ಬಲಿಷ್ಠ ಬ್ಯಾಟರಿ, ಪ್ರೊಸೆಸರ್, ಆಕರ್ಷಕ ಕ್ಯಾಮೆರಾ: ಹಾನರ್​ನಿಂದ ಅದ್ಭುತ ಸ್ಮಾರ್ಟ್​ಫೋನ್ ಬಿಡುಗಡೆ

|

Updated on: Oct 19, 2023 | 11:27 AM

Honor Play 8T Smartphone Launched: ಹಾನರ್ ಕಂಪನಿಯ ಹೊಸ ಹಾನರ್ ಪ್ಲೇ 8T ಸ್ಮಾರ್ಟ್​ಫೋನ್ ಬಿಡುಗಡೆ ಆಗಿದೆ. ಇದು ಮೀಡಿಯಾಟೆಕ್ ಡೈಮೆನ್ಸಿಟಿ 6080 SoC ನಲ್ಲಿ ಕಾರ್ಯನಿರ್ವಹಿಸುತ್ತದೆ. ಬಲಿಷ್ಠವಾದ ಬ್ಯಾಟರಿ, ಆಕರ್ಷಕ ಕ್ಯಾಮೆರಾ ಆಯ್ಕೆ ಕೂಡ ಇದೆ. ಈ ಫೋನಿನ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಬಲಿಷ್ಠ ಬ್ಯಾಟರಿ, ಪ್ರೊಸೆಸರ್, ಆಕರ್ಷಕ ಕ್ಯಾಮೆರಾ: ಹಾನರ್​ನಿಂದ ಅದ್ಭುತ ಸ್ಮಾರ್ಟ್​ಫೋನ್ ಬಿಡುಗಡೆ
Honor 8T
Follow us on

ಪ್ರಸಿದ್ಧ ಹಾನರ್ ಕಂಪನಿ ಕಳೆದ ಕೆಲವು ತಿಂಗಳುಗಳಿಂದ ಒಂದರ ಹಿಂದೆ ಒಂದರಂತೆ ಆಕರ್ಷಕ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡುತ್ತಿದೆ. ಇದೀಗ ಹೊಸದಾಗಿ ಹಾನರ್ ಪ್ಲೇ 8T (Honor Play 8T) ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಈ ಫೋನ್ ಚೀನಾದಲ್ಲಿ ಅನಾವರಣಗೊಂಡಿದೆ. ಹೊಸ ಹಾನರ್ ಪ್ಲೇ ಸರಣಿಯ ಸ್ಮಾರ್ಟ್‌ಫೋನ್ ಇದಾಗಿದ್ದು ಹಾನರ್ ಪ್ಲೇ 7T ಯ ಅಪ್‌ಗ್ರೇಡ್‌ಗಳೊಂದಿಗೆ ಬಂದಿದೆ. ಮೀಡಿಯಾಟೆಕ್ ಡೈಮೆನ್ಸಿಟಿ 6080 SoC ನಲ್ಲಿ ಕಾರ್ಯನಿರ್ವಹಿಸುತ್ತದೆ. ಬಲಿಷ್ಠವಾದ ಬ್ಯಾಟರಿ, ಆಕರ್ಷಕ ಕ್ಯಾಮೆರಾ ಆಯ್ಕೆ ಕೂಡ ಇದೆ. ಈ ಫೋನಿನ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಹಾನರ್ ಪ್ಲೇ 8T ಬೆಲೆ, ಲಭ್ಯತೆ:

ಹಾನರ್ ಪ್ಲೇ 8T ಸ್ಮಾರ್ಟ್​ಫೋನ್ ಒಟ್ಟು ಎರಡು ಸ್ಟೋರೇಜ್ ಆಯ್ಕೆಯಲ್ಲಿ ಲಭ್ಯವಿದೆ. ಇದರ 8GB RAM + 256GB ಸ್ಟೋರೇಜ್ ರೂಪಾಂತರಕ್ಕೆ CNY 1,099, ಅಂದರೆ ಭಾರತದಲ್ಲಿ ಇದರ ಬೆಲೆ ಸುಮಾರು 12,500 ರೂ. ಎನ್ನಬಹುದು. ಅಂತೆಯೆ ಇದರ ಟಾಪ್-ಎಂಡ್ 12GB RAM + 256GB ಸ್ಟೋರೇಜ್ ಮಾಡೆಲ್ ಬೆಲೆ CNY 1,299 (ಸುಮಾರು ರೂ. 14,700). ಇದು ಪ್ರಸ್ತುತ ಚೀನಾದಲ್ಲಿ ಫ್ಯಾಂಟಸಿ ನೈಟ್ ಬ್ಲ್ಯಾಕ್, ಇಂಕ್ ಜೇಡ್ ಗ್ರೀನ್ ಮತ್ತು ಸ್ಟ್ರೀಮಿಂಗ್ ಸಿಲ್ವರ್ (ಚೀನೀ ಭಾಷೆಯಿಂದ ಅನುವಾದಿಸಲಾಗಿದೆ) ಬಣ್ಣದ ಆಯ್ಕೆಗಳಲ್ಲಿ ಹಾನರ್ ಮಾಲ್ ಸ್ಟೋರ್ ಮೂಲಕ ಖರೀದಿಗೆ ಲಭ್ಯವಿದೆ.

Hamas-Israel War: ಭಾರತದದಲ್ಲಿ ಸದ್ಯದಲ್ಲೇ ದುಬಾರಿಯಾಗಲಿದೆ ಇಂಟರ್ನೆಟ್?: ಕಾರಣ ಇಲ್ಲಿದೆ

ಇದನ್ನೂ ಓದಿ
ಮಾಲ್ವೇರ್ ದಾಳಿಯಿಂದ ಡಿಜಿಟಲ್ ಸಾಧನಗಳ ರಕ್ಷಣೆಗೆ ಸಿಎಸ್​ಕೆ ಸ್ಥಾಪನೆ
ಭಾರತೀಯ ಮಾರುಕಟ್ಟೆಗಿಂದು ಸ್ಯಾಮ್​ಸಂಗ್ ಕಂಪನಿಯ ಗ್ಯಾಲಕ್ಸಿ A05s ಲಗ್ಗೆ
ಭಾರತದಲ್ಲಿ ಕೇವಲ 6,499 ರೂ. ಗೆ ಬಿಡುಗಡೆ ಆಗಿದೆ ಹೊಸ ಫೋನ್: ಯಾವುದು?
ಕೊನೆಗೂ ಐಫೋನ್ 15 ಫೋನಿಗೆ ಬಂತು ಡಿಸ್ಕೌಂಟ್: ಆ್ಯಪಲ್​ನಿಂದ ದೀಪಾವಳಿ ಸೇಲ್

ಭಾರತ ಸೇರಿದಂತೆ ಇತರ ಮಾರುಕಟ್ಟೆಗಳಲ್ಲಿ ಹಾನರ್ ಪ್ಲೇ 8T ಮುಂದಿನ ದಿನಗಳಲ್ಲಿ ಅನಾವರಣಗೊಳ್ಳಬಹುದು.

ಹಾನರ್ ಪ್ಲೇ 8T ಫೀಚರ್ಸ್:

ಡ್ಯುಯಲ್-ಸಿಮ್ (ನ್ಯಾನೊ) ಹಾನರ್ ಪ್ಲೇ 8T ಆಂಡ್ರಾಯ್ಡ್ 13 -ಆಧಾರಿತ MagicOS 7.2 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 6.8-ಇಂಚಿನ ಪೂರ್ಣ-HD+ (1,080×2,412 ಪಿಕ್ಸೆಲ್‌ಗಳು) TFT LCD ಡಿಸ್ಪ್ಲೇ ಜೊತೆಗೆ 90Hz ರಿಫ್ರೆಶ್ ರೇಟ್, 850 nits ಬ್ರೈಟ್​ನೆಸ್, ಮತ್ತು 20:09 ಅನುಪಾತ ಹೊಂದಿದೆ. ಪಂಚ್ ಹೋಲ್ ಕಟೌಟ್ ನೀಡಲಾಗಿದೆ. ಈ ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6080 SoC ಯಲ್ಲಿ ಕಾರ್ಯನಿರ್ವಹಿಸುತ್ತದೆ, ಇದು 12GB ಯ RAM ಮತ್ತು Mali-G57 GPU ನೊಂದಿಗೆ ಜೋಡಿಸಲ್ಪಟ್ಟಿದೆ. ಮೆಮೊರಿಯನ್ನು ಹೆಚ್ಚುವರಿ 8GB ವರೆಗೆ ವಿಸ್ತರಿಸಬಹುದು.

ಕ್ಯಾಮೆರಾ ವಿಚಾರಕ್ಕೆ ಬಂದರೆ, ಹಾನರ್ ಪ್ಲೇ ಡ್ಯುಯಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು f/1.8 ಅಪರ್ಚರ್ ಲೆನ್ಸ್‌ನೊಂದಿಗೆ 50-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಸಂವೇದಕ ಮತ್ತು f/2.4 ಅಪರ್ಚರ್ ಲೆನ್ಸ್‌ನೊಂದಿಗೆ 2-ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಒಳಗೊಂಡಿದೆ. ಹಿಂದಿನ ಕ್ಯಾಮರಾ ಘಟಕವು 1080-ಪಿಕ್ಸೆಲ್ ವಿಡಿಯೋ ರೆಕಾರ್ಡಿಂಗ್ ಅನ್ನು ಬೆಂಬಲಿಸುತ್ತದೆ ಮತ್ತು 10x ಡಿಜಿಟಲ್ ಜೂಮ್ ಮಾಡಬಹುದು. ಸೆಲ್ಫಿ ಮತ್ತು ವಿಡಿಯೋ ಚಾಟ್‌ಗಳಿಗಾಗಿ, ಹಾನರ್ ಮುಂಭಾಗದಲ್ಲಿ 8-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು f/2.0 ಅಪರ್ಚರ್ ಲೆನ್ಸ್‌ನೊಂದಿಗೆ ಪ್ಯಾಕ್ ಮಾಡಿದೆ.

ಹಾನರ್ ಪ್ಲೇ 8T ಸ್ಮಾರ್ಟ್​ಫೋನ್ 35W ವೇಗದ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 6,000mAh ಬ್ಯಾಟರಿಯನ್ನು ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 802.11 a/b/g/n/ac, ಬ್ಲೂಟೂತ್ 1, GPS, AGPS, OTG, Beidou, Glonass, ಮತ್ತು USB Type-C ಪೋರ್ಟ್ ಸೇರಿವೆ. ದೃಢೀಕರಣಕ್ಕಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ. ಈ ಹ್ಯಾಂಡ್‌ಸೆಟ್​ನಲ್ಲಿ ಹೈ-ರೆಸ್ ಆಡಿಯೋದೊಂದಿಗೆ ಸ್ಟಿರಿಯೊ ಡ್ಯುಯಲ್ ಸ್ಪೀಕರ್‌ಗಳನ್ನು ಅಳವಡಿಸಲಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ