ಫೋನ್ ಖರೀದಿಸುವ ಪ್ಲಾನ್​ನಲ್ಲಿದ್ದರೆ ಸ್ವಲ್ಪ ದಿನ ಕಾಯಿರಿ: ಆಗಸ್ಟ್​ನಲ್ಲಿ ರಿಲೀಸ್ ಆಗಲಿದೆ 8 ಸ್ಮಾರ್ಟ್​​ಫೋನ್ಸ್

| Updated By: Vinay Bhat

Updated on: Aug 02, 2022 | 1:56 PM

ನೀವು ಹಳೆಯ ಫೋನನ್ನು ಖರೀದಿಸುವ ಬದಲು ಕೊಂಚ ದಿನ ಕಾದು ಈ ಅದ್ಭುತ ಫೀಚರ್​ಗಳುಳ್ಳ ಹೊಸ ಮೊಬೈಲ್ ಆಯ್ಕೆ ಮಾಡಬಹುದು. ಈ ತಿಂಗಳು ಬಿಡುಗಡೆ ಆಗುತ್ತಿರುವ ಸ್ಮಾರ್ಟ್​ಫೋನ್​ಗಳ ಬಗೆಗಿನ ಮಾಹಿತಿ ಇಲ್ಲಿದೆ.

ಫೋನ್ ಖರೀದಿಸುವ ಪ್ಲಾನ್​ನಲ್ಲಿದ್ದರೆ ಸ್ವಲ್ಪ ದಿನ ಕಾಯಿರಿ: ಆಗಸ್ಟ್​ನಲ್ಲಿ ರಿಲೀಸ್ ಆಗಲಿದೆ 8 ಸ್ಮಾರ್ಟ್​​ಫೋನ್ಸ್
Smartphones
Follow us on

ನೀವು ಹೊಸ ಸ್ಮಾರ್ಟ್​​ಫೋನ್ (Smartphone) ಖರೀದಿಸುವ ಯೋಜನೆ ಹಾಕಿಕೊಂಡಿದ್ದರೆ ಕೊಂಚ ದಿನ ಕಾಯುವುದು ಒಳಿತು. ಯಾಕೆಂದರೆ ಈ ಆಗಸ್ಟ್ ತಿಂಗಳಲ್ಲಿ ಭಾರತದಲ್ಲಿ ಆಕರ್ಷಕ ಫೋನ್​ಗಳು ಬಿಡುಗಡೆ ಆಗಲಿದೆ. ಸ್ಯಾಮ್​ಸಂಗ್ (Samsung), ಒನ್​ಪ್ಲಸ್, ಐಕ್ಯೂ ಮತ್ತು ಮೋಟೋರೊಲಾ ಕಂಪನಿಯ ಫೋನ್​ಗಳು ಈ ತಿಂಗಳು ಅನಾವರಣಗೊಳ್ಳಲಿದೆ. ಬರೋಬ್ಬರಿ 200 ಮೆಗಾಫಿಕ್ಸೆಲ್​ನ (200 Mega Pixel) ಸ್ಮಾರ್ಟ್​ಫೋನ್ ಕೂಡ ಇದೇ ತಿಂಗಳು ಭಾರತಕ್ಕೆ ಲಗ್ಗೆಯಿಡಲಿದೆ ಎಂದು ಹೇಳಲಾಗಿದೆ. ಹೀಗಾಗಿ ನೀವು ಹಳೆಯ ಫೋನನ್ನು ಖರೀದಿಸುವ ಬದಲು ಕೊಂಚ ದಿನ ಕಾದು ಈ ಅದ್ಭುತ ಫೀಚರ್​ಗಳುಳ್ಳ ಹೊಸ ಮೊಬೈಲ್ ಆಯ್ಕೆ ಮಾಡಬಹುದು. ಹಾಗಾದರೆ ಈ ತಿಂಗಳು ಬಿಡುಗಡೆ ಆಗುತ್ತಿರುವ ಸ್ಮಾರ್ಟ್​ಫೋನ್​ಗಳು ಯಾವುದು?, ಅದರ ವಿಶೇಷತೆ ಏನು? ಎಂಬುದನ್ನು ನೋಡೋಣ.

ಒನ್​ಪ್ಲಸ್ ನಾರ್ಡ್​ 10T: ಈ ಸ್ಮಾರ್ಟ್​​ಫೋನ್ ಆಗಸ್ಟ್ 3ಕ್ಕೆ ಬಿಡುಗಡೆ ಆಗಲಿದೆ. ಇದು 6.7 ಇಂಚಿನ ಅಮೋಲೆಡ್ ಡಿಸ್​ಪ್ಲೇ ಹೊಂದಿದೆ. 16 ಮೆಗಾಫಿಕ್ಸೆಲ್​ನ ಸೆಲ್ಫೀ ಕ್ಯಾಮೆರಾ ನೀಡಲಾಗಿದೆ. ಕ್ವಾಲ್ಕಂ ಸ್ನಾಪ್​ಡ್ರಾಗನ್ 8 Gen 1 ಪ್ರೊಸೆಸರ್ ಅಳವಡಿಸಲಾಗಿದ್ದು 8GB RAM + 128GB ಸ್ಟೋರೇಜ್ ಸಾಮರ್ಥ್ಯದೊಂದಿಗೆ ಬರುತ್ತಿದೆ. 4,800mAh ಬ್ಯಾಟರಿ ಸೌಲಭ್ಯ ಇರಲಿದ್ದು, 150W ಅತ್ಯಂತ ವೇಗದ ಜಾರ್ಜರ್ ಬೆಂಬಲ ಪಡೆದುಕೊಂಡಿದೆ.

ಮೋಟೋ ರೇಜರ್ 2022: ಈ ಸ್ಮಾರ್ಟ್​​ಫೋನ್ ಇದೇ ತಿಂಗಳು ಬಿಡುಗಡೆ ಆಗಲಿದೆ. ಇದು 6.67 ಇಂಚಿನ OLED ಡಿಸ್​ಪ್ಲೇ ಹೊಂದಿದೆ. ಜೊತೆಗೆ 2.65 ಇಂಚಿನ ಸೆಕೆಂಡರಿ ಡಿಸ್​​ಪ್ಲೇ ಕೂಡ ಇರಲಿದೆ. 50 ಮೆಗಾಫಿಕ್ಸೆಲ್​ನ ರಿಯರ್ ಕ್ಯಾಮೆರಾ ಮತ್ತು 32 ಮೆಗಾಫಿಕ್ಸೆಲ್​ನ ಸೆಲ್ಫೀ ಕ್ಯಾಮೆರಾ ನೀಡಲಾಗಿದೆ. 8GB RAM + 128GB, 12GB RAM + 256GB ಮತ್ತು 18GB RAM + 512GB ಸ್ಟೋರೇಜ್ ಸಾಮರ್ಥ್ಯದೊಂದಿಗೆ ಬರುತ್ತಿದೆ. 5G ಸಾಮರ್ಥ್ಯ ಪಡೆದುಕೊಂಡಿರುವ ಈ ಫೋನ್​ನಲ್ಲಿ 3,200mAh ಬ್ಯಾಟರಿ ಸೌಲಭ್ಯ ಇರಲಿದೆ ಎಂಬ ಮಾತುಗಳಿವೆ.

ಇದನ್ನೂ ಓದಿ
WhatsApp: ವಾಟ್ಸ್​ಆ್ಯಪ್​ನಲ್ಲಿ ಬರುತ್ತಿದೆ ಅಚ್ಚರಿ ಫೀಚರ್:​ ಗ್ರೂಪ್ ಅಡ್ಮಿನ್​ಗಳು ಇದನ್ನ ನೋಡಲೇಬೇಕು
Best Laptops: ಭಾರತದಲ್ಲಿ ಸಿಗುತ್ತಿರುವ 30,000 ರೂ. ಒಳಗಿನ ಬೆಸ್ಟ್​ ಲ್ಯಾಪ್​ಟಾಪ್​ಗಳು ಇಲ್ಲಿದೆ ನೋಡಿ
Redmi Note 10 Pro Max: 108MP ಕ್ಯಾಮೆರಾದ ರೆಡ್ಮಿ ಸ್ಮಾರ್ಟ್​​ಫೋನ್ ಮೇಲೆ ಬಂಪರ್ ಡಿಸ್ಕೌಂಟ್: ಈ ಆಫರ್ ಮಿಸ್ ಮಾಡ್ಬೇಡಿ
Oppo A77: ಸದ್ದಿಲ್ಲದೆ ಭಾರತದಲ್ಲಿ ಬಿಡುಗಡೆ ಆಗಿದೆ ಒಪ್ಪೋ A77: ಬೆಲೆ?, ಏನು ಫೀಚರ್ಸ್?

ಇನ್ಫಿನಿಕ್ಸ್ ಹಾಟ್ 12 ಪ್ರೊ: ಇದು 6.7 ಇಂಚಿನ ಫುಲ್​ ಹೆಚ್​ಡಿ ಅಮೋಲೆಡ್ ಡಿಸ್​ಪ್ಲೇ ಹೊಂದಿದೆ. 16 ಮೆಗಾಫಿಕ್ಸೆಲ್​ನ ಸೆಲ್ಫೀ ಕ್ಯಾಮೆರಾ ನೀಡಲಾಗಿದೆ. ಆಕ್ಟಾಕೋರ್ ಮೀಡಿಯಾಟೆಕ್ ಹೀಲಿಯೊ G99 6nm ಪ್ರೊಸೆಸರ್ ಅಳವಡಿಸಲಾಗಿದ್ದು 8GB RAM + 256GB ಸ್ಟೋರೇಜ್ ಸಾಮರ್ಥ್ಯದೊಂದಿಗೆ ಬರುತ್ತಿದೆ. 108 ಮೆಗಾಫಿಕ್ಸೆಲ್​ ಕ್ಯಾಮೆರಾದ ಫೋನ್ ಇದಾಗಿದೆ. 5000mAh ಬ್ಯಾಟರಿ ಸೌಲಭ್ಯ ಇರಲಿದ್ದು, ಫಾಸ್ಟ್ ಜಾರ್ಜರ್ ಬೆಂಬಲ ಪಡೆದುಕೊಂಡಿದೆ.

ಸ್ಯಾಮ್​ಸಂಗ್ ಗ್ಯಾಲಕ್ಸಿ Z ಫ್ಲಿಪ್​ 4: ಈ ಸ್ಮಾರ್ಟ್​​ಫೋನ್ ಆಗಸ್ಟ್ 10ಕ್ಕೆ ಬಿಡುಗಡೆ ಆಗಲಿದೆ. ಇದು 6.7 ಇಂಚಿನ ಫುಲ್​ ಹೆಚ್​ಡಿ ಅಮೋಲೆಡ್ ಡಿಸ್​ಪ್ಲೇ ಹೊಂದಿದೆ. ಕ್ವಾಲ್ಕಂ ಸ್ನಾಪ್​ಡ್ರಾಗನ್ 8 Gen 1+ ಪ್ರೊಸೆಸರ್ ಅಳವಡಿಸಲಾಗಿದ್ದು 8GB RAM + 128GB ಸ್ಟೋರೇಜ್ ಸಾಮರ್ಥ್ಯದೊಂದಿಗೆ ಬರುತ್ತಿದೆ. 3700mAh ಬ್ಯಾಟರಿ ಸೌಲಭ್ಯ ಇರಲಿದ್ದು, ಅತ್ಯಂತ ವೇಗದ ಜಾರ್ಜರ್ ಬೆಂಬಲ ಪಡೆದುಕೊಂಡಿದೆ.

ಐಕ್ಯೂ 9T: ಈ ಸ್ಮಾರ್ಟ್​​ಫೋನ್ 6.78 ಇಂಚಿನ ಫುಲ್​ ಹೆಚ್​ಡಿ ಅಮೋಲೆಡ್ ಡಿಸ್​ಪ್ಲೇ ಹೊಂದಿದೆ. 16 ಮೆಗಾಫಿಕ್ಸೆಲ್​ನ ಸೆಲ್ಫೀ ಕ್ಯಾಮೆರಾ 50MP+ 13MP+ 13MP ರಿಯರ್ ಕ್ಯಾಮೆರಾ ನೀಡಲಾಗಿದೆ. ಕ್ವಾಲ್ಕಂ ಸ್ನಾಪ್​ಡ್ರಾಗನ್ 8+ Gen 1 ಪ್ರೊಸೆಸರ್ ಅಳವಡಿಸಲಾಗಿದ್ದು 8GB RAM ಯಿಂದ 256GB ಸ್ಟೋರೇಜ್ ಸಾಮರ್ಥ್ಯದೊಂದಿಗೆ ಬರುತ್ತಿದೆ. 4,700mAh ಬ್ಯಾಟರಿ ಸೌಲಭ್ಯ ಇರಲಿದ್ದು, ಅತ್ಯಂತ ವೇಗದ ಜಾರ್ಜರ್ ಬೆಂಬಲ ಪಡೆದುಕೊಂಡಿದೆ.

ಸ್ಯಾಮ್​ಸಂಗ್ ಗ್ಯಾಲಕ್ಸಿ Z ಫೋಲ್ಡ್​ 4: ಈ ಸ್ಮಾರ್ಟ್​​ಫೋನ್ ಆಗಸ್ಟ್ 10ಕ್ಕೆ ಬಿಡುಗಡೆ ಆಗಲಿದೆ. ಇದು 7.6 ಇಂಚಿನ ಫುಲ್​ ಹೆಚ್​ಡಿ ಅಮೋಲೆಡ್ ಡಿಸ್​ಪ್ಲೇ ಹೊಂದಿದೆ. ಕ್ವಾಲ್ಕಂ ಸ್ನಾಪ್​ಡ್ರಾಗನ್ 8 Gen 1 ಪ್ರೊಸೆಸರ್ ಅಳವಡಿಸಲಾಗಿದ್ದು 12GB RAM + 256GB ಸ್ಟೋರೇಜ್ ಸಾಮರ್ಥ್ಯದೊಂದಿಗೆ ಬರುತ್ತಿದೆ. 4,400mAh ಬ್ಯಾಟರಿ ಸೌಲಭ್ಯ ಇರಲಿದ್ದು, ಅತ್ಯಂತ ವೇಗದ ಜಾರ್ಜರ್ ಬೆಂಬಲ ಪಡೆದುಕೊಂಡಿದೆ. ಸೆಲ್ಫೀಗಾಗಿ 10 ಮೆಗಾಫಿಕ್ಸೆಲ್, 50MP+ 12MP+ 12MP ರಿಯರ್ ಕ್ಯಾಮೆರಾ ನೀಡಲಾಗಿದೆ.

ರಿಯಲ್ ಮಿ GT ನಿಯೋ 3T: ಈ ಸ್ಮಾರ್ಟ್​​ಫೋನ್ 6.62 ಇಂಚಿನ ಫುಲ್​ ಹೆಚ್​ಡಿ ಅಮೋಲೆಡ್ ಡಿಸ್​ಪ್ಲೇ ಹೊಂದಿದೆ. ಸೆಲ್ಫೀಗಾಗಿ 16 ಮೆಗಾಫಿಕ್ಸೆಲ್, 50MP+ 8MP+ 2MP ರಿಯರ್ ಕ್ಯಾಮೆರಾ ನೀಡಲಾಗಿದೆ. ಆಕ್ಟಾಕೋರ್ ಸ್ನಾಪ್​ಡ್ರಾಗನ್ 870 ಪ್ರೊಸೆಸರ್ ಅಳವಡಿಸಲಾಗಿದ್ದು 8GB RAM ನಿಂದ ಹಿಡಿದು 256GB ಸ್ಟೋರೇಜ್ ಸಾಮರ್ಥ್ಯದೊಂದಿಗೆ ಬರುತ್ತಿದೆ. 5000mAh ಬ್ಯಾಟರಿ ಸೌಲಭ್ಯ ಇರಲಿದ್ದು, ಅತ್ಯಂತ ವೇಗದ ಜಾರ್ಜರ್ ಬೆಂಬಲ ಪಡೆದುಕೊಂಡಿದೆ.

ಮೋಟೋರೊಲಾ ಎಡ್ಜ್ X30 ಪ್ರೊ / ಮೋಟೋ ಎಡ್ಜ್ 30 ಆಲ್ಟ್ರಾ: ಈ ಸ್ಮಾರ್ಟ್​​ಫೋನ್ ಬಗ್ಗೆ ಖಚಿತ ಮಾಹಿತಿ ಬಹಿರಂಗಗೊಂಡಿಲ್ಲ. ಆದರೆ, ಮೂಲಗಳ ಪ್ರಕಾರ ಇದು 6.62 ಇಂಚಿನ ಫುಲ್​ ಹೆಚ್​ಡಿ ಅಮೋಲೆಡ್ ಡಿಸ್​ಪ್ಲೇ ಹೊಂದಿರಲಿದೆ. ಸೆಲ್ಫೀಗಾಗಿ 60 ಮೆಗಾಫಿಕ್ಸೆಲ್, 200MP+ 50MP+ 12MP ರಿಯರ್ ಕ್ಯಾಮೆರಾ ನೀಡಲಾಗಿದೆ. ಇಒದು 200 ಮೆಗಾಫಿಕ್ಸೆಲ್ ಕ್ಯಾಮೆರಾ ಹೊಂದಿರುವ ಮೊದಲ ಸ್ಮಾರ್ಟ್​ಫೋನ್ ಆಗಿದೆ. ಆಕ್ಟಾಕೋರ್ ಸ್ನಾಪ್​ಡ್ರಾಗನ್ 8+ Gen 1 ಪ್ರೊಸೆಸರ್ ಅಳವಡಿಸಲಾಗಿದ್ದು 8GB RAM ನಿಂದ ಹಿಡಿದು 512GB ಸ್ಟೋರೇಜ್ ಸಾಮರ್ಥ್ಯದೊಂದಿಗೆ ಬರುತ್ತಿದೆ. 4,500mAh ಬ್ಯಾಟರಿ ಸೌಲಭ್ಯ ಇರಲಿದ್ದು, ಅತ್ಯಂತ ವೇಗದ ಜಾರ್ಜರ್ ಬೆಂಬಲ ಪಡೆದುಕೊಂಡಿರಲಿದೆ.

Published On - 1:55 pm, Tue, 2 August 22