Best Laptops: ಭಾರತದಲ್ಲಿ ಸಿಗುತ್ತಿರುವ 30,000 ರೂ. ಒಳಗಿನ ಬೆಸ್ಟ್​ ಲ್ಯಾಪ್​ಟಾಪ್​ಗಳು ಇಲ್ಲಿದೆ ನೋಡಿ

| Updated By: Vinay Bhat

Updated on: Aug 02, 2022 | 11:31 AM

Best Laptops Under 30000: ಭಾರತದ ಮಾರುಕಟ್ಟೆಯಲ್ಲಿ ಸಾವಿರಾರು ಲ್ಯಾಪ್​ಟಾಪ್​ಗಳು ಬಿಡುಗಡೆ ಆಗಿವೆ. ಆದರೆ, ಇದರಲ್ಲಿ ಅತ್ಯುತ್ತಮವಾದೂದು ಯಾವುದು ಎಂಬುದೇ ದೊಡ್ಡ ಗೊಂದಲ. ಇಲ್ಲಿದೆ ನೋಡಿ 30,000 ರೂ. ಒಳಗೆ ಸಿಗುತ್ತಿರುವ ಉತ್ತಮ ಲ್ಯಾಪ್​ಟಾಪ್.

Best Laptops: ಭಾರತದಲ್ಲಿ ಸಿಗುತ್ತಿರುವ 30,000 ರೂ. ಒಳಗಿನ ಬೆಸ್ಟ್​ ಲ್ಯಾಪ್​ಟಾಪ್​ಗಳು ಇಲ್ಲಿದೆ ನೋಡಿ
Laptops Under 30K
Follow us on

ಇಂದಿನ ಟೆಕ್ನಾಲಜಿ ಯುಗದಲ್ಲಿ ಸ್ಮಾರ್ಟ್​​ಫೋನ್ (Smartphone) ಎಷ್ಟು ಮುಖ್ಯವೋ ಅದೇರೀತಿ ಲ್ಯಾಪ್​​ಟಾಪ್​ ಕೂಡ ಜನರಿಗೆ ಹತ್ತಿರವಾಗುತ್ತಿದೆ. ಮೊದಲೆಲ್ಲ ಲ್ಯಾಪ್​​ಟಾಪ್ (Laptop) ಖರೀದಿಸುವುದಕ್ಕೆ ಬೆಲೆಯೇ ಒಂದು ದೊಡ್ಡ ವಿಚಾರವಾಗಿರುತ್ತಿತ್ತು. ಆದರೆ ಕಾಲಕ್ರಮೇಣ ಟ್ರೆಂಡ್ (trend) ಬದಲಾಗುತ್ತಾ ಬಂದಿದ್ದು ಈಗಂತು ಅತ್ಯಂತ ಕಡಿಮೆ ಬೆಲೆಯಲ್ಲಿ ಲ್ಯಾಪ್​​ಟಾಪ್​​ಗಳನ್ನು ಖರೀದಿಸಬಹುದು. ಕೊರೊನಾ (Corona) ಬಂದ ಮೇಲಂತು ಲ್ಯಾಪ್​ಟಾಪ್ ಬಳಸುವವರ ಸಂಖ್ಯೆ ಅಧಿಕವಾಗಿದೆ. ಇದಕ್ಕೆ ವರ್ಕ್ ಫ್ರಮ್ ಹೋಮ್ ಕೂಡ ಒಂದು ಕಾರಣ ಎನ್ನಬಹುದು. ಭಾರತದ ಮಾರುಕಟ್ಟೆಯಲ್ಲಿ ಸಾವಿರಾರು ಲ್ಯಾಪ್​ಟಾಪ್​ಗಳು ಬಿಡುಗಡೆ ಆಗಿವೆ. ಆದರೆ, ಇದರಲ್ಲಿ ಅತ್ಯುತ್ತಮವಾದೂದು ಯಾವುದು ಎಂಬುದೇ ದೊಡ್ಡ ಗೊಂದಲ. ಹಾಗಾದರೆ ನೀವು 30,000 ರೂ. ಒಳಗೆ ಸಿಗುತ್ತಿರುವ ಈ ಒಳ್ಳೆಯ ಲ್ಯಾಪ್​ಟಾಪ್​​ಗಳತ್ತ ಖಂಡಿತವಾಗಿಯೂ ಗಮನಹರಿಸಬಹುದು.

ಏಸಸ್ ವಿವೊಬುಕ್ 15 ಲ್ಯಾಪ್‌ಟಾಪ್ ನಿಮ್ಮ ಎಲ್ಲಾ ದೈನಂದಿನ ಕೆಲಸದ ಅಗತ್ಯಗಳನ್ನು ಪೂರೈಸಬಲ್ಲದು. ಇದು 39.62 ಸೆಂಮೀ ಎಲ್ಇಡಿ – ಬ್ಯಾಕ್ಲಿಟ್ ಎಲ್ಸಿಡಿ ಹೊಂದಿದೆ. ಇದು 256GB ಸ್ಟೋರೇಜ್ ಅವಕಾಶ ಹೊಂದಿದೆ. ತುಂಬಾ ತೆಳುವಾದ ಮತ್ತು ಕಡಿಮೆ ತೂಕದ ಲ್ಯಾಪ್‌ಟಾಪ್ ಇದಾಗಿದೆ. ಇದರಲ್ಲಿ, ನಿಮಗೆ ಪ್ರಿ ಲೋಡೆಡ್ ಆಗಿರುವ, ಲೈಫ್ ಟೈಮ್ ವ್ಯಾಲಿಡಿಟಿ ಹೊಂದಿರುವ ವಿಂಡೋಸ್ 11 ಹೋಮ್, ಎಂಎಸ್ ಆಫೀಸ್ ಹೋಮ್ ಸಾಫ್ಟ್‌ವೇರ್​​ಗಳು ಸಿಗುತ್ತವೆ. ಇಂಟೆಲ್ ಸೆಲೆರಾನ್ N4020 ಪ್ರೊಸೆಸರ್ ಅಳವಡಿಸಲಾಗಿದೆ. ಇದರ ಬೆಲೆ 25,990 ರೂ. ಆಗಿದೆ.

ಹೆಚ್​ಪಿ ಕ್ರೋಮ್ ಬುಕ್ 14 ಲ್ಯಾಪ್​ಟಾಪ್ ಟಚ್ ಸ್ಕ್ರೀನ್ ಹೊಂದಿರುವ ಉತ್ತಮ ಗುಣಮಟ್ಟದ ಲ್ಯಾಪ್​ಟಾಪ್ ಆಗಿದೆ. ಇದರಲ್ಲಿ ವಾಯ್ಸ್ ಎನೆಬಲ್ಡ್ ಗೂಗಲ್ ಅಸಿಸ್ಟೆಂಟ್ ಸಹ ಇರುವುದರಿಂದ ನೀವು ನಿಮ್ಮ ಕೈಗಳಿಂದ ಕಂಪ್ಯೂಟರ್ ಟಚ್ ಮಾಡದೆಯೇ ಯಾವುದೇ ಕಮಾಂಡ್ ನೀಡಬಹುದು. ಇದರಲ್ಲಿ, ರಿಮೈಂಡರ್​​ಗಳನ್ನು ಸೆಟ್ ಮಾಡಬಹುದು ಹಾಗೂ ನಿಮ್ಮ ಸ್ಮಾರ್ಟ್ ಹೋಂ ವ್ಯವಸ್ಥೆಯನ್ನು ಕೂಡ ನೀವಿದರ ಮೂಲಕ ನಿಯಂತ್ರಿಸಬಹುದು. 30 ಸಾವಿರ ರೂಪಾಯಿ ಬಜೆಟ್ ಒಳಗಡೆ ಸಿಗುತ್ತಿರುವ ಈ ಲ್ಯಾಪ್​​ಟಾಪ್ 4GB RAM ಮತ್ತು 64GB SSD ಸ್ಟೋರೇಜ್ ಇದೆ. ನೀವು ವರ್ಕ್ ಫ್ರಂ ಹೋಂ ಮಾಡುತ್ತಿದ್ದರೆ ಈ ಲ್ಯಾಪ್​​​ಟಾಪ್ ನಿಮ್ಮ ಕೆಲಸವನ್ನು ಸಾಕಷ್ಟು ಹಗುರಗೊಳಿಸುತ್ತದೆ. ಇದರ ಬೆಲೆ 23,200 ರೂ. ಆಗಿದೆ.

ಇದನ್ನೂ ಓದಿ
Redmi Note 10 Pro Max: 108MP ಕ್ಯಾಮೆರಾದ ರೆಡ್ಮಿ ಸ್ಮಾರ್ಟ್​​ಫೋನ್ ಮೇಲೆ ಬಂಪರ್ ಡಿಸ್ಕೌಂಟ್: ಈ ಆಫರ್ ಮಿಸ್ ಮಾಡ್ಬೇಡಿ
Oppo A77: ಸದ್ದಿಲ್ಲದೆ ಭಾರತದಲ್ಲಿ ಬಿಡುಗಡೆ ಆಗಿದೆ ಒಪ್ಪೋ A77: ಬೆಲೆ?, ಏನು ಫೀಚರ್ಸ್?
WhatsApp: ಸ್ಮಾರ್ಟ್​​ಫೋನ್ ಸ್ವಿಚ್ ಆಫ್ ಆಗಿದ್ದರೂ ವಾಟ್ಸ್​ಆ್ಯಪ್​ನಲ್ಲಿ ಚಾಟ್ ಮಾಡಬಹುದು: ಹೇಗೆ ಗೊತ್ತೇ?
WhatsApp: ವಾಟ್ಸ್​ಆ್ಯಪ್​ನಲ್ಲಿದೆ ನಿಮಗೆ ತಿಳಿದಿಲ್ಲದ ಕ್ವಿಕ್ ರಿಪ್ಲೇ ಆಯ್ಕೆ: ಇದನ್ನು ಬಳಸುವುದು ಹೇಗೆ?

ಏಸರ್ ಅಸ್ಪೀರ್ 3 ಲ್ಯಾಪ್​ಟಾಪ್ 30,000 ರೂ. ಒಳಗೆ ಮಾರಾಟ ಆಗುತ್ತಿರುವ ಬೆಸ್ಟ್​ ಲ್ಯಾಪ್​ಟಾಪ್ ಆಗಿದೆ. ಇದು 1TB ವರೆಗಿನ ಹಾರ್ಡ್​ ಡಿಸ್ಕ್ ಅನ್ನು ಹೊಂದಿದ್ದು 4GB RAM ಹೊಂದಿದೆ. ಹೆಚ್ ಡಿ ಡಿಸ್ ಪ್ಲೇ ಇರುವುದು ಏಸರ್ ಅಸ್ಪೀರ್ 3ಯ ವಿಶೇಷತೆ. ಇದರಲ್ಲಿ ಮೂರು ಯುಎಸ್​ಬಿ ಪೋರ್ಟ್​ ಮತ್ತಿ ಒಂದು HDMI ಪೋರ್ಡ್​ ಇದೆ. ಈ ಲ್ಯಾಪ್​ಟಾಪ್ ಬೆಲೆ 24,990 ರೂ. ಆಗಿದೆ.

ಮೈಕ್ರೋ ಸಾಫ್ಟ್ ಸರ್ಫೇಸ್ ಗೋ (MHN-00015) ಲ್ಯಾಪ್​​ಟಾಪ್ ಇಂಟೆಲ್ ಪ್ರೀಮಿಯಂ ಗೋಲ್ಡ್ ಪ್ರೊಸೆಸರ್ ಜೊತೆಗೆ 4GB RAM ಮತ್ತು 64GB eMMC ಸ್ಟೋರೇಜ್ ವ್ಯವಸ್ಥೆಯನ್ನು ಹೊಂದಿದೆ. ಈ ಮಾಡೆಲ್ ಕಾಂಪ್ಯಾಕ್ಟ್ 10-ಇಂಚಿನ ಟಚ್ ಸ್ಕ್ರೀನ್ ಹೊಂದಿದೆ ಮತ್ತು ಇದರ ಬೆಲೆ 29,990 ರೂಪಾಯಿ. ಇದನ್ನು ಸ್ಟ್ಯಾಂಡ್ ಅಲೋನ್ ಟ್ಯಾಬ್ಲೆಟ್ ನಂತೆ ಇದನ್ನು ಬಳಕೆ ಮಾಡಬಹುದು ಅಥವಾ ಎಕ್ಸ್ಟರ್ನಲ್ ಕೀಬೋರ್ಡ್ ಫೋಲಿಯೋವನ್ನು ಈ ಲ್ಯಾಪ್ ಟಾಪ್ ಗೆ ಕನೆಕ್ಟ್ ಮಾಡಿಕೊಳ್ಳಬಹುದು.

ಏಸಸ್ ನೋಟ್​ಬುಕ್ 12 ಲ್ಯಾಪ್‌ಟಾಪ್ ಇಂಟೆಲ್ ಸೆಲೆರಾನ್ N4500 ಪ್ರೊಸೆಸರ್ ಮತ್ತು 128GB ಸ್ಟೋರೇಜ್ ಹೊಂದಿದೆ. ತುಂಬಾ ತೆಳುವಾದ ಮತ್ತು ಕಡಿಮೆ ತೂಕದ ಲ್ಯಾಪ್‌ಟಾಪ್ ಇದಾಗಿದೆ. ಇದು 11.6 ಡಿಸ್ ಪ್ಲೇ ಹೊಂದಿದೆ. ಟಚ್ ಸ್ಕ್ರೀನ್ ಅವಕಾಶ ಕೂಡ ನೀಡಲಾಗಿದೆ. ಇದರ ಬೆಲೆ 29,990 ರೂ. ಆಗಿದೆ.