AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೆಗಾಸಸ್ ಮಾದರಿ ಸ್ಪೈವೇರ್ ದಾಳಿ ನಿಜ: ಭಾರತವೂ ಸೇರಿ 92 ದೇಶಗಳ ಐಫೋನ್ ಬಳಕೆದಾರರಿಗೆ ಸಂದೇಶ ಕಳುಹಿಸಿದ ಆ್ಯಪಲ್

Apple Alert Notification: ಆ್ಯಪಲ್ ಸಂಸ್ಥೆ ತನ್ನ ಐಫೋನ್ ಬಳಕೆದಾರರಿಗೆ ಹೊಸ ಅಲರ್ಟ್ ನೋಟಿಫಿಕೇಶನ್ ನೀಡಿದೆ. ಮರ್ಸನರಿ ಸ್ಪೈವೇರ್ ದಾಳಿಗೆ ಒಳಗಾಗಿರಬಹುದಾದ ಐಫೋನ್ ಬಳಕೆದಾರರಿಗೆ ಈ ಅಲರ್ಟ್ ಮೆಸೇಜ್ ಹೋಗಿದೆ. ವರದಿ ಪ್ರಕಾರ ಭಾರತವೂ ಸೇರಿದಂತೆ 92 ದೇಶಗಳಲ್ಲಿನ ತನ್ನ ಐಫೋನ್ ಯೂಸರ್ಸ್​ಗೆ ಈ ನೋಟಿಫಿಕೇಶನ್ ಹೋಗಿದೆ. ಆ್ಯಪಲ್ ಪ್ರಕಾರ ಆಯ್ದ ಕೆಲವೇ ಮಂದಿಯನ್ನು ಸ್ಪೈವೇರ್ ದಾಳಿಗೆ ಗುರಿ ಮಾಡಲಾಗುತ್ತದೆ. ಸರ್ಕಾರ ಅಥವಾ ಸರ್ಕಾರೀ ಪ್ರಾಯೋಜಿತ ಸಂಸ್ಥೆಗಳು ಈ ದಾಳಿಯ ಹಿಂದಿರಬಹುದು ಎಂದಿದೆ.

ಪೆಗಾಸಸ್ ಮಾದರಿ ಸ್ಪೈವೇರ್ ದಾಳಿ ನಿಜ: ಭಾರತವೂ ಸೇರಿ 92 ದೇಶಗಳ ಐಫೋನ್ ಬಳಕೆದಾರರಿಗೆ ಸಂದೇಶ ಕಳುಹಿಸಿದ ಆ್ಯಪಲ್
ಐಫೋನ್ ಲಾಕ್​ಡೌನ್ ಮೋಡ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 11, 2024 | 3:36 PM

Share

ನವದೆಹಲಿ, ಏಪ್ರಿಲ್ 11: ಪೆಗಾಸಸ್ ಎಂಬ ಸ್ಪೈವೇರ್ ದಾಳಿ ಪ್ರಕರಣ ಇತ್ತೀಚೆಗೆ ಜಗತ್ತಿನಾದ್ಯಂತ ಸದ್ದು ಮಾಡಿದೆ. ಭಾರತದಲ್ಲೂ ಹಲವು ಐಫೋನ್ ಬಳಕೆದಾರರಿಗೆ ಸರ್ಕಾರಿ ಪ್ರಾಯೋಜಿತ ಸ್ಪೈವೇರ್ ದಾಳಿಯಾಗಿರುವ ಸಾಧ್ಯತೆ ಬಗ್ಗೆ ನೋಟಿಫಿಕೇಶನ್ ಬಂದಿತ್ತು. ಸರ್ಕಾರ ಇದನ್ನು ಬಲವಾಗಿ ನಿರಾಕರಿಸಿತ್ತು. ಆ್ಯಪಲ್ ಸಂಸ್ಥೆ ಕೂಡ ಈ ಅಲರ್ಟ್​ನಲ್ಲಿರುವ ಅಂಶವನ್ನು ಖಚಿತಪಡಿಸಲು ವಿಫಲವಾಗಿತ್ತು. ಇದೀಗ ಆ್ಯಪಲ್ ಸಂಸ್ಥೆ ಭಾರತವನ್ನೂ ಸೇರಿದಂತೆ 92 ದೇಶಗಳಲ್ಲಿನ ತನ್ನ ಐಫೋನ್ ಬಳಕೆದಾರರಿಗೆ ಹೊಸ ಸ್ಪೈವೇರ್ ದಾಳಿ ನೋಟಿಫಿಕೇಶನ್ (Mercenary Spyware Attack) ಕಳುಹಿಸಿದೆ. ಯಾರ ಐಫೋನ್ ಮತ್ತಿತರ ಆ್ಯಪಲ್ ಉತ್ಪನ್ನಗಳ ಮೇಲೆ ಸ್ಪೈವೇರ್ ದಾಳಿ ಆಗಿರುವ ಸಾಧ್ಯತೆ ಇದೆಯೋ ಆ ವ್ಯಕ್ತಿಗಳ ಇಮೇಲ್ ಮತ್ತು ಮೊಬೈಲ್ ನಂಬರ್​ಗೆ ಆ್ಯಪಲ್ ಅಲರ್ಟ್ ಮೆಸೇಜ್ ಕಳುಹಿಸಿದೆ. ಆದರೆ, ಭಾರತದಲ್ಲಿ ಎಷ್ಟು ಮಂದಿ ಐಫೋನ್ ಬಳಕೆದಾರರಿಗೆ ಈ ನೋಟಿಫಿಕೇಶನ್ ಹೋಗಿದೆ ಎಂಬುದು ಗೊತ್ತಾಗಿಲ್ಲ. ಸೋಷಿಯಲ್ ಮೀಡಿಯಾದಲ್ಲೂ ಯಾರೂ ಕೂಡ ತಮಗೆ ನೋಟಿಫಿಕೇಶನ್ ಬಂದಿರುವ ಬಗ್ಗೆ ಮಾಹಿತಿ ಹಂಚಿಕೊಂಡಿಲ್ಲ.

ಆ್ಯಪಲ್ ತನ್ನ ಸಪೋರ್ಟ್ ಪೇಜ್​ನಲ್ಲಿ ಪ್ರಕಟಿಸಿರುವ ಮಾಹಿತಿ ಪ್ರಕಾರ, ಈ ಸ್ಪೈವೇರ್ ದಾಳಿಯನ್ನು ಮರ್ಸನರಿ ಸ್ಪೈವೇರ್ ಅಟ್ಯಾಕ್ ಎಂದು ಬಣ್ಣಿಸಿದೆ. ಇದು ಮಾಮೂಲಿಯ ಸೈಬರ್ ಕ್ರಿಮಿನಲ್ ಕೃತ್ಯ ಮತ್ತು ಕನ್ಸೂಮರ್ ಮಾಲ್ವೇರ್​ಗಿಂತಲೂ ಬಹಳ ಸಂಕೀರ್ಣವಾಗಿದೆ. ಬಹಳ ಕಡಿಮೆ ಸಂಖ್ಯೆಯ ನಿರ್ದಿಷ್ಟ ವ್ಯಕ್ತಿಗಳನ್ನು ಮರ್ಸನರಿ ಸ್ಪೈವೇರ್ ದಾಳಿಗೆ ಗುರಿ ಮಾಡಲಾಗುತ್ತದೆ. ಬಹುತೇಕ ಐಫೋನ್ ಬಳಕೆದಾರರಿಗೆ ಯಾವ ತೊಂದರೆ ಇರುವುದಿಲ್ಲ. ಕೆಲವೇ ಆಯ್ದ ಮಂದಿಗೆ ಮಾತ್ರ ಸ್ಪೈವೇರ್ ದಾಳಿಯ ಅಪಾಯ ಇದೆ ಎಂದು ಗೂಗಲ್ ಸಪೋರ್ಟ್ ಪೇಜ್​ನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಮೆಟ್ರೋದಲ್ಲಿ ಪ್ರಯಾಣಿಸಲು ರಿಸ್ಟ್​ಬ್ಯಾಂಡ್ ಇದ್ರೆ ಸಾಕು, ಟಿಕೆಟ್ ಬೇಕಿಲ್ಲ: ಮುಂಬೈನಲ್ಲಿ ಹೊಸ ವಿಧಾನದ ಟಿಕೆಟಿಂಗ್

ಆ್ಯಪಲ್ ಕಳುಹಿಸಿದ ಈ ಅಲರ್ಟ್ ಮೆಸೇಜ್​ನಲ್ಲಿ ಬಹಳ ಗಮನಾರ್ಹ ಸಂಗತಿ ಎಂದರೆ ಮರ್ಸನರಿ ಸ್ಪೈವೇರ್ ದಾಳಿಯ ಹಿಂದೆ ಸರ್ಕಾರ ಅಥವಾ ಸರ್ಕಾರದ ಪರವಾಗಿ ಕೆಲಸ ಮಾಡುವ ಸಂಸ್ಥೆಗಳ ಪಾತ್ರ ಇರುವುದನ್ನು ತೋರಿಸಿದೆ. ಇಸ್ರೇಲೀ ಕಂಪನಿ ಪೆಗಾಸಸ್ ಅನ್ನು ಇದು ಉದಾಹರಣೆಯಾಗಿ ನೀಡಿದೆ. ಪತ್ರಕರ್ತರು, ಆಕ್ಟಿವಿಸ್ಟ್​​ಗಳು, ರಾಜಕಾರಣಿಗಳು, ರಾಜತಾಂತ್ರಿಕರನ್ನು ಹೆಚ್ಚಾಗಿ ಗುರಿ ಮಾಡಲಾಗುತ್ತದೆ.

2021ರಿಂದೀಚೆ ಇಂಥ ಮರ್ಸನರಿ ಸ್ಪೈವೇರ್ ದಾಳಿಗೆ ತುತ್ತಾಗಿರುವ ಬಳಕೆದಾರರಿಗೆ ಆ್ಯಪಲ್ ಅಲರ್ಟ್ ಮೆಸೇಜ್ ಕಳುಹಿಸಿದೆ. ಒಟ್ಟು 150 ದೇಶಗಳಲ್ಲಿನ ಐಫೋನ್ ಬಳಕೆದಾರರಿಗೆ ಈ ಮೆಸೇಜ್ ಕಳುಹಿಸಿರುವುದಾಗಿ ಆ್ಯಪಲ್ ಹೇಳಿದೆ.

ಇದನ್ನೂ ಓದಿ: ಗೂಗಲ್ ಫೋಟೋಗಳ ಬಳಕೆದಾರರಿಗೆ ಸಿಹಿ ಸುದ್ದಿ, ಉಚಿತವಾಗಿ ಬರಲಿದೆ AI-ಚಾಲಿತ ಎಡಿಟಿಂಗ್ ಟೂಲ್

ದಾಳಿಗೆ ಒಳಗಾದವರು ಏನು ಮಾಡಬೇಕು?

ಒಂದು ವೇಳೆ ಐಫೋನ್ ಮೇಲೆ ಸ್ಪೈವೇರ್ ದಾಳಿಯಾಗಿದ್ದರೆ ಅದರ ಬಳಕೆದಾರರು ತಮ್ಮ ಐಫೋನ್​ನಲ್ಲಿ ಕೂಡಲೇ ಲಾಕ್​ಡೌನ್ ಮೋಡ್ ಎನೇಬಲ್ ಮಾಡಬೇಕು. ಐಒಎಸ್​ನ ಇತ್ತೀಚಿನ ಆವೃತ್ತಿಗೆ ಅಪ್​ಡೇಟ್ ಮಾಡಬೇಕು. ಅವರು ಬಳಸುವ ಎಲ್ಲಾ ಇತರ ಆ್ಯಪಲ್ ಸಾಧನವನ್ನೂ ಅಪ್​ಡೇಟ್ ಮಾಡಬೇಕು ಎಂದು ಆ್ಯಪಲ್ ಸಲಹೆ ನೀಡಿದೆ.

ಇನ್ನಷ್ಟು ತಂತ್ರಜ್ಞಾನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ