ಬೆಂಗಳೂರು (ಏ. 15): ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ನಮ್ಮ ಜೀವನವನ್ನು ತುಂಬಾ ಸುಲಭಗೊಳಿಸಿದೆ. ರಿಮೋಟ್ ಕಂಟ್ರೋಲ್ ಹೊಂದಿರುವ ಸೀಲಿಂಗ್ ಫ್ಯಾನ್ (Remote Ceiling Fan) ಇದಕ್ಕೆ ಒಂದು ಉದಾಹರಣೆಯಾಗಿದೆ. ಈ ಫ್ಯಾನ್ ತಂಪನ್ನು ನೀಡುವುದಲ್ಲದೆ, ಹಲವು ಸ್ಮಾರ್ಟ್ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ನೀವು ಈ ಫ್ಯಾನ್ ಅನ್ನು ರಿಮೋಟ್ ಮೂಲಕ ನಿಯಂತ್ರಿಸಬಹುದು. ಫ್ಯಾನ್ ಆನ್ ಅಥವಾ ಆಫ್ ಮಾಡಲು ಪದೇ ಪದೇ ತಮ್ಮ ಸ್ಥಳದಿಂದ ಎದ್ದು ನಿಲ್ಲಲು ಸೋಮಾರಿತನ ತೋರುವ ಜನರಿಗೆ ಈ ಫ್ಯಾನ್ ಒಳ್ಳೆಯದು. ಇದರ ಮೂಲಕ, ಫ್ಯಾನ್ ಅನ್ನು ಎಲ್ಲಿಂದಲಾದರೂ ನಿಯಂತ್ರಿಸಬಹುದು. ಅತ್ಯುತ್ತಮವಾದ ವಿಷಯವೆಂದರೆ ನೀವು ಈ ಫ್ಯಾನ್ಗಳನ್ನು 2,000 ರೂ. ಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು.
ಪಾಕ್ ಯೂಟ್ಯೂಬರ್ನಿಂದ ಶಾಕಿಂಗ್ ವಿಚಾರ ಬಹಿರಂಗ: ಪಾಕಿಸ್ತಾನದಲ್ಲಿ ಸ್ಮಾರ್ಟ್ಫೋನ್ ಬೆಲೆ ಎಷ್ಟು ಗೊತ್ತೇ?
LONGWAY ಏರೋ ರಿಮೋಟ್ ಕಂಟ್ರೋಲ್ ಫ್ಯಾನ್:
ಈ ರಿಮೋಟ್ ಕಂಟ್ರೋಲ್ ಫ್ಯಾನ್ ಇಂಧನ ದಕ್ಷ ಫ್ಯಾನ್ ಆಗಿದ್ದು ಅದು ಹೆಚ್ಚು ಶಕ್ತಿಯನ್ನು ಬಳಸುವುದಿಲ್ಲ. ಇದರಲ್ಲಿ ನೀವು ಅಲ್ಟ್ರಾ ಹೈ ಸ್ಪೀಡ್ 3 ಬ್ಲೇಡ್ಗಳನ್ನು ಪಡೆಯುತ್ತೀರಿ. ಧೂಳು ನಿರೋಧಕ ಡಿಸೈನ್ ಸೀಲಿಂಗ್ ಫ್ಯಾನ್ನ ಬಣ್ಣ ಸ್ಮೋಕಿ ಬ್ರೌನ್. ಇ-ಕಾಮರ್ಸ್ ಪ್ಲಾಟ್ಫಾರ್ಮ್ ಅಮೆಜಾನ್ನಲ್ಲಿ ಶೇಕಡಾ 55 ರಷ್ಟು ರಿಯಾಯಿತಿಯಲ್ಲಿ ನೀವು ಈ ಫ್ಯಾನ್ ಅನ್ನು ಕೇವಲ 1899 ರೂ. ಗೆ ಖರೀದಿಸಬಹುದು. ಇದರಲ್ಲಿ ನೀವು ಎರಡು ಬಣ್ಣಗಳ ಆಯ್ಕೆಗಳನ್ನು ಪಡೆಯುತ್ತೀರಿ.
ಆಟಂಬರ್ಗ್ ಎಫಿಷಿಯೋ ಆಲ್ಫಾ ಸೀಲಿಂಗ್ ಫ್ಯಾನ್:
ಈ ಫ್ಯಾನ್ ಅನ್ನು ಆನ್ಲೈನ್ ರಿಯಾಯಿತಿಯೊಂದಿಗೆ ಕೇವಲ 2,699 ರೂ. ಗಳಿಗೆ ಪಡೆಯುತ್ತೀರಿ. ನಿಮಗೆ ಅದರಲ್ಲಿ LED ಸೂಚಕಗಳನ್ನು ಸಹ ನೀಡಲಾಗಿದೆ. ಹೆಚ್ಚಿನ ಗಾಳಿಯ ಪ್ರಸರಣದೊಂದಿಗೆ ಬರುತ್ತದೆ. ಇದು 5 ಸ್ಟಾರ್ ರೇಟಿಂಗ್ ಹೊಂದಿರುವ ಫ್ಯಾನ್. ಆಯ್ದ ಬ್ಯಾಂಕ್ ಕ್ರೆಡಿಟ್ ಕಾರ್ಡ್ಗಳ ಮೂಲಕ ಪಾವತಿಸಿದರೆ ನೀವು 80 ರೂ. ಗಳವರೆಗೆ ರಿಯಾಯಿತಿ ಪಡೆಯಬಹುದು. EMI ಆಯ್ಕೆಯೂ ಲಭ್ಯವಿದೆ.
ಬ್ರ್ಯಾಂಡ್ ಆಕ್ಟಿವಾ:
ಈ 28 ವ್ಯಾಟ್ ಫ್ಯಾನ್ ಅನ್ನು ನೀವು ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ಎರಡೂ ಪ್ಲಾಟ್ಫಾರ್ಮ್ಗಳಲ್ಲಿ ಸುಲಭವಾಗಿ ಪಡೆಯಬಹುದು. ರಿಯಾಯಿತಿಯೊಂದಿಗೆ ನೀವು ಇದನ್ನು 2,399 ರೂ. ಗೆ ಖರೀದಿಸಬಹುದು. ಆಯ್ದ ಬ್ಯಾಂಕ್ ಕ್ರೆಡಿಟ್ ಕಾರ್ಡ್ಗಳ ಮೂಲಕ ಪಾವತಿ ಮಾಡಿದರೆ ಕ್ಯಾಶ್ಬ್ಯಾಕ್ ಕೊಡುಗೆಯೂ ಲಭ್ಯವಿದೆ.
(ವಿ. ಸೂ: ಮೇಲೆ ನೀಡಿರುವ ಬೆಲೆಗಳು ಆಫರ್ನಿಂದ ಕೂಡಿದ್ದು ಇವು ಯಾವುದೇ ಸಂದರ್ಭದಲ್ಲಿ ಬದಲಾವಣೆ ಆಗಬಹುದು)
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ