ಮೆಟ್ರೋದಲ್ಲಿ ಪ್ರಯಾಣಿಸಲು ರಿಸ್ಟ್​ಬ್ಯಾಂಡ್ ಇದ್ರೆ ಸಾಕು, ಟಿಕೆಟ್ ಬೇಕಿಲ್ಲ: ಮುಂಬೈನಲ್ಲಿ ಹೊಸ ವಿಧಾನದ ಟಿಕೆಟಿಂಗ್

Mumbai Metro One TapTap: ಮುಂಬೈನ ಮೆಟ್ರೋ ನಿಲ್ದಾಣಗಳಲ್ಲಿ ಟ್ಯಾಪ್ ಟ್ಯಾಪ್ ಎಂಬ ಕೈ ದಿರಿಸನ್ನು ಅನಾವರಣಗೊಳಿಸಲಾಗಿದ್ದು, ಇದನ್ನು ಅಕ್ಸೆಸ್ ಕಾರ್ಡ್​ನಂತೆ ಬಳಸಬಹುದು. ಸಿಲಿಕಾನ್ ವಸ್ತುಗಳಿಂದ ತಯಾರಿಸಲಾಗಿರುವ ಈ ರಿಸ್ಟ್ ಬ್ಯಾಂಡ್‌ಗೆ ಬ್ಯಾಟರಿಗಳ ಅಗತ್ಯವಿಲ್ಲ. ಇದು ಜಲನಿರೋಧಕ ಮತ್ತು ಬಾಳಿಕೆ ಬರುವಂತಹದ್ದಾಗಿದೆ. ಹಾಗಾಗಿ ಬೇಸಿಗೆ, ಚಳಿಗಾಲ, ಮಾನ್ಸೂನ್ ಯಾವುದೇ ಋತುವಿನಲ್ಲಿ ಇದನ್ನು ಬಳಸಬಹುದು. ಈ ಬೆಲ್ಟ್ ಅನ್ನು ನೀರಿಯನಲ್ಲಿ ತೊಳೆಯಲೂಬಹುದು.

ಮೆಟ್ರೋದಲ್ಲಿ ಪ್ರಯಾಣಿಸಲು ರಿಸ್ಟ್​ಬ್ಯಾಂಡ್ ಇದ್ರೆ ಸಾಕು, ಟಿಕೆಟ್ ಬೇಕಿಲ್ಲ: ಮುಂಬೈನಲ್ಲಿ ಹೊಸ ವಿಧಾನದ ಟಿಕೆಟಿಂಗ್
ಮುಂಬೈ ಮೆಟ್ರೋ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 11, 2024 | 2:42 PM

ಮುಂಬೈ, ಏಪ್ರಿಲ್ 11: ಪ್ರಯಾಣಿಕರಿಗೆ ಅನುಕೂಲವಾಗುವಂತೆ ಮುಂಬೈ ಮೆಟ್ರೋದಲ್ಲಿ (Mumbai Metro) ವಿನೂತನ ರೀತಿಯ ಟಿಕೆಟಿಂಗ್ ವ್ಯವಸ್ಥೆ ರೂಪಿಸಲಾಗಿದೆ. ರಿಸ್ಟ್ ಬ್ಯಾಂಡ್ ರೀತಿಯ ಸಾಧನವನ್ನು ಕೈಗೆ ಹಾಕಿಕೊಂಡು ರೈಲಿನಲ್ಲಿ ಪ್ರಯಾಣಿಸಬಹುದು. ಎಎಫ್​ಸಿ ಗೇಟ್​ಗಳಲ್ಲಿ ಈ ರಿಸ್ಟ್​ಬ್ಯಾಂಡ್​ಗಳನ್ನು ಕಾರ್ಡ್​ನಂತೆ ಸ್ಕ್ಯಾನ್ ಮಾಡಿದರೆ ನಿಮಗೆ ಪ್ರವೇಶ ಸಿಗುತ್ತದೆ. ಟ್ಯಾಪ್ ಟ್ಯಾಪ್ ಎಂದು ಕರೆಯಲಾಗುವ ಈ ರಿಸ್ಟ್​ಬ್ಯಾಂಡ್ ಬೆಲೆ ಕೇವಲ 200 ರೂ ಮಾತ್ರವೇ. ಇದಕ್ಕೆ ನಿಮಗೆ ಬೇಕಾದ ಮೊತ್ತಕ್ಕೆ ಪ್ರೀ ರೀಚಾರ್ಜ್ ಮಾಡಬಹುದು.

ಟ್ಯಾಪ್​ಟ್ಯಾಪ್ ಎಂಬ ಈ ಕೈ ದಿರಿಸನ್ನು ಮುಂಬೈ ಮೆಟ್ರೋ ಒನ್ ಮತ್ತು ಬಿಲ್​ಬಾಕ್ಸ್ ಪ್ಯೂರ್ ರಿಸ್ಟ್ ಟೆಕ್ ಸಲ್ಯೂಶನ್ಸ್ ಸಂಸ್ಥೆಗಳು ಜಂಟಿಯಾಗಿ ಸೇರಿ ತಯಾರಿಸಿವೆ. ಸಿಲಿಕಾನ್​ಯುಕ್ತ ವಸ್ತುಗಳಿಂದ ಈ ರಿಸ್ಟ್ ಬ್ಯಾಂಡ್ ತಯಾರಿಸಲಾಗಿದೆ. ಪ್ಲಾಸ್ಟಿಕ್ ಬಳಕೆ ಆಗುವುದಿಲ್ಲ. ಬ್ಯಾಟರಿ ಕೂಡ ಇದರಲ್ಲಿ ಬಳಲಾಗುವುದಿಲ್ಲ. ಸಂಪೂರ್ಣ ಪರಿಸರಸ್ನೇಹಿ ಉತ್ಪನ್ನ ಇದಾಗಿದೆ. ವಾಟರ್​ಪ್ರೂಫ್ ಕೂಡ ಇರುವ ಈ ಕೈ ದಿರಿಸಿನ ಬಳಕೆ ಬಹಳ ಸುಲಭವೂ ಹೌದು. ನೀರಿನಲ್ಲಿ ತೊಳೆಯಬಹುದು. ಕಾರ್ಡ್ ಇತ್ಯಾದಿಯನ್ನು ರೀಚಾರ್ಜ್ ಮಾಡಿದಂತೆ ಟ್ಯಾಪ್​ಟ್ಯಾಪ್ ಅನ್ನೂ ರೀಚಾರ್ಜ್ ಮಾಡಬಹುದು. ಟ್ಯಾಪ್ ಟ್ಯಾಪ್ ಸಾಧನವು ಚರ್ಮಕ್ಕೆ ಹಾನಿ ತರುವುದಿಲ್ಲ. ಯಾವುದೇ ಹವಾಮಾನದಲ್ಲೂ ಇದನ್ನು ವಾಚಿನಂತೆ ಧರಿಸಿಕೊಂಡು ಮೆಟ್ರೋದಲ್ಲಿ ಪ್ರಯಾಣಿಸಬಹುದು.

ಇದನ್ನೂ ಓದಿ: ಅಮೆರಿಕದ ಇನ್ವೆಸ್ಕೋ ಭಾರತದ ಮ್ಯೂಚುವಲ್ ಫಂಡ್ ಬಿಸಿನೆಸ್​ನಿಂದ ನಿರ್ಗಮನ; ಇದರಲ್ಲಿ ನೀವು ಮಾಡಿದ ಹೂಡಿಕೆ ಏನಾಗುತ್ತೆ?

ಮುಂಬೈ ಮೆಟ್ರೋ ಒನ್​ನ ಪ್ರಯಾಣಿಕರ ಮುಂದಿರುವ ವಿವಿಧ ಆಯ್ಕೆಗಳಿಗೆ ಟ್ಯಾಪ್​ಟ್ಯಾಪ್ ಹೊಸ ಸೆರ್ಪಡೆ. ವಾಟ್ಸಾಪ್ ಇ-ಟಿಕೆಟಿಂಗ್, ಅನ್​ಲಿಮಿಟೆಡ್ ಟ್ರಾವಲ್ ಪಾಸ್, ರಿಟರ್ನ್ ಜರ್ನಿ ಟಿಕೆಟ್ ಇತ್ಯಾದಿ ಉತ್ಪನ್ನಗಳನ್ನು ಮುಂಬೈ ಮೆಟ್ರೋ ಆಫರ್ ಮಾಡಿದೆ.

ಮುಂಬೈ ಮೆಟ್ರೋದಲ್ಲಿ ನೀಡಲಾಗುವ ಟಿಕೆಟ್ ಬಹಳ ಚಿಕ್ಕದು. ಅದು ಕಳೆದುಹೋಗುವ ಸಾಧ್ಯತೆ ಹೆಚ್ಚು. ಅಲ್ಲದೇ ಟಿಕೆಟ್ ಪಡೆಯಲು ಹಲವು ಬಾರಿ ಉದ್ದುದ್ದದ ಕ್ಯೂನಲ್ಲಿ ನಿಲ್ಲಬೇಕಾಗುತ್ತದೆ. ಟ್ಯಾಪ್​ಟ್ಯಾಪ್ ಬೆಲ್ಟ್ ಇದ್ದರೆ ಆರಾಮವಾಗಿ ಪ್ರಯಾಣ ಮಾಡಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ