Instagram: ಯುವಕ, ಯುವತಿಯರೇ ಇನ್ಮುಂದೆ ಇನ್ಸ್ಟಾದಲ್ಲಿ ನೀವು ಸೇಫ್, ಅಶ್ಲೀಲ ಸಂದೇಶಗಳಿಂದ ರಕ್ಷಿಸಲು ಹೊಸ ಆಯ್ಕೆ
ಖಾಸಗಿ ಸಂದೇಶಗಳ ನಗ್ನತೆಯನ್ನು ಸ್ವಯಂಚಾಲಿತವಾಗಿ ಅಸ್ಪಷ್ಟಗೊಳಿಸುವ ಹೊಸ ಆಯ್ಕೆಯನ್ನು ಇನ್ಸ್ಟಾಗ್ರಾಮ್ ತರುತ್ತಿದೆ. ಲೈಂಗಿಕ ವಂಚನೆ ಮತ್ತು ಅಪರಾಧದ ಆಯ್ಕೆಗಳಲ್ಲಿ ತೋಡಗಿಸಿಕೊಳ್ಳುವುದು, ವಿವಿಧ ರೀತಿಯ "ದೃಶ್ಯ ಶೋಷಣೆ"ಯನ್ನು ತಡೆಯಲು ಹೊಸ ಕ್ರಮವನ್ನು ಇನ್ಸ್ಟಾಗ್ರಾಮ್ ತಂದಿದೆ.

ಇನ್ಸ್ಟಾಗ್ರಾಮ್ (Instagram) ಇಡೀ ಜಗತ್ತಿನಲ್ಲಿ ಹಬ್ಬಿಕೊಂಡಿದೆ. ಈ ಒಂದು ವೇದಿಕೆಯಿಂದ ಅನೇಕ ಪ್ರತಿಭೆಗಳು ಎತ್ತರ ಸ್ಥಾನ ತಲುಪಿದ್ದು ಇದೆ. ಅನೇಕರಿಗೆ ಒಳ್ಳೆಯ ಅವಕಾಶ ಬಂದಿದ್ದಿದೆ. ಆದರೆ ಈ ಆ್ಯಪ್ನಿಂದ ಅನೇಕರು ಕಷ್ಟ ಅನುಭವಿಸಿದ್ದ ಹಲವು ಉದಾಹರಣೆಗಳು ಕೂಡ ನೋಡಿರಬಹುದು. ಆದರೆ ಇದೀಗ ಯುವ ಸಮಾಜವನ್ನು ರಕ್ಷಣೆ ಮಾಡಲು, ಹಾಗೂ ಅನೇಕ ಯುವಕ-ಯುವಕರು ಅನುಭವಿಸುತ್ತಿರುವ ಲೈಂಗಿಕ ಕಿರುಕುಳ , ಅಭದ್ರತೆಯಿಂದ ರಕ್ಷಣೆ ಮಾಡಲು ಹೊಸ ನವೀಕರಣವನ್ನು ಇನ್ಸ್ಟಾಗ್ರಾಮ್ ಪರಿಚರಿಸಿದೆ. ಖಾಸಗಿ ಸಂದೇಶಗಳ ನಗ್ನತೆಯನ್ನು ಸ್ವಯಂಚಾಲಿತವಾಗಿ ಅಸ್ಪಷ್ಟಗೊಳಿಸುವ ಹೊಸ ಆಯ್ಕೆಯನ್ನು ಇನ್ಸ್ಟಾಗ್ರಾಮ್ ತರುತ್ತಿದೆ. ಲೈಂಗಿಕ ವಂಚನೆ ಮತ್ತು ಅಪರಾಧದ ಆಯ್ಕೆಗಳಲ್ಲಿ ತೋಡಗಿಸಿಕೊಳ್ಳುವುದು, ವಿವಿಧ ರೀತಿಯ “ದೃಶ್ಯ ಶೋಷಣೆ”ಯನ್ನು ತಡೆಯಲು ಹೊಸ ಕ್ರಮವನ್ನು ಇನ್ಸ್ಟಾಗ್ರಾಮ್ ತಂದಿದೆ. ಲೈಂಗಿಕ ಬ್ಲ್ಯಾಕ್‌ಮೇಲ್‌ನ ಒಂದು ರೂಪವಾದ ಸೆಕ್ಸ್‌ಟಾರ್ಶನ್, ವ್ಯಕ್ತಿಗಳನ್ನು ಆನ್‌ಲೈನ್‌ನಲ್ಲಿ ಅಶ್ಲೀಲ ಚಿತ್ರಗಳನ್ನು ಕಳಿಸುವಂತೆ ಮಾಡಿ ನಂತರ ಹಣಕ್ಕೆ ಬೇಡಿಕೆ ಇಡುವುದು ಹಾಗೂ ಲೈಂಗಿಕ ಕ್ರಿಯೆ ನಡೆಸಲು ಒತ್ತಾಯಿಸುವುದು, ಒಪ್ಪಿಕೊಂಡಿಲ್ಲ ಎಂದರೆ ಫೋಟೋಗಳನ್ನು ಸೆಕ್ಸ್ ರೀತಿಯಲ್ಲಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದು. ಹೀಗೆ ಅನೇಕ ಬೆದರಿಕೆಗಳನ್ನು ತಡೆಯಲು ಹೊಸ ಕ್ರಮವನ್ನು ಇನ್ಸ್ಟಾಗ್ರಾಮ್ ತರುತ್ತಿದೆ.
ನಗ್ನತೆಯ ರಕ್ಷಣೆಗೆ ಹೊಸ ಆಯ್ಕೆ
ವಿಶ್ವಾದ್ಯಂತ 18 ವರ್ಷದೊಳಗಿನವರಿಗೆ ನಗ್ನತೆಯ ರಕ್ಷಣೆಯನ್ನು ಡಿಫಾಲ್ಟ್ ಆಗಿ ಆನ್ ಮಾಡಲಾಗುತ್ತದೆ, ಆದರೆ ವಯಸ್ಕರು ಮಾತ್ರ ಇದನ್ನು ಆನ್ ಮಾಡಲು ನೋಟಿಫಿಕೇಶನ್ ಮೂಲಕ ಆದೇಶ ನೀಡುತ್ತದೆ. ಇದು ನಿಮಗೆ ನಗ್ನತೆಯ ಚಿತ್ರಗಳನ್ನು ಅಥವಾ ಯಾವುದೇ ಫೋಟೋಗಳನ್ನು ಕಳುಹಿಸುವಾಗ ಎಚ್ಚರಿಕೆಯಿಂದ ಇರುವಂತೆ ಆದೇಶವನ್ನು ನೀಡುತ್ತದೆ. ಇದನ್ನು ಒಂದು ವೇಳೆ ಬಳಕೆದಾರರೂ ಒಪ್ಪಿಕೊಂಡ ಈ ಆದೇಶವನ್ನು ಸ್ವೀಕರಿಸಿದರೆ ಫೋಟೋ ಅಥವಾ ವಿಡಿಯೋವನ್ನು ಕಳುಹಿಸುವುದನ್ನು ರದ್ದುಗೊಳಿಸುತ್ತದೆ. ಇದರ ಜತೆಗೆ ಇದು ಬಳಕೆದಾರರು ಮೆಟಾದ ಸುರಕ್ಷತಾ ಸಲಹೆಗಳನ್ನು ಕೂಡ ನೀಡುತ್ತದೆ. ಸ್ಕ್ರೀನ್‌ಶಾಟ್ ಅಥವಾ ಫಾರ್ವರ್ಡ್ ಬಗ್ಗೆಯೂ ಸಲಹೆಯನ್ನು ನೀಡುತ್ತದೆ.
ಇದನ್ನೂ ಓದಿ: ಗೂಗಲ್ ಫೋಟೋಗಳ ಬಳಕೆದಾರರಿಗೆ ಸಿಹಿ ಸುದ್ದಿ, ಉಚಿತವಾಗಿ ಬರಲಿದೆ AI-ಚಾಲಿತ ಎಡಿಟಿಂಗ್ ಟೂಲ್
ನಗ್ನತೆಯಾಗಿರುವ ಫೋಟೋಗಳನ್ನು ಬ್ಲಾರ್ ಮಾಡುವುದು ಮತ್ತು ಎಚ್ಚರಿಕೆಯಲ್ಲಿ ಇರಿಸುವ ಮೂಲಕ ಬಳಕೆದಾರರು ತಮ್ಮ DM (direct message) ಗಳಲ್ಲಿ ಅನಗತ್ಯ ನಗ್ನತೆಯನ್ನು ನೋಡದಂತೆ ಇದು ರಕ್ಷಿಸುತ್ತದೆ. ಮೆಟಾ ಬಳಕೆದಾರರಿಗೆ ಇದಕ್ಕೆ ಪ್ರತಿಕ್ರಿಯಿಸದಂತೆ ಸಂದೇಶವನ್ನು ಕೂಡ ಕಳುಹಿಸುತ್ತದೆ. ಇದರ ಜತೆಗೆ ಇಂತಹ ಸಂದೇಶಗಳ ಕಳುಹಿಸುವವರನ್ನು ನಿರ್ಬಂಧಿಸಲು ಮತ್ತು ಸಂದೇಶವನ್ನು ವರದಿ ಮಾಡುವ ಆಯ್ಕೆಯನ್ನು ಕೂಡ ನೀಡಿದೆ.
ಇನ್ನಷ್ಟು ತಂತ್ರಜ್ಞಾನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




