ಪ್ರಸಿದ್ಧ ಇನ್ಫಿನಿಕ್ಸ್ ಕಂಪನಿ ಭಾರತಕ್ಕೆ ಹೊಸ ಫೋನ್ನೊಂದಿಗೆ ಬಂದಿದೆ. ಇದೀಗ ದೇಶದಲ್ಲಿ ಇನ್ಫಿನಿಕ್ಸ್ ಸ್ಮಾರ್ಟ್ 8 (Infinix SMART 8) ಫೋನನ್ನು ಅನಾವರಣ ಮಾಡಿದೆ. ಇದು ಕಂಪನಿ ಭಾರತೀಯ ಬಳಕೆದಾರರಿಗಾಗಿ ಬಿಡುಗಡೆ ಮಾಡಿದ ಅತ್ಯುತ್ತಮ ಅಗ್ಗದ ಸ್ಮಾರ್ಟ್‌ಫೋನ್ ಆಗಿದೆ. ಇನ್ಫಿನಿಕ್ಸ್ ಸ್ಮಾರ್ಟ್ 8 ಎಚ್‌ಡಿ ಫೋನ್‌ನ ಅನೇಕ ಹೋಲಿಕೆಗಳೊಂದಿಗೆ ಈ ಫೋನ್ ಅನ್ನು ರಿಲೀಸ್ ಮಾಡಲಾಗಿದೆ. ಆದರೆ ಪ್ರೊಸೆಸರ್ ಮತ್ತು ವಿನ್ಯಾಸದ ವಿಷಯದಲ್ಲಿ ಇದು ವಿಭಿನ್ನವಾಗಿದೆ. ಈ ಫೋನ್‌ನ ಬೆಲೆ ಮತ್ತು ವೈಶಿಷ್ಟ್ಯಗಳ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಡಿಸ್ಪ್ಲೇ- ಬಜೆಟ್ ಶ್ರೇಣಿಯಲ್ಲಿ ಬರುತ್ತಿರುವ ಈ ಫೋನ್ 6.6 ಇಂಚಿನ HD Plus ಡಿಸ್ಪ್ಲೇ ಹೊಂದಿದೆ. ಇದರ ರಿಫ್ರೆಶ್ ದರ 90 Hz ಮತ್ತು ಗರಿಷ್ಠ ಬ್ರೈಟ್ನೆಸ್ 500 nits ಆಗಿದೆ. ಮುಂಭಾಗದಲ್ಲಿ ಪಂಚ್ ಹೋಲ್ ಕ್ಯಾಮೆರಾವನ್ನು ನೀಡಲಾಗಿದೆ.
Tech Tricks: ಏರ್‌ಪ್ಲೇನ್ ಮೋಡ್ ಆನ್ ಮಾಡಿ ಇಂಟರ್ನೆಟ್ ಉಪಯೋಗಿಸುವ ಟ್ರಿಕ್ ಗೊತ್ತೇ?
ಪ್ರೊಸೆಸರ್- ಈ ಫೋನ್ ಕಾರ್ಯಕ್ಷಮತೆಗಾಗಿ ಮೀಡಿಯಾಟೆಕ್ ಹಿಲಿಯೊ G36 ಪ್ರೊಸೆಸರ್ ನೀಡಲಾಗಿದೆ. ಇದು 4 GB RAM ಮತ್ತು 64 GB ಸಂಗ್ರಹಣೆಯೊಂದಿಗೆ ಬರುತ್ತದೆ. ಮೈಕ್ರೋ SSD ಕಾರ್ಡ್ ಮೂಲಕ 1 TB ವರೆಗೆ ಸಂಗ್ರಹಣೆಯನ್ನು ವಿಸ್ತರಿಸಬಹುದು.
ಆಪರೇಟಿಂಗ್ ಸಿಸ್ಟಮ್- XOS 13 ಆಧಾರಿತ ಆಂಡ್ರಾಯ್ಡ್ 13 ಆಪರೇಟಿಂಗ್ ಸಿಸ್ಟಮ್ ಇದರಲ್ಲಿ ನೀಡಲಾಗಿದೆ.
ಬ್ಯಾಟರಿ- ಇದು 5,000 mAh ಬ್ಯಾಟರಿಯನ್ನು ಹೊಂದಿದೆ ಮತ್ತು ಇದು 10 ವ್ಯಾಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
ಕ್ಯಾಮೆರಾ- 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಒದಗಿಸಲಾಗಿದ್ದು, ಇದರೊಂದಿಗೆ ಆಕ್ಸಿಲರಿ ಲೆನ್ಸ್ ಮತ್ತು ಎಲ್ಇಡಿ ಫ್ಲ್ಯಾಷ್ ಲಭ್ಯವಿದೆ. ಸೆಲ್ಫಿಗಾಗಿ 8MP ಸಂವೇದಕವನ್ನು ನೀಡಲಾಗಿದೆ.
ಇನ್ಫಿನಿಕ್ಸ್ ಸ್ಮಾರ್ಟ್ 8 ಫೋನ್ ಅನ್ನು 7,499 ಬೆಲೆಗೆ ಬಿಡುಗಡೆ ಮಾಡಲಾಗಿದೆ. ಈ ಫೋನ್ ನಾಲ್ಕು ಬಣ್ಣದ ಆಯ್ಕೆಗಳೊಂದಿಗೆ ಬರುತ್ತದೆ. ಇವುಗಳಲ್ಲಿ Galaxy White, Rainbow Blue, Shiny Gold ಮತ್ತು Timber Black ಸೇರಿವೆ. ಜನವರಿ 15 ರಂದು ಮಧ್ಯಾಹ್ನ 12 ಗಂಟೆಯಿಂದ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್ ಮೂಲಕ ಖರೀದಿಸಬಹುದು.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ