Tech Tips: ಮೊಬೈಲ್ ಅಥವಾ ಲ್ಯಾಪ್​ಟಾಪ್ ಇದ್ರೆ ಸಾಕು: ಆನ್​ಲೈನ್​ನಲ್ಲಿ ಹಣಗಳಿಸಲು ಇರುವ ಮಾರ್ಗಗಳು ಇಲ್ಲಿದೆ ನೋಡಿ

| Updated By: Vinay Bhat

Updated on: Jan 01, 2023 | 6:54 AM

Earn Money in Online: ಮನಸ್ಸಿದ್ದರೆ ಸಾಧಿಸುವ ಛಲವಿದ್ದರೆ ಮನೆಯಲ್ಲೇ ಕುಳಿತು ಹಣ ಸಂಪಾದಿಸಬಹುದು. ಇದಕ್ಕೆ ಒಂದಲ್ಲ ಎರಡಲ್ಲ ಅನೇಕ ಉತ್ತಮ ಮಾರ್ಗಗಳಿವೆ. ಹಾಗಾದರೆ ಮನೆಯಲ್ಲೇ ಕುಳಿತು ಆನ್​ಲೈನ್​ನಲ್ಲಿ ಸುಲಭವಾಗಿ ಹಣ ಮಾಡುವುದು ಹೇಗೆ? ಇಲ್ಲಿದೆ ನೋಡಿ ಕೆಲವೊಂದಿಷ್ಟು ಟಿಪ್​ಗಳು.

Tech Tips: ಮೊಬೈಲ್ ಅಥವಾ ಲ್ಯಾಪ್​ಟಾಪ್ ಇದ್ರೆ ಸಾಕು: ಆನ್​ಲೈನ್​ನಲ್ಲಿ ಹಣಗಳಿಸಲು ಇರುವ ಮಾರ್ಗಗಳು ಇಲ್ಲಿದೆ ನೋಡಿ
earn money in online
Follow us on

ಇಂದಿನ ಡಿಜಿಟಲ್ (Digital) ಯುಗದಲ್ಲಿ ಅಸಾಧ್ಯ ಎಂಬ ಮಾತೇಯಿಲ್ಲ. ಎಲ್ಲವೂ ನಮ್ಮ ಬೆರಳ ತುದಿಯಲ್ಲಿದೆ. ಅದು ಹಣ ಕೂಡ. ದುಡ್ಡಿಗಾಗಿ, ಕೆಲಸಕ್ಕಾಗಿ ಇಂದು ಊರೂರು ಅಲೆಯಬೇಕಿಲ್ಲ. ಯಾರದ್ದೋ ಕೈ-ಕಾಲು ಹಿಡಿಯಬೇಕಿಲ್ಲ. ಮನಸ್ಸಿದ್ದರೆ ಸಾಧಿಸುವ ಛಲವಿದ್ದರೆ ಮನೆಯಲ್ಲೇ ಕುಳಿತು ಹಣ (Money) ಸಂಪಾದಿಸಬಹುದು. ಇದಕ್ಕೆ ಒಂದಲ್ಲ ಎರಡಲ್ಲ ಅನೇಕ ಉತ್ತಮ ಮಾರ್ಗಗಳಿವೆ. ಮುಖ್ಯವಾಗಿ ಯುವಕರು ಶೀಘ್ರವಾಗಿ ಹಣ ಗಳಿಸುವುದು ಹೇಗೆ ಎಂಬ ಬಗ್ಗೆ ಆಲೋಚನೆ ಮಾಡುತ್ತಾರೆ. ಇದಕ್ಕೆ ಇಂಟರ್ನೆಟ್ (Intermet) ಎಂಬ ಮಾಧ್ಯಮವು ಬೃಹತ್ ವೇದಿಕೆಯಾಗಿ ಮಾರ್ಪಟ್ಟಿದೆ. ಹಾಗಾದರೆ ಮನೆಯಲ್ಲೇ ಕುಳಿತು ಆನ್​ಲೈನ್​​ನಲ್ಲಿ ಸುಲಭವಾಗಿ ಹಣ ಮಾಡುವುದು ಹೇಗೆ? ಇಲ್ಲಿದೆ ನೋಡಿ ಕೆಲವೊಂದಿಷ್ಟು ಟಿಪ್​ಗಳು.

ಇಂದು ಫೋಟೋಗ್ರಫಿ ಎಂಬುದು ದೊಡ್ಡ ಮಟ್ಟದಲ್ಲಿ ಕಾಣಿಸಿಗೊಳ್ಳುತ್ತಿದೆ. ಕೇವಲ ಡಿಎಸ್​ಎಲ್​ಆರ್ ಕ್ಯಾಮೆರಾದಿಂದ ಮಾತ್ರವಲ್ಲ ಈಗೀಗ ಆಕರ್ಷಕ ಕ್ಯಾಮೆರಾಗಳ ಸ್ಮಾರ್ಟ್​ಫೋನ್ ಬರುತ್ತಿರುವುದರಿಂದ ಮೊಬೈಲ್ ಫೋಟೋಗ್ರಫಿ ಕೂಡ ಜನಪ್ರಿಯತೆ ಪಡೆದುಕೊಂಡಿದೆ. ನಿಮ್ಮಲ್ಲಿ ಛಾಯಾಗ್ರಹಣದ ಕೌಶಲ್ಯವಿದ್ದರೆ ಸುಲಭವಾಗಿ ಮನೆಯಿಂದಲೇ ಹಣ ಮಾಡಬಹುದು. ನೀವು ಪ್ರಕೃತಿ, ಪ್ರಾಣಿಗಳು ಮತ್ತು ನಿಮ್ಮ ಸುತ್ತಲಿನ ವಸ್ತುಗಳ ಸೃಜನಶೀಲ ಫೋಟೋಗಳನ್ನು ತೆಗೆದುಕೊಂಡು ಅವುಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಬಹುದು. ಇದಕ್ಕಾಗಿ, Imagesbazaar.com, Shutterstock.com, Gettyimages.com ಮತ್ತು Stock.adobe.com ನಂತಹ ಸ್ಟಾಕ್ ಫೋಟೋಗ್ರಫಿ ತಾಣಗಳಲ್ಲಿ ಫೋಟೋಗಳಿಗೆ ಪರವಾನಗಿ ನೀಡುವ ಮೂಲಕ ಉತ್ತಮ ಹಣವನ್ನು ಗಳಿಸಬಹುದು.

Call Before You Dig: 5G ಚಾಲನೆಗೆ ಮುನ್ನ CBUD ಆಪ್ ಕಡ್ಡಾಯವಾಗಿ ಬಳಸುವಂತೆ ರಾಜ್ಯಗಳಿಗೆ ಕೇಂದ್ರ ಸೂಚನೆ

ಇದನ್ನೂ ಓದಿ
Dream 11: ಎಚ್ಚರ, ರಜೆಯಲ್ಲಿರುವ ಸಹೋದ್ಯೋಗಿಗೆ ತೊಂದರೆ ಕೊಟ್ಟರೆ 1 ಲಕ್ಷ ರೂ. ದಂಡ; ಭಾರತದ ಟೆಕ್ ಕಂಪನಿಯಲ್ಲಿ ಹೀಗೊಂದು ನಿಯಮ!
WhatsApp Update: ವಾಟ್ಸ್​ಆ್ಯಪ್ ಚಾಟ್​ನಲ್ಲಿ ಹೊಸ ಫೀಚರ್: ಬಳಕೆದಾರರು ಫುಲ್ ಖುಷ್
Cyber Attack: 829 ಮಿಲಿಯನ್ ಸೈಬರ್ ದಾಳಿ: 2022 ರಲ್ಲಿ ಅತಿ ಹೆಚ್ಚು ಸೈಬರ್ ಅಟ್ಯಾಕ್ ಆಗಿದ್ದೇ ಭಾರತದಲ್ಲಿ
Reliance Jio 5G: ಮೈಸೂರು ಬಳಿಕ ಮತ್ತೆರಡು ನಗರಗಳಲ್ಲಿ ಜಿಯೋ ಟ್ರೂ 5G ಸೇವೆ ಆರಂಭ

ಆನ್​ಲೈನ್ ಮೂಲಕ ಟ್ಯೂಶನ್ ನೀಡುವವರಿಗೆ ಈಗ ಹೆಚ್ಚಿನ ಬೇಡಿಕೆ ಇದೆ. ಇದು ಕೊರೊನಾ ಬಂದ ಮೇಲಂತು ಹೆಚ್ಚಾಗಿದೆ. ಒಂದು ವೇಳೆ ನಿಮ್ಮಲ್ಲಿ ಕಲಿಸುವ ಪ್ರತಿಭೆಯಿದ್ದು, ಇನ್ನೊಬ್ಬರಿಗೆ ನೆರವಾಗಬಯಸಿದರೆ ಇ-ಶಿಕ್ಷಣ ನಿಮಗೆ ಉತ್ತಮ ಸಂಭಾವನೆಯನ್ನು ತಂದು ಕೊಡಬಲ್ಲುದು. ಇ-ಟ್ಯೂಶನ್ ಕ್ಷೇತ್ರದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಬೈಜುಸ್ (BYJU’S) ಸಂಸ್ಥೆ ಬಗ್ಗೆ ನೀವು ಕೇಳಿರುತ್ತಿರಿ. ಇದಕ್ಕಾಗಿ ನಿಮಗೆ ಒಂದು ವಿಷಯದಲ್ಲಿ ಪರಿಣಿತಿ ಹಾಗೂ ವಾರದಲ್ಲಿ ಕೆಲವು ಗಂಟೆಗಳಾದರೂ ಇದಕ್ಕಾಗಿ ಮೀಸಲಿಡಬೇಕಾಗುತ್ತದೆ ಅಷ್ಟೇ. ಟ್ಯೂಟರ್ ವೀಸಾ, ಇ-ಟ್ಯೂಟರ್, ಸ್ಮಾರ್ಟ್ ಥಿಂಕಿಂಗ್, ಟ್ಯೂಟರ್. ಕಾಂ ಮೊದಲಾದ ತಾಣಗಳಲ್ಲಿ ನೀವು ನಿಮ್ಮ ಪರಿಣಿತಿಯನ್ನು ವಿವರಿಸಿ ದಾಖಲಿಸಿಕೊಳ್ಳಬೇಕು.

ಇತ್ತೀಚಿನ ದಿನಗಳಲ್ಲಿ ಕಂಟೆಂಟ್ ಕ್ರಿಯೇಟರ್ ನವರಿಗೆ ಸಾಕಷ್ಟು ಬೇಡಿಕೆ ಇದೆ. ಜನರು ಮನೆಯಲ್ಲಿ ಕುಳಿತು ಬರಹಗಾರರಾಗುವ ಮೂಲಕ ಸಾಕಷ್ಟು ಹಣ ಸಂಪಾದಿಸುತ್ತಿದ್ದಾರೆ. ಇದನ್ನು ಫ್ರೀ ಲಾನ್ಸ್ ಮೂಲಕವೂ ಮಾಡಬಹುದು. ಭಾಷೆಯ ಮೇಲೆ ಬಲವಾದ ಹಿಡಿತವನ್ನು ಹೊಂದಿದ್ದು, ಸೃಜನಶೀಲತೆಯಿದ್ದರೆ ಈ ಕೆಲಸವನ್ನು ಆರಂಭಿಸಬಹುದು. ಪ್ರತಿ ಪದಕ್ಕೆ ಇಂದು ರೂಪಾಯಿಯಿಂದ ಮೂರು ರೂ. ವರೆಗೆ ಸಂಪಾದಿಸಬಹುದು. ಸ್ಪೆಷಲ್ ಕಮಟೆಂಟ್​ಗಳಿಗೆ ಪ್ರತಿ ಪದಕ್ಕೆ ರೂ 8-10 ಗಳಿಸಬಹುದು. ಹಣ ಗಳಿಸಲು ಇರುವ ಸುಲಭ ಮಾರ್ಗದಲ್ಲಿ ಇದು ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದೆ.

ಎಲ್ಲರಿಗೂ ತಿಳಿದಿರುವಂತೆ ನಾವೆಲ್ಲರೂ ಟೈಮ್​ ಪಾಸ್​ ಮಾಡಲು ಸಾಮಾಜಿಕ ಜಾಲತಾಣವಾದ ಇನ್​ಸ್ಟಾಗ್ರಾಮ್ ಉಪಯೋಗ ಮಾಡುತ್ತೇವೆ. ಆದರೆ, ಈ ಇನ್​ಸ್ಟಾಗ್ರಾಮ್​ನಿಂದ ಸಂಪಾದನೆ ಕೂಡ ಮಾಡಬಹುದು ಎಂದರೆ ನಂಬಲೇಬೇಕು. ಇನ್​ಸ್ಟಾಗ್ರಾಮ್​ನಲ್ಲಿ ಅಧಿಕ ಫಾಲೋವರ್​​ಗಳನ್ನು ಹೊಂದಿ, ಇನ್‌ಸ್ಟಾದಲ್ಲೇ ಜನಪ್ರಿಯತೆ ಗಳಿಸಿರುವವರು ಒಂದು ಪೋಸ್ಟ್‌ಗೆ 5 -15 ಸಾವಿರ ಹಣವನ್ನು ಪಡೆಯಬಹುದು. ಇನ್‌ಸ್ಟಾಗ್ರಾಂನಲ್ಲೇ ಆದಾಯ ಪಡೆಯುವವರು ಸ್ಪಾನ್ಸರ್‌ ಪೋಸ್ಟ್ ಮೂಲಕವು ಹಣ ಗಳಿಸುತ್ತಾರೆ. ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಇದರಿಂದ ಕೋಟಿ ಗಟ್ಟಲೆ ಹಣ ಸಂಪಾದಿಸುತ್ತಿದ್ದಾರೆ.

WhatsApp: ಹೊಸ ವರ್ಷಕ್ಕೆ ಮೆಟಾದಿಂದ ಬಿಗ್ ಶಾಕ್: ಈ ಆಂಡ್ರಾಯ್ಡ್-ಐಫೋ​ನ್​ನಲ್ಲಿ ವಾಟ್ಸ್​ಆ್ಯಪ್ ಬಂದ್

ಪ್ರಸಿದ್ಧ ಇ ಕಾಮರ್ಸ್ ತಾಣಗಳ ಮೂಲಕ ಕೂಡ ನೀವು ಮನೆಯಲ್ಲೇ ಕುಳಿತು ಹಣ ಎನಿಸಬಹುದು. ಅತ್ಯಂತ ವಿಶ್ವಾಸಾರ್ಹ ಆನ್‌ಲೈನ್ ಗಳಿಕೆಯ ಸೈಟ್‌ಗಳಲ್ಲಿ ಅಮೆಜಾನ್ ಅಗ್ರಸ್ಥಾನದಲ್ಲಿದೆ. ಮಾರಾಟ ಮಾಡಲು ಮತ್ತು ಖರೀದಿಗೆ ವಸ್ತುಗಳನ್ನು ಆಯ್ಕೆ ಮಾಡಲು ವೈವಿಧ್ಯಮಯ ಉತ್ಪನ್ನಗಳನ್ನು ಒದಗಿಸುತ್ತಾರೆ. ಪ್ರತಿ ತಿಂಗಳು ಇಲ್ಲಿ ಲಕ್ಷಾಂತರ ಖರೀದಿದಾರರು ನಿಮ್ಮ ಪ್ರಾಡಕ್ಟ್​ ಅನ್ನು ವೀಕ್ಷಿಸಬಹುದು. ಇಲ್ಲಿ ನಿಮ್ಮ ಉತ್ಪನ್ನ ಹೆಚ್ಚು ಮಾರಾಟವಾಗುವ ಸಾಧ್ಯತೆ ಇರುತ್ತದೆ. ಜೊತೆಗೆ ಒಳ್ಳೆಯ ಪ್ರಮಾಣದ ಕಮಿಷನ್ ಕೂಡ ಪಡೆಯಬಹುದು.

ಇನ್ನು ಆನ್​ಲೈನ್​ನಲ್ಲಿ ನಿಮ್ಮದೇ ಸ್ವಂತ ಬ್ಲಾಗ್ ಒಂದನ್ನು ರಚಸಿ ಹಣ ಸಂಪಾದಿಸಬಹುದು. ಇದನ್ನು ಪ್ರಾರಂಭಿಸಲು ಹೆಚ್ಚಿನ ಕೌಶಲ್ಯವಾಗಲೀ ಹಣವಾಗಲೀ ಬೇಕಾಗಿಲ್ಲ. ಆದರೆ ನೀವು ಯಾವ ವಿಷಯದ ಬಗ್ಗೆ ಬರೆಯುತ್ತಿರೋ ಅದನ್ನು ಓದುವ ಜನರು ಬೇಕಷ್ಟೆ. ಹೀಗಾಗಿ ಜನರಿಗೆ ಯಾವ ವಿಷಯದ ಕುರಿತು ಹೆಚ್ಚು ಆಸಕ್ತಿ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ನಿಮ್ಮ ತಾಣಕ್ಕೆ ಎಷ್ಟು ಹೆಚ್ಚು ಜನರು ಭೇಟಿ ನೀಡುತ್ತಾರೋ, ಅದನ್ನು ಪರಿಗಣಿಸಿ ಜಾಹೀರಾತು, ಸಂಭಾವನೆ ಇರುವ ಲೇಖನ ಬರೆಯುವ ಅವಕಾಶ ನಿಮ್ಮನ್ನು ಆರಿಸಿಕೊಂಡು ಬರುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ