ಪ್ರಸಿದ್ಧ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಇನ್ಫಿನಿಕ್ಸ್ ಈಗ ಹಿಂದಿನ ರೀತಿಯಿಲ್ಲ. 2023 ರಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡಿದ್ದು, ವಿಶೇಷವಾದ ಮೊಬೈಲ್ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಇದೇ ಸಾಲಿನಲ್ಲಿ ಕಳೆದ ತಿಂಗಳು ಭಾರತಕ್ಕೆ ಇನ್ಫಿನಿಕ್ಸ್ ಜಿಟಿ 10 ಪ್ರೊ (Infinix GT 10 Pro) ಎಂಬ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿತು. ರಿಲೀಸ್ಗು ಮೊದಲೇ ಭರ್ಜರಿ ಸೌಂಡ್ ಮಾಡಿದ್ದ ಈ ಫೋನ್, ಈಗಲೂ ಟ್ರೆಂಡಿಂಗ್ನಲ್ಲಿದೆ. ವಿಶೇಷ ಎಂದರೆ ಈ ಫೋನಿನ ಬ್ಯಾಕ್ ಪೆನೆಲ್ ಅದ್ಭುತವಾಗಿದ್ದು, ನೋಟಿಫಿಕೇಷನ್ ಬರುವಾಗ ಲೈಟ್ ಆಗುತ್ತದೆ. ಆದರೀಗ ಈ ಬೊಂಬಾಟ್ ಸ್ಮಾರ್ಟ್ಫೋನ್ನ ಬೆಲೆಯಲ್ಲಿ ಹೆಚ್ಚಿಳ ಮಾಡಲಾಗಿದೆ.
ಇನ್ಫಿನಿಕ್ಸ್ GT 10 Pro ಭಾರತದಲ್ಲಿ ಏಕೈಕ ಮಾದರಿಯಲ್ಲಿ ಬಿಡುಗಡೆ ಆಗಿತ್ತು. ಇದರ 8GB RAM ಮತ್ತು 256GB ಸ್ಟೋರೇಜ್ ರೂಪಾಂತರಕ್ಕೆ 19,999 ರೂ. ಇತ್ತು. ಆದರೀಗ ಈ ಫೋನ್ ಮೇಲೆ 1,000 ರೂ. ಹೆಚ್ಚಳ ಮಾಡಲಾಗಿದೆ. ಆದರೆ, ಇನ್ಫಿನಿಕ್ಸ್ ಬೆಲೆ ಏರಿಕೆಯ ಕುರಿತು ಇನ್ನೂ ಯಾವುದೇ ಅಧಿಕೃತ ಪ್ರಕಟಣೆ ನೀಡಿಲ್ಲ.
19,999 ರೂ. ಗೆ ಅನಾವರಣಗೊಂಡ ಇನ್ಫಿನಿಕ್ಸ್ GT 10 ಪ್ರೊ ಸ್ಮಾರ್ಟ್‌ಫೋನ್ ಸದ್ಯ ಫ್ಲಿಪ್‌ಕಾರ್ಟ್‌ನಲ್ಲಿ 20,999 ಗೆ ಪಟ್ಟಿ ಮಾಡಲಾಗಿದೆ. ಭಾರತದಲ್ಲಿ ಫೋನ್ ಬಿಡುಗಡೆಯಾಗಿ ಕೇವಲ ಒಂದು ತಿಂಗಳಾಗಿದೆಯಷ್ಟೆ. ಈ ಫೋನನ್ನು ಅನೇಕರು ನಥಿಂಗ್ ಫೋನ್ಗೆ ಹೋಲಿಸಿದ್ದರು. ಈ ಫೋನಿನ ಹಿಂಭಾಗದ ಡಿಸೈನ್ ಹಾಗೂ ಎಲ್ಇಡಿ ಲೈಟ್ಗಳು ನಥಿಂಗ್ ಫೋನ್ಗೆ ಹೋಲುವಂತಿದೆ. ಇನ್ಫಿನಿಕ್ಸ್ GT 10 ಪ್ರೊ ಅನ್ನು ‘ಸೈಬರ್ ಬ್ಲಾಕ್’ ಮತ್ತು ‘ಮಿರಾಜ್ ಸಿಲ್ವರ್’ ಎಂಬ ಎರಡು ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದು.
ವಾಟ್ಸ್ಆ್ಯಪ್ನಲ್ಲಿ ಬರುತ್ತಿದೆ ಹೊಸ ಇ-ಮೇಲ್ ವೆರಿಫಿಕೇಷನ್ ಫೀಚರ್: ಬಳಕೆದಾರರು ಫುಲ್ ಖುಷ್
ಡಿಸ್‌ಪ್ಲೇ: ಇನ್ಫಿನಿಕ್ಸ್ GT 10 ಪ್ರೊ 5G ಫೋನ್ 6.67-ಇಂಚಿನ FHD+ AMOLED ಡಿಸ್‌ಪ್ಲೇ, 120Hz ರಿಫ್ರೆಶ್ ರೇಟ್ ಮತ್ತು 900 nits ಗರಿಷ್ಠ ಬ್ರೈಟ್‌ನೆಸ್ ಅನ್ನು ಹೊಂದಿದೆ.
ಪ್ರೊಸೆಸರ್: Mali-G77 MC9 GPU ಜೊತೆಗೆ ಜೋಡಿಯಾಗಿರುವ ಮೀಡಿಯಾಟೆಕ್ ಡೈಮೆನ್ಸಿಟಿ 8050 ಪ್ರೊಸೆಸರ್‌ನಿಂದ ಚಾಲಿತವಾಗಿದೆ.
RAM ಮತ್ತು ಸಂಗ್ರಹಣೆ: ಫೋನ್ 8GB RAM ಮತ್ತು 256GB ಆನ್‌ಬೋರ್ಡ್ ಸಂಗ್ರಹಣೆಯೊಂದಿಗೆ ಬರುತ್ತದೆ. ಇದು 8GB ಹೆಚ್ಚುವರಿ ವರ್ಚುವಲ್ RAM ಅನ್ನು ಸಹ ನೀಡುತ್ತದೆ.
ಕ್ಯಾಮೆರಾಗಳು: ಇನ್ಫಿನಿಕ್ಸ್ GT 10 ಪ್ರೊ 5G ನಲ್ಲಿ ನೀವು 108MP ಪ್ರಾಥಮಿಕ ಸಂವೇದಕ ಮತ್ತು ಎರಡು 2MP ಸಂವೇದಕಗಳೊಂದಿಗೆ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಪಡೆಯುತ್ತೀರಿ. ಸೆಲ್ಫಿಗಾಗಿ ಮುಂಭಾಗ 32MP ಕ್ಯಾಮೆರಾ ಅಳವಡಿಸಲಾಗಿದೆ.
ಬ್ಯಾಟರಿ, ವೇಗದ ಚಾರ್ಜಿಂಗ್: ಈ ಫೋನ್ 45W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ.
ಸಾಫ್ಟ್‌ವೇರ್: ಇನ್ಫಿನಿಕ್ಸ್ GT 10 ಪ್ರೊ 5G ಆಂಡ್ರಾಯ್ಡ್ 13 ಆಧರತ XOS 13 ಮೂಲಕ ರನ್ ಆಗುತ್ತದೆ.
ಸಂಪರ್ಕ: ಈ ಫೋನ್ 5ಜಿ ಸಪೋರ್ಟ್ ಮಾಡುತ್ತದೆ. ವೈ-ಫೈ 6, ಎನ್‌ಎಫ್‌ಸಿ ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಅನ್ನು ಒಳಗೊಂಡಿವೆ. ಜೊತೆಗೆ ಇನ್-ಡಿಸ್ ಪ್ಲೇ ಫಿಂಗರ್ ಪ್ರಿಂಡ್ ಆಯ್ಕೆಯನ್ನು ಹೊಂದಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ