Google Chrome: ಗೂಗಲ್ ಕ್ರೋಮ್ ಬಳಕೆದಾರರೇ ಎಚ್ಚರ..!
Google Chrome: ಡೆಸ್ಕ್‌ಟಾಪ್ Google Chrome ನಲ್ಲಿ ಕಂಡು ಬಂದಿರುವ ನೂನ್ಯತೆಯಿಂದ ಸುರಕ್ಷತಾ ನಿರ್ಬಂಧವನ್ನು ಬೈಪಾಸ್ ಮಾಡಲು, ಅನಿಯಂತ್ರಿತ ಕೋಡ್ ಅನ್ನು ಕಾರ್ಯಗತಗೊಳಿಸಲು ಸುಲಭವಾಗುತ್ತಿದೆ.
ಡೆಸ್ಕ್‌ಟಾಪ್ ಕಂಪ್ಯೂಟರ್ನಲ್ಲಿ ಗೂಗಲ್ ಕ್ರೋಮ್ ಬಳಸುತ್ತಿರುವವರಿಗೆ ಭಾರತ ಸರ್ಕಾರ ಎಚ್ಚರಿಕೆ ನೀಡಿದೆ. ಗೂಗಲ್ ಕ್ರೋಮ್‌ನಲ್ಲಿ ಕೆಲ ನ್ಯೂನತೆಗಳು ಕಂಡುಬಂದಿದ್ದು, ಈ ಮೂಲಕ ಹ್ಯಾಕರುಗಳು ನಿಮ್ಮ ಸಿಸ್ಟಮ್ ಅನ್ನು ಸುಲಭವಾಗಿ ಹ್ಯಾಕ್ ಮಾಡುವ ಸಾಧ್ಯತೆಯಿದೆ ಎಂದು ಎಚ್ಚರಿಸಿದೆ. ಭಾರತೀಯ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT-IN) ವೆಬ್ ಬ್ರೌಸರ್‌ನಲ್ಲಿನ ದುರುದ್ದೇಶಪೂರಿತ ಕಾರ್ಯಾಚರಣೆಯನ್ನು ಪತ್ತೆ ಹಚ್ಚಿದ್ದು, ಹೀಗಾಗಿ ಡೆಸ್ಕ್ ಟಾಪ್ ಕ್ರೋಮ್ ಬ್ರೌಸರ್ ಬಳಕೆದಾರರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.
ಡೆಸ್ಕ್‌ಟಾಪ್ Google Chrome ನಲ್ಲಿ ಕಂಡು ಬಂದಿರುವ ನೂನ್ಯತೆಯಿಂದ ಸುರಕ್ಷತಾ ನಿರ್ಬಂಧವನ್ನು ಬೈಪಾಸ್ ಮಾಡಲು, ಅನಿಯಂತ್ರಿತ ಕೋಡ್ ಅನ್ನು ಕಾರ್ಯಗತಗೊಳಿಸಲು ಸುಲಭವಾಗುತ್ತಿದೆ. ಹೀಗಾಗಿ ಹಳೆಯ ಗೂಗಲ್ ಕ್ರೋಮ್ ಅನ್ನು ಅಪ್ಗ್ರೇಡ್ ಮಾಡುವಂತೆ CERT-IN ತಿಳಿಸಿದೆ.
ಈ ನ್ಯೂನತೆಗಳು ಡೆಸ್ಕ್ಟಾಪ್ನಲ್ಲಿನ ಹಳೆಯ Google Chrome ನಲ್ಲಿ ಅಸ್ತಿತ್ವದಲ್ಲಿವೆ. ಫೇಸ್‌ಸಿಎಸ್, ಸ್ವಿಫ್ಟ್‌ಶೇಡರ್, ಆಂಗಲ್, ಬ್ಲಿಂಕ್, ಸೈನ್ ಇನ್ ಫ್ಲೋ ಮತ್ತು ಕ್ರೋಮ್ ಓಎಸ್ ಶೆಲ್‌ನ ಉಚಿತ ಬಳಕೆಯಿಂದಾಗಿ ಕ್ರೋಮ್‌ನಲ್ಲಿ ಈ ದೋಷಗಳು ಕಂಡುಬಂದಿವೆ ಎಂದು CERT-IN ತಂಡವು ವರದಿ ಮಾಡಿದೆ.
ಈ ನೂನ್ಯತೆಗಳನ್ನು ಬಳಸಿಕೊಂಡು, ಹ್ಯಾಕರುಗಳು ಬಳಕೆದಾರರನ್ನು ದುರುದ್ದೇಶಪೂರಿತ ವೆಬ್‌ಸೈಟ್‌ಗಳಿಗೆ ನಿರ್ದೇಶಿಸಬಹುದು ಎಂದು ಸಂಸ್ಥೆ ಎಚ್ಚರಿಸಿದೆ. ಅಲ್ಲದೆ ಕಂಪ್ಯೂಟರ್ನಲ್ಲಿ ಭದ್ರತಾ ನಿರ್ಬಂಧಗಳನ್ನು ಬೈಪಾಸ್ ಮಾಡುವ ಮೂಲಕ ಹ್ಯಾಕರುಗಳು ಸಿಸ್ಟಮ್ ಅನ್ನು ನಿಯಂತ್ರಕ್ಕೆ ತೆಗೆದುಕೊಂಡು ಅನಿಯಂತ್ರಿತ ಕೋಡ್ ಅನ್ನು ಕಾರ್ಯಗತಗೊಳಿಸಬಹುದು. ಈ ಮೂಲಕ ನಿಮ್ಮ ಕಂಪ್ಯೂಟರ್ನಲ್ಲಿನ ಸಂಪೂರ್ಣ ಮಾಹಿತಿಗಳನ್ನು ಕಲೆಹಾಕಬಹುದು ಎಂದು ಎಚ್ಚರಿಸಿದ್ದಾರೆ.
ಡೆಸ್ಕ್ ಟಾಪ್ ಗೂಗಲ್ ಕ್ರೋಮ್ನ 105.0.5195.125 ಗಿಂತ ಮುಂಚಿನ ಸಾಫ್ಟ್ವೇರ್ಗಳಲ್ಲಿ ಈ ಸಮಸ್ಯೆ ಕಂಡು ಬರುತ್ತಿದ್ದು, ಹೀಗಾಗಿ ಹಳೆಯ ಗೂಗಲ್ ಕ್ರೋಮ್ ಆವೃತ್ತಿಯನ್ನು ಅನ್‌ಇನ್‌ಸ್ಟಾಲ್ ಮಾಡಿ, ಹೊಸ ಆವೃತ್ತಿಯನ್ನು ಡೌನ್‌ಲೋಡ್ ಮಾಡುವಂತೆ CERT-IN ತಿಳಿಸಿದೆ.