Tech Tips: ವಾಟ್ಸ್ಆ್ಯಪ್ನಲ್ಲಿ ನಿಮ್ಮ ನಂಬರ್ಗೆ ನೀವೇ ಮೆಸೇಜ್ ಮಾಡುವುದು ಹೇಗೆ?: ಇಲ್ಲಿದೆ ಟ್ರಿಕ್
ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್ಆ್ಯಪ್ನಲ್ಲಿ ಸೆಲ್ಫ್ ಮೆಸೇಜ್ ಎಂಬ ಫೀಚರ್ ಇದೆ. ಅಂದರೆ ನಿಮ್ಮ ನಂಬರ್ಗೆ ನೀವೇ ಮೆಸೇಜ್ ಮಾಡಬಹುದಾದ ಆಯ್ಕೆ. ಆದರೆ, ಈ ಫೀಚರ್ ಅನ್ನು ಕೆಲವರಿಗೆ ಬಳಸುವುದು ಹೇಗೆಂದು ತಿಳಿದಿಲ್ಲ. ಈ ಕುರಿತ ಮಾಹಿತಿ ಇಲ್ಲಿದೆ ಓದಿ.
ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್ಆ್ಯಪ್ ಇಂದು ನಂಬರ್ ಒನ್ ಆ್ಯಪ್ ಆಗಿ ಹೊರಹೊಮ್ಮಿದೆ. ವಿಶ್ವದಲ್ಲಿ ವಾಟ್ಸ್ಆ್ಯಪ್ ಬಳಸುವವರ ಸಂಖ್ಯೆ 2 ಬಿಲಿಯನ್ ದಾಟಿದೆ. ಭಾರತದಲ್ಲೇ ಸುಮಾರು 550 ಮಿಲಿಯನ್ಗೂ ಅಧಿಕ ಮಂದಿ ಉಪಯೋಗಿಸುತ್ತಿದ್ದಾರೆ. ಕಾಲ ಕಾಲಕ್ಕೆ ಹೊಸ ಹೊಸ ಫೀಚರ್ಗಳ ಬಗ್ಗೆ ಘೋಷಣೆ ಮಾಡುವ ವಾಟ್ಸ್ಆ್ಯಪ್ 2024 ರಲ್ಲಿ ಕೂಡ ಅನೇಕ ವಿನೂತನ ಆಯ್ಕೆಗಳನ್ನು ಪರಿಚಯಿಸುತ್ತಿದೆ. ಇದರಲ್ಲಿ ಸೆಲ್ಫ್ ಮೆಸೇಜ್ ಆಯ್ಕೆಯೂ ವಾಟ್ಸ್ಆ್ಯಪ್ನಲ್ಲಿದೆ.
ಸೆಲ್ಫ್ ಮೆಸೇಜ್ ಅಂದರೆ ನಿಮ್ಮ ನಂಬರ್ಗೆ ನೀವೇ ಮೆಸೇಜ್ ಮಾಡಬಹುದಾದ ಆಯ್ಕೆ. ಆದರೆ, ಈ ಫೀಚರ್ ಅನ್ನು ಕೆಲವರಿಗೆ ಬಳಸುವುದು ಹೇಗೆಂದು ತಿಳಿದಿಲ್ಲ. ಅಂಥವರಿಗೆ ಇಲ್ಲಿದೆ ಮಾಹಿತಿ.
ವಾಟ್ಸ್ಆ್ಯಪ್ನ ಈ ಹೊಸ ಮೆಸೇಜ್ ವಿಥ್ ಯುವರ್ಸೆಲ್ಫ್ ಎಂಬ ಫೀಚರ್ ಕಾಂಟೆಕ್ಟ್ ಲಿಸ್ಟ್ನಲ್ಲಿ ಕಾಣಲಿದೆ. ವಾಟ್ಸ್ಆ್ಯಪ್ ತೆರೆದು ನ್ಯೂ ಚಾಟ್ನಲ್ಲಿ ಕಾಂಟೆಕ್ಟ್ ಲಿಸ್ಟ್ ಓಪನ್ ಮಾಡಿದರೆ ಅಲ್ಲಿ ನಿಮಗೆ ನಿಮ್ಮ ನಂಬರ್ ಕಾಣಸಿಗುತ್ತದೆ. ನಿಮ್ಮ ನಂಬರ್ ಮೇಲೆ ಕ್ಲಿಕ್ ಮಾಡಿದರೆ ಚಾಟ್ ಬಾಕ್ಸ್ ಓಪನ್ ಆಗಲಿದ್ದು ನಿಮಗೆ ನೀವೇ ಮೆಸೇಜ್ ಕಳುಹಿಸಬಹುದು.
ಈ ಚಾಟ್ ಬಾಕ್ಸ್ನಲ್ಲಿ ನಿಮಗೆ ಎಲ್ಲ ರೀತಿಯ ಆಯ್ಕೆ ಕಾಣಸಿಗುತ್ತದೆ. ಫೋಟೋ, ವಿಡಿಯೋ, ಡಾಕ್ಯುಮೆಂಟ್, ಆಡಿಯೋ ಎಲ್ಲ ರೀತಿಯ ಫೈಲ್ಗಳನ್ನು ಕಳುಹಿಸಬಹುದು. ವಾಟ್ಸ್ಆ್ಯಪ್ನ ಈ ಹೊಸ ಮೆಸೇಜ್ ವಿಥ್ ಯುವರ್ಸೆಲ್ಫ್ ಆಯ್ಕೆಯ ಮೂಲಕ ಅಗತ್ಯ ದಾಖಲೆಗಳನ್ನು ನೀವು ಸೇವ್ ಮಾಡಿಡಬಹುದು.
ವಾಟ್ಸ್ಆ್ಯಪ್ ಸ್ಟೇಟಸ್‌ನಲ್ಲಿ ಮಹತ್ವದ ಫೀಚರ್:
ವಾಟ್ಸ್ಆ್ಯಪ್ ಹೊಸ ಸ್ಟೇಟಸ್ ಲೈಕ್ ಮತ್ತು ಮೆನ್ಶನ್ ಫೀಚರ್ ಅನ್ನು ತಂದಿದೆ. ವಾಟ್ಸ್ಆ್ಯಪ್ನಲ್ಲಿ ಸ್ಟೇಟಸ್ ಪೋಸ್ಟ್ ಮಾಡಿದಾಗ, ಅದು 24 ಗಂಟೆಗಳ ಸಮಯದ ಮಿತಿಯನ್ನು ಹೊಂದಿರುತ್ತದೆ. ಆ ಸಮಯದಲ್ಲಿ ನೀವು ಬೇರೆಯವರ ಸ್ಟೇಟಸ್ ನೋಡಬೇಕು. 24 ಗಂಟೆ ಕಳಿದ ನಂತರ ಅವರ ಸ್ಟೇಟಸ್ ನೋಡಲು ಸಾಧ್ಯ ಆಗುವುದಿಲ್ಲ. ಆದರೀಗ ಹೊಸ ಫೀಚರ್ನ ಪ್ರಕಾರ, ನೀವು ಯಾರಿಗಾದರೂ ಸ್ಪೆಷಲ್ ಆಗಿ ಅಂದರೆ ಮೆನ್ಶನ್ ಮಾಡಿ ಸ್ಟೇಟಸ್ ಹಾಕಲು ಸಾಧ್ಯವಾಗಲಿದೆ. ಆಗ ಅದರ ಬಗ್ಗೆ ಮೆನ್ಶನ್ ಮಾಡಿದವರಿಗೆ ಮಾಹಿತಿ ಸಿಗುತ್ತದೆ. ನಂತರ ಅವರು ನಿಮ್ಮ ಸ್ಟೇಟಸ್ ಅನ್ನು ತಕ್ಷಣ ನೋಡಲು ಸಾಧ್ಯವಾಗುತ್ತದೆ.
ನಿಮ್ಮ ಸ್ಟೇಟಸ್‌ನಲ್ಲಿ ನೀವು ಯಾರನ್ನು ಉಲ್ಲೇಖಿಸುತ್ತೀರೋ ಅವರು ನಿಮ್ಮ ಸ್ಟೇಟಸ್ ಬಗ್ಗೆ ನೋಟಿಫಿಕೇಷನ್ ಸ್ವೀಕರಿಸುತ್ತಾರೆ. ಆದರೆ, ಇದರಲ್ಲಿ ನೀವು ಜನರನ್ನು ಟ್ಯಾಗ್ ಮಾಡುವ ಆಯ್ಕೆಯನ್ನು ಹೊಂದಿರುವುದಿಲ್ಲ, ನಿಮ್ಮ ಕಾಂಟೆಕ್ಟ್ ಪಟ್ಟಿಯಲ್ಲಿರುವ ಜನರನ್ನು ಮಾತ್ರ ಮೆನ್ಶನ್ ಮಾಡು ಸಾಧ್ಯವಾಗುತ್ತದೆ.
ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ