ಗೂಗಲ್ ಪಿಕ್ಸೆಲ್ 8 ಸರಣಿ ಬಿಡುಗಡೆಗೆ ದಿನಗಣನೆ: ಈ ಫೋನ್​ನಲ್ಲಿರುವ ಫೀಚರ್ಸ್ ನೋಡಿ

|

Updated on: Sep 30, 2023 | 1:51 PM

Google Pixel 8 and Google Pixel 8 Pro Launching Soon: ಗೂಗಲ್ ಪಿಕ್ಸೆಲ್ 8 ಮತ್ತು ಗೂಗಲ್ ಪಿಕ್ಸೆಲ್ 8 ಪ್ರೊ ಫೋನ್‌ಗಳನ್ನು ವಿಭಿನ್ನ ಬಣ್ಣಗಳಲ್ಲಿ ಬರಲಿದೆ. ಗೂಗಲ್ ಪಿಕ್ಸೆಲ್ 8 ನಾಲ್ಕು ವಿಭಿನ್ನ ಬಣ್ಣಗಳಲ್ಲಿ ,ಪಿಕ್ಸೆಲ್ 8 ಪ್ರೊ ಮೂರು ಬಣ್ಣ ದರೂಪಾಂತರಗಳನ್ನು ಹೊಂದಿರುತ್ತದೆ ಎಂದು ಹೇಳಲಾಗಿದೆ. ಎರಡೂ ಫೋನ್‌ಗಳು ಸ್ಲಿಮ್ ಬೆಜೆಲ್‌ಗಳು ಮತ್ತು ಪಂಚ್-ಹೋಲ್ ನಾಚ್ ವಿನ್ಯಾಸವನ್ನು ಹೊಂದಿವೆ.

ಗೂಗಲ್ ಪಿಕ್ಸೆಲ್ 8 ಸರಣಿ ಬಿಡುಗಡೆಗೆ ದಿನಗಣನೆ: ಈ ಫೋನ್​ನಲ್ಲಿರುವ ಫೀಚರ್ಸ್ ನೋಡಿ
Google Pixel 8 and Google Pixel 8 Pro
Follow us on

ಗೂಗಲ್ ತನ್ನ ಬಹು ನಿರೀಕ್ಷಿತ ಸ್ಮಾರ್ಟ್‌ಫೋನ್ ಪಿಕ್ಸೆಲ್ 8 ಸರಣಿಯನ್ನು (Google Pixel 8 series) ಬಿಡುಗಡೆ ಮಾಡಲು ಸಜ್ಜಾಗಿದೆ. ಮುಂಬರುವ ಗೂಗಲ್ ಪಿಕ್ಸೆಲ್ 8 ಮತ್ತು ಗೂಗಲ್ ಪಿಕ್ಸೆಲ್ 8 ಪ್ರೊ ಅಕ್ಟೋಬರ್ 4 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಹೀಗಿರುವಾಗ ಇದರ ವಿನ್ಯಾಸ, ಫೀಚರ್ಸ್ ಮತ್ತು ವೈಶಿಷ್ಟ್ಯಗಳ ಕುರಿತು ಅನೇಕ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿಶೇಷ ಎಂದರೆ ಮುಂಬರುವ ಎರಡು ಫೋನ್‌ಗಳನ್ನು ವಿಭಿನ್ನ ಬಣ್ಣಗಳಲ್ಲಿ ಬರಲಿದೆ. ಗೂಗಲ್ ಪಿಕ್ಸೆಲ್ 8 ನಾಲ್ಕು ವಿಭಿನ್ನ ಬಣ್ಣಗಳಲ್ಲಿ ,ಪಿಕ್ಸೆಲ್ 8 ಪ್ರೊ ಮೂರು ಬಣ್ಣದ ರೂಪಾಂತರಗಳನ್ನು ಹೊಂದಿರುತ್ತದೆ ಎಂದು ಹೇಳಲಾಗಿದೆ.

ಎರಡೂ ಫೋನ್‌ಗಳು ಸ್ಲಿಮ್ ಬೆಜೆಲ್‌ಗಳು ಮತ್ತು ಪಂಚ್-ಹೋಲ್ ನಾಚ್ ವಿನ್ಯಾಸವನ್ನು ಹೊಂದಿವೆ. ಸೋರಿಕೆಯಾದ ಮಾಹಿತಿಯ ಪ್ರಕಾರ, ಗೂಗಲ್ ಪಿಕ್ಸೆಲ್ 8 ಸ್ಮಾರ್ಟ್​ಫೋನ್ 6.17-ಇಂಚಿನ ಪೂರ್ಣ HD AMOLED ಡಿಸ್ ಪ್ಲೇಯೊಂದಿಗೆ 120HZ ರಿಫ್ರೆಶ್ ದರ ಮತ್ತು 2400×1080 ಪಿಕ್ಸೆಲ್ ರೆಸಲ್ಯೂಶನ್​ನೊಂದಿಗೆ ಬರುತ್ತದೆ. ಮತ್ತೊಂದೆಡೆ, ಪ್ರೀಮಿಯಂ ಫೋನ್ ಪಿಕ್ಸೆಲ್ 8 ಪ್ರೊನಲ್ಲಿ 3120×1440 ಪಿಕ್ಸೆಲ್ ರೆಸಲ್ಯೂಶನ್ ಹೊಂದಿರುವ 6.7-ಇಂಚಿನ OLED ಡಿಸ್ ಪ್ಲೇಯನ್ನು ನೋಡಬಹುದು. ಪಿಕ್ಸೆಲ್ 8 ನಂತೆ, ಪಿಕ್ಸೆಲ್ 8 ಪ್ರೊ ಕೂಡ 120Hz ವರೆಗೆ ರಿಫ್ರೆಶ್ ದರವನ್ನು ಹೊಂದಿರಬಹುದು.

ಫೋಟೋಗ್ರಫಿಗೆ ಮೊಬೈಲ್ ಬೇಕಿದ್ದರೆ ಕೂಡಲೇ ಈ ಸ್ಮಾರ್ಟ್​ಫೋನ್ ಖರೀದಿಸಿ: ಕೇವಲ 16,999 ರೂ.

ಇದನ್ನೂ ಓದಿ
ವಾಷಿಂಗ್ ಮೆಷಿನ್ ಬೇಕೇ?: ಇಂದೇ ಆರ್ಡರ್ ಮಾಡಿ: 20,000 ಕ್ಕಿಂತ ಕಡಿಮೆ ಬೆಲೆ
ಐಫೋನ್ ಮೇಲೆ ಕಣ್ಣಿಟ್ಟಿದ್ದರೆ ಸ್ವಲ್ಪ ದಿನ ಕಾಯಿರಿ
ಹೊಸ ಬಣ್ಣ, ಕಡಿಮೆ ಬೆಲೆ: ಭಾರತದಲ್ಲಿ ವಿಶೇಷವಾಗಿ ಬಿಡುಗಡೆ ಆಯಿತು ಮೋಟೋ E13
ಫೋಟೋಗ್ರಫಿಗೆ ಮೊಬೈಲ್ ಬೇಕಿದ್ದರೆ ಕೂಡಲೇ ಈ ಸ್ಮಾರ್ಟ್​ಫೋನ್ ಖರೀದಿಸಿ

ಪಿಕ್ಸೆಲ್ 8 ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಬರುವ ನಿರೀಕ್ಷೆಯಿದೆ – ಒಂದು 8GB RAM ಮತ್ತು 128 GB ಸಂಗ್ರಹಣೆ ಮತ್ತು ಇನ್ನೊಂದು 8 GB RAM ಮತ್ತು 256 GB ಸಂಗ್ರಹಣೆ. ಪಿಕ್ಸೆಲ್ 8 ಪ್ರೊ ಮೂರು ಸ್ಟೋರೇಜ್ ರೂಪಾಂತರಗಳನ್ನು ಹೊಂದುವ ನಿರೀಕ್ಷೆಯಿದೆ- ಅದು 12GB RAM + 128GB, 12GB RAM + 256GB ಮತ್ತು 12GB RAM + 512GB ಆಗಿದೆ.

ಕ್ಯಾಮೆರಾ ವಿಚಾರಕ್ಕೆ ಬಂದರೆ, ಎರಡೂ ಸ್ಮಾರ್ಟ್‌ಫೋನ್‌ಗಳು ಆಕರ್ಷಕವಾದ 50-ಮೆಗಾಪಿಕ್ಸೆಲ್ ಪ್ರೈಮರಿ ರಿಯರ್ ಕ್ಯಾಮೆರಾವನ್ನು ಸೆಟಪ್ ಅನ್ನು ಹೊಂದಿರಲಿದೆ. ಪಿಕ್ಸೆಲ್ 8 ಅಲ್ಟ್ರಾ-ವೈಡ್-ಆಂಗಲ್ ಶಾಟ್‌ಗಳಿಗಾಗಿ ಸೋನಿ IMX386 ಸಂವೇದಕದೊಂದಿಗೆ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರಬಹುದು. ಪಿಕ್ಸೆಲ್ 8 ಪ್ರೊ 64-ಮೆಗಾಪಿಕ್ಸೆಲ್ ಮತ್ತು 48-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾದೊಂದಿಗೆ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿರುವ ಸಾಧ್ಯತೆಯಿದೆ.

ಇನ್ನೂ ಈ ಎರಡೂ ಸ್ಮಾರ್ಟ್​ಫೋನ್‌ಗಳ ಮುಂಭಾಗದ ಕ್ಯಾಮೆರಾ 11-ಮೆಗಾಪಿಕ್ಸೆಲ್ ಸಂವೇದಕವನ್ನು ಹೊಂದಿರಲಿದೆ ಎಂಬ ಮಾತಿದೆ. ಈ ಹಿಂದೆ ಬಿಡುಗಡೆ ಆದ ಎಲ್ಲ ಪಿಕ್ಸೆಲ್ ಫೋನ್‌ಗಳು ತಮ್ಮ ಕ್ಯಾಮೆರಾ ಕಾರ್ಯಕ್ಷಮತೆಗಾಗಿ ಮೆಚ್ಚುಗೆ ಪಡೆದಿವೆ. ಅದರಂತೆ ಈ ಬಾರಿ ಕೂಡ ಪಿಕ್ಸೆಲ್ 8 ಸರಣಿಯ ಫೋನುಗಳು ಕ್ಯಾಮೆರಾ ಮೂಲಕ ಮ್ಯಾಜಿಕ್ ಮಾಡುವುದು ಖಚಿತ.

ಬೆಲೆಗೆ ಸಂಬಂಧಿಸಿದಂತೆ, ಗೂಗಲ್ ಪಿಕ್ಸೆಲ್ 8 ಫೋನಿನ ನಿಖರ ಬೆಲೆ ಬಹಿರಂಗವಾಗಿಲ್ಲ. ಆದರೆ, ವಿದೇಶದಲ್ಲಿ ಇದರ ಬೆಲೆ ಯುರೋ 799, ಅಂದರೆ ಭಾರತದಲ್ಲಿ ಸುಮಾರು 70,200 ರೂ. ಇರಬಹುದು. ಅಂತೆಯೆ ಗೂಗಲ್ ಪಿಕ್ಸೆಲ್ 8 ಪ್ರೊನ ಆರಂಭಿಕ ಬೆಲೆಯು ಯುರೋ 1099 (ಸುಮಾರು ರೂ. 96,500) ಆಗಿರುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ