ಹೊಸ ವಂಚನೆ: ನಿಮ್ಮ ಮೊಬೈಲ್​ಗೆ ಬರಬಹುದು ಟ್ರಾಫಿಕ್ ಬಿಲ್ ಪಾವತಿ SMS: ಎಚ್ಚರ

|

Updated on: Dec 30, 2023 | 2:21 PM

Fake Traffic Challan SMS: ನೀವು ಟ್ರಾಫಿಕ್ ಇನ್‌ವಾಯ್ಸ್ ಪಾವತಿ ಎಸ್​ಎಮ್​ಎಸ್​ ಸ್ವೀಕರಿಸಿದ್ದರೆ, ಮೊದಲು ನೀವು ಆ ಮೆಸೇಜ್​ನಲ್ಲಿರುವ ಕೆಲವು ವಿಷಯಗಳಿಗೆ ಗಮನ ಕೊಡಬೇಕು. ಪಾವತಿಗಾಗಿ ಬಂದ ಅಸಲಿಯೋ ಅಥವಾ ನಕಲಿಯೊ ಎಂಬುದನ್ನು ಪರಿಶೀಲಿಸಬೇಕು. ಇಲ್ಲವಾದಲ್ಲಿ ಮೋಸ ಹೋಗುವುದು ಖಚಿತ.

ಹೊಸ ವಂಚನೆ: ನಿಮ್ಮ ಮೊಬೈಲ್​ಗೆ ಬರಬಹುದು ಟ್ರಾಫಿಕ್ ಬಿಲ್ ಪಾವತಿ SMS: ಎಚ್ಚರ
Traffic Challan
Follow us on

ಇಂದಿನ ಡಿಜಿಟಲ್ ಯುಗದಲ್ಲಿ, ವಂಚಕರು ಜನರನ್ನು ಸೋಗು ಹಾಕಲು ಅನೇಕ ಕಳ್ಳ ಮಾರ್ಗಗಳನ್ನು ಕಂಡುಹಿಡಿದಿದ್ದಾರೆ. ಸ್ಕ್ಯಾಮರ್​ಗಳು ಅಮಾಯಕ ಜನರಿಗೆ ನಕಲಿ ಚಲನ್ (Fake Challan) ಸಂದೇಶಗಳನ್ನು ಕಳುಹಿಸಿ ಯಾಮಾರಿಸುತ್ತಿದ್ದಾರೆ. ಈ ಫೇಕ್ ಎಸ್​ಎಮ್​ಎಸ್​ನಲ್ಲಿ ಹಣ ಪಾವತಿ ಮಾಡಲು ಲಿಂಕ್ ಇರುತ್ತದೆ. ನೀವು ಸಹ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದರೆ ಮತ್ತು ಈ ರೀತಿಯ ಚಲನ್ ಸಂದೇಶವನ್ನು ಸ್ವೀಕರಿಸಿದ್ದೀರಿ ಎಂದು ಭಾವಿಸಿದರೆ ಮೋಸ ಹೋಗುವುದು ಖಚಿತ. ಇದಕ್ಕಾಗಿ ನೀವು ಕೆಲವು ಪ್ರಮುಖ ವಿಷಯಗಳತ್ತ ಗಮನ ಹರಿಸಬೇಕು.

ನೀವು ಟ್ರಾಫಿಕ್ ಇನ್‌ವಾಯ್ಸ್ ಪಾವತಿ ಎಸ್​ಎಮ್​ಎಸ್​ ಸ್ವೀಕರಿಸಿದ್ದರೆ, ಮೊದಲು ನೀವು ಆ ಮೆಸೇಜ್​ನಲ್ಲಿರುವ ಕೆಲವು ವಿಷಯಗಳಿಗೆ ಗಮನ ಕೊಡಬೇಕು. ಪಾವತಿಗಾಗಿ ಬಂದ ಅಸಲಿಯೋ ಅಥವಾ ನಕಲಿಯೊ ಎಂಬುದನ್ನು ಪರಿಶೀಲಿಸಬೇಕು. gov.in ಅನ್ನು URL ನಲ್ಲಿ ಬರೆಯಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನೋಡಿರಿ. URL ನಲ್ಲಿ ಬರೆದಿರುವ gov.in ಅನ್ನು ನೀವು ನೋಡದಿದ್ದರೆ ಈ ಸಂದೇಶವು ನಕಲಿ ಎಂದು ಅರ್ಥಮಾಡಿಕೊಳ್ಳಿ.

Tech Tips: ನಿಮ್ಮ 4G ಫೋನ್‌ನಲ್ಲಿ 5G ಸ್ಪೀಡ್​ನಂತೆ ಇಂಟರ್ನೆಟ್ ವರ್ಕ್ ಆಗಬೇಕಾ?: ಇಲ್ಲಿದೆ ಟ್ರಿಕ್

ಇದನ್ನೂ ಓದಿ
ಬೆಲೆ ಕೇವಲ ರೂ. 148, 15 OTT ಪ್ರಯೋಜನ: ಏರ್​ಟೆಲ್​ನಿಂದ ಧಮಾಕ ಆಫರ್
50MP ಸೆಲ್ಫಿ ಕ್ಯಾಮೆರಾ: ಸದ್ದಿಲ್ಲದೆ ರಿಲೀಸ್ ಆಯ್ತು ವಿವೋ V30 ಲೈಟ್ 5G
ಒನ್​ಪ್ಲಸ್​ನ ಈ ಫೋನ್‌ ಮೇಲೆ ಭಾರಿ ರಿಯಾಯಿತಿ: ರೂ. 30 ಸಾವಿರಕ್ಕಿಂತ ಕಡಿಮೆ
ಫ್ಲಿಪ್‌ಕಾರ್ಟ್​ನಲ್ಲಿ ನಡೆಯುತ್ತಿದೆ ವಿಂಟರ್ ಫೆಸ್ಟ್: ಆಫರ್ ಮಿಸ್ ಮಾಡ್ಬೇಡಿ

ಇ-ಚಲನ್ ಪರಿಶೀಲಿಸುವುದು ಹೇಗೆ?

ನಿಮ್ಮ ಕಾರು, ಬೈಕ್ ಅಥವಾ ಸ್ಕೂಟರ್‌ನ ಚಲನ್ ಬಂದಿದೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ಪರಿಶೀಲಿಸಬೇಕಾದರೆ, ನೀವು ಮೊದಲು https://echallan.parivahan.gov.in/index/accused-challan ಗೆ ಭೇಟಿನೀಡಬೇಕು. ನೀವು ಈ ಸರ್ಕಾರಿ ವೆಬ್‌ಸೈಟ್ ಅನ್ನು ತಲುಪಿದ ತಕ್ಷಣ, ಅಲ್ಲಿ ಚಲನ್ ವಿವರಗಳನ್ನು ಕಾಣಬಹುದು. ನಿಮ್ಮ ಬಳಿ ಚಲನ್ ಸಂಖ್ಯೆ ಇಲ್ಲದಿದ್ದರೆ, ವಾಹನದ ಕೊನೆಯ 5 ಸಂಖ್ಯೆಗಳು, ಚೆಸಿಸ್ ಸಂಖ್ಯೆ ಅಥವಾ ಎಂಜಿನ್ ಸಂಖ್ಯೆ ಅಥವಾ ಡಿಎಲ್ ಅನ್ನು ನಮೂದಿಸುವ ಮೂಲಕ ನೀವು ಚಲನ್ ವಿವರಗಳನ್ನು ಪರಿಶೀಲಿಸಬಹುದು. ಮಾಹಿತಿಯನ್ನು ಭರ್ತಿ ಮಾಡಿದ ನಂತರ ಕೆಳಗಿನ ಗೆಟ್ ಡಿಟೇಲ್ಸ್ ಆಯ್ಕೆಯನ್ನು ಟ್ಯಾಪ್ ಮಾಡಿ.

ಚಲನ್ ಪಾವತಿಸಲು https://echallan.parivahan.gov.in ಗೆ ಹೋಗಿ. ನಂತರ ಚಲನ್ ವಿವರಗಳನ್ನು ಪರಿಶೀಲಿಸಿ. ವಿವರಗಳು ಕಾಣಿಸಿಕೊಂಡ ನಂತರ, ಪರದೆಯ ಮೇಲೆ ಗೋಚರಿಸುವ ಪೇ ನೌ ಆಯ್ಕೆಯನ್ನು ಟ್ಯಾಪ್ ಮಾಡಿ.

ನಂತರ ಮೊಬೈಲ್ ಸಂಖ್ಯೆಯನ್ನು ಖಚಿತಪಡಿಸಿ, ನಿಮ್ಮ ಸಂಖ್ಯೆಗೆ OTP ಕಳುಹಿಸಲಾಗುತ್ತದೆ. OTP ಅನ್ನು ನಮೂದಿಸಿ ಮತ್ತು ನೆಕ್ಸ್ಟ್ ಕ್ಲಿಕ್ ಮಾಡಿ, ನಂತರ ಪಾವತಿಗಾಗಿ ರಾಜ್ಯ ಇ-ಚಲನ್ ಪುಟ ತೆರೆಯುತ್ತದೆ. ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮೂಲಕವೂ ಪಾವತಿಸಬಹುದು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ