How To: ಯುಪಿಐ ಮೂಲಕ ಸುರಕ್ಷಿತವಾಗಿ ಹಣದ ವಹಿವಾಟು ಹೇಗೆ?

UPI Payment: ಹಣವನ್ನು ಸ್ವೀಕರಿಸಲು ಯಪಿಐ ಪಿನ್ ಅಗತ್ಯವಿಲ್ಲ ಎಂಬುದನ್ನು ಬಳಕೆದಾರರು ಯಾವಾಗಲೂ ನೆನಪಿನಲ್ಲಿಡಬೇಕು. ಇತರ ಯುಪಿಐ ಖಾತೆಗೆ ಹಣವನ್ನು ಕಳುಹಿಸುವಾಗ ಮಾತ್ರ ಯುಪಿಐ ಪಿನ್ ಅಗತ್ಯವಿದೆ.

How To: ಯುಪಿಐ ಮೂಲಕ ಸುರಕ್ಷಿತವಾಗಿ ಹಣದ ವಹಿವಾಟು ಹೇಗೆ?
ಪ್ರಾತಿನಿಧಿಕ ಚಿತ್ರ
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jul 08, 2021 | 6:04 PM

ಹಣ ಪಾವತಿ ಅಥವಾ ಸ್ವೀಕರಿಸಲು ಸುಲಭ ವಿಧಾನ ಯುಪಿಐ (Unified Payments Interface). ಇನ್ನೊಬ್ಬರ ಖಾತೆಗೆ ಹಣ ಕಳುಹಿಸುವುದು,ಇನ್ನೊಬ್ಬರಿಂದ ಹಣ ಸ್ವೀಕರಿಸುವುದು ಮಾತ್ರ ಅಲ್ಲ ವಿದ್ಯುತ್ ಬಿಲ್,ಮೊಬೈಲ್ ಫೋನ್ ಅಥವಾ ಬ್ರಾಂಡ್ ಬ್ಯಾಂಡ್ ಬಿಲ್ ಪಾವತಿ ಸುಲಭವಾಗಿಸಿದೆ ಈ ವ್ಯವಸ್ಥೆ. ಆದರೆ ಯುಪಿಐ ಮೂಲಕ ಹಣದ ವಹಿವಾಟು ಗೊತ್ತಿಲ್ಲದೆ ಮೋಸ ಹೋದ ಅನೇಕ ಘಟನೆಗಳಿವೆ. ಇಂತಿರುವಾಗ ಸುರಕ್ಷಿತವಾಗಿ ಯುಪಿಐ ಮೂಲಕ ಹಣದ ವ್ಯವಹಾರ ಹೇಗೆ ಮಾಡುವುದು? ಗಮನಿಸಬೇಕಾದ ಸಂಗತಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಟಿಪ್ಸ್.

1. ಸುರಕ್ಷಿತವಾಗಿರಲಿ ಹಣದ ವ್ಯವಹಾರ: ಹಣ ಪಾವತಿ, ಸ್ವೀಕರಿಸುವುದು, ಬಿಲ್ ಪಾವತಿ, ಮೊಬೈಲ್ ರೀಚಾರ್ಜ್, ದೇಣಿಗೆ, ಡಿಟಿಎಚ್ ಕನೆಕ್ಷನ್, ರೈಲು ಟಿಕೆಟ್,ಸಿನಿಮಾ ಟಿಕೆಟ್ ನಿಂದ ಹಿಡಿದು ಮಾಲ್, ಅಂಗಡಿ,ರೆಸ್ಟೊರೆಂಟ್ ಗಳಲ್ಲಿಯೂ ಯುಪಿಐ ಮೂಲಕ ಹಣ ಪಾವತಿ ಮಾಡಬಹುದು. ಯಾವುದೇ ಸಮಯದಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳಿಂದ ಇತರ ಖಾತೆಗೆ ಹಣವನ್ನು ವರ್ಗಾಯಿಸಲು ಯುಪಿಐ ಬಳಕೆದಾರರಿಗೆ ಅವಕಾಶ ನೀಡುತ್ತದೆ. ಹಣ ವರ್ಗಾವಣೆ ಮಾಡುವಾಗ ಈ ವಿಷಯ ಗಮನದಲ್ಲಿರಲಿ.

2. ಯಾರಿಗೆ ಹಣ ಕಳುಹಿಸುತ್ತಿದ್ದೀರಿ ಎಂಬುದು ತಿಳಿದಿರಲಿ ಯಾವುದೇ ಪಾವತಿ ಮಾಡುವ ಮುನ್ನ ಯುಪಿಐ ಐಡಿ ಪರಿಶೀಲಿಸಿಕೊಳ್ಳಿ. ಇದು ಸರಿಯಾದ/ನಿರ್ದಿಷ್ಟ ವ್ಯಕ್ತಿ ಯದ್ದೇ ಎಂದು ಖಚಿತ ಪಡಿಸಿಕೊಳ್ಳಿ. ನಿಮ್ಮ UPI PIN ಗೌಪ್ಯವಾಗಿಟ್ಟುಕೊಳ್ಳಿ. ಯಾರೊಂದಿಗೂ ನಿಮ್ಮ UPI PIN ಶೇರ್ ಮಾಡಲು ಹೋಗಲೇ ಬೇಡಿ. ಯುಪಿಐ ಮೂಲಕ ವ್ಯವಹರಿಸುವಾಗ ಮಾತ್ರ ಈ ಪಿನ್ ಅಗತ್ಯವಿರುವುದು,ಅಲ್ಲಿ ಮಾತ್ರ ಬಳಸಿ.

3. ಖಾತೆಯಿಂದ ಎಷ್ಟು ಹಣ ಹೋಯ್ತು ಎಂಬುದನ್ನು ಚೆಕ್ ಮಾಡಿ ನಿಮ್ಮ ಖಾತೆಯ ವ್ಯವಹಾರಗಳ ಬಗ್ಗೆ ಎಸ್ಎಂಎಸ್  ಚೆಕ್ ಮಾಡಿಕೊಳ್ಳಿ. ನೀವು ಹಣ ಪಾವತಿ ಮಾಡಿದರೆ ಅಥವಾ ಸ್ವೀಕರಿಸಿದರೆ ಖಾತೆಯಲ್ಲಿರುವ ಹಣದ ಮಾಹಿತಿ, ಎಷ್ಟು ಹಣ ಅದರಿಂದ ಹೋಗಿದೆ? ಎಷ್ಟು ಬಂತು ಎಂಬುದು ಎಸ್ಎಂಎಸ್ ಮೂಲಕ ತಿಳಿಯುತ್ತದೆ. ಹಾಗಾಗಿ ಪ್ರತಿಯೊಂದು ವ್ಯವಹಾರದ ನಂತರವೂ ಎಸ್ಎಂಎಸ್ ಚೆಕ್ ಮಾಡಿಕೊಳ್ಳಿ.

4. ಏನಾದರೂ ಸಮಸ್ಯೆ ಇದ್ದರೆ ‘UPI Help’ ಬಳಸಿ ಯುಪಿಐ ಮೂಲಕ ವ್ಯವಹರಿಸುವಾಗ ಏನಾದರೂ ಸಮಸ್ಯೆ ಆದರೆ UPI Appನಲ್ಲಿಯೇ UPI Help ವಿಭಾಗದಲ್ಲಿ ಚೆಕ್ ಮಾಡಿ.

5. ಹಣ ಸ್ವೀಕರಿಸಲು ಯುಪಿಐ ಪಿನ್ ಅಗತ್ಯವಿಲ್ಲ ಹಣವನ್ನು ಸ್ವೀಕರಿಸಲು ಯಪಿಐ ಪಿನ್ ಅಗತ್ಯವಿಲ್ಲ ಎಂಬುದನ್ನು ಬಳಕೆದಾರರು ಯಾವಾಗಲೂ ನೆನಪಿನಲ್ಲಿಡಬೇಕು. ಇತರ ಯುಪಿಐ ಖಾತೆಗೆ ಹಣವನ್ನು ಕಳುಹಿಸುವಾಗ ಮಾತ್ರ ಯುಪಿಐ ಪಿನ್ ಅಗತ್ಯವಿದೆ. ನಿಮ್ಮ ವಹಿವಾಟುಗಳು ಬಗ್ಗೆ ಸುರಕ್ಷತಾ ಸೂಚನೆಗಳು ಮತ್ತು ಪ್ರಮುಖ ಪ್ರಕಟಣೆಗಳ ಕುರಿತು ಬಳಕೆದಾರರು ಯಾವಾಗಲೂ ಬ್ಯಾಂಕಿನಿಂದ ಬರುವ ಎಲ್ಲಾ SMS / ಇಮೇಲ್‌ಗಳ ಮೇಲೆ ಗಮನವಿರಿಸಿಕೊಳ್ಳಿ. ಬಳಕೆದಾರರು ತಮ್ಮ ಬ್ಯಾಂಕಿನಿಂದ ಬರುವ ಸಂದೇಶಗಳಿಗೆ ಗಮನ ಕೊಡಬೇಕೆಂದು ಎನ್‌ಪಿಸಿಐ ಸೂಚಿಸುತ್ತದೆ. ಪಾಸ್​ವರ್ಡ್ , ಪಿನ್ ಮತ್ತು ಒಟಿಪಿ ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳಿ.

5. ಫೋನ್ ಕಳೆದು ಹೋದರೆ? ಎಲ್ಲವೂ ಫೋನ್ ಮೂಲಕವೇ ನಡೆಯುವ ವ್ಯವಹಾರಗಳು,ಹೀಗಿರುವಾಗ ಫೋನ್ ಕಳೆದುಹೋದರೆ ಏನು ಮಾಡಬೇಕು?  ರಿಸರ್ವ್‌ ಬ್ಯಾಂಕ್‌ನ ಭಾಗವಾಗಿರುವ ರಾಷ್ಟ್ರೀಯ ಪಾವತಿಗಳು ನಿಗಮ (ಎನ್‌ಸಿಪಿಐ) ಪ್ರಕಾರ ಯುಪಿಐ ವಹಿವಾಟು ಇರುವ ಮೊಬೈಲ್ ಕಳೆದುಹೋದರೆ ತಕ್ಷಣವೇ ಯುಪಿಐ ಜತೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಯನ್ನು ಬ್ಲಾಕ್ ಮಾಡಿ. ಎಲ್ಲಾ ವಹಿವಾಟುಗಳನ್ನು ಅಧಿಕೃತಗೊಳಿಸಲು ಯುಪಿಐ-ಪಿನ್ ಅಗತ್ಯವಿರುವುದರಿಂದ ಬೇರೆ ಯಾವುದೇ ವ್ಯಕ್ತಿ ನಿಮ್ಮ ಯುಪಿಐ ಸಂಬಂಧಿತ ಅಪ್ಲಿಕೇಶನ್‌ಗಳನ್ನು ಬಳಸಲು ಸಾಧ್ಯವಾಗುವುದಿಲ್ಲ.

ಇದನ್ನೂ ಓದಿ: How To: ಆನ್​ಲೈನ್​ ಕ್ಲಾಸ್, ವರ್ಕ್​ ಫ್ರಂ ಜಮಾನದಲ್ಲಿ ಮೊಬೈಲ್ ಡೇಟಾ ಉಳಿತಾಯಕ್ಕೆ 10 ಸೂತ್ರಗಳು

(How to make safe UPI payment what to do after losing phone here is the safety tips)

Published On - 6:01 pm, Thu, 8 July 21

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ