ಈ ರಿಚಾರ್ಜ್ ಮಾಡಿದ್ರೆ ನಿಮಗೆ ಅಮೆಜಾನ್, ನೆಟ್​ಫ್ಲಿಕ್ಸ್, ಹಾಟ್​ಸ್ಟಾರ್ ಉಚಿತವಾಗಿ ಸಿಗಲಿದೆ

Netflix, Amazon Recharage plans: ರಿಲಯನ್ಸ್ ಜಿಯೋ ತನ್ನ ಎಲ್ಲಾ ಪೋಸ್ಟ್‌ಪೇಯ್ಡ್ ಯೋಜನೆಗಳೊಂದಿಗೆ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ವಿಐಪಿ ಉಚಿತ ಚಂದಾದಾರಿಕೆಯನ್ನು ಒದಗಿಸುತ್ತದೆ.

ಈ ರಿಚಾರ್ಜ್ ಮಾಡಿದ್ರೆ ನಿಮಗೆ ಅಮೆಜಾನ್, ನೆಟ್​ಫ್ಲಿಕ್ಸ್, ಹಾಟ್​ಸ್ಟಾರ್ ಉಚಿತವಾಗಿ ಸಿಗಲಿದೆ
ಟೆಲಿಕಾಂ ಕಂಪನಿಗಳಾದ ಏರ್‌ಟೆಲ್, ಬಿಎಸ್‌ಎನ್‌ಎಲ್ ಜಿಯೋ ಮತ್ತು ವಿ ಕಂಪೆನಿ ಕಡಿಮೆ ಬೆಲೆಯ ಅತ್ಯುತ್ತಮ ಡೇಟಾ ಪ್ಯಾಕ್​ನ ಪ್ರಿಪೇಯ್ಡ್ ಪ್ಲ್ಯಾನ್​ಗಳನ್ನು ಪರಿಚಯಿಸಿದೆ. 500 ಕ್ಕಿಂತ ಕಡಿಮೆ ಮೊತ್ತದ ಈ ರಿಚಾರ್ಜ್​​ ಪ್ಲ್ಯಾನ್​ಗಳ ಮೂಲಕ ನೀವು ಪ್ರತಿದಿನ 1.5 ಜಿಬಿ, 2 ಜಿಬಿ ಡೇಟಾವನ್ನು 56 ದಿನಗಳವರೆಗೆ ಪಡೆಯಬಹುದು. ಅಂತಹ ಪ್ರಮುಖ ಪ್ಲ್ಯಾನ್​ಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.
Updated By: ಝಾಹಿರ್ ಯೂಸುಫ್

Updated on: Aug 08, 2021 | 6:37 PM

ಕೊರೋನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ಬಹುತೇಕ ರಾಜ್ಯಗಳಲ್ಲಿ ಚಿತ್ರಮಂದಿರಗಳನ್ನು ಮುಚ್ಚಲಾಗಿದೆ. ಈ ಕಾರಣದಿಂದಾಗಿ, ಆನ್‌ಲೈನ್ ಮನರಂಜನಾ ಪ್ಲಾಟ್​ಫಾರ್ಮ್​ನತ್ತ ಹೆಚ್ಚಿನವರು ಮುಖ ಮಾಡಿದ್ದಾರೆ. ಈಗಾಗಲೇ ಭಾರತದಲ್ಲಿ OTT ಪ್ಲಾಟ್​ಫಾರ್ಮ್​ಗಳು ಮುನ್ನಲೆಗೆ ಬಂದಿದೆ. ಇದಾಗ್ಯೂ ದುಬಾರಿ ಮೊತ್ತ ನೀಡಿ ಚಂದಾದಾರಿಕೆ ಪಡೆಯಬೇಕಿರುವುದರಿಂದ ಅನೇಕರು ಇಂತಹ ಒಟಿಟಿ ಪ್ಲಾಟ್​ಫಾರ್ಮ್​ನಿಂದ ವಿಮುಖರಾಗುತ್ತಿದ್ದಾರೆ. ಆದರೆ ಟೆಲಿಕಾಂ ಕಂಪೆನಿಗಳು ನೀಡುವ ಕೆಲ ಆಫರ್​ಗಳ ಮೂಲಕ ಕೂಡ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಡಿಸ್ನಿ+ ಹಾಟ್‌ಸ್ಟಾರ್‌ನ ಉಚಿತ ಚಂದಾದಾರಿಕೆಯನ್ನು ಪಡೆಯಬಹುದು.

ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್ ಸೇರಿದಂತೆ ಹಲವು ಟೆಲಿಕಾಂ ಕಂಪನಿಗಳು ಕೆಲ ಪ್ಲಾಟ್‌ಫಾರ್ಮ್‌ಗಳ ಉಚಿತ ಚಂದಾದಾರಿಕೆಯನ್ನು ಒದಗಿಸುತ್ತವೆ. ಮೊಬೈಲ್ ರಿಚಾರ್ಜ್​ ಮೂಲಕ ಬಳಕೆದಾರರು ಈ ಯೋಜನೆಗಳಲ್ಲಿ ಅನಿಯಮಿತ ಕರೆ, ಡೇಟಾ ಮತ್ತು OTT ಪ್ಲಾಟ್‌ಫಾರ್ಮ್‌ಗಳ ಉಚಿತ ಚಂದಾದಾರಿಕೆ ಪಡೆಯಬಹುದು. ಯಾವ ಟೆಲಿಕಾಂ ಕಂಪನಿಯು ತನ್ನ ಗ್ರಾಹಕರಿಗೆ ಯಾವ ಯೋಜನೆಯೊಂದಿಗೆ OTT ಪ್ಲಾಟ್‌ಫಾರ್ಮ್‌ನ ಉಚಿತ ಚಂದಾದಾರಿಕೆ ನೀಡುತ್ತಿದೆ ಎಂಬುದನ್ನು ನೋಡೋಣ.

ರಿಲಯನ್ಸ್ ಜಿಯೋ:
ರಿಲಯನ್ಸ್ ಜಿಯೋ ತನ್ನ ಎಲ್ಲಾ ಪೋಸ್ಟ್‌ಪೇಯ್ಡ್ ಯೋಜನೆಗಳೊಂದಿಗೆ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ವಿಐಪಿ ಉಚಿತ ಚಂದಾದಾರಿಕೆಯನ್ನು ಒದಗಿಸುತ್ತದೆ. ಈ ಯೋಜನೆಗಳ ಬೆಲೆ ರೂ 399 ರಿಂದ ಆರಂಭವಾಗುತ್ತದೆ. ಹಾಗೆಯೇ ಈ ಉಚಿತ ಚಂದಾದಾರಿಕೆ 599 ರೂ., 799 ರೂ, 999 ರೂ ಮತ್ತು 1499 ರೂ.ಗಳ ಯೋಜನೆಯಲ್ಲೂ ಲಭ್ಯವಿದೆ. ಈ ರಿಚಾರ್ಜ್​ ಪ್ಲ್ಯಾನ್​ಗಳ ಮೂಲಕ 300 ಜಿಬಿ ಡೇಟಾ, ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್‌ಎಂಎಸ್‌ಗಳನ್ನು ಪಡೆಯಬಹುದು. ಹಾಗೆಯೇ ಜಿಯೋ ಆ್ಯಪ್‌ಗಳ ಉಚಿತ ಚಂದಾದಾರಿಕೆ ಜೊತೆ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ವಿಐಪಿಯ ಚಂದಾದಾರಿಕೆಯನ್ನು ಉಚಿತವಾಗಿ ಪಡೆಯಬಹುದು.

ಇನ್ನು ಜಿಯೋ ಪ್ರಿಪೇಯ್ಡ್ ರಿಚಾರ್ಜ್​ ಪ್ಲ್ಯಾನ್​ನಲ್ಲೂ OTT ಚಂದಾದಾರಿಕೆಯನ್ನು ಉಚಿತವಾಗಿ ನೀಡಲಾಗುತ್ತದೆ. ಅಂತಹ ಒಂದು ಪ್ಲಾನ್ 401 ರೂ. ಇದರಲ್ಲಿ, ಪ್ರತಿ ದಿನ 3GB ಡೇಟಾ ಲಭ್ಯವಿದೆ. ಇದಲ್ಲದೇ, 6GB ಹೆಚ್ಚುವರಿ ಡೇಟಾ ಕೂಡ ಸಿಗಲಿದೆ. ಇದರ ಜೊತೆಗೆ, ಅನಿಯಮಿತ ಕರೆಗಳು, ದಿನಕ್ಕೆ 100 SMS ಗಳನ್ನು ಪಡೆಯಬಹುದು. ಈ ರಿಚಾರ್ಜ್ ಪ್ಲ್ಯಾನ್​ನ ವಾಲಿಡಿಟಿ 28 ದಿನಗಳು.

ಏರ್‌ಟೆಲ್‌ ಪ್ಲ್ಯಾನ್:
ಏರ್​ಟೆಲ್ ಪೋಸ್ಟ್ ಪೇಯ್ಡ್​ ಪ್ಲ್ಯಾನ್​ನಲ್ಲೂ ಉಚಿತ ಒಟಿಟಿ ಚಂದಾದಾರಿಕೆ ಸಿಗುತ್ತದೆ. 499 ರೂ.ನ ಈ ಪ್ಲ್ಯಾನ್​ನಲ್ಲಿ 75GB ಡೇಟಾ, ಅನಿಯಮಿತ ಕರೆ ಪ್ರಯೋಜನಗಳ ಜೊತೆಗೆ ದಿನಕ್ಕೆ 100 SMS ಗಳು ಸಿಗುತ್ತವೆ. ಇದರೊಂದಿಗೆ, ಏರ್‌ಟೆಲ್ ಥ್ಯಾಂಕ್ಸ್ ರಿವಾರ್ಡ್ಸ್, ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ವಿಐಪಿಯ ಒಂದು ವರ್ಷದ ಚಂದಾದಾರಿಕೆ ಲಭ್ಯವಿದೆ. ಇದಲ್ಲದೇ, 599 ರೂ.ಗಳ ಪ್ಲ್ಯಾನ್​ನಲ್ಲೂ 2GB ಡೇಟಾ, 100 SMS ಮತ್ತು ಅನಿಯಮಿತ ಕರೆ ಸೌಲಭ್ಯದ ಜೊತೆಗೆ ಒಟಿಟಿ ಚಂದಾದಾರಿಕೆ ನೀಡಲಾಗುತ್ತಿದೆ. ಈ ಯೋಜನೆಯ ವ್ಯಾಲಿಡಿಟಿ 56 ದಿನಗಳು.

ವೊಡಾಫೋನ್ ಐಡಿಯಾ ಯೋಜನೆ:
ವೊಡಾಫೋನ್ ಐಡಿಯಾ ಪೋಸ್ಟ್‌ಪೇಯ್ಡ್ ಪ್ಲ್ಯಾನ್​ನಲ್ಲೂ ಉಚಿತ ಒಟಿಟಿ ಚಂದಾದಾರಿಕೆ ಲಭ್ಯವಿದೆ. 499 ರೂ.ನ ಈ ಪ್ಲ್ಯಾನ್​ನಲ್ಲಿ 75GB ಡೇಟಾ, ಅನಿಯಮಿತ ಕರೆ ಮತ್ತು ದಿನಕ್ಕೆ 100 SMS ಸಿಗಲಿದೆ. ಜೊತೆಗೆ ವಿ ಟಿವಿ ಮತ್ತು ಚಲನಚಿತ್ರಗಳು, ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಜೀ 5 ಯ ಉಚಿತ ಚಂದಾದಾರಿಕೆಯನ್ನು ದೊರೆಯುತ್ತದೆ.

ಇದನ್ನೂ ಓದಿ: Health Tips: ಕೊತ್ತಂಬರಿ ನೆನೆಸಿದ ನೀರು ಕುಡಿದ್ರೆ ಸಿಗುವ ಆರೋಗ್ಯಕರ ಪ್ರಯೋಜನ ಒಂದಾ ಎರಡಾ..!

ಇದನ್ನೂ ಓದಿ: Health Tips: ನೀವು ಹಸಿ ಹಾಲು ಕುಡಿತೀರಾ? ಹಾಗಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ

ಇದನ್ನೂ ಓದಿ: Tokyo Olympics 2020: ಭಾರತ ಸೋಲುತ್ತಿದ್ದಂತೆ ರೆಫರಿಗೆ ಬಿತ್ತು ಏಟು..!

ಇದನ್ನೂ ಓದಿ: Neeraj Chopra: ಆಸ್ಪತ್ರೆಯ ಬೆಡ್​ನಿಂದ ಚಿನ್ನದ ಬೇಟೆ ತನಕ: ನೀರಜ್ ಚೋಪ್ರಾ ಎಂಬ ಗೋಲ್ಡನ್ ಸ್ಟಾರ್