ಸದ್ದಿಲ್ಲದೆ ದಿಢೀರ್ ಆಗಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ ಹೊಸ ಬಜೆಟ್ ಸ್ಮಾರ್ಟ್​ಫೋನ್: ಯಾವುದು?

|

Updated on: Jan 27, 2024 | 1:32 PM

Infinix Smart 8 Pro Launched: ಇನ್ಫಿನಿಕ್ಸ್ ಕಂಪನಿ ಯಾವುದೇ ಮಾಹಿತಿ ನೀಡದೆ ದಿಢೀರ್ ಆಗಿ ರಿಲೀಸ್ ಮಾಡಿರುವ ಇನ್ಫಿನಿಕ್ಸ್ ಸ್ಮಾರ್ಟ್ 8 ಪ್ರೊ ಬೆಲೆಯನ್ನು ಇನ್ನೂ ಬಹಿರಂಗಪಡಿಸಿಲ್ಲ. ಇನ್ಫಿನಿಕ್ಸ್ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಸ್ಮಾರ್ಟ್‌ಫೋನ್‌ನ ವಿವರಗಳ ಪ್ರಕಾರ ಇದು 4GB ಅಥವಾ 8GB RAM ಮತ್ತು 64GB ಅಥವಾ 128GB ಅಂತರ್ಗತ ಸಂಗ್ರಹಣೆಯೊಂದಿಗೆ ಲಭ್ಯವಿರುತ್ತದೆ.

ಸದ್ದಿಲ್ಲದೆ ದಿಢೀರ್ ಆಗಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ ಹೊಸ ಬಜೆಟ್ ಸ್ಮಾರ್ಟ್​ಫೋನ್: ಯಾವುದು?
infinix smart 8 pro
Follow us on

ಪ್ರಸಿದ್ಧ ಇನ್ಫಿನಿಕ್ಸ್ ಕಂಪನಿ ಸದ್ದಿಲ್ಲದೆ ತನ್ನ ಹೊಸ ಇನ್ಫಿನಿಕ್ಸ್ ಸ್ಮಾರ್ಟ್ 8 ಪ್ರೊ (Infinix Smart 8 Pro) ಸ್ಮಾರ್ಟ್​ಫೋನ್ ಅನ್ನು ಅನಾವರಣ ಮಾಡಿದೆ. ಇದು ಸ್ಮಾರ್ಟ್ 8 ಸರಣಿಗೆ ಸೇರ್ಪಡೆಯಾದ ಹೊಸ ಫೋನ್ ಆಗಿದೆ. ಇದರಲ್ಲಿ 50-ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾವನ್ನು ನೀಡಲಾಗಿದೆ. 10W ನಲ್ಲಿ ಚಾರ್ಜ್ ಮಾಡಬಹುದಾದ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಇನ್ಫಿನಿಕ್ಸ್ ಕಂಪನಿ ಯಾವುದೇ ಮಾಹಿತಿ ನೀಡದೆ ದಿಢೀರ್ ಆಗಿ ರಿಲೀಸ್ ಮಾಡಿರುವ ಇನ್ಫಿನಿಕ್ಸ್ ಸ್ಮಾರ್ಟ್ 8 ಪ್ರೊ ಫೋನ್ ಹೇಗಿದೆ?, ಇದರ ಬೆಲೆ ಎಷ್ಟು ಎಂಬುದನ್ನು ನೋಡೋಣ.

ಇನ್ಫಿನಿಕ್ಸ್ ಸ್ಮಾರ್ಟ್ 8 ಪ್ರೊ ನ ಬೆಲೆಯನ್ನು ಕಂಪನಿಯು ಇನ್ನೂ ಬಹಿರಂಗಪಡಿಸಿಲ್ಲ. ಇನ್ಫಿನಿಕ್ಸ್ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಸ್ಮಾರ್ಟ್‌ಫೋನ್‌ನ ವಿವರಗಳ ಪ್ರಕಾರ ಇದು 4GB ಅಥವಾ 8GB RAM ಮತ್ತು 64GB ಅಥವಾ 128GB ಅಂತರ್ಗತ ಸಂಗ್ರಹಣೆಯೊಂದಿಗೆ ಲಭ್ಯವಿರುತ್ತದೆ ಎಂದು ಖಚಿತಪಡಿಸುತ್ತದೆ. ಇದು ಗ್ಯಾಲಕ್ಸಿ ವೈಟ್, ರೇನ್ಬೋ ಬ್ಲೂ, ಶೈನಿ ಗೋಲ್ಡ್ ಮತ್ತು ಟಿಂಬರ್ ಬ್ಲಾಕ್ ಬಣ್ಣಗಳ ಆಯ್ಕೆಗಳಲ್ಲಿ ಮಾರಾಟವಾಗಲಿದೆ. ಮುಂಬರುವ ದಿನಗಳಲ್ಲಿ ಈ ಹ್ಯಾಂಡ್‌ಸೆಟ್‌ನ ಬೆಲೆ ಮತ್ತು ಲಭ್ಯತೆಯ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಬಹುದು.

ಜಿಯೋ 91 ರೂ. ಬಂಪರ್ ಪ್ಲಾನ್: 28 ದಿನಗಳ ವ್ಯಾಲಿಡಿಟಿ, ಅನಿಯಮಿತ ಕರೆ ಜೊತೆಗೆ ಪ್ರತಿದಿನ ಡೇಟಾ

ಇದನ್ನೂ ಓದಿ
ಬಲಿಷ್ಠ ಪ್ರೊಸೆಸರ್, 50MP ಕ್ಯಾಮೆರಾ: ರಿಲೀಸ್ ಆಯಿತು ವಿವೋ Y100 5G ಫೋನ್
ಕ್ಯಾಮೆರಾ ಪ್ರಿಯರನ್ನು ದಂಗಾಗಿಸಿರುವ ಒಪ್ಪೋ ರೆನೋ 11 5G ಖರೀದಿಗೆ ಲಭ್ಯ
ಇದೀಗ ಸೇಲ್ ಕಾಣುತ್ತಿದೆ ಆಸಸ್ ರಾಗ್ ಫೋನ್ 8 ಸರಣಿ, ಬೆಲೆ ಎಷ್ಟು?
ವೊಡಾಫೋನ್ ಐಡಿಯಾದಿಂದ ರಿಪಬ್ಲಿಕ್ ಡೇ ಆಫರ್: ಬರೋಬ್ಬರಿ 50GB ಉಚಿತ ಡೇಟಾ

ಇನ್ಫಿನಿಕ್ಸ್ ಸ್ಮಾರ್ಟ್ 8 ಪ್ರೊ ಫೀಚರ್ಸ್:

ಡ್ಯುಯಲ್ ಸಿಮ್ (ನ್ಯಾನೋ) ಇನ್ಫಿನಿಕ್ಸ್ ಸ್ಮಾರ್ಟ್ 8 ಪ್ರೊ ಆಂಡ್ರಾಯ್ಡ್ 13 (ಗೋ ಎಡಿಷನ್) ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 6.66-ಇಂಚಿನ HD+ (720×1,612 ಪಿಕ್ಸೆಲ್‌ಗಳು) IPS LCD ಡಿಸ್​ಪ್ಲೇ, 90Hz ರಿಫ್ರೆಶ್ ದರ ಮತ್ತು 500 nits ಗರಿಷ್ಠ ಬ್ರೈಟ್​ನೆಸ್ ಹೊಂದಿದೆ. ಈ ಫೋನ್ ಮೀಡಿಯಾಟೆಕ್ ಹಿಲಿಯೊ G36 ಚಿಪ್‌ಸೆಟ್‌ನಿಂದ ಚಾಲಿತವಾಗಿದ್ದು, 8GB ವರೆಗೆ LPDDR4x RAM ನೊಂದಿಗೆ ಜೋಡಿಸಲಾಗಿದೆ.

ಇನ್ಫಿನಿಕ್ಸ್ ಸ್ಮಾರ್ಟ್ 8 ಪ್ರೊ f/1.85 ದ್ಯುತಿರಂಧ್ರದೊಂದಿಗೆ 50-ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾ ಹೊಂದಿದೆ. ಜೊತೆಗೆ AI ಲೆನ್ಸ್ ನೀಡಲಾಗಿದೆ. ಮುಂಭಾಗದಲ್ಲಿ, ಈ ಫೋನ್ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಈ ಫೋನ್​ನಲ್ಲಿ ಮೈಕ್ರೊ SD ಕಾರ್ಡ್ ಸ್ಲಾಟ್ ಮೂಲಕ 2TB ವರೆಗೆ ವಿಸ್ತರಿಸಬಹುದಾದ 128GB ವರೆಗೆ ಸಂಗ್ರಹಣೆಯನ್ನು ಪಡೆಯುತ್ತೀರಿ.

ಈ ಹ್ಯಾಂಡ್‌ಸೆಟ್‌ನಲ್ಲಿನ ಕನೆಕ್ಟಿವಿಟಿ ಆಯ್ಕೆಗಳು 4G LTE, Wi-Fi 5, ಬ್ಲೂಟೂತ್ 5, USB ಟೈಪ್-C ಪೋರ್ಟ್ ಮತ್ತು 3.5mm ಆಡಿಯೋ ಜ್ಯಾಕ್ ಅನ್ನು ಒಳಗೊಂಡಿವೆ. ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಫೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ. ಇದು 10W ವೈರ್ಡ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ