ಭಾರತಕ್ಕೆ ದೊಡ್ಡದಾಗಿ ಕಮ್​ಬ್ಯಾಕ್ ಮಾಡುತ್ತಿದೆ ಹಾನರ್: 150 ಸರ್ವಿಸ್ ಸೆಂಟರ್ ಓಪನ್

|

Updated on: Aug 28, 2023 | 11:55 AM

ಹಾನರ್ ಭಾರತದಲ್ಲಿ 150 ಸೇವಾ ಕೇಂದ್ರಗಳ ಬೃಹತ್ ಜಾಲವನ್ನು ಪ್ರಾರಂಭಿಸಲು ತಯಾರಿಸಿ ನಡೆಸಿದೆ ಎಂಬ ಸುದ್ದಿ ಬೆಳಕಿಗೆ ಬಂದಿದೆ. ಇತ್ತೀಚಿಗೆ ರಿಯಲ್‌ ಮಿ ಕಂಪನಿಯಿಂದ ಹೊರ ನಡೆದಿರುವ ರಿಯಲ್‌ ಮಿ ಮಾಜಿ ಉಪಾಧ್ಯಕ್ಷ ಮಾಧವ್ ಶೇತ್ ಹಾನರ್ ಜೊತೆ ಕೈಜೋಡಿಸಿದ್ದು, ಭಾರತದಲ್ಲಿ ಹಾನರ್​ನ ಕಾರ್ಯತಂತ್ರವನ್ನು ಬಹಿರಂಗ ಪಡಿಸಿದ್ದಾರೆ.

ಭಾರತಕ್ಕೆ ದೊಡ್ಡದಾಗಿ ಕಮ್​ಬ್ಯಾಕ್ ಮಾಡುತ್ತಿದೆ ಹಾನರ್: 150 ಸರ್ವಿಸ್ ಸೆಂಟರ್ ಓಪನ್
Honor
Follow us on

ಸುಮಾರು ಮೂರು ವರ್ಷಗಳಿಂದ ಭಾರತೀಯ ಮಾರುಕಟ್ಟೆಯಿಂದ ದೂರ ಉಳಿದಿದ್ದ ಪ್ರಸಿದ್ಧ ಹಾನರ್ (Honor) ಕಂಪನಿ ಇದೀಗ ಭರ್ಜರಿ ಆಗಿ ಕಮ್​ಬ್ಯಾಕ್ ಮಾಡಲು ತಯಾರಾಗುತ್ತಿದೆ. ಈಗಾಗಲೇ ತನ್ನ 200 ಮೆಗಾ ಪಿಕ್ಸೆಲ್​ನ ಹಾನರ್ 90 ಸರಣಿಯ ಸ್ಮಾರ್ಟ್​ಫೋನ್ ಮೂಲಕ ಭಾರತಕ್ಕೆ ಬರುವುದು ಬಹುತೇಕ ಖಚಿತವಾಗಿದೆ. ಇದರ ಜೊತೆಗೆ ಇನ್ನೊಂದಿಷ್ಟು ಮಾಹಿತಿ ತಿಳಿದುಬಂದಿದೆ. ಇದೀಗ ಹಾನರ್ ಭಾರತದಲ್ಲಿ 150 ಸೇವಾ ಕೇಂದ್ರಗಳ ಬೃಹತ್ ಜಾಲವನ್ನು ಪ್ರಾರಂಭಿಸಲು ತಯಾರಿಸಿ ನಡೆಸಿದೆ ಎಂಬ ಸುದ್ದಿ ಬೆಳಕಿಗೆ ಬಂದಿದೆ.

ಇತ್ತೀಚಿಗೆ ರಿಯಲ್‌ ಮಿ ಕಂಪನಿಯಿಂದ ಹೊರ ನಡೆದಿರುವ ರಿಯಲ್‌ ಮಿ ಮಾಜಿ ಉಪಾಧ್ಯಕ್ಷ ಮಾಧವ್ ಶೇತ್ ಹಾನರ್ ಜೊತೆ ಕೈಜೋಡಿಸಿದ್ದು, ಭಾರತದಲ್ಲಿ ಹಾನರ್​ನ ಕಾರ್ಯತಂತ್ರವನ್ನು ಬಹಿರಂಗ ಪಡಿಸಿದ್ದಾರೆ. ಹಾನರ್ 90 ಭಾರತದಲ್ಲಿ ಬಿಡುಗಡೆ ಆಗುವುದನ್ನೂ ಖಚಿತ ಪಡಿಸಿದ್ದಾರೆ. ಭಾರತದಲ್ಲಿನ ಹಾನರ್ ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್ 13 ನೊಂದಿಗೆ ಚಾಲಿತವಾಗುತ್ತವೆ ಮತ್ತು ಗೂಗಲ್ ಮ್ಯಾಪ್ಸ್, ಡ್ರೈವ್, ಮೀಟ್ ಸೇರಿದಂತೆ ಗೂಗಲ್ ಅಪ್ಲಿಕೇಶನ್‌ಗಳನ್ನು ಹೊಂದಿರುತ್ತದೆ ಎಂದು ಮಾಧವ್ ಹೇಳಿದ್ದಾರೆ.

ಬರುತ್ತಿದೆ ಮೊಟೊರೊಲಾ ಎಡ್ಜ್ 40 ಸ್ಮಾರ್ಟ್‌ಫೋನ್​ನ ನಿಯೋ ವರ್ಷನ್: ಧೂಳೆಬ್ಬಿಸುವುದು ಖಚಿತ

ಇದನ್ನೂ ಓದಿ
ಸ್ಮಾರ್ಟ್​ಫೋನ್ ಬ್ಯಾಟರಿ ಏಕೆ ಉಬ್ಬುತ್ತದೆ ಗೊತ್ತೇ?: ಕಾರಣ ತಿಳಿದರೆ ಶಾಕ್ ಆಗುತ್ತೀರಿ..
ಬೆಲೆ ಇಳಿಕೆ: ಕಡಿಮೆ ಬೆಲೆಗೆ ಖರೀದಿಸಿ ಒನ್‌ಪ್ಲಸ್‌ ನಾರ್ಡ್‌ CE 2 ಲೈಟ್‌ 5G ಫೋನ್: ಆಫರ್ ಮಿಸ್ ಮಾಡ್ಬೇಡಿ
ತಕ್ಷಣವೇ ವಾಟ್ಸ್​ಆ್ಯಪ್ ಅಪ್ಡೇಟ್ ಮಾಡಿ: ಬಂದಿದೆ HD ವಿಡಿಯೋ ಫೀಚರ್
ಕಡಿಮೆ ಬೆಲೆಯ 5G ಫೋನ್​ಗಳು: ಇಲ್ಲಿದೆ 15,000 ರೂ. ಒಳಗಿನ ಬೆಸ್ಟ್ ಸ್ಮಾರ್ಟ್​ಫೋನ್ಸ್

ಈ ಮೂಲಕ ಹಾನರ್ ಎರಡು ವರ್ಷಗಳ ಆಂಡ್ರಾಯ್ಡ್ ನವೀಕರಣಗಳನ್ನು ಮತ್ತು ಮೂರು ವರ್ಷಗಳ ಭದ್ರತಾ ನವೀಕರಣಗಳನ್ನು ಖಾತ್ರಿಪಡಿಸಿದೆ. ಹಾನರ್ 90 ಈಗಾಗಲೇ ವಿದೇಶದಲ್ಲಿ ಬಿಡುಗಡೆಗೊಂಡಿದ್ದರೂ ಇದು ಭಾರತೀಯ ರೂಪಾಂತರಕ್ಕೆ ಕೆಲವು ಕಸ್ಟಮೈಸೇಶನ್‌ಗಳನ್ನು ನಿರೀಕ್ಷಿಸಬಹುದು. ವದಂತಿಗಳ ಪ್ರಕಾರ, ಹಾನರ್ 90 ಬೆಲೆ ಭಾರತದಲ್ಲಿ ಸುಮಾರು 40,000 ರೂ. ಎನ್ನಲಾಗಿದೆ.

ಹಾನರ್ 90 ಫೋನಿನಲ್ಲಿ ಪ್ರಾಥಮಿಕ ಕ್ಯಾಮೆರಾ ಬರೋಬ್ಬರಿ 200-ಮೆಗಾಪಿಕ್ಸೆಲ್ ಇರಲಿದೆ. ಜೊತೆಗೆ 12-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ ಮತ್ತು 2-ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್‌ನೊಂದಿಗೆ ಜೋಡಿಸಲಾಗಿದೆ. ಸೆಲ್ಫಿಗಾಗಿ ಮುಂಭಾಗದಲ್ಲಿ 50-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇವುಗಳು ಸುಧಾರಿತ ಕ್ಯಾಮರಾ ತಂತ್ರಜ್ಞಾನದಿಂದ ಕೂಡಿವೆಯಂತೆ. ಜೊತೆಗೆ ಅಮೊಲೊಡ್, ಕ್ವಾಡ್-ಕರ್ವ್, ಫ್ಲೋಟಿಂಗ್ ಡಿಸ್ ಪ್ಲೇ ಮೂಲಕ ಬರಲಿದೆ.

ಹಾನರ್ 90 ಬಳಿಕ ಕಂಪನಿಯು ಹಾನರ್ X ಸರಣಿಯನ್ನು ಬಿಡುಗಡೆ ಮಾಡಲಿದೆ. ಇದು ಮಧ್ಯ-ಶ್ರೇಣಿಯವರಿಗೆ ಹೇಳಿ ಮಾಡಿಸಿದ ಫೋನ್ ಆಗಿದೆ. ಜೊತೆಗೆ ಹೈ-ಎಂಡ್ ಮಿಡ್-ರೇಂಜರ್‌ಗಳ ಕಂಪನಿಯ ಫೋಲ್ಡಬಲ್ ಫೋನ್‌ಗಳನ್ನು ಒಳಗೊಂಡಿರುವ ಹಾನರ್ ಮ್ಯಾಜಿಕ್ ಸರಣಿಯನ್ನು ಸಹ ನಿರೀಕ್ಷಿಸಬಹುದು. TWS, ಟ್ಯಾಬ್ಲೆಟ್‌ಗಳು ಸೇರಿದಂತೆ ಪೂರಕ ಉತ್ಪನ್ನಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆಯಂತೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ