ಅಮೆರಿಕದ ಇನ್ವೆಸ್ಕೋ ಭಾರತದ ಮ್ಯೂಚುವಲ್ ಫಂಡ್ ಬಿಸಿನೆಸ್​ನಿಂದ ನಿರ್ಗಮನ; ಇದರಲ್ಲಿ ನೀವು ಮಾಡಿದ ಹೂಡಿಕೆ ಏನಾಗುತ್ತೆ?

Hinduja Group Acquires MF India Business of Invesco: ಅಮೆರಿಕದ ಇನ್ವೆಸ್ಕೋ ಸಂಸ್ಥೆ ತನ್ನ ಭಾರತೀಯ ಮ್ಯೂಚುವಲ್ ಫಂಡ್ ವ್ಯವಹಾರವನ್ನು ಹಿಂದೂಜಾ ಗ್ರೂಪ್​ನ ಐಐಎಚ್​ಎಲ್​ಗೆ ಬಿಟ್ಟುಕೊಡುತ್ತಿದೆ. ಶೇ. 60ರಷ್ಟು ಪಾಲನ್ನು ಏಪ್ರಿಲ್ 9ರಂದು ಐಐಎಚ್​ಎಲ್​ಗೆ ಮಾರಲು ಒಪ್ಪಂದ ಮಾಡಿಕೊಂಡಿರುವುದು ತಿಳಿದುಬಂದಿದೆ. ಒಂದೂವರೆ ವರ್ಷದ ಬಳಿಕ ಇನ್ನುಳಿದ ಶೇ. 40 ಪಾಲನ್ನು ಮಾರುವ ಅವಕಾಶ ಇನ್ವೆಸ್ಕೋಗೆ ಇದೆ. ಇನ್ವೆಸ್ಕೋ ಅಸೆಟ್ ಮ್ಯಾನೇಜ್ಮೆಂಟ್ ಇಂಡಿಯಾ ಭಾರತದಲ್ಲಿ 86,000 ಕೋಟಿ ರೂ ಮೊತ್ತದ ಮ್ಯೂಚುವಲ್ ಫಂಡ್ ಬಿಸಿನೆಸ್ ಹೊಂದಿದೆ.

ಅಮೆರಿಕದ ಇನ್ವೆಸ್ಕೋ ಭಾರತದ ಮ್ಯೂಚುವಲ್ ಫಂಡ್ ಬಿಸಿನೆಸ್​ನಿಂದ ನಿರ್ಗಮನ; ಇದರಲ್ಲಿ ನೀವು ಮಾಡಿದ ಹೂಡಿಕೆ ಏನಾಗುತ್ತೆ?
ಮ್ಯೂಚುವಲ್ ಫಂಡ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 11, 2024 | 12:09 PM

ಮುಂಬೈ, ಏಪ್ರಿಲ್ 11: ಭಾರತದಲ್ಲಿ ಮ್ಯೂಚುವಲ್ ಫಂಡ್ ಬಿಸಿನೆಸ್ ಹೊಂದಿರುವ ಅಮೆರಿಕದ ಇನ್ವೆಸ್ಕೋ ಪೂರ್ಣವಾಗಿ ನಿರ್ಗಮಿಸುತ್ತಿದೆ. ಇನ್ವೆಸ್ಕೋ ಅಸೆಟ್ ಮ್ಯಾನೇಜ್ಮೆಂಟ್ ಇಂಡಿಯಾ ಸಂಸ್ಥೆಯಲ್ಲಿ (Invesco Asset Management India) ತನ್ನ ಶೇ. 60ರಷ್ಟು ಪಾಲನ್ನು ಭಾರತದ ಐಐಎಚ್​ಎಲ್​ಗೆ ಮಾರಿರುವುದಾಗಿ ಇನ್ವೆಸ್ಕೋ ಸಂಸ್ಥೆ ಮೊನ್ನೆ ಮಂಗಳವಾರ (ಏಪ್ರಿಲ್ 9) ಪ್ರಕಟಿಸಿದೆ. ಇನ್ನುಳಿದ ಶೇ. 40ರಷ್ಟು ಪಾಲನ್ನು 18 ತಿಂಗಳ ಬಳಿಕ ಮಾರುವ ಸಾಧ್ಯತೆ ಇದೆ. ಇನ್ವೆಸ್ಕೋ ಅಸೆಟ್ ಮ್ಯಾನೇಜ್ಮೆಂಟ್ ಸಂಸ್ಥೆ ಭಾರತದಲ್ಲಿ ಸುಮಾರು 86,000 ಕೋಟಿ ರೂ ಮೊತ್ತದ ಮ್ಯೂಚುವಲ್ ಫಂಡ್ ಹೂಡಿಕೆಗಳನ್ನು ನಿರ್ವಹಣೆ ಮಾಡುತ್ತಿದೆ. ಎಷ್ಟು ಮೊತ್ತಕ್ಕೆ ಇನ್ವೆಸ್ಕೋದ ಭಾರತೀಯ ಬಿಸಿನಸ್ ಅನ್ನು ಐಐಎಚ್​ಎಲ್ ಖರೀದಿಸಿದೆ ಎಂಬುದು ಗೊತ್ತಾಗಿಲ್ಲ. ಆದರೆ, ಈ ಫಂಡ್ ಸಂಸ್ಥೆಯ ಮೌಲ್ಯವನ್ನು 2,100ರಿಂದ 2,500 ರೂ ಎಂದು ಗಣಿಸಲಾಗಿದೆ.

ಇನ್ವೆಸ್ಕೋ ಸಂಸ್ಥೆ ವಿಶ್ವಾದ್ಯಂತ 1.6 ಟ್ರಲಿಯನ್ ಡಾಲರ್ ಮೌಲ್ಯದ ಫಂಡ್​ಗಳನ್ನು ನಿರ್ವಹಿಸುತ್ತದೆ. ಹುಲುಸಾಗಿ ಬೆಳೆಯುತ್ತಿರುವ ಭಾರತದ ಮ್ಯೂಚುವಲ್ ಫಂಡ್ ಮಾರುಕಟ್ಟೆಯನ್ನು ಇದು ಬಿಟ್ಟು ಹೋಗುತ್ತಿರುವುದು ಕುತೂಹಲದ ಸಂಗತಿಯಾದರೂ ಅನಿರೀಕ್ಷಿತವೇನಲ್ಲ. ಈ ಹಿಂದೆ ಅಮೆರಿದ ದೈತ್ಯ ಕಂಪನಿಗಳಾದ ಗೋಲ್ಡ್​ಮನ್ ಸ್ಯಾಕ್ಸ್, ಮಾರ್ಗನ್ ಸ್ಟಾನ್ಲೀ, ಫಿಡೆಲಿಟಿ ಮೊದಲಾದ ಸಂಸ್ಥೆಗಳು ಭಾರತದ ಮ್ಯೂಚುವಲ್ ಫಂಡ್ ಬಿಸಿನೆಸ್​ನಿಂದ ನಿರ್ಗಮಿಸಿದ್ದವು. ಜಪಾನ್​ನ ನಿಪ್ಪೋನ್ ಈಗ ಭಾರತದಲ್ಲಿ ಈ ಕ್ಷೇತ್ರದಲ್ಲಿ ವ್ಯವಹಾರ ಇರುವ ಪ್ರಮುಖ ವಿದೇಶೀ ಕಂಪನಿ ಎನಿಸಿದೆ.

ಇದನ್ನೂ ಓದಿ: ಏವಿಯೇಶನ್ ಕಂಪನಿಗಳ ಮಾರುಕಟ್ಟೆ ಮೌಲ್ಯದಲ್ಲಿ ಭಾರತದ ಇಂಡಿಗೋ ಏರ್ಲೈನ್ಸ್ ವಿಶ್ವದ ನಂಬರ್ 3

ಇನ್ವೆಸ್ಕೋದಿಂದ ಮ್ಯೂಚುವಲ್ ಫಂಡ್ ಬಿಸಿನೆಸ್ ಖರೀದಿಸಿದ ಐಐಎಚ್​ಎಲ್ ಹಿಂದೂಜಾ ಗ್ರೂಪ್ ಮಾಲಕತ್ವದ ಕಂಪನಿಯಾಗಿದೆ. ಇಂಡಸ್​ಇಂಡ್ ಇಂಟರ್ನ್ಯಾಷನಲ್ ಹೋಲ್ಡಿಂಗ್ಸ್ ಲಿ ಮಾರಿಷಸ್ ಮೂಲದ ಹೂಡಿಕೆ ಸಂಸ್ಥೆಯಾಗಿದೆ. ಅನಿಲ್ ಅಂಬಾನಿ ಅವರ ರಿಲಾಯನ್ಸ್ ಕ್ಯಾಪಿಟಲ್ ಕಂಪನಿಯನ್ನು ಇತ್ತೀಚೆಗೆ ಖರೀದಿಸಿತ್ತು. ಇಂಡಸ್​ಇಂಡ್ ಬ್ಯಾಂಕ್ ಕೂಡ ಇದೇ ಸಂಸ್ಥೆಯದ್ದಾಗಿದೆ.

ಇದೀಗ ಐಐಎಚ್​ಎಲ್​ ಜೊತೆ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ಇನ್ವೆಸ್ಕೋ ಸಂಸ್ಥೆ ಎರಡು ವರ್ಷ ಕಾಲ ಭಾರತದಲ್ಲಿ ಮ್ಯೂಚುವಲ್ ಫಂಡ್ ಬಿಸಿನೆಸ್ ಆರಂಭಿಸುವಂತಿಲ್ಲ. ಎರಡು ವರ್ಷದ ಬಳಿಕ ಮರುಪ್ರವೇಶ ಮಾಡಲು ಅವಕಾಶಗಳಿವೆ.

ಇದನ್ನೂ ಓದಿ: ಅನಿಲ್ ಅಂಬಾನಿಗೆ ಹಿನ್ನಡೆ; ಡೆಲ್ಲಿ ಮೆಟ್ರೋಗೆ 8,000 ಕೋಟಿ ರೂ ಮರಳಿಸುವಂತೆ ರಿಲಾಯನ್ಸ್ ಇನ್​ಫ್ರಾಗೆ ಸುಪ್ರೀಂಕೋರ್ಟ್ ನಿರ್ದೇಶನ

ಇನ್ವೆಸ್ಕೋದಲ್ಲಿ ಹೂಡಿಕೆ ಮಾಡಿದ್ದವರಿಗೆ ಸಮಸ್ಯೆಯಾಗುತ್ತಾ?

ಇನ್ವೆಸ್ಕೋ ಅಸೆಟ್ ಮ್ಯಾನೇಜ್ಮೆಂಟ್ ಇಂಡಿಯಾ ಸಂಸ್ಥೆ 86,000 ಕೋಟಿ ರೂ ಮೊತ್ತದ ಹೂಡಿಕೆಗಳನ್ನು ನಿರ್ವಹಿಸುತ್ತಿದೆ. ಕಂಪನಿ ಮಾರಾಟವಾಗುವುದರಿಂದ ಈ ಹೂಡಿಕೆಗಳ ಮೇಲೆ ಪರಿಣಾಮ ಉಂಟಾಗುವುದಿಲ್ಲ. ಮಾಲಕತ್ವ ಮಾತ್ರವೇ ಬದಲಾಗುತ್ತದೆ. ಹೂಡಿಕೆ ನಿರ್ವಹಣೆಯನ್ನು ಐಐಎಚ್​ಎಲ್ ಮಾಡುತ್ತದೆ. ಹೀಗಾಗಿ, ಹೂಡಿಕೆದಾರರು ತಮ್ಮ ಹಣದ ಬಗ್ಗೆ ಚಿಂತೆಪಡುವ ಅವಶ್ಯಕತೆ ಇರುವುದಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ