AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

iPhone Air: ಆಪಲ್​ಗೆ ದೊಡ್ಡ ಹೊಡೆತ: ಐಫೋನ್ ಏರ್ ಖರೀದಿಸಲು ಜನರೇ ಬರುತ್ತಿಲ್ಲ, ಏಕೆ?

ಐಫೋನ್ ಏರ್ ಆಪಲ್‌ಗೆ ತಲೆನೋವಾಗಿ ಪರಿಣಮಿಸಿದೆ. ಬಳಕೆದಾರರಿಗೆ ಈ ಹೊಸ ಪ್ರಯೋಗವನ್ನು ಇಷ್ಟಪಡುತ್ತಿಲ್ಲ. ಆಪಲ್ ಇತಿಹಾಸದಲ್ಲಿ ಅತ್ಯಂತ ತೆಳುವಾದ ಐಫೋನ್ ಐಫೋನ್ 17 ಸರಣಿಗಿಂತ ಮಾರಾಟದಲ್ಲಿ ಹಿಂದುಳಿದಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 25 ಎಡ್ಜ್‌ನಂತೆಯೇ, ಇದರ ಜಾಗತಿಕ ಬೇಡಿಕೆ ತುಂಬಾ ಕಡಿಮೆಯಾಗಿದೆ.

iPhone Air: ಆಪಲ್​ಗೆ ದೊಡ್ಡ ಹೊಡೆತ: ಐಫೋನ್ ಏರ್ ಖರೀದಿಸಲು ಜನರೇ ಬರುತ್ತಿಲ್ಲ, ಏಕೆ?
Apple Iphone Air
ಮಾಲಾಶ್ರೀ ಅಂಚನ್​
| Edited By: |

Updated on: Oct 19, 2025 | 12:02 PM

Share

ಬೆಂಗಳೂರು (ಅ. 19): ಸ್ಯಾಮ್‌ಸಂಗ್‌ನಂತೆಯೇ, ಇದೀಗ ಆಪಲ್‌ನ (Apple) ಹೊಸ ಪ್ರಯೋಗವೂ ಸಂಪೂರ್ಣ ವಿಫಲವಾಗಿದೆ. ಎರಡೂ ಟೆಕ್ ದೈತ್ಯ ಕಂಪನಿಗಳ ಅತ್ಯಂತ ತೆಳುವಾದ ಫೋನ್‌ಗಳನ್ನು ಬಳಕೆದಾರರು ಇಷ್ಟಪಡುತ್ತಿಲ್ಲ. ಇತ್ತೀಚಿನ ವರದಿಯ ಪ್ರಕಾರ, ಸ್ಯಾಮ್‌ಸಂಗ್ ಕಂಪನಿ ತನ್ನ ಗ್ಯಾಲಕ್ಸಿ ಎಸ್ 26 ಎಡ್ಜ್ ಅನ್ನು ಬಿಡುಗಡೆ ಮಾಡದಿರಲು ನಿರ್ಧರಿಸಿದೆ. ಏತನ್ಮಧ್ಯೆ, ಆಪಲ್ 1 ಮಿಲಿಯನ್ ಯುನಿಟ್ ಐಫೋನ್ ಏರ್ ಉತ್ಪಾದನೆಯನ್ನು ನಿಲ್ಲಿಸಲು ನಿರ್ಧರಿಸಿದೆ. ಗ್ಯಾಲಕ್ಸಿ ಎಸ್ 25 ಎಡ್ಜ್‌ನಂತೆ, ಐಫೋನ್ ಏರ್ ಕೂಡ ಬಳಕೆದಾರರನ್ನು ಆಕರ್ಷಿಸುವಲ್ಲಿ ವಿಫಲವಾಗಿದೆ, ಇದು ಅದರ ಮಾರಾಟದ ಮೇಲೆ ದೊಡ್ಡ ಪರಿಣಾಮ ಬೀರಿದೆ.

1 ಮಿಲಿಯನ್ ಯುನಿಟ್‌ಗಳ ಉತ್ಪಾದನೆ ಸ್ಥಗಿತ

ದಿ ಎಲೆಕ್ ವರದಿಯ ಪ್ರಕಾರ, ಜಪಾನ್‌ನ ಮಿಜುಹೊ ಸೆಕ್ಯುರಿಟಿ ಆಪಲ್ 1 ಮಿಲಿಯನ್ ಯುನಿಟ್ ಐಫೋನ್ ಏರ್ ಉತ್ಪಾದನೆಯನ್ನು ನಿಲ್ಲಿಸಲು ನಿರ್ಧರಿಸಿದೆ ಎಂದು ಹೇಳಿಕೊಂಡಿದೆ. ಉತ್ಪನ್ನಕ್ಕೆ ಕಡಿಮೆ ಬೇಡಿಕೆ ಇರುವುದರಿಂದ ಆಪಲ್ ಈ ನಿರ್ಧಾರ ತೆಗೆದುಕೊಳ್ಳಬೇಕಾಯಿತು. ಈ ಕ್ರಮವು ಈ ವರ್ಷ ಬಿಡುಗಡೆಯಾದ ಐಫೋನ್ 17, ಐಫೋನ್ 17 ಪ್ರೊ ಮತ್ತು ಐಫೋನ್ 17 ಪ್ರೊ ಮ್ಯಾಕ್ಸ್ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ. ಈ ಸರಣಿಯ ಇತರ ಮಾದರಿಗಳ ಉತ್ಪಾದನೆಯನ್ನು 2 ಮಿಲಿಯನ್ ಯುನಿಟ್‌ಗಳಷ್ಟು ಹೆಚ್ಚಿಸಲಾಗುತ್ತದೆ.

ಬೆಲೆ ಏರಿಕೆ ಕಾರಣವೇ?

ಐಫೋನ್ ಏರ್ ಬಿಡುಗಡೆಯಾದ ನಂತರ, ಅದರ ಮಾರಾಟವು ಚೀನಾ ಮಾರುಕಟ್ಟೆಯಲ್ಲಿ ಅತ್ಯಧಿಕವಾಗಿದೆ. ಫೋನ್ ಬಿಡುಗಡೆಯಾದ ತಕ್ಷಣ, ಅದು ಚೀನಾದಲ್ಲಿ ವೇಗವಾಗಿ ಮಾರಾಟವಾಯಿತು. ಆದಾಗ್ಯೂ, ಪಾಶ್ಚಿಮಾತ್ಯ ದೇಶಗಳಲ್ಲಿ ಅದರ ಮಾರಾಟ ಹೇಳಿಕೊಳ್ಳುವಷ್ಟು ಆಗಿಲ್ಲ. ವಿಶ್ಲೇಷಕರ ಪ್ರಕಾರ, ಅದರ ವೈಶಿಷ್ಟ್ಯಗಳಿಗೆ ಹೋಲಿಸಿದರೆ ಫೋನ್‌ನ ಬೆಲೆ ತುಂಬಾ ಹೆಚ್ಚಾಗಿದೆ, ಇದರಿಂದಾಗಿ ಅದು ಐಫೋನ್ ಬಳಕೆದಾರರನ್ನು ಆಕರ್ಷಿಸಲು ಸಾಧ್ಯವಾಗುತ್ತಿಲ್ಲ.

ಇದನ್ನೂ ಓದಿ
Image
ಚಾರ್ಜರ್ ಇಲ್ಲದೆ ಫೋನ್ ಚಾರ್ಜ್ ಮಾಡುವ ಈ 5 ವಿಧಾನ ನಿಮಗೆ ಗೊತ್ತೇ?
Image
ನೀವು ಉಚಿತ ವೈಫೈ ಬಳಸುತ್ತೀರಾ?, ಹಾಗಿದ್ರೆ ಸರ್ಕಾರದ ಈ ಎಚ್ಚರಿಕೆ ಗಮನಿಸಿ
Image
WPS: ನಿಮ್ಮ ವೈಫೈ ರೂಟರ್‌ನಲ್ಲಿ ಈ ರಹಸ್ಯ ಬಟನ್‌ ಏಕಿದೆ ಗೊತ್ತೇ?
Image
ಅಮೆಜಾನ್-ಫ್ಲಿಪ್‌ಕಾರ್ಟ್, ಅಗ್ಗದ iPhone 17 Pro Max ಯಾವುದರಲ್ಲಿ ಲಭ್ಯ?

Tech Tips: ಚಾರ್ಜರ್ ಇಲ್ಲದೆ ಫೋನ್ ಚಾರ್ಜ್ ಮಾಡುವ ಈ 5 ವಿಧಾನ ನಿಮಗೆ ಗೊತ್ತೇ?

ಅತ್ತ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 25 ಎಡ್ಜ್‌ನ ಬೆಲೆಯೂ ತುಂಬಾ ಹೆಚ್ಚಾಗಿದೆ, ಇದರಿಂದಾಗಿ ಫೋನ್‌ನ ಮಾರಾಟವು ನಿರೀಕ್ಷೆಗಿಂತ ಕಡಿಮೆಯಾಗಿದೆ. ಸ್ಯಾಮ್‌ಸಂಗ್ ಮುಂದಿನ ವರ್ಷ ಗ್ಯಾಲಕ್ಸಿ ಎಸ್ 26 ಎಡ್ಜ್ ಬದಲಿಗೆ ಗ್ಯಾಲಕ್ಸಿ ಎಸ್ 26 ಪ್ಲಸ್ ಅನ್ನು ಮರು-ಪ್ರಾರಂಭಿಸಲು ನಿರ್ಧರಿಸಿದೆ. ಈ ಹಿಂದೆ ಕಂಪನಿಯು ಈ ಫೋನ್ ಅನ್ನು ಬಿಡುಗಡೆ ಮಾಡದಿರಲು ನಿರ್ಧರಿಸಿತ್ತು.

ಈ ವರ್ಷ ಬಿಡುಗಡೆಯಾದ ಐಫೋನ್ 17 ಸರಣಿಯು ವಿಶ್ವಾದ್ಯಂತ ಹೆಚ್ಚಿನ ಬೇಡಿಕೆಯನ್ನು ಹೊಂದಿದೆ. ಕಂಪನಿಯ ಇತರ ಐಫೋನ್ ಸರಣಿಗಳಂತೆ, ಈ ಸರಣಿಯು ಸಹ ಬಳಕೆದಾರರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿದೆ. ಆದಾಗ್ಯೂ, ಈ ಸರಣಿಯ ಜೊತೆಗೆ ಬಿಡುಗಡೆಯಾದ ಐಫೋನ್ ಏರ್ ಬಳಕೆದಾರರನ್ನು ಆಕರ್ಷಿಸುವಲ್ಲಿ ವಿಫಲವಾಗಿದೆ. ಈ ದೊಡ್ಡ ಹೊಡೆತದ ನಂತರ ಕಂಪನಿಯು ಮುಂದಿನ ವರ್ಷ ಐಫೋನ್ ಏರ್ 2 ಅನ್ನು ಬಿಡುಗಡೆ ಮಾಡುತ್ತದೆ ಎಂದು ಹೇಳುವುದು ಕಷ್ಟ.

ಭಾರತದಲ್ಲಿ ಐಫೋನ್ ಏರ್ ಬೆಲೆ ಎಷ್ಟು?

  • ಆಪಲ್ ಐಫೋನ್ ಏರ್ 256GB ಬೆಲೆ: 1,19,900
  • ಆಪಲ್ ಐಫೋನ್ ಏರ್ 512GB ಬೆಲೆ: 1,39,900
  • ಆಪಲ್ ಐಫೋನ್ ಏರ್ 1TB ಬೆಲೆ: 1,59,900

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ಗಂಡನ ಪಕ್ಕ ಮಲಗೋದು ಬಿಡಿ, ಹತ್ರ ಕುಳಿತುಕೊಳ್ಳಲೂ ಬಿಡ್ತಿರ್ಲಿಲ್ಲ ಅತ್ತೆ!’
‘ಗಂಡನ ಪಕ್ಕ ಮಲಗೋದು ಬಿಡಿ, ಹತ್ರ ಕುಳಿತುಕೊಳ್ಳಲೂ ಬಿಡ್ತಿರ್ಲಿಲ್ಲ ಅತ್ತೆ!’
14 ವರ್ಷಗಳ ಬಳಿಕ ಟೆಸ್ಟ್ ಪಂದ್ಯ ಗೆದ್ದ ಇಂಗ್ಲೆಂಡ್..!
14 ವರ್ಷಗಳ ಬಳಿಕ ಟೆಸ್ಟ್ ಪಂದ್ಯ ಗೆದ್ದ ಇಂಗ್ಲೆಂಡ್..!
ತಡರಾತ್ರಿ ಯುವತಿಯನ್ನು ಹಿಂಬಾಲಿಸಿಕೊಂಡು ಬಂದು ಪುಂಡರು
ತಡರಾತ್ರಿ ಯುವತಿಯನ್ನು ಹಿಂಬಾಲಿಸಿಕೊಂಡು ಬಂದು ಪುಂಡರು
ಮಕ್ಕಳ‌ ಕಳ್ಳಿಯರು ಎಂದು 7 ಮಹಿಳೆಯರಿಗೆ ಹಿಗ್ಗಾಮುಗ್ಗಾ ಥಳಿಸಿದ ಸಾರ್ವಜನಿಕರು
ಮಕ್ಕಳ‌ ಕಳ್ಳಿಯರು ಎಂದು 7 ಮಹಿಳೆಯರಿಗೆ ಹಿಗ್ಗಾಮುಗ್ಗಾ ಥಳಿಸಿದ ಸಾರ್ವಜನಿಕರು
ಅರಮನೆ ಬಳಿ ಭಾರಿ ಭದ್ರತಾ ಲೋಪ? ಸಿಸಿಟಿವಿ ಕ್ಯಾಮರಾದಲ್ಲಿಲ್ಲ ಸ್ಫೋಟದ ದೃಶ್ಯ!
ಅರಮನೆ ಬಳಿ ಭಾರಿ ಭದ್ರತಾ ಲೋಪ? ಸಿಸಿಟಿವಿ ಕ್ಯಾಮರಾದಲ್ಲಿಲ್ಲ ಸ್ಫೋಟದ ದೃಶ್ಯ!
60 ದಿನಗಳ ಬಳಿಕ ಬ್ಯಾಟ್ ಬೀಸಿದ ಶ್ರೇಯಸ್ ಅಯ್ಯರ್
60 ದಿನಗಳ ಬಳಿಕ ಬ್ಯಾಟ್ ಬೀಸಿದ ಶ್ರೇಯಸ್ ಅಯ್ಯರ್
ಟಾಸ್ಕ್ ಆಡಿಯೇ ಕ್ಯಾಪ್ಟನ್ ಆದ ಗಿಲ್ಲಿ; ನಿಯಮ ಮುರಿದಿದ್ದಕ್ಕೆ ಎಚ್ಚರಿಕೆ
ಟಾಸ್ಕ್ ಆಡಿಯೇ ಕ್ಯಾಪ್ಟನ್ ಆದ ಗಿಲ್ಲಿ; ನಿಯಮ ಮುರಿದಿದ್ದಕ್ಕೆ ಎಚ್ಚರಿಕೆ
ಸರಣಿ ಮನೆಕಳ್ಳತನ, ಪೊಲೀಸರು ಸ್ಪಂದಿಸದೇ ಇದ್ದಾಗ ಜನ ಮಾಡಿದ್ದೇನು ನೋಡಿ!
ಸರಣಿ ಮನೆಕಳ್ಳತನ, ಪೊಲೀಸರು ಸ್ಪಂದಿಸದೇ ಇದ್ದಾಗ ಜನ ಮಾಡಿದ್ದೇನು ನೋಡಿ!
ರಿಕೆಲ್ಟನ್ ಸೆಂಚುರಿ ಸಿಡಿಸಿದರೂ ಸೋತ ಎಂಐ ಪಡೆ
ರಿಕೆಲ್ಟನ್ ಸೆಂಚುರಿ ಸಿಡಿಸಿದರೂ ಸೋತ ಎಂಐ ಪಡೆ
ವಾಹನ ಸವಾರರೇ ಎಚ್ಚರ: ಎಲ್ಲೆಡೆ ಹದ್ದಿನ ಕಣ್ಣಿಟ್ಟಿದ್ದಾರೆ ಟ್ರಾಫಿಕ್ ಪೊಲೀಸ್
ವಾಹನ ಸವಾರರೇ ಎಚ್ಚರ: ಎಲ್ಲೆಡೆ ಹದ್ದಿನ ಕಣ್ಣಿಟ್ಟಿದ್ದಾರೆ ಟ್ರಾಫಿಕ್ ಪೊಲೀಸ್