Infinix note 11: ಬೆಲೆ ಬಹಿರಂಗ ಪಡಿಸದೆ ಎರಡು ಹೊಸ ಸ್ಮಾರ್ಟ್​ಫೋನ್ ಅನಾವರಣ ಮಾಡಿದ ಇನ್‌ಫಿನಿಕ್ಸ್

| Updated By: Vinay Bhat

Updated on: Oct 16, 2021 | 2:02 PM

ಇನ್ಫಿನಿಕ್ಸ್ ನೋಟ್ 11 ಮತ್ತು ಇನ್ಫಿನಿಕ್ಸ್ ನೋಟ್ 11 ಪ್ರೊ ಫೋನ್‌ಗಳು ಡ್ಯುಯಲ್-ಸಿಮ್ ಕಾರ್ಡ್ ಸೆಟ್‌ಅಪ್‌ ಸಪೋರ್ಟ್‌ ಪಡೆದಿವೆ. ಹಾಗೆಯೇ ಆಂಡ್ರಾಯ್ಡ್ 11 ಓಎಸ್‌ ಆಯ್ಕೆಯನ್ನು ಒಳಗೊಂಡಿದೆ.

Infinix note 11: ಬೆಲೆ ಬಹಿರಂಗ ಪಡಿಸದೆ ಎರಡು ಹೊಸ ಸ್ಮಾರ್ಟ್​ಫೋನ್ ಅನಾವರಣ ಮಾಡಿದ ಇನ್‌ಫಿನಿಕ್ಸ್
Infinix Note 11
Follow us on

ಬಜೆಟ್ ಬೆಲೆಯ ಫೋನುಗಳಿಂದ ಹೆಚ್ಚಿನ ಗ್ರಾಹಕರ ಗಮನ ಸೆಳೆದಿರುವ ಇನ್‌ಫಿನಿಕ್ಸ್ (Infinix) ಕಂಪನಿಯು ಇದೀಗ ಹೊಸ ಇನ್‌ಫಿನಿಕ್ಸ್ ನೋಟ್ 11 ಫೋನ್‌ (Infinix note 11 Series) ಸರಣಿಯನ್ನು ಅಧಿಕೃತವಾಗಿ ಅನಾವರಣ ಮಾಡಿದೆ. ಈ ಸರಣಿಯು ಇನ್‌ಫಿನಿಕ್ಸ್ ನೋಟ್ 11 (Infinix note 11) ಮತ್ತು ಇನ್ಫಿನಿಕ್ಸ್ ನೋಟ್ 11 ಪ್ರೊ (Infinix note 11 Pro) ಮಾಡೆಲ್‌ಗಳನ್ನು ಒಳಗೊಂಡಿದ್ದು, ಮೀಡಿಯಾ ಟೆಕ್‌ ಹಿಲಿಯೋ ಪ್ರೊಸೆಸರ್‌, 5000mAh ಬ್ಯಾಟರಿ ಬ್ಯಾಕ್‌ಅಪ್‌ ಸೇರಿದಂತೆ ಆಕರ್ಷಕ ಫೀಚರ್​ಗಳನ್ನು ಒಳಗೊಂಡಿದೆ.

ಇನ್ಫಿನಿಕ್ಸ್ ನೋಟ್ 11 ಮತ್ತು ಇನ್ಫಿನಿಕ್ಸ್ ನೋಟ್ 11 ಪ್ರೊ ಫೋನ್‌ಗಳು ಡ್ಯುಯಲ್-ಸಿಮ್ ಕಾರ್ಡ್ ಸೆಟ್‌ಅಪ್‌ ಸಪೋರ್ಟ್‌ ಪಡೆದಿವೆ. ಹಾಗೆಯೇ ಆಂಡ್ರಾಯ್ಡ್ 11 ಓಎಸ್‌ ಆಯ್ಕೆಯನ್ನು ಒಳಗೊಂಡಿದೆ. ಇನ್ಫಿನಿಕ್ಸ್ ನೋಟ್ 11 ಪ್ರೊ ಫೋನ್ 1,080×2,460 ಪಿಕ್ಸೆಲ್‌ಗಳೊಂದಿಗೆ 6.95-ಇಂಚಿನ ಫುಲ್ ಹೆಚ್‌ಡಿ+ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದ್ದು, ಮೀಡಿಯಾ ಟೆಕ್ ಹಿಲಿಯೋ G96 SoC ಪ್ರೊಸೆಸರ್‌ ನಲ್ಲಿ ಕಾರ್ಯನಿರ್ವಹಿಸಲಿದೆ.

ಇದು 8GB RAM ಮತ್ತು 128GB ಸ್ಟೋರೇಜ್ ವೇರಿಯಂಟ್ ಆಯ್ಕೆಯನ್ನು ಪಡೆದಿದ್ದು, ಎಸ್‌ಡಿ ಕಾರ್ಡ್‌ ಮೂಲಕ 2TB ವರೆಗೆ ಬಾಹ್ಯ ಮೆಮೊರಿ ವಿಸ್ತರಿಸಬಹುದಾಗಿದೆ. ಇನ್ಫಿನಿಕ್ಸ್ ನೋಟ್ 11 ಸಹ ಮೀಡಿಯಾ ಟೆಕ್ ಹಿಲಿಯೋ G96 SoC ಪ್ರೊಸೆಸರ್‌ ಒಳಗೊಂಡದೆ.

ಇನ್ಫಿನಿಕ್ಸ್ ನೋಟ್ 11 ಪ್ರೊ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್‌ ಅನ್ನು ಒಳಗೊಂಡಿದ್ದು, ಮುಖ್ಯ ಕ್ಯಾಮೆರಾವು 64 ಮೆಗಾ ಪಿಕ್ಸಲ್‌ ಸೆನ್ಸಾರ್‌ನಲ್ಲಿದೆ. ಸೆಕೆಂಡರಿ ಕ್ಯಾಮೆರಾವು 13 ಮೆಗಾ ಪಿಕ್ಸಲ್ ಸೆನ್ಸಾರ್ ಪಡೆದಿದ್ದು, ತೃತೀಯ ಕ್ಯಾಮೆರಾವು 2 ಮೆಗಾ ಪಿಕ್ಸಲ್‌ ಸೆನ್ಸಾರ್ ಸಾಮರ್ಥ್ಯ ಹೊಂದಿದೆ. ಹಾಗೆಯೇ ಇನ್ಫಿನಿಕ್ಸ್ ನೋಟ್ 11 ಫೋನ್ ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸಾಮರ್ಥ್ಯದಲ್ಲಿದ್ದು, ಸೆಕೆಂಡರಿ ಕ್ಯಾಮೆರಾ 2 ಮೆಗಾ ಪಿಕ್ಸಲ್‌ ಸೆನ್ಸಾರ್ ಹೊಂದಿದೆ. ಇನ್ನು ಈ ಎರಡಿ ಫೋನ್‌ಗಳು 16 ಮೆಗಾ ಪಿಕ್ಸಲ್ ಸೆನ್ಸಾರ್‌ನ ಸೆಲ್ಫಿ ಕ್ಯಾಮೆರಾ ಒಳಗೊಂಡಿವೆ.

ಈ ಎರಡೂ ಫೋನ್‌ಗಳು 5,000mAh ಬಲಿಷ್ಠ ಬ್ಯಾಟರಿ ಬ್ಯಾಕ್‌ಅಪ್‌ ಸಾಮರ್ಥ್ಯವನ್ನು ಪಡೆದುಕೊಂಡಿವೆ. ಈ ಫೋನ್‌ಗಳು ಗೇಮಿಂಗ್ ಪೂರಕವಾಗಿವೆ. ಜೊತೆಗೆ ಡಿಟಿಎಸ್ ಸರೌಂಡ್ ಸೌಂಡ್‌ ನೊಂದಿಗೆ ಡ್ಯುಯಲ್ ಸ್ಪೀಕರ್‌ಗಳನ್ನು ಹೊಂದಿವೆ. ಹಾಗೆಯೇ ಫೇಸ್ ಅನ್‌ಲಾಕ್ ಮತ್ತು ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಪಡೆದಿವೆ. ಇನ್ಫಿನಿಕ್ಸ್ ನೋಟ್ 11 ಪ್ರೊ ಫೋನ್‌ 5G, 4G LET, ವೈ-ಫೈ, ಬ್ಲೂಟೂತ್, ಯುಎಸ್‌ಬಿ ಟೈಪ್-ಸಿ ಪೋರ್ಟ್, ಯುಎಸ್ ಬಿ ಒಟಿಜಿ ಮತ್ತು 3.5 ಎಂಎಂ ಹೆಡ್ ಫೋನ್ ಜ್ಯಾಕ್ ನಂತಹ ಕನೆಕ್ಟಿವಿಟಿ ಆಯ್ಕೆಗಳನ್ನು ಒಳಗೊಂಡಿದೆ. ಈ ಎರಡು ಫೋನ್‌ಗಳ ಬೆಲೆ ಎಷ್ಟು ಎನ್ನುವ ಬಗ್ಗೆ ಇನ್ಫಿನಿಕ್ಸ್ ಕಂಪನಿಯು ಅಧಿಕೃತವಾಗಿ ಮಾಹಿತಿ ಹೊರ ಹಾಕಿಲ್ಲ.

Flipkart Big Diwali Sale 2021: ಫ್ಲಿಪ್​ಕಾರ್ಟ್​ನಲ್ಲಿ ಬಿಗ್ ದೀಪಾವಳಿ ಸೇಲ್: ಸ್ಮಾರ್ಟ್​ಫೋನ್, ಸ್ಮಾರ್ಟ್​ ಟಿವಿಗಳ ಮೇಲೆ ಬಂಪರ್ ಆಫರ್

WhatsApp Backups: ಗೂಗಲ್​ನಿಂದ ವಾಟ್ಸ್​ಆ್ಯಪ್ ಬಳಕೆದಾರರಿಗೆ ಶಾಕ್: ಇನ್ನುಂದೆ ಈ ಸೇವೆ ಸ್ಥಗಿತ

(Infinix Note 11 series Infinix Note 11 and Infinix Note 11 Pro With MediaTek Helio G96 SoCs globally debuted )