Facebook Ray-Ban Stories: ಸ್ಮಾರ್ಟ್​ ಗ್ಲಾಸ್ ಪರಿಚಯಿಸಿದ ಫೇಸ್​ಬುಕ್: ಇನ್ಮುಂದೆ ಕನ್ನಡಕದಲ್ಲೇ ಎಲ್ಲಾ!

TV9 Digital Desk

| Edited By: Zahir Yusuf

Updated on:Sep 10, 2021 | 8:24 PM

Ray-Ban Smart Glasses: ಈ ಕನ್ನಡಕದ ಬ್ಯಾಟರಿಗಳನ್ನು ಚಾರ್ಜ್ ಮಾಡಲು ವಿಶೇಷವಾಗಿ ವಿನ್ಯಾಸಗೊಳಿಸಲಾದ ಪೋರ್ಟಬಲ್ ಚಾರ್ಜಿಂಗ್ ಕೇಸ್‌ ನೀಡಲಾಗುತ್ತದೆ. ಒಂದು ಬಾರಿ ಪೂರ್ಣ ಚಾರ್ಜ್ ಮಾಡಿಕೊಂಡರೆ ಮೂರು ದಿನಗಳವರೆಗೆ ಬಳಸಬಹುದು. 

Facebook Ray-Ban Stories: ಸ್ಮಾರ್ಟ್​ ಗ್ಲಾಸ್ ಪರಿಚಯಿಸಿದ ಫೇಸ್​ಬುಕ್: ಇನ್ಮುಂದೆ ಕನ್ನಡಕದಲ್ಲೇ ಎಲ್ಲಾ!
ray ban stories


ಬಹುನಿರೀಕ್ಷಿತ ಫೇಸ್​ಬುಕ್​ (Facebook) ಸ್ಮಾರ್ಟ್​ ಗ್ಲಾಸ್ ಬಿಡುಗಡೆಯಾಗಿದೆ. ರೇಬನ್ ಗ್ಲಾಸ್ ಕಂಪೆನಿಯ ಸಹಯೋಗದಲ್ಲಿ ಫೇಸ್​ಬುಕ್ ಹೊರತಂದಿರುವ ಈ ಸ್ಮಾರ್ಟ್​ ಗ್ಲಾಸ್​ಗೆ ರೇಬನ್ ಸ್ಟೊರೀಸ್ (ray ban stories) ಎಂದು ಹೆಸರಿಡಲಾಗಿದೆ. ಇನ್ನು ಈ ಸನ್​ ಗ್ಲಾಸ್​ನಲ್ಲಿ​ ಹಲವು ಆಯ್ಕೆಗಳನ್ನು ನೀಡಿರುವುದು ವಿಶೇಷ. ಅದರಂತೆ ಈ ಸ್ಮಾರ್ಟ್​ ಗ್ಲಾಸ್ ಧರಿಸಿ ಬಳಕೆದಾರರು ಫೋಟೋಗಳು ಮತ್ತು ವೀಡಿಯೊಗಳನ್ನು ಸೆರೆಹಿಡಿಯಬಹುದು. ಹಾಗೆಯೇ, ಸಂಗೀತ ಕೇಳಬಹುದು. ಅದರ ಜೊತೆಗೆ ಫೋನ್ ಕರೆಗಳನ್ನು ಸ್ವೀಕರಿಸುವ ಆಯ್ಕೆಯನ್ನು ಸಹ ಇದರಲ್ಲಿದೆ. ಫೋಟೋ-ವಿಡಿಯೋ ಸೆರೆಹಿಡಿಯಲು ರೇಬನ್ ಸ್ಟೋರೀಸ್ ಸ್ಮಾರ್ಟ್ ಗ್ಲಾಸ್​ನಲ್ಲಿ 5 ಮೆಗಾಪಿಕ್ಸೆಲ್ ಇಂಟಿಗ್ರೇಟೆಡ್ ಕ್ಯಾಮೆರಾವನ್ನು ನೀಡಲಾಗಿದೆ. ಇದರ ಮೂಲಕ ನೀವು ಪ್ರಯಾಣಿಸುತ್ತಿರುವಾಗ ಅಥವಾ ಇನ್ನಿತರ ಸಂದರ್ಭಗಳಲ್ಲಿ ಫೋಟೋ ಮತ್ತು ವೀಡಿಯೋಗಳನ್ನು ಸೆರೆಹಿಡಿಯಬಹುದು.

ಫೇಸ್​ಬುಕ್ ಕಂಪೆನಿ ತಿಳಿಸಿದಂತೆ, ರೇಬನ್ ಸ್ಟೋರೀಸ್​ ಸ್ಮಾರ್ಟ್ ಗ್ಲಾಸ್‌ಗಳು ಬಳಕೆದಾರರಿಗೆ ಅವರು ನೋಡುವಂತೆ ಪ್ರಪಂಚವನ್ನು ಸೆರೆಹಿಡಿಯಲು ಅನುವು ಮಾಡಿಕೊಡಲಿದೆ. ಫೋಟೋಗಳನ್ನು ಕ್ಲಿಕ್ ಮಾಡಲು, ಬಳಕೆದಾರರು ಕ್ಯಾಪ್ಚರ್ ಬಟನ್ ಅಥವಾ ಫೇಸ್‌ಬುಕ್ ಅಸಿಸ್ಟೆಂಟ್ ವಾಯ್ಸ್ ಕಮಾಂಡ್‌ಗಳನ್ನು ಬಳಸಿ ವೀಡಿಯೊಗಳನ್ನು ರೆಕಾರ್ಡ್ ಮಾಡಬಹುದು.

ರೇಬನ್ ಸ್ಟೊರೀಸ್ ಸ್ಮಾರ್ಟ್ ಗ್ಲಾಸ್‌ಗಳ ವೈಶಿಷ್ಟ್ಯಗಳೇನು?
ರೇಬನ್ ಸ್ಟೊರೀಸ್​ನಲ್ಲಿ ಇನ್​ಬಿಲ್ಟ್​ ಸ್ಪೀಕರ್‌ಗಳನ್ನು ನೀಡಲಾಗಿದೆ. ಹಾಗೆಯೇ ಇದು ಮೂರು ಮೈಕ್ರೊಫೋನ್ ಆಡಿಯೋ ಇರೇಗಳನ್ನು ಹೊಂದಿದೆ. ಅದು ಕರೆಗಳು ಮತ್ತು ವೀಡಿಯೊಗಳಿಗೆ ಉತ್ತಮ ಧ್ವನಿ ಮತ್ತು ಧ್ವನಿ ಪ್ರಸರಣವನ್ನು ಒದಗಿಸುತ್ತದೆ. ಕಂಪನಿಯು ಸ್ಮಾರ್ಟ್ ಗ್ಲಾಸ್‌ಗಳಲ್ಲಿ ಬೀಮ್‌ಫಾರ್ಮಿಂಗ್ ತಂತ್ರಜ್ಞಾನವನ್ನು ಬಳಸಿದ್ದು, ಇದರಿಂದ ಕರೆ ಸಮಯದಲ್ಲಿ ಹಿನ್ನೆಲೆ ಶಬ್ದವನ್ನು ಕಡಿಮೆ ಮಾಡುತ್ತದೆ. ಹಾಗೆಯೇ ಕರೆ ಧ್ವನಿಯ ಸ್ಪಷ್ಟತೆಯನ್ನು ಹೆಚ್ಚಿಸುತ್ತದೆ.

ರೇಬನ್ ಸ್ಟೊರೀಸ್ ಸ್ಮಾರ್ಟ್​ ಗ್ಲಾಸ್​ ಬಳಸಬೇಕಿದ್ದರೆ ಫೇಸ್‌ಬುಕ್ ವ್ಯೂ ಆ್ಯಪ್‌ನೊಂದಿಗೆ ಕನೆಕ್ಟ್ ಮಾಡಬೇಕಾಗುತ್ತದೆ. ಸ್ಮಾರ್ಟ್ ಗ್ಲಾಸ್‌ಗಳಲ್ಲಿ ಸೆರೆಹಿಡಿದ ವಿಷಯಗಳನ್ನು Facebook, Instagram, WhatsApp, Messenger, Twitter, TikTok, Snapchat ಅಪ್ಲಿಕೇಶನ್​ಗಳಿಗೆ ಶೇರ್ ಮಾಡಿಕೊಳ್ಳಬಹುದು.

ಸ್ಮಾರ್ಟ್​ ಚಾರ್ಜಿಂಗ್ ವ್ಯವಸ್ಥೆ:

ಇನ್ನು ಈ ಕನ್ನಡಕದ ಬ್ಯಾಟರಿಗಳನ್ನು ಚಾರ್ಜ್ ಮಾಡಲು ವಿಶೇಷವಾಗಿ ವಿನ್ಯಾಸಗೊಳಿಸಲಾದ ಪೋರ್ಟಬಲ್ ಚಾರ್ಜಿಂಗ್ ಕೇಸ್‌ ನೀಡಲಾಗುತ್ತದೆ. ಒಂದು ಬಾರಿ ಪೂರ್ಣ ಚಾರ್ಜ್ ಮಾಡಿಕೊಂಡರೆ ಮೂರು ದಿನಗಳವರೆಗೆ ಬಳಸಬಹುದು.

ರೇಬನ್ ಸ್ಟೊರೀಸ್ ಸ್ಮಾರ್ಟ್​ ಗ್ಲಾಸ್ ಬೆಲೆ:
ಫೇಸ್‌ಬುಕ್ ರೇಬನ್ ಸ್ಟೊರೀಸ್ ಸ್ಮಾರ್ಟ್​ ಗ್ಲಾಸ್​ಗಳ 299 ಯುಎಸ್ ಡಾಲರ್. ಅಂದರೆ ಭಾರತೀಯ ರೂಪಾಯಿ ಮೌಲ್ಯ ಸುಮಾರು 21 ಸಾವಿರ ರೂ. 20 ಮಾಡೆಲ್​ಗಳಲ್ಲಿ ಈ ಸ್ಮಾರ್ಟ್​ ಗ್ಲಾಸ್​ಗಳನ್ನು ರೇಬನ್ ಕಂಪೆನಿ ಪರಿಚಯಿಸಲಿದ್ದು, ಅಮೆರಿಕದ ಆಯ್ದ ರಿಟೇಲ್ ಸ್ಟೋರ್‌ಗಳಲ್ಲಿ, ಹಾಗೆಯೇ ಆಸ್ಟ್ರೇಲಿಯಾ, ಕೆನಡಾ, ಐರ್ಲೆಂಡ್, ಇಟಲಿ ಮತ್ತು ಯುಕೆಗಳಲ್ಲಿ ಮಾತ್ರ ಖರೀದಿಗೆ ಲಭ್ಯವಿದೆ. ಹೀಗಾಗಿ ಭಾರತೀಯ ಬಳಕೆದಾರರು ಸ್ಮಾರ್ಟ್ ಗ್ಲಾಸ್‌ಗಳ ಬಳಕೆಗೆ ಇನ್ನೂ ಸ್ವಲ್ಪ ಸಮಯ ಕಾಯಬೇಕಾಗುತ್ತದೆ.

ಇದನ್ನೂ ಓದಿ: Rashid Khan: ಟಿ20 ವಿಶ್ವಕಪ್​ಗೆ ಅಫ್ಘಾನ್ ತಂಡ ಪ್ರಕಟ: ನಾಯಕತ್ವಕ್ಕೆ ರಶೀದ್ ಖಾನ್ ರಾಜೀನಾಮೆ

ಇದನ್ನೂ ಓದಿ: BMW CE 02: 90 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಬೈಕ್ ಪರಿಚಯಿಸಿದ BMW

ಇದನ್ನೂ ಓದಿ: Crime News: ತಾಯಿಗೆ ಅನೈತಿಕ ಸಂಬಂಧ: ಅದನ್ನೇ ಬಂಡವಾಳ ಮಾಡಿಕೊಂಡ ಮಗಳು

(Facebook launches ray ban stories know price and features)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada