Breaking News: ವಾಟ್ಸಾಪ್ ಇಂಡಿಯಾ ಮುಖ್ಯಸ್ಥ ಮತ್ತು ಮೆಟಾ ಇಂಡಿಯಾ ಸಾರ್ವಜನಿಕ ನೀತಿ ಮುಖ್ಯಸ್ಥ ರಾಜೀನಾಮೆ
ವಾಟ್ಸಾಪ್ ಇಂಡಿಯಾ ಮುಖ್ಯಸ್ಥರು ಮತ್ತು ಮೆಟಾ ಇಂಡಿಯಾ ಸಾರ್ವಜನಿಕ ನೀತಿ ಮುಖ್ಯಸ್ಥರು ರಾಜೀನಾಮೆ ನೀಡಿದ್ದಾರೆ.
ದೆಹಲಿ: ಮೆಟಾ ಇಂಡಿಯಾ (Meta India) ಮುಖ್ಯಸ್ಥ ಅಜಿತ್ ಮೋಹನ್(Ajit Mohan) ರಾಜೀನಾಮೆ ನೀಡಿದ ಎರಡು ವಾರಗಳ ನಂತರ, ಮೆಟಾ ಇಂಡಿಯಾ ಸಾರ್ವಜನಿಕ ನೀತಿ ಮುಖ್ಯಸ್ಥ ರಾಜೀವ್ ಅಗರ್ವಾಲ್ ಕೂಡ ಇಂದು ರಾಜೀನಾಮೆ ನೀಡಿದ್ದಾರೆ. ವಾಟ್ಸಾಪ್ ಇಂಡಿಯಾ ಮುಖ್ಯಸ್ಥ ಅಭಿಜಿತ್ ಬೋಸ್ (Abhijit Bose) ಕೂಡ ರಾಜೀನಾಮೆ ನೀಡಿದ್ದಾರೆ ಎಂದು ಮೆಟಾ ಹೇಳಿಕೆಯಲ್ಲಿ ತಿಳಿಸಿದೆ. ರಾಜೀವ್ ಅಗರ್ವಾಲ್ (Rajiv Aggarwal) ಅವರು ಮತ್ತೊಂದು ಅವಕಾಶವನ್ನು ಮುಂದುವರಿಸಲು ಮೆಟಾದಲ್ಲಿನ ತಮ್ಮ ಹುದ್ದೆಯಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ, ಮುಂದಿನ ಪ್ರಯತ್ನಗಳಿಗೆ ಅವರಿಗೆ ಶುಭ ಹಾರೈಸುವುದಾಗಿ ಹೇಳಿಕೆ ತಿಳಿಸಿದೆ.ಭಾರತದಲ್ಲಿ ವಾಟ್ಸಾಪ್‌ನ ಮೊದಲ ಮುಖ್ಯಸ್ಥರಾಗಿ ಅಭಿಜಿತ್ ಬೋಸ್ ಅವರ ಅನನ್ಯ ಕೊಡುಗೆಗಳಿಗಾಗಿ ವಾಟ್ಸಾಪ್ ಮುಖ್ಯಸ್ಥ ವಿಲ್ ಕ್ಯಾತ್‌ಕಾರ್ಟ್ ಧನ್ಯವಾದಗಳನ್ನು ಅರ್ಪಿಸಿದರು. “ಅವರ ಉದ್ಯಮಶೀಲ ಪ್ರಯತ್ನವು ನಮ್ಮ ತಂಡವು ಲಕ್ಷಾಂತರ ಜನರು ಮತ್ತು ವ್ಯವಹಾರಗಳಿಗೆ ಪ್ರಯೋಜನಕಾರಿಯಾದ ಹೊಸ ಸೇವೆಗಳನ್ನು ನೀಡಲು ಸಹಾಯ ಮಾಡಿದೆ. ಭಾರತಕ್ಕಾಗಿ ವಾಟ್ಸಾಪ್ ಇನ್ನೂ ಹೆಚ್ಚಿನದನ್ನು ಮಾಡಬಹುದು. ಭಾರತದ ಡಿಜಿಟಲ್ ರೂಪಾಂತರವನ್ನು ಮುಂದುವರಿಸಲು ಸಹಾಯ ಮಾಡುವುದನ್ನು ಮುಂದುವರಿಸಲು ನಾವು ಉತ್ಸುಕರಾಗಿದ್ದೇವೆ ಎಂದು ಕ್ಯಾತ್‌ಕಾರ್ಟ್ ಹೇಳಿದರು.
ಭಾರತದಲ್ಲಿನ ವಾಟ್ಸಾಪ್ ಸಾರ್ವಜನಿಕ ನೀತಿಯ ನಿರ್ದೇಶಕ ಶಿವನಾಥ್ ತುಕ್ರಾಲ್ ಅವರನ್ನು ಈಗ ಭಾರತದ ಎಲ್ಲಾ ಮೆಟಾ ಬ್ರಾಂಡ್‌ಗಳಿಗೆ ಸಾರ್ವಜನಿಕ ನೀತಿಯ ನಿರ್ದೇಶಕರಾಗಿ ನೇಮಿಸಲಾಗಿದೆ. ಕೆಲವು ದಿನಗಳ ಹಿಂದೆಯಷ್ಟೇ ಮೆಟಾ ಜಗತ್ತಿನಾದ್ಯಂತ ಸುಮಾರು 11,000 ಉದ್ಯೋಗಿಗಳನ್ನು ವಜಾಗೊಳಿಸಿತ್ತು.
ಈ ತಿಂಗಳ ಆರಂಭದಲ್ಲಿ, ಭಾರತದಲ್ಲಿನ ಮೆಟಾ ಮುಖ್ಯಸ್ಥ ಅಜಿತ್ ಮೋಹನ್ ರಾಜೀನಾಮೆ ನೀಡಿದ್ದರು.ರಾಜೀನಾಮೆ ನೀಡಿದ ನಂತರ ಅವರು ಏಷ್ಯಾ-ಪೆಸಿಫಿಕ್ ಅಧ್ಯಕ್ಷರಾಗಿ ಪ್ರತಿಸ್ಪರ್ಧಿ ಸ್ನ್ಯಾಪ್‌ಗೆ ಸೇರುತ್ತಿದ್ದಾರೆ ಎಂದು ಘೋಷಿಸಲಾಯಿತು.
Published On - 6:30 pm, Tue, 15 November 22