ಚಾಟ್​ಜಿಪಿಟಿ-4ಒ ಹಿಂದಿನ ಸೂತ್ರದಾರ ಈ ಭಾರತೀಯ; ಸ್ಯಾಮ್ ಆಲ್ಟ್​ಮ್ಯಾನ್ ಹೆಸರಿಸಿದ ಪ್ರಫುಲ್ಲ ಧರಿವಾಲ ಯಾರು?

Profulla Dariwal behind the GPT-4o: ಸ್ಯಾಮ್ ಆಲ್ಟ್​ಮ್ಯಾನ್ ನೇತೃತ್ವದ ಓಪನ್​ಎಐ ಸಂಸ್ಥೆ ಇತ್ತೀಚೆಗೆ ಜಿಪಿಟಿ-4ಒ ಎಂಬ ಹೊಸ ಎಐ ಮಾಡಲ್ ಬಿಡುಗಡೆ ಮಾಡಿದೆ. ಓಪನ್​ಎಐನ ಓಮ್ನಿ ಟೀಮ್ ಇದನ್ನು ಅಭಿವೃದ್ಧಿಪಡಿಸಿದೆ. ಈ ಓಮ್ನಿ ಟೀಮ್​ನ ಪ್ರಮುಖ ವ್ಯಕ್ತಿ ಭಾರತ ಮೂಲದ ಪ್ರಫುಲ್ಲಾ ಧರಿವಾಲ ಅವರಾಗಿದ್ದಾರೆ. ಸ್ಯಾಮ್ ಆಲ್ಟ್​ಮ್ಯಾನ್ ಕೂಡ ಪ್ರಫುಲ್ಲಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಪ್ರಫುಲ್ಲಾ ಇಲ್ಲದೇ ಹೋಗಿದ್ದರೆ ಜಿಪಿಟಿ 4ಒ ಬಿಡುಗಡೆ ಆಗಲು ಆಗುತ್ತಿರಲಿಲ್ಲ ಎಂದಿದ್ದಾರೆ.

ಚಾಟ್​ಜಿಪಿಟಿ-4ಒ ಹಿಂದಿನ ಸೂತ್ರದಾರ ಈ ಭಾರತೀಯ; ಸ್ಯಾಮ್ ಆಲ್ಟ್​ಮ್ಯಾನ್ ಹೆಸರಿಸಿದ ಪ್ರಫುಲ್ಲ ಧರಿವಾಲ ಯಾರು?
ಜಿಪಿಟಿ-4ಒ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 20, 2024 | 10:41 AM

ನವದೆಹಲಿ, ಮೇ 20: ವಿಶ್ವದ ಅಗ್ರಮಾನ್ಯ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕಂಪನಿ ಎನಿಸಿರುವ ಓಪನ್​ಎಐ ಸಂಸ್ಥೆ (OpenAI) ಕೆಲ ವಾರಗಳ ಹಿಂದೆ ಚಾಟ್​ಜಿಪಿಟಿ-4ಒ (GPT- 4o) ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದೆ. ಇಲ್ಲಿ ಒ ಎಂದರೆ ಓಪನ್​ಎಐನ ಓಮ್ನಿ ತಂಡ. ಈ ಓಮ್ನಿ ತಂಡದಿಂದ ಚಾಟ್​ಜಿಪಿಟಿ-4ನ ಹೊಸ ಸುಧಾರಿತ ಅವತಾರ (model) ರೂಪಿಸಲಾಗಿದೆ. ಹೀಗಾಗಿ, ಇದಕ್ಕೆ 4ಒ ಎಂದು ಹೆಸರಿಡಲಾಗಿದೆ. ಈ ಓಮ್ನಿ ಟೀಮ್​ನ ಪ್ರಮುಖ ವ್ಯಕ್ತಿಗಳಲ್ಲಿ ಭಾರತ ಮೂಲದ ಪ್ರಫುಲ್ಲಾ ಧರಿವಾಲ್ (Prafulla Dariwal) ಅವರಿದ್ದಾರೆ. ಚಾಟ್​ಜಿಪಿಟಿ-4ಒ ಅನ್ನು ಬಿಡುಗಡೆ ಮಾಡುವ ವೇಳೆ ಸ್ಯಾಮ್ ಆಲ್ಟ್​ಮ್ಯಾನ್ ಅವರು ಪ್ರಫುಲ್ಲಾರ ಹೆಸರು ಪ್ರಸ್ತಾಪಿಸಿದ್ದರು.

ಪ್ರಫುಲ್ಲಾ ಧರಿವಾಲ ಅವರ ಪ್ರತಿಭೆ, ದೃಷ್ಟಿಕೋನ, ಹಾಗೂ ದೀರ್ಘಕಾಲದ ಅವರ ಬದ್ಧತೆ ಇಲ್ಲದೇ ಹೋಗಿದ್ದರೆ ಜಿಪಿಟಿ-4ಒ ಬೆಳಕು ಕಾಣುತ್ತಿರಲಿಲ್ಲ. ನಾವು ಕಂಪ್ಯೂಟರ್ ಅನ್ನು ಬಳಸುವ ರೀತಿಯಲ್ಲೇ ಇದು ಹೊಸ ಕ್ರಾಂತಿ ಸೃಷ್ಟಿಸುತ್ತದೆ ಎಂದು ಸ್ಯಾಮ್ ಆಲ್ಟ್​ಮ್ಯಾನ್ ತಮ್ಮ ಎಕ್ಸ್ ಪೋಸ್ಟ್​ನಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: AI ಆತಂಕ ಬೇಡ, ಅರ್ಥ ಮಾಡಿಕೊಳ್ಳಿ: ಭಾರತದ ಯುವ ಟೆಕ್ಕಿಗಳಿಗೆ ಸುಂದರ ಸಲಹೆ ನೀಡಿದ ಪಿಚೈ!

ಪ್ರಫುಲ್ಲಾ ಧರಿವಾಲ್ ಅವರೂ ಜಿಪಿಟಿ 4ಒ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಇದು ಓಮ್ನಿ ಟೀಮ್​ನಿಂದ ಹೊರತರಲಾಗಿರುವ ಮೊದಲ ಮಾಡಲ್ ಎಂದಿದ್ದಾರೆ.

ಸ್ಯಾಮ್ ಆಲ್ಟ್​ಮ್ಯಾನ್ ಮಾಡಿದ ಎಕ್ಸ್ ಪೋಸ್ಟ್

ಯಾರು ಇವರು ಪ್ರಫುಲ್ಲಾ ಧರಿವಾಲ?

ಪುಣೆಯವರಾದ ಪ್ರಫುಲ್ಲಾ ಧರಿವಾಲ 2009ರಲ್ಲಿ ನ್ಯಾಷನಲ್ ಟ್ಯಾಲಂಟ್ ಸರ್ಚ್ ಸ್ಕಾಲರ್​ಶಿಪ್ ಯೋಜನೆಯಲ್ಲಿ ಗೆಲುವು ಸಾಧಿಸಿದ್ದರಲ್ಲದೇ ಚೀನಾದಲ್ಲಿ ನಡೆದ ಇಂಟರ್ನ್ಯಾಷನಲ್ ಆಸ್ಟ್ರಾನಮಿ ಒಲಿಂಪಿಯಾಡ್​ನಲ್ಲಿ ಚಿನ್ನದ ಪದಕಗಳನ್ನು ಗೆದ್ದಿದ್ದರು.

ಇದನ್ನೂ ಓದಿ: ಬ್ರಿಟನ್ ದೊರೆ ಚಾರ್ಲ್ಸ್​ಗಿಂತಲೂ ಹೆಚ್ಚು ಶ್ರೀಮಂತರಾದ ಪ್ರಧಾನಿ ರಿಷಿ ಸುನಕ್, ಅಕ್ಷತಾ ಮೂರ್ತಿ ಕುಟುಂಬ

ಅಮೆರಿಕದ ಪ್ರತಿಷ್ಠಿತ ಎಂಐಟಿಯಲ್ಲಿ 2017ರಲ್ಲಿ ಪದವಿ ಪಡೆದಿದ್ದಾರೆ. ಅದಕ್ಕೆ ಮುನ್ನವೇ 2016ರಲ್ಲಿ ಓಪನ್​ಎಐ ಸಂಸ್ಥೆ ಪ್ರಫುಲ್ಲಾರನ್ನು ರಿಸರ್ಚ್ ಇಂಟರ್ನ್ ಆಗಿ ಸೇರಿಸಿಕೊಂಡಿತು. ಹಂತ ಹಂತರವಾಗಿ ಮೇಲೇರಿದ ಪ್ರಫುಲ್ಲಾ ಈಗ ಓಪನ್​ಎಐನ ಕೋರ್ ಟೀಮ್​ನ ಭಾಗವಾಗಿದ್ದಾರೆ. ಜಿಪಿಟಿ 4ಒ ಅಭಿವೃದ್ಧಿಯಲ್ಲಿ ಮಾತ್ರವಲ್ಲದೇ DALL-E 2 ಎಂಬ ಇಮೇಜ್ ಸೃಷ್ಟಿಸುವ ಆ್ಯಪ್ ಇತ್ಯಾದಿ ಕೆಲ ಪ್ರಮುಖ ಸಾಧನಗಳ ಹಿಂದಿನ ಶಕ್ತಿ ಅವರಾಗಿದ್ದಾರೆ.

ಇನ್ನಷ್ಟು ತಂತ್ರಜ್ಞಾನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ