Covid vaccination: ಕೊವಿನ್​ ಪೋರ್ಟಲ್​ ಹೊರತಾಗಿ ಈ ಆ್ಯಪ್​ಗಳ ಮೂಲಕವೂ ಲಸಿಕೆಯ ಲಭ್ಯತೆ ಬಗ್ಗೆ ತಿಳಿದು, ಕಾಯ್ದಿರಿಸಲು ಅವಕಾಶ

ಒಂದು ವೇಳೆ ನಿಮ್ಮ ಮೊಬೈಲ್​ನಲ್ಲಿ ಕೊವಿನ್​ ಪೋರ್ಟಲ್​ ಮೂಲಕ ಲಸಿಕೆ ಬುಕ್​ ಮಾಡುವುದು ಸಮಸ್ಯೆಯಾದಲ್ಲಿ ಈ ಕೆಳಕಂಡ ಆ್ಯಪ್​ಗಳನ್ನು ಬಳಸಿ ಕೊರೊನಾ ಲಸಿಕೆ ಪಡೆಯಲು ಸ್ಲಾಟ್ ಕಾಯ್ದಿರಿಸಬಹುದಾಗಿದೆ.

Covid vaccination: ಕೊವಿನ್​ ಪೋರ್ಟಲ್​ ಹೊರತಾಗಿ ಈ ಆ್ಯಪ್​ಗಳ ಮೂಲಕವೂ ಲಸಿಕೆಯ ಲಭ್ಯತೆ ಬಗ್ಗೆ ತಿಳಿದು, ಕಾಯ್ದಿರಿಸಲು ಅವಕಾಶ
ಕೊವಿನ್​ ಪೋರ್ಟಲ್​ (ಸಾಂಕೇತಿಕ ಚಿತ್ರ)
Follow us
TV9 Web
| Updated By: Skanda

Updated on:Jul 07, 2021 | 9:26 AM

ದೆಹಲಿ: ಭಾರತದಲ್ಲಿ ಕೊರೊನಾ ಎರಡನೇ ಅಲೆ ತೀವ್ರತೆ ತಗ್ಗುತ್ತಿದ್ದರೂ ಮೂರನೇ ಅಲೆ ಸಾಧ್ಯತೆ ಹಾಗೂ ಡೆಲ್ಟಾ ರೂಪಾಂತರಿಯ ಅಪಾಯಕಾರಿ ವರ್ತನೆ ಬಗ್ಗೆ ತಜ್ಞರು ಎಚ್ಚರಿಸಿರುವುದರಿಂದ ಲಸಿಕೆ ವಿತರಣೆಗೆ ಹೆಚ್ಚು ಮಹತ್ವ ನೀಡಲಾಗುತ್ತಿದೆ. ಇದೀಗ ಕೊವಿನ್​ ಪೋರ್ಟಲ್​ ಹೊರತಾಗಿಯೂ ಬೇರೆ ಬೇರೆ ಖಾಸಗಿ ಆ್ಯಪ್​ಗಳ ಮೂಲಕ ಕೊರೊನಾ ಲಸಿಕೆಯನ್ನು ಕಾಯ್ದಿರಿಸುವ ಅವಕಾಶ ನೀಡಲಾಗಿದ್ದು, ಲಸಿಕೆ ಪಡೆಯುವುದು ಮತ್ತಷ್ಟು ಸುಲಭವಾಗಿದೆ. ಒಂದು ವೇಳೆ ನಿಮ್ಮ ಮೊಬೈಲ್​ನಲ್ಲಿ ಕೊವಿನ್​ ಪೋರ್ಟಲ್​ ಮೂಲಕ ಲಸಿಕೆ ಬುಕ್​ ಮಾಡುವುದು ಸಮಸ್ಯೆಯಾದಲ್ಲಿ ಈ ಕೆಳಕಂಡ ಆ್ಯಪ್​ಗಳನ್ನು ಬಳಸಿ ಕೊರೊನಾ ಲಸಿಕೆ ಪಡೆಯಲು ಸ್ಲಾಟ್ ಕಾಯ್ದಿರಿಸಬಹುದಾಗಿದೆ.

ಪೇಟಿಎಂ: ಕೊರೊನಾ ಲಸಿಕೆ ಎಲ್ಲಿ ಲಭ್ಯವಿದೆ ಎಂದು ಹುಡುಕಿ, ಕಾಯ್ದಿರಿಸಿ ಜನಪ್ರಿಯ ಮೊಬೈಲ್​ ಆ್ಯಪ್​ಗಳಲ್ಲಿ ಮುಂಚೂಣಿಯಲ್ಲಿರುವ ಪೇಟಿಎಂ ತನ್ನ ಬಳಕೆದಾರರಿಗಾಗಿ ಈ ಸೌಲಭ್ಯ ಪರಿಚಯಿಸಿದೆ. ಆನ್​ಲೈನ್​ ಮೂಲಕ ಹಣ ಪಾವತಿ ಅವಕಾಶ ನೀಡುವ ಈ ಆ್ಯಪ್​ನಲ್ಲಿ ಇದೀಗ ಕೊರೊನಾ ಲಸಿಕೆಯ ಸ್ಲಾಟ್ ಬುಕ್​ ಮಾಡಬಹುದಾಗಿದೆ. ಆ್ಯಪ್​ನ ಹೋಂಪೇಜ್​ನಲ್ಲಿ ವ್ಯಾಕ್ಸಿನ್​ ಫೈಂಡರ್​ ಎಂಬ ಸೌಲಭ್ಯ ಇದ್ದು, ಅದರಲ್ಲಿ ನಿಮ್ಮ ಊರಿನ ಪಿನ್​ಕೋಡ್​ ಹಾಗೂ ನಿಮ್ಮ ವಯಸ್ಸಿನ ವಿವರ ನಮೂದಿಸುವ ಮೂಲಕ ಹತ್ತಿರದಲ್ಲಿ ಎಲ್ಲಿ ಲಸಿಕೆ ಲಭ್ಯವಿದೆ ಎನ್ನುವುದನ್ನು ನೋಡಬಹುದು. ಲಸಿಕೆ ಲಭ್ಯವಿದ್ದಲ್ಲಿ ಬುಕ್​ ನೌ ಎಂಬ ಆಯ್ಕೆಯನ್ನು ಒತ್ತುವ ಮೂಲಕ ಯಾವ ಕೇಂದ್ರದಲ್ಲಿ ಲಸಿಕೆ ಪಡೆಯುತ್ತೀರಿ ಎನ್ನುವುದನ್ನು ಆರಿಸಿಕೊಳ್ಳಬೇಕು. ಬಳಿಕ ನಿಮ್ಮ ಮೊಬೈಲ್​ ಸಂಖ್ಯೆ ನಮೂದಿಸಿ ಅದಕ್ಕೆ ಬರುವ ಒಟಿಪಿ ನೀಡಿದರೆ ಲಸಿಕೆ ಪಡೆಯಲು ಸ್ಲಾಟ್​ ಕಾಯ್ದಿರಿಸಿದಂತಾಗುತ್ತದೆ.

ಏಕ ಕೇರ್ ಆ್ಯಪ್​: ಕೊರೊನಾ ಲಸಿಕೆ ಎಲ್ಲಿ ಲಭ್ಯವಿದೆ ಎಂದು ಹುಡುಕಿ, ಕಾಯ್ದಿರಿಸಲು ಅವಕಾಶ ಏಕ ಕೇರ್ ಆ್ಯಪ್​ ಮೂಲಕವೂ ಕೊರೊನಾ ಲಸಿಕೆಯ ಸ್ಲಾಟ್ ಬುಕ್​ ಮಾಡಬಹುದಾಗಿದೆ. ಐಓಎಸ್​ ಹಾಗೂ ಆ್ಯಂಡ್ರಾಯ್ಡ್​ ಬಳಕೆದಾರರಿಬ್ಬರಿಗೂ ಈ ಆ್ಯಪ್​ ಲಭ್ಯವಿದ್ದು, ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಆ್ಯಪ್​ನ ಹೋಂಪೇಜ್​ನಲ್ಲಿ ವ್ಯಾಕ್ಸಿನ್​ ಲಭ್ಯತೆ ಹುಡುಕಲು ಅವಕಾಶವಿದ್ದು, ನಿಮ್ಮ ಮೊಬೈಲ್​ ಸಂಖ್ಯೆಯನ್ನು ನೋಂದಾಯಿಸಿಕೊಳ್ಳುವ ಮೂಲಕ ಇದನ್ನು ಬಳಸಬಹುದು.

ಹೆಲ್ತಿಫೈ ಮಿ: ಕೊರೊನಾ ಲಸಿಕೆ ಲಭ್ಯತೆ ಬಗ್ಗೆ ತಿಳಿದು, ಕಾಯ್ದಿರಿಸಲು ಅವಕಾಶ ಆರೋಗ್ಯಕ್ಕೆ ಸಂಬಂಧಿಸಿದ ಆ್ಯಪ್ ಹೆಲ್ತಿಫೈ ಮಿ ಮೂಲಕವೂ ನೇರವಾಗಿ ಕೊರೊನಾ ಲಸಿಕೆಯ ಸ್ಲಾಟ್ ಬುಕ್​ ಮಾಡಬಹುದಾಗಿದೆ. ಲಸಿಕೆಯನ್ನು ಕಾಯ್ದಿರಿಸಲು ವ್ಯಾಕ್ಸಿನೇಟ್ ಮಿ ಕಾರ್ಡ್​ ಕ್ಲಿಕ್​ ಮಾಡಿ, ಪ್ರದೇಶದ ಪಿನ್​ ಕೋಡ್ ನಮೂದಿಸಿ ಎಷ್ಟನೇ ಡೋಸ್ ಎನ್ನುವುದನ್ನು ತಿಳಿಸಬೇಕಿದೆ. ಅದಾದ ಬಳಿಕ ನಿಮ್ಮ ವಯಸ್ಸು ಹಾಗೂ ಯಾವ ಲಸಿಕೆ ಎನ್ನುವುದನ್ನು ತಿಳಿಸಿದರೆ ಎಲ್ಲೆಲ್ಲಿ ಲಸಿಕೆ ಲಭ್ಯ ಎನ್ನುವ ವಿವರ ಸಿಗುತ್ತದೆ. ಅದರ ಆಧಾರದ ಮೇಲೆ ಲಸಿಕೆಯನ್ನು ಕಾಯ್ದಿರಿಸಬಹುದು.

ರಿಲಯನ್ಸ್ ಮೈ ಜಿಯೋ: ಕೊರೊನಾ ಲಸಿಕೆ ಲಭ್ಯತೆ ಬಗ್ಗೆ ತಿಳಿಯಲು ಅವಕಾಶ ರಿಲಯನ್ಸ್ ಮೈ ಜಿಯೋ ಆ್ಯಪ್​ ಮೂಲಕವೂ ಕೊರೊನಾ ಲಭ್ಯತೆ ಬಗ್ಗೆ ತಿಳಿಯಬಹುದಾಗಿದೆ. ಜಿಯೋ ನಂಬರ್ ಬಳಸಿ ಲಾಗಿನ್​ ಆಗಬಹುದಾಗಿದ್ದು, ಕೊವಿಡ್​ 19 ವ್ಯಾಕ್ಸಿನ್​ ಫೈಂಡರ್​ ಎಂಬ ಆಯ್ಕೆಯನ್ನು ಆರಿಸಿಕೊಳ್ಳಬೇಕು. ಎಲ್ಲಿ ಲಸಿಕೆ ಲಭ್ಯವಿದೆ ಎಂಬ ವಿವರ ಸಿಕ್ಕ ಬಳಿಕ ಅದು ನಿಮ್ಮನ್ನು ಕೊವಿನ್​ ಪೋರ್ಟಲ್​ಗೆ ಕೊಂಡೊಯ್ಯಲಿದ್ದು, ಅಲ್ಲಿಂದ ಲಸಿಕೆ ಕಾಯ್ದಿರಿಸಬಹುದು.

ಏರ್ಟೆಲ್​ ಥ್ಯಾಂಕ್ಸ್​ ಆ್ಯಪ್: ಕೊರೊನಾ ಲಸಿಕೆ ಲಭ್ಯತೆ ಬಗ್ಗೆ ತಿಳಿಯಲು ಅವಕಾಶ ಏರ್ಟೆಲ್​ ಥ್ಯಾಂಕ್ಸ್​ ಆ್ಯಪ್​ ಮೂಲಕ ಕೊರೊನಾ ಲಸಿಕೆಯ ಲಭ್ಯತೆ ಬಗ್ಗೆ ತಿಳಿಯಲು ಅವಕಾಶ ಇದೆ. ಜಿಯೋ ಆ್ಯಪ್​ನಲ್ಲಿರುವಂತೆಯೇ ಇಲ್ಲಿಯೂ ಏರ್ಟೆಲ್​ ಬಳಕೆದಾರರು ಲಸಿಕೆ ಲಭ್ಯತೆ ಬಗ್ಗೆ ತಿಳಿದುಕೊಳ್ಳಬಹುದಾಗಿದ್ದು, ರಾಜ್ಯ, ಜಿಲ್ಲೆ, ಪ್ರದೇಶದ ವಿವರಗಳನ್ನು ನೀಡಿದರೆ ಎಲ್ಲಿ ಲಸಿಕೆ ಲಭ್ಯವಿದೆ ಎನ್ನುವ ಮಾಹಿತಿ ಸಿಗುತ್ತದೆ.

ಇಕ್ಸಿಗೋ: ಕೊರೊನಾ ಲಸಿಕೆ ಲಭ್ಯತೆ ಬಗ್ಗೆ ತಿಳಿಯಲು ಅವಕಾಶ ಪ್ರವಾಸಕ್ಕೆ ಸಹಕಾರಿಯಾಗುವ ಇಕ್ಸಿಕೋ ಆ್ಯಪ್​ ಕೂಡಾ ಕೊರೊನಾ ಲಸಿಕೆಯ ಲಭ್ಯತೆ ಬಗ್ಗೆ ತಿಳಿಯಲು ಸಹಕಾರಿಯಾಗಿದೆ. ಇಕ್ಸಿಗೋ ಆ್ಯಪ್​ ತೆರೆಯುವ ಮೂಲಕ ಬಳಕೆದಾರರು ತಾವಿರುವ ಪ್ರದೇಶದ ವಿವರ ನೀಡಿದರೆ ಎಲ್ಲಿ ಲಸಿಕೆ ಲಭ್ಯವಿದೆ ಎನ್ನುವ ಮಾಹಿತಿ ಸಿಗುತ್ತದೆ. ಜತೆಗೆ ವಯಸ್ಸಿನ ವಿವರ ಹಾಗೂ ಎಷ್ಟನೇ ಡೋಸ್​ ಎನ್ನುವುದನ್ನು ನೀಡಿದರೆ ಆ ಬಗ್ಗೆಯೂ ಮಾಹಿತಿ ಲಭ್ಯವಿದೆ.

ಫೋನ್​ ಪೇ: ಕೊರೊನಾ ಲಸಿಕೆ ಲಭ್ಯತೆ ಬಗ್ಗೆ ತಿಳಿಯಲು ಅವಕಾಶ ಫೋನ್​ ಪೇ ಗ್ರಾಹಕರು ಕೂಡಾ ಕೊರೊನಾ ಲಸಿಕೆ ಎಲ್ಲಿ ಲಭ್ಯವಿದೆ ಎನ್ನುವುದನ್ನು ತಿಳಿಯಬಹುದಾಗಿದೆ. ಬಳಕೆದಾರರ ಪ್ರದೇಶದ ಪಿನ್​ ಕೋಡ್, ವಯಸ್ಸು ಹಾಗೂ ಯಾವ ಲಸಿಕೆ ಬೇಕು ಎನ್ನುವುದನ್ನು ನಮೂದಿಸಿ ಹುಡುಕಿದರೆ ಅದಕ್ಕೆ ಅಗತ್ಯವಾದ ಮಾಹಿತಿಯನ್ನು ಫೋನ್​ ಪೇ ಒದಗಿಸಿಕೊಡುತ್ತದೆ.

ಇದನ್ನೂ ಓದಿ: CoWin: ಭಾರತೀಯರು ಸಿದ್ಧಪಡಿಸಿದ ಕೊವಿನ್ ಆಪ್​ನೆಡೆಗೆ ಜಗತ್ತೇ ಕಣ್ಣರಳಿಸಿ ನೋಡುತ್ತಿರುವುದೇಕೆ ಗೊತ್ತೇ?

Published On - 9:25 am, Wed, 7 July 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ