Flipkart Electronics sale: ಫ್ಲಿಪ್​ಕಾರ್ಟ್​ನಲ್ಲಿ ಎಲೆಕ್ಟ್ರಾನಿಕ್ಸ್ ಸೇಲ್ ಆರಂಭ: ಐಫೋನ್ ಸೇರಿದಂತೆ ಸ್ಮಾರ್ಟ್​ಫೋನ್​ಗಳಿಗೆ ಬಂಪರ್ ಡಿಸ್ಕೌಂಟ್

Flipkart Sale: ಫ್ಲಿಪ್​ಕಾರ್ಟ್​ನಲ್ಲಿ ಬಹುನಿರೀಕ್ಷಿತ ಎಲೆಕ್ಟ್ರಾನಿಕ್ಸ್ ಸೇಲ್​ಗೆ ಚಾಲನೆ ಸಿಕ್ಕಿದೆ. ಈ ಸೇಲ್​ನಲ್ಲಿ ಐಫೋನ್, ಮೋಟೋರೊಲಾ, ಶವೋಮಿ, ಸ್ಯಾಮ್​ಸಂಗ್, ರಿಯಲ್ ಮಿ ಸೇರಿದಂತೆ ಹೆಚ್ಚಿನ ಸ್ಮಾರ್ಟ್​ಫೋನ್​ಗಳು ಆಕರ್ಷಕ ರಿಯಾಯಿತಿ ದರದಲ್ಲಿ ಮಾರಾಟ ಕಾಣುತ್ತಿದೆ.

Flipkart Electronics sale: ಫ್ಲಿಪ್​ಕಾರ್ಟ್​ನಲ್ಲಿ ಎಲೆಕ್ಟ್ರಾನಿಕ್ಸ್ ಸೇಲ್ ಆರಂಭ: ಐಫೋನ್ ಸೇರಿದಂತೆ ಸ್ಮಾರ್ಟ್​ಫೋನ್​ಗಳಿಗೆ ಬಂಪರ್ ಡಿಸ್ಕೌಂಟ್
Flipkart Electronics sale

Updated on: Mar 25, 2023 | 12:52 PM

ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್ (Flipkart) ಹೊಸ ಮೇಳದೊಂದಿಗೆ ಪುನಃ ಬಂದಿದೆ. ಬಹುನಿರೀಕ್ಷಿತ ಎಲೆಕ್ಟ್ರಾನಿಕ್ಸ್ ಸೇಲ್​ಗೆ ಚಾಲನೆ ಸಿಕ್ಕಿದ್ದು ಮಾರ್ಚ್ 30 ರ ವರೆಗೆ ನಡೆಯಲಿದೆ. ಈ ಸೇಲ್​ನಲ್ಲಿ ಐಫೋನ್, ಮೋಟೋರೊಲಾ, ಶವೋಮಿ (Xiaomi), ಸ್ಯಾಮ್​ಸಂಗ್, ರಿಯಲ್ ಮಿ ಸೇರಿದಂತೆ ಹೆಚ್ಚಿನ ಸ್ಮಾರ್ಟ್​ಫೋನ್​ಗಳು ಆಕರ್ಷಕ ರಿಯಾಯಿತಿ ದರದಲ್ಲಿ ಮಾರಾಟ ಕಾಣುತ್ತಿದೆ. ಮುಖ್ಯವಾಗಿ 5G ಬೆಂಬಲ ಪಡೆದುಕೊಂಡಿರುವ ಮೊಬೈಲ್ ಮೇಲೆ ಬಂಪರ್ ಡಿಸ್ಕೌಂಟ್ ಘೋಷಿಸಲಾಗಿದೆ. ಇದರ ಜೊತೆಗೆ ಎಕ್ಸ್​ಚೇಂಜ್ ಆಫರ್, ಬ್ಯಾಂಕ್ ಆಫರ್ ಕೂಡ ನೀಡಲಾಗಿದೆ. ಇಲ್ಲಿದೆ ನೋಡಿ ಎಲೆಕ್ಟ್ರಾನಿಕ್ಸ್ ಸೇಲ್​ನಲ್ಲಿ (Flipkart Electronics sale) ಕಡಿಮೆ ಬೆಲೆಗೆ ಮಾರಾಟ ಆಗುತ್ತಿರುವ ಕೆಲವು ಪ್ರಸಿದ್ಧ ಸ್ಮಾರ್ಟ್​ಫೋನ್​ಗಳು.

ಫ್ಲಿಪ್‌ಕಾರ್ಟ್ ಎಲೆಕ್ಟ್ರಾನಿಕ್ಸ್ ಮಾರಾಟದಲ್ಲಿ ಐಫೋನ್ 13 ಅನ್ನು ನೀವು ಕೇವಲ 61,999 ರೂಪಾಯಿಗಳ ರಿಯಾಯಿತಿ ಬೆಲೆಯಲ್ಲಿ ಖರೀದಿಸಬಹುದು. ಇದು 128GB ಸ್ಟೋರೇಜ್ ರೂಪಾಂತರವಾಗಿದೆ. ಆ್ಯಪಲ್​ನ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಫೋನ್ ಬೆಲೆ 69,900 ರೂ. ಆಗಿದೆ. ಇದರಲ್ಲಿರುವ ಬಹುತೇಕ ಫೀಚರ್ ಹೊಸ ಐಫೋನ್ 14 ರೀತಿಯಲ್ಲೇ ಇದೆ. ಇನ್ನು ಹೆಚ್​ಡಿಎಫ್​ಸಿ ಬ್ಯಾಂಕ್ ಕಾರ್ಡ್‌ಗಳ ಮೇಲೆ 2,000 ರೂಪಾಯಿಗಳ ರಿಯಾಯಿತಿಯ ಕೊಡುಗೆಯೂ ಇದೆ. ಈ ಮೂಲಕ ಐಫೋನ್ 13 ಅನ್ನು ನೀವು 59,999 ರೂ. ಗೆ ಪಡೆದುಕೊಳ್ಳಬಹುದು.

Samsung Galaxy F14 5G: ಸ್ಮಾರ್ಟ್​ಫೋನ್ ಮಾರುಕಟ್ಟೆ ಶಾಕ್: ಕೇವಲ 12,990 ರೂ. ಗೆ ಹೊಸ 5G ಫೋನ್ ರಿಲೀಸ್ ಮಾಡಿದ ಸ್ಯಾಮ್​ಸಂಗ್

ಇದನ್ನೂ ಓದಿ
Tech Tips: ನಿಮ್ಮ ಆಧಾರ್ ಕಾರ್ಡ್ ಮೂಲಕ ಯಾರಾದರು ಸಿಮ್ ಖರೀದಿಸಿದ್ದಾರಾ?: ಹೇಗೆ ತಿಳಿಯುವುದು?
Nothing Ear 2: ಸ್ಟೈಲಿಶ್ ಆಗಿ ಪ್ರೀಮಿಯಂ ಸೌಂಡ್ ಅನುಭವ ಪಡೆಯಲು ನಥಿಂಗ್
Samsung Galaxy M54 5G: ಗ್ಯಾಜೆಟ್ ಲೋಕದಲ್ಲಿ 5G ಯುಗ ಸ್ಯಾಮ್​ಸಂಗ್ ಹೊಸ ಸ್ಮಾರ್ಟ್​ಫೋನ್
Oppo Enco Free 3: ಸೂಪರ್ ವಿನ್ಯಾಸದಲ್ಲಿ ಬಂದಿದೆ ಒಪ್ಪೊ ಎಂಕೊ ಇಯರ್​ಬಡ್ಸ್

ಇತ್ತೀಚಿಗಷ್ಟೆ ಬಿಡುಗಡೆಯಾದ ಸ್ಯಾಮ್​ಸಂಗ್ ಗ್ಯಾಲಕ್ಸಿ S23 ಫೋನ್ ಕೂಡ ಬಂಪರ್ ಡಿಸ್ಕೌಂಟ್​ನಲ್ಲಿ ಮಾರಾಟ ಆಗುತ್ತಿದೆ. ಇದನ್ನು ನೀವು 79,999 ರೂಪಾಯಿಗಳಿಗೆ ಖರೀದಿಸಬಹುದು. HDFC ಬ್ಯಾಂಕ್ ಕಾರ್ಡ್ ಬಳಸಿದರೆ 74,999 ರೂಪಾಯಿಗಳಿಗೆ ಸಿಗಲಿದೆ. ಈ ಆಫರ್ 256GB ಸ್ಟೋರೇಜ್ ಮಾದರಿಗೆ ಇದೆ. ಇದೊಂದು ಉತ್ತಮವಾದ ಆಂಡ್ರಾಯ್ಡ್ ಫೋನ್ ಆಗಿದ್ದು ಕ್ಯಾಮೆರಾ ಅದ್ಭುತವಾಗಿದೆ. ಜೊತೆಗೆ ಬಲಿಷ್ಠ ಪ್ರೊಸೆಸರ್, ದೀರ್ಘ ಸಮಯ ಬಾಳಿಕೆ ಬರುವ ಬ್ಯಾಟರಿ ಆಯ್ಕೆ ಕೂಡ ಇದೆ.

ಫ್ಲಿಪ್‌ಕಾರ್ಟ್ ಎಲೆಕ್ಟ್ರಾನಿಕ್ಸ್ ಸೇಲ್​ನಲ್ಲಿ ರೆಡ್ಮಿ ನೋಟ್ 12 ಪ್ರೊ 5G ಫೋನ್‌ 24,999 ರೂ. ಯಿಂದ ಮಾರಾಟವಾಗುತ್ತಿದೆ. ಹೆಚ್​ಡಿಎಫ್​ಸಿ ಬ್ಯಾಂಕ್ ಕಾರ್ಡ್‌ಗಳಲ್ಲಿ ರೂ. 2,000 ರಿಯಾಯಿತಿಯ ಕೊಡುಗೆ ನೀಡಲಾಗಿದೆ. ಇದೊಂದು ಮಧ್ಯಮ ಶ್ರೇಣಿಯ 5G ಫೋನ್ ಆಗಿದ್ದು ರಿಯಾಯಿತಿಯಲ್ಲಿ 22,999 ರೂ. ಗೆ ಖರೀದಿಸಬಹುದು. ಇದರ ಜೊತೆಗೆ ವಿವೋ V27 ಫ್ಲಿಪ್‌ಕಾರ್ಟ್‌ ಸೇಲ್​ನಲ್ಲಿ 32,999 ರೂ. ಗೆ ಕಾಣಿಸಿಕೊಂಡಿದೆ. ಆದರೆ HDFC ಬ್ಯಾಂಕ್ ಕಾರ್ಡ್‌ಗಳಲ್ಲಿ ರೂ. 2,500 ರಿಯಾಯಿತಿ ಘೋಷಿಸಿದ್ದು ಈ ಮೂಲಕ 30,499 ರೂ. ಗಳಿಗೆ ನಿಮ್ಮದಾಗಿಸಬಹುದು. ಇದು 128GB ಸ್ಟೋರೇಜ್ ಆಯ್ಕೆಯನ್ನ ಹೊಂದಿದೆ.

ಕಳೆದ ವರ್ಷ ಬಿಡುಗಡೆ ಆದ ನಥಿಂಗ್ ಕಂಪನಿಯ ಚೊಚ್ಚಲ ಸ್ಮಾರ್ಟ್​ಫೋನ್ ನಥಿಂಗ್ ಫೋನ್ (1) ಕೇವಲ 29,999 ರೂ. ಗೆ ಸೇಲ್ ಆಗುತ್ತಿದೆ. ಇದರ ವಿನ್ಯಾಸವು ವಿಶಿಷ್ಟ ಮತ್ತು ಆಕರ್ಷಕವಾಗಿದೆ. ನೀವು ಫೋಟೋಗ್ರಫಿಗಾಗಿ ಉತ್ತಮ ಕ್ಯಾಮೆರಾ ಫೋನ್ ಹುಡುಕುತ್ತಿದ್ದರೆ Pixel 6a ಅನ್ನು ಖರೀದಿಸಬಹುದು. ಈ ಫೋನ್ 31,999 ರೂ. ಗಳ ಆರಂಭಿಕ ಬೆಲೆಯೊಂದಿಗೆ ಪಟ್ಟಿ ಮಾಡಲಾಗಿದೆ. ನೀವು HDFC ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿಕೊಂಡು 29,999 ರೂ. ಗೆ ಖರೀದಿಸಬಹುದು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Vinay Bhat

Tv9 ಕನ್ನಡ ಡಿಜಿಟಲ್‌ನಲ್ಲಿ 2021ರ ಜುಲೈನಿಂದ ಕ್ರೀಡಾ ಹಾಗೂ ತಂತ್ರಜ್ಞಾನ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಡಿಜಿಟಲ್ ವಿಭಾಗದಲ್ಲಿ 6 ವರ್ಷ ಅನುಭವ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನವ. ಕ್ರೀಡಾ ಸುದ್ದಿ, ಕ್ರೀಡಾ ಲೇಖನ, ಟೆಕ್ನಾಲಜಿ, ಸಿನಿಮಾ ಸುದ್ದಿ ಬರೆಯುವುದು ನನ್ನ ಆಸಕ್ತದಾಯಕ ವಿಷಯಗಳು.

Read More
Follow Us