ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ಮೊಬೈಲ್ ಕಳ್ಳತನ: ಫೋನ್ ಕಳೆದುಹೋದರೆ ಏನು ಮಾಡಬೇಕು?

ಇತ್ತೀಚೆಗೆ ಮೊಬೈಲ್ ಕಳ್ಳತನದ ಪ್ರಮಾಣ ಹೆಚ್ಚಾಗಿದೆ. ಪಾದಚಾರಿಗಳ ಫೋನ್​ನ್ನು ಕದ್ದು ಕಳ್ಳರು ಪರಾರಿಯಾಗುತ್ತಿದ್ದಾರೆ. ಸ್ಮಾರ್ಟ್​ಫೋನ್ ಕಳ್ಳತನವಾದರೆ ನಾವು ಏನು ಮಾಡಬಹುದು ಎಂಬ ಮಾಹಿತಿ ಇಲ್ಲಿದೆ.

ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ಮೊಬೈಲ್ ಕಳ್ಳತನ: ಫೋನ್ ಕಳೆದುಹೋದರೆ ಏನು ಮಾಡಬೇಕು?
ಸಾಂದರ್ಭಿಕ ಚಿತ್ರ
Follow us
TV9 Web
| Updated By: ganapathi bhat

Updated on:Apr 06, 2022 | 8:22 PM

ಬೆಂಗಳೂರು:  ನಗರದ  HSR ಬಡಾವಣೆ ಸಮೀಪ ಮೊಬೈಲ್​ ಕಳ್ಳತನ ಹೆಚ್ಚಿದೆ. ರಸ್ತೆಯಲ್ಲಿ ಸಂಚರಿಸುತ್ತಿರುವ ಪಾದಚಾರಿಗಳಿಂದ ಮೊಬೈಲ್ ಕದಿಯುವ ಘಟನೆಗಳು ಪುನರಾವರ್ತನೆ ಆಗುತ್ತಿವೆ.

HSR ಲೇಔಟ್​ನ ಮೂರನೇ ಹಂತದಲ್ಲಿ ಮೊಬೈಲ್ ಕಳ್ಳತನ ಪ್ರಕರಣಗಳು ಹೆಚ್ಚಾಗಿ ಘಟಿಸುತ್ತಿದೆ. HSR ಲೇಔಟ್​ನ 18ನೇ ಮುಖ್ಯ ರಸ್ತೆಯಲ್ಲಿ ಹಾಗೂ HSR ಕ್ಲಬ್ ರಸ್ತೆಯ 19 ಮತ್ತು 22ನೇ ಕ್ರಾಸ್ ರಸ್ತೆಗಳಲ್ಲಿ ಫೋನ್ ಕಳ್ಳತನ ಪ್ರಕರಣಗಳು ನಡೆದಿವೆ. ಕಳೆದ ಹತ್ತು ದಿನಗಳಲ್ಲಿ ನಾಲ್ಕು ಜನರ ಮೊಬೈಲ್ ಫೋನ್ ಕಳವಾಗಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಸ್ಥಳೀಯ ಪೊಲೀಸರು ಕೂಡ ಘಟನೆಯ ವರದಿ ಪಡೆದುಕೊಂಡಿದ್ದಾರೆ. ಸ್ಥಳೀಯರಿಗೆ ಜಾಗೃತೆಯಿಂದ ಇರಲು ಪೊಲೀಸರು ಸೂಚನೆ ಕೊಟ್ಟಿದ್ದಾರೆ. ಪೊಲೀಸರು, ಯಾರು ಮಾಸ್ಕ್ ಹಾಕಿಲ್ಲ, ಯಾರು ಬೆಲ್ಟ್ ಧರಿಸಿಲ್ಲ ಎಂಬ ಬಗ್ಗೆ ಹೆಚ್ಚು ಗಮನ ಕೊಡುತ್ತಾರೆ. ಆದರೆ, ಸಾರ್ವಜನಿಕರ ರಕ್ಷಣೆಯ ಬಗ್ಗೆ ಚಿಂತಿಸುವುದಿಲ್ಲ ಎಂದು ಸ್ಥಳೀಯರು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಕಳೆದು ಹೋದ ಮೊಬೈಲ್ ಹುಡುಕಲು ಹೀಗೆ ಮಾಡಬಹುದು.. ಹೊಸ ಮೊಬೈಲ್ ಫೋನ್​ಗಳು (Smartphones) ಈಗ ‘find my phone’ ಎಂಬ ಆಯ್ಕೆ ಇದೆ. ಐಫೋನ್​ಗಳಲ್ಲಾದರೆ Find my iPhone ಎಂಬ ಆಯ್ಕೆ ಬಳಸಬಹುದು. ಆಡ್ರಾಂಯ್ಡ್ ಫೋನ್​ಗಳಾದರೆ Find My Device ಎಂಬ ಆಯ್ಕೆ ಉಪಯೋಗಿಸಬಹುದು. ಏನೇ ಆದರೂ, ಕಳೆದುಹೋದ ಫೋನ್ ನೆಟ್​ವರ್ಕ್ ಸಂಪರ್ಕ ಹೊಂದಿದ್ದರೆ ಮಾತ್ರ ನಾವು ಫೋನ್ ಟ್ರಾಕ್ ಮಾಡಬಹುದಾಗಿದೆ.

ಮೊಬೈಲ್ ಕಳೆದುಹೋದರೆ ಕೂಡಲೇ ನಾವು ಲಾಗ್​ಇನ್ ಆಗಿರುವ ಅಕೌಂಟ್​ಗಳನ್ನು ಬೇರೆ ಗ್ಯಾಡ್ಜೆಟ್ ಮೂಲಕ ಲಾಗ್​ಇನ್ ಆಗಿ  ಪಾಸ್​ವರ್ಡ್​ಗಳನ್ನೂ ಬದಲಾಯಿಸಿಕೊಳ್ಳಬೇಕು. ಬ್ಯಾಂಕ್ ಖಾತೆ, ಶಾಪಿಂಗ್ ಸೈಟ್ ಇತ್ಯಾದಿಗಳು ಮೊಬೈಲ್ ಫೋನ್​ನಲ್ಲಿ ಅಳವಡಿಕೆಯಾಗಿರುವುದರಿಂದ ಸಮಸ್ಯೆ ತಪ್ಪಿಸಲು ಅಕೌಂಟ್ ಲಾಗ್​ಔಟ್ ಆಗುವುದು ಅನಿವಾರ್ಯ. ಹೆಚ್ಚಿನ ಜಾಗೃತೆಗಾಗಿ, ನಮ್ಮ ಬ್ಯಾಂಕ್​ಗೂ ಫೋನ್ ಕಳುವಾದ ಬಗ್ಗೆ ಮಾಹಿತಿ ತಿಳಿಸುವುದು ಉತ್ತಮ.

ಇಷ್ಟೇ ಅಲ್ಲದೆ, ನಾವು ಇತ್ತೀಚೆಗೆ ಕ್ಲೌಡ್ ಬೇಸ್ಡ್ ಮೊಬೈಲ್ ಫೋನ್​ಗಳನ್ನು ಹೆಚ್ಚಾಗಿ ಬಳಸುತ್ತಿದ್ದೇವೆ. ಅಂದರೆ, ಎಲ್ಲಾ ಮಾಹಿತಿಗಳು ನಮ್ಮ ಗೂಗಲ್ ಸ್ಟೋರೇಜ್​ನಲ್ಲಿ ಶೇಖರಣೆಯಾಗಿರುತ್ತದೆ. ಆದ್ದರಿಂದ, ಅವುಗಳಿಂದಲೂ ಮುಖ್ಯ ಮಾಹಿತಿಗಳನ್ನು ಹಿಂತೆಗೆಯುವುದು ಉತ್ತಮ. ಈ ಪ್ರಮುಖ ಕೆಲಸಗಳನ್ನು ಮಾಡುವುದರ ಜೊತೆಗೆ, ನಾವು ಪೊಲೀಸ್ ದೂರು ಕೊಡಬಹುದು.

ಐಷಾರಾಮಿ ಮನೆಗಳಲ್ಲಿಯೇ ಕಳ್ಳತನ.. ಆ್ಯಪಲ್ ತಿಂದು ಪೊಲೀಸರಿಗೆ ಸಿಕ್ಕಿಬಿದ್ದ ಬನಶಂಕರಿ ಮೂಲದ ಕಳ್ಳರು!

Published On - 7:35 pm, Tue, 2 February 21

ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ