ಇಂದಿನ ಡಿಜಿಟಲ್ ಯುಗದಲ್ಲಿ, ಹಣಕಾಸಿನ ವಂಚನೆ ದೊಡ್ಡ ದಂದೆಯಾಗಿ ಮಾರ್ಪಟ್ಟಿದೆ. ಆನ್‌ಲೈನ್ ಬ್ಯಾಂಕಿಂಗ್, ಡಿಜಿಟಲ್ ವಹಿವಾಟುಗಳು ಮತ್ತು ಹೆಚ್ಚಿನ ಹಣಕಾಸಿಸ ಕೆಲಸ ಆನ್‌ಲೈನ್ ಮೂಲಕವೇ ನಡೆಯುತ್ತಿರುವುದರಿಂದ ಸ್ಕ್ಯಾಮರ್‌ಗಳು ಮತ್ತು ವಂಚಕರು ಹೊಸ ಮಾರ್ಗಗಳನ್ನು ಕಂಡುಹಿಡಿದು ಅಮಾಯಕರನ್ನು ವಂಚಿಸುತ್ತಿದ್ದಾರೆ. ಇದನ್ನು ತಡೆಗಟ್ಟಲು ಗೂಗಲ್ ಮುಂದಾಗಿದ್ದು, ತನ್ನ ಡಿಜಿಕವಚ್- DigiKavach ಉಪಕ್ರಮವನ್ನು ಪರಿಚಯಿಸಿದೆ. ಇದು ಸೈಬರ್ ಕ್ರೈಮ್ನಂತಹ ಪ್ರಕರಣಗಳಿಂದ ಮುಕ್ತಿ ನೀಡುತ್ತಿದೆ. ಆರ್ಥಿಕ ವಂಚನೆಯನ್ನು ಗುರುತಿಸಲು ಮತ್ತು ಅಧ್ಯಯನ ಮಾಡಲು ಇದನ್ನು ವಿನ್ಯಾಸಗೊಳಿಸಲಾಗಿದೆ.
ಭಾರತದಲ್ಲಿ ಕೇವಲ 6,499 ರೂ. ಗೆ ಬಿಡುಗಡೆ ಆಗಿದೆ ಹೊಸ ಸ್ಮಾರ್ಟ್ಫೋನ್: ಯಾವುದು ನೋಡಿ
ಜಿ-ಮೇಲ್ ಫಿಶಿಂಗ್: ಇಂದು ಅನೇಕ ಹಣಕಾಸಿನ ವಂಚನೆಯ ಪ್ರಯತ್ನಗಳು ಫೇಕ್ ಇಮೇಲ್‌ಗಳಿಂದ ಹುಟ್ಟಿಕೊಂಡಿವೆ. ಗೂಗಲ್ನ ಇಮೇಲ್ ಸೇವೆಯಾದ ಜಿ-ಮೇಲ್, ಸ್ಪ್ಯಾಮ್, ಫಿಶಿಂಗ್ ಮತ್ತು ಮಾಲ್‌ವೇರ್‌ನ ಶೇಕಡಾ 99.9 ಕ್ಕಿಂತ ಹೆಚ್ಚಿನದನ್ನು ಸ್ವಯಂಚಾಲಿತವಾಗಿ ನಿರ್ಬಂಧಿಸುತ್ತದೆ. ಈ ಮಟ್ಟದ ರಕ್ಷಣೆಯು ಪ್ರಪಂಚದಾದ್ಯಂತ 1.5 ಬಿಲಿಯನ್ ಇನ್‌ಬಾಕ್ಸ್‌ಗಳನ್ನು ಸುರಕ್ಷಿತಗೊಳಿಸುತ್ತದೆ. ಇದರಿಂದ ವ್ಯಕ್ತಿಗಳು ಫಿಶಿಂಗ್ ವಂಚನೆಗಳಿಗೆ ಬಲಿಯಾಗುವ ಸಾಧ್ಯತೆ ಕಡಿಮೆ.
ಗೂಗಲ್ ಪ್ಲೇ ಪ್ರೊಟೆಕ್ಟ್: ಆಂಡ್ರಾಯ್ಡ್ ಬಳಕೆದಾರರಿಗೆ, ಗೂಗಲ್ ಪ್ಲೇ ಪ್ರೊಟೆಕ್ಟ್ ಇದ್ದು, ಇದರ ಮೂಲಕ ಆಂಡ್ರಾಯ್ಡ್ ಸ್ಮಾರ್ಟ್ಫೋನ್ಗಳು, ಡೇಟಾ ಮತ್ತು ಅಪ್ಲಿಕೇಶನ್‌ಗಳನ್ನು ಸುರಕ್ಷಿತವಾಗಿರಿಸಲು ಇದು ತೆರೆಮರೆಯಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತದೆ. ಪ್ರತಿದಿನ, ಇದು 125 ಬಿಲಿಯನ್ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳನ್ನು ಸ್ಕ್ಯಾನ್ ಮಾಡುತ್ತದೆ, ಫೇಕ್ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುವ ಅಪಾಯವನ್ನು ಕಡಿಮೆ ಮಾಡುತ್ತದೆ.
ಗೂಗಲ್ ಪೇ ಸೇಫ್ಟಿ ಅಲರ್ಟ್: ಬಳಕೆದಾರರು ಹಣವನ್ನು ಕಳುಹಿಸುವಾಗ ಮತ್ತು ಸ್ವೀಕರಿಸುವಾಗ ಫಿಶಿಂಗ್ ಮತ್ತು ಇತರ ವಂಚನೆ ಅಪಾಯಗಳನ್ನು ಗುರುತಿಸಲು ಗೂಗಲ್ ಪೇ ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಳ್ಳುತ್ತದೆ. ಪ್ರತಿದಿನ, ಗೂಗಲ್ ಪೇ ತನ್ನ ಬಳಕೆದಾರರಿಗೆ ಸುರಕ್ಷತಾ ಎಚ್ಚರಿಕೆಗಳನ್ನು ಕಳುಹಿಸುತ್ತದೆ, ಮತ್ತು ಅನುಮಾನಾಸ್ಪದ ವಹಿವಾಟುಗಳು ಕಂಡುಬಂದರೆ ಎಚ್ಚರಿಕೆ ನೀಡುತ್ತದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:00 pm, Thu, 19 October 23