ಬ್ಯಾಟರಿ ಮತ್ತು 108 MP ಕ್ಯಾಮೆರಾ ಸ್ಯಾಮ್​ಸಂಗ್ ಸ್ಮಾರ್ಟ್​ಫೋನ್
Image
OnePlus 11 5G: ಭರ್ಜರಿ ಡಿಮ್ಯಾಂಡ್​ ಹೊಂದಿರುವ ಒನ್‌ಪ್ಲಸ್‌ 11 5G ಮಾರ್ಬಲ್ ಒಡಿಸ್ಸಿ ಆವೃತ್ತಿ ಬಿಡುಗಡೆ
Image
WhatsApp Ban: ಏಪ್ರಿಲ್ ತಿಂಗಳಲ್ಲಿ ಭಾರತದ 74 ಲಕ್ಷ ವಾಟ್ಸ್​ಆ್ಯಪ್ ಖಾತೆ ಬ್ಯಾನ್ ಮಾಡಿದ ಕಂಪನಿ
Image
Redmi Note 12T Pro: ಸ್ಟೈಲಿಶ್ ಲುಕ್ ಮತ್ತು ಪ್ರೀಮಿಯಂ ಫೀಚರ್ಸ್ ರೆಡ್ಮಿ ಸ್ಮಾರ್ಟ್​ಫೋನ್

ಆ್ಯಪಲ್ ವಿಷನ್‌ ಪ್ರೊ:

ಸಾಕಷ್ಟು ರೋಚಕತೆ ಸೃಷ್ಟಿಸಿದ್ದ ಆ್ಯಪಲ್ ವಿಷನ್‌ ಪ್ರೊ ಕಂಪನಿಯ ಭವಿಷ್ಯದ ಪ್ರಾಡಕ್ಟ್‌ ಆಗಿದೆ. ಈಗ ಟೆಸ್ಟ್‌ ಹಂತದಲ್ಲಿ ಬಿಡುಗಡೆ ಮಾಡಲಾಗಿದೆ. ವರ್ಚ್ಯುಯಲ್‌ ರಿಯಾಲಿಟಿ ಬಯಸುವವರಿಗೆ ಈ ಕನ್ನಡಕದಂತಹ ವಿಷನ್‌ ಪ್ರೊ ಹೊಸ ಅನುಭವ ನೀಡಲಿದೆ. ಇದನ್ನು ಕಂಪನಿ ಆಧ್ಯಾತ್ಮ ನಡಿಗೆ ಎಂದಿದೆ. ಈ ಕನ್ನಡಕ ಧರಿಸಿ ನಡೆದಾಡಿದರೆ ಹೊಸ ಜಗತ್ತು ಕಾಣಲಿದೆ.

ಈ ವಿಶೇಷವಾದ ಆ್ಯಪಲ್ ವಿಷನ್ ಪ್ರೊ ಬಳಕೆದಾರರಿಗೆ ಉತ್ತಮ ಅನುಭವ ನೀಡಲಿದ್ದು, ಧರಿಸುವವರು ತಮ್ಮ ಸುತ್ತಮುತ್ತಲಿನ ಬಗ್ಗೆ ಜಾಗೃತರಾಗಲು ಸಹ ಅನುವು ಮಾಡಿಕೊಡುತ್ತದೆ. ಹಾಗೂ ಕಣ್ಣು ಮತ್ತು ಧ್ವನಿ ಆಯ್ಕೆಯ ಕಂಟ್ರೋಲ್‌ ಬೆಂಬಲವನ್ನು ಹೊಂದಿದ್ದು, ಬಹು ಸೆನ್ಸರ್‌ಗಳು ಹಾಗೂ ಕ್ಯಾಮೆರಾಗಳಿಂದ ಪ್ಯಾಕ್‌ ಆಗಿದೆ. ಇದು M2 ಚಿಪ್‌ನಿಂದ ಕಾರ್ಯನಿರ್ವಹಿಸಲಿದ್ದು, R1 ಎಂಬ ಹೊಸ ಚಿಪ್ M2 ಅನ್ನು ಆಧರಿಸಿ ಕೆಲಸ ಮಾಡುತ್ತದೆ. ಕಂಪನಿಯ ಪ್ರಕಾರ ಇದು 12 ಕ್ಯಾಮೆರಾಗಳು, ಐದು ಸೆನ್ಸರ್‌ಗಳು ಮತ್ತು ಆರು ಮೈಕ್ರೊಫೋನ್‌ಗಳನ್ನು ಬೆಂಬಲಿಸುತ್ತದೆ. ಈ ವಿಶೇಷ ಡಿವೈಸ್‌ಗೆ $3,499 ಅಂದರೆ ಭಾರತದಲ್ಲಿ ಇದರ ಬೆಲೆ ಸುಮಾರು 2,88,700ರೂ. ಇರಬಹುದು.

ಮ್ಯಾಕ್‌ಬುಕ್ ಏರ್ 15:

ಆ್ಯಪಲ್ ಕಂಪನಿಯು ಹದಿನೈದು ಇಂಚಿನ ಹಗುರ ಮ್ಯಾಕ್‌ಬುಕ್ ಪರಿಚಯಿಸಿದೆ. ಹಳೆಯ ಮ್ಯಾಕ್‌ಬುಕ್​​ನಂತೆಯೇ ಇದು ತೆಳ್ಳಗಿದೆ. ಆದರೆ, ಡಿಸ್‌ಪ್ಲೇ ದೊಡ್ಡದಾಗಿದೆ. ಇದು 8 ಕೋರ್ CPU ಮತ್ತು 10-ಕೋರ್ GPU ಅನ್ನು ಹೊಂದಿದ್ದು, ಇಂಟೆಲ್ ಚಾಲಿತ ಮ್ಯಾಕ್‌ಬುಕ್‌ಗಿಂತ 12 ಪಟ್ಟು ವೇಗವಾಗಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ 1080p ವೆಬ್‌ಕ್ಯಾಮ್ ಮತ್ತು ಸ್ಪಷ್ಟವಾದ ಧ್ವನಿ ಕರೆಗಳಿಗಾಗಿ ಮೂರು-ಮೈಕ್ ರೇಂಜ್‌ ಅನ್ನು ಸಹ ನೀಡಲಾಗಿದೆ. ಒಟ್ಟು ಆರು ಸ್ಪೀಕರ್‌ಗಳನ್ನು ನೀಡಲಾಗಿದೆ. ಭಾರತದಲ್ಲಿ ಹೊಸ ಮ್ಯಾಕ್‌ಬುಕ್ ಏರ್ 15 ಇಂಚಿನ ಬೆಲೆಯನ್ನು 1,34,900ರೂ. ಗಳಿಗೆ ನಿಗಧಿಪಡಿಸಲಾಗಿದೆ.

ವಾಚ್OS 10:

ಆ್ಯಪಲ್ ವಾಚ್‌ ಸೀರಿಸ್‌ 4ಗೆ ವಾಚ್OS 10 ಬೆಂಬಲ ದೊರಕಲಿದೆ. ವೆದರ್‌, ಸ್ಟಾಕ್‌, ಹೋಮ್‌, ಮ್ಯಾಮ್‌, ವರ್ಲ್‌ ಕ್ಲಾರ್ಕ್‌ ಇತ್ಯಾದಿ ಹಲವು ಆಪ್‌ಗಳ ಸೇರ್ಪಡೆಯಾಗಲಿದೆ. ಸೈಕ್ಲಿಸ್ಟ್‌ಗಳಿಗೆ ಹೆಚ್ಚಿನ ವಿವರ ನೀಡುವ ಕಾಡೆನ್ಸ್‌ ಸೆನ್ಸರ್‌ ಕೂಡ ವಾಚ್‌ಒಎಸ್‌ 10ನಲ್ಲಿರಲಿದೆ. ಇದರಲ್ಲಿ ಮರುವಿನ್ಯಾಸಗೊಳಿಸಲಾದ ಆ್ಯಪ್‌ಗಳು, ವಿಶೇಷ ವಿಜೆಟ್‌ಗಳನ್ನು ಪ್ರದರ್ಶಿಸಲು ಹೊಸ ಸ್ಮಾರ್ಟ್ ಸ್ಟಾಕ್ ಮತ್ತು ಹೊಸ ವಾಚ್ ಫೇಸ್‌ಗಳ ಆಯ್ಕೆ ನೀಡುತ್ತದೆ. ಈ ಹೊಸ ಒಎಸ್‌ನಲ್ಲಿ ಮೆಟ್ರಿಕ್‌ಗಳು ಮತ್ತು ವರ್ಕ್‌ಔಟ್ ವೀಕ್ಷಣೆ ಆಯ್ಕೆ ಇರಲಿದೆ. ಜೊತೆಗೆ ಬ್ಲೂಟೂತ್ ಸಕ್ರಿಯಗೊಳಿಸಿದ ಸೈಕ್ಲಿಂಗ್ ಬಿಡಿಭಾಗಗಳಿಗೆ ಆಟೋಮ್ಯಾಟಿಕ್‌ ಆಗಿ ಸಿಂಕ್‌ ಆಗಲು ಅನುಮತಿಸಲಾಗುತ್ತದೆ.

IPadOS 17:

ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟುಹಾಕಿದ್ದ iPadOS 17 ಹಲವು ಅರ್ಶರ್ಯಕರ ಫೀಚರ್​ಗಳೊಂದಿಗೆ ಬಿಡುಗಡೆಯಾಗಿದೆ. ಆರೋಗ್ಯ, ಸೃಜನಶೀಲತೆ ಮತ್ತು ಮಲ್ಟಿ ಫಂಕ್ಷನ್‌ ನೀಡುವ ಆಯ್ಕೆಗಳನ್ನು ಒಳಗೊಂಡಿದೆ. ಜೊತೆಗೆ ಐಪ್ಯಾಡ್‌ನಲ್ಲಿ ಲಾಕ್‌ಸ್ಕ್ರೀನ್‌ ಅನ್ನು ಕಸ್ಟಮೈಸ್‌ ಮಾಡುವುದಕ್ಕೆ ಅವಕಾಶವನ್ನು ನೀಡಲಿದೆ. iPadOS 17 ನ ಬಹುಮುಖ್ಯವಾದ ಫೀಚರ್ಸ್‌ ಅಂದರೆ ನೋಟ್‌ ಅಪ್ಲಿಕೇಶನ್‌ನಲ್ಲಿ ಪಿಡಿಎಫ್‌ ಎಡಿಟ್‌ ಮಾಡಲು ಅವಕಾಶ ನೀಡಿರುವುದು. ಇದರಿಂದ iPadOS 17 ಬಳಕೆದಾರರು PDF ಗಳಲ್ಲಿ ಕಂಟ್ಯಾಕ್ಟ್‌ಗಳ ಹೆಸರು, ವಿಳಾಸಗಳು ಮತ್ತು ಇಮೇಲ್‌ಗಳಂತಹ ವಿವರಗಳನ್ನು ಸೇರಿಸಲು ಸಾಧ್ಯವಾಗಲಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ