ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್ಆ್ಯಪ್ (WhatsApp) ಬಳಕೆದಾರರಿಗೆ ಒಂದರ ಹಿಂದೆ ಒಂದರಂತೆ ಆಕರ್ಷಕ ಫೀಚರ್ಗಳನ್ನು ಬಿಡುಗಡೆ ಮಾಡುತ್ತಿದೆ. ಮೊನ್ನೆಯಷ್ಟೆ ತನ್ನ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಹೆಚ್ಡಿ ರೆಸಲ್ಯೂಷನ್‌ನಲ್ಲಿ ಫೋಟೋಗಳನ್ನು ಕಳುಹಿಸುವ ಆಯ್ಕೆ ನೀಡಿತ್ತು. ಇದೀಗ ವಿಡಿಯೋ ಸರದಿ. ವಾಟ್ಸ್ಆ್ಯಪ್ ಸದ್ಯ ಆಂಡ್ರಾಯ್ಡ್ ಬಳಕೆದಾರರಿಗೆ ಹೈ-ರೆಸಲ್ಯೂಷನ್‌ನಲ್ಲಿ ವಿಡಿಯೋವನ್ನು ಕಳುಹಿಸುವ ಫೀಚರ್ ಪರಿಚಯಿಸಿದೆ. ಈ ಹಿಂದೆ ಯಾರಿಗಾದರು ವಿಡಿಯೋ ಕಳುಹಿಸಿದಾಗ ಅದು ಕಂಪ್ರೆಸ್ ಆಗಿ ತನ್ನ ಕ್ವಾಲಿಟಿಯನ್ನು ಕಳೆದುಕೊಳ್ಳುತ್ತಿತ್ತು. ಆದರೀಗ ಹೆಚ್ಡಿ ಕ್ವಾಲಿಟಿಯಲ್ಲಿ ವಿಡಿಯೋ ಕಳುಹಿಸಬಹುದು.
ಆಂಡ್ರಾಯ್ಡ್ ಬಳಕೆದಾರರಿಗಾಗಿ ವಾಟ್ಸ್ಆ್ಯಪ್ 2.23.17.74 ಅಪ್‌ಡೇಟ್‌ನೊಂದಿಗೆ ಗುರುವಾರ ಈ ಫೀಚರ್ ಬಿಡುಗಡೆ ಆಗಿದೆ. ವಾಟ್ಸ್ಆ್ಯಪ್ ಕಾಂಟೆಕ್ಟ್ ಲಿಸ್ಟ್ನಲ್ಲಿ ಇರುವವರಿಗೆ ಹಂಚಿಕೊಳ್ಳಲು ವಿಡಿಯೋವನ್ನು ಆಯ್ಕೆಮಾಡುವಾಗ ಪರದೆಯ ಮೇಲ್ಭಾಗದಲ್ಲಿ HD ಐಕಾನ್ ಕಾಣಿಸುತ್ತಿದೆ. ಇದನ್ನು ಒತ್ತಿದ ನಂತರ ವಾಟ್ಸ್ಆ್ಯಪ್ ಸ್ಟ್ಯಾಂಡರ್ಡ್ ಮತ್ತು ಡೀಫಾಲ್ಟ್ – 480p ರೆಸಲ್ಯೂಷನ್ ಬದಲಿಗೆ 720p ರೆಸಲ್ಯೂಷನ್‌ನಲ್ಲಿ ವಿಡಿಯೋ ಹಂಚಿಕೊಳ್ಳುತ್ತದೆ.
ಸ್ಯಾಮ್ಸಂಗ್ನಿಂದ ಬರುತ್ತಿದೆ ಹೊಸ ಫ್ಯಾನ್ ಎಡಿಷನ್ ಸ್ಮಾರ್ಟ್ಫೋನ್: ಯಾವುದು?, ಬೆಲೆ ಎಷ್ಟು?
ಹೆಚ್ಚಿನ ಆಂಡ್ರಾಯ್ಡ್ ಬಳಕೆದಾರರಿಗೆ ಈ ಆಯ್ಕೆ ಲಭ್ಯವಾಗುತ್ತಿದೆ. ಆದರೆ, ಐಒಎಸ್ ಬಳಕೆದಾರರಿಗೆ ಇನ್ನಷ್ಟೆ ಈ ಫೀಚರ್ ಅನಾವರಣಗೊಳ್ಳಬೇಕಿದೆ. ಪ್ರಸ್ತುತ iOS ಬೀಟಾ ಪರೀಕ್ಷೆಯಲ್ಲಿ ಈ ಫೀಚರ್ ಕಾಣಿಸಿಕೊಂಡಿದೆ. ನೀವು ವಾಟ್ಸ್ಆ್ಯಪ್ನಲ್ಲಿ ಹೈ ರೆಸಲ್ಯೂಷನ್ ವಿಡಿಯೋವನ್ನು ಕಳುಹಿಸಲು ಬಯಸಿದರೆ, ಆಂಡ್ರಾಯ್ಡ್ ಬಳಕೆದಾರರು ತಮ್ಮ ವಾಟ್ಸ್ಆ್ಯಪ್ ಅನ್ನು ಇತ್ತೀಚಿನ ಆವೃತ್ತಿಗೆ ಅಪ್ಡೇಟ್ ಮಾಡಬೇಕು. ಹಾಗೆಯೆ ಎಲ್ಲಾ ಬಳಕೆದಾರರಿಗೆ ಈ ವೈಶಿಷ್ಟ್ಯವು ಲಭ್ಯವಿಲ್ಲದಿರಬಹುದು ಎಂಬುದನ್ನು ನೆನಪಿನಲ್ಲಿಡಿ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ